• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Alia Bhatt: ಇದರಲ್ಲಿ ಸೆಲ್ಫಿ ಕ್ಯಾಮೆರಾ ಎಲ್ಲಿದೆ? Android ಫೋನ್​ ಬಳಸಲು ತಿಳಿಯದೆ ಪರದಾಡಿದ ಆಲಿಯಾ

Alia Bhatt: ಇದರಲ್ಲಿ ಸೆಲ್ಫಿ ಕ್ಯಾಮೆರಾ ಎಲ್ಲಿದೆ? Android ಫೋನ್​ ಬಳಸಲು ತಿಳಿಯದೆ ಪರದಾಡಿದ ಆಲಿಯಾ

ಆಲಿಯಾ ಭಟ್

ಆಲಿಯಾ ಭಟ್

ನಟಿ ಆಲಿಯಾ ಭಟ್ ಅವರ ವಿಡಿಯೋ ಒಂದು ವೈರಲ್ ಆಗಿದೆ. ಐಫೋನ್ ಯೂಸರ್ಸ್ ಆಂಡ್ರಾಯ್ಡ್ ಫೋನ್ ಬಳಸಿದ್ರೆ ಹೀಗಿರುತ್ತೆ ನೋಡಿ ಎಂದಿದ್ದಾರೆ ನೆಟ್ಟಿಗರು.

 • News18 Kannada
 • 2-MIN READ
 • Last Updated :
 • Mumbai, India
 • Share this:

ಐಫೋನ್ (iPhone) ಬಳಕೆದಾರರಿಗೆ ಆಂಡ್ರಾಯ್ಡ್​ ಫೋನ್ ಬಳಕೆ ತಿಳಿದಿರುವುದಿಲ್ಲ. ಹಲವು ಆಪ್ಶನ್​ಗಳನ್ನು (Options) ಹುಡುಕಲು ನಿಜಕ್ಕೂ ಪರದಾಡಬೇಕು. ಅಪರೂಪಕ್ಕಾದರೂ ಬಳಸುತ್ತಿದ್ದರೆ ಹಾಗೂ ಹೀಗೂ ಮ್ಯಾನೇಜ್ ಮಾಡಬಹುದು. ಆದರೆ ಲೈಫ್​ಟೈಮ್​ನಲ್ಲಿ ಆಂಡ್ರಾಯ್ಡ್ (Android) ಫೋನ್ ಬಳಸದವರಲ್ಲಿ ಅದನ್ನು ಕೊಟ್ಟರೆ ಹೇಗಾಗಬಹುದು? ಸದ್ಯ ಆಲಿಯಾ ಭಟ್ (Alia Bhatt) ವೈರಲ್  (Viral) ಆಗಿರೋದು ಕೂಡಾ ಇದೇ ವಿಷ್ಯಕ್ಕೆ. ನಟಿ ಆಲಿಯಾ ಭಟ್ ಅವರ ವಿಡಿಯೋ ವೈರಲ್ ಆಗಿದ್ದು ನಟಿ ಆಂಡ್ರಾಯ್ಡ್ ಫೋನ್​ನಲ್ಲಿ ಸೆಲ್ಫಿ  (Selfie) ಕ್ಯಾಮೆರಾ ಹುಡುಕೋದನ್ನು ಕಾಣಬಹುದು.


ಆಂಡ್ರಾಯ್ಡ್ ಫೋನ್ ಬಳಕೆ


ನಟಿ ಆಲಿಯಾ ಭಟ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಅವರನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳ ಜೊತೆ ನಟಿ ಗ್ರೂಪ್ ಸೆಲ್ಫಿ ಕ್ಲಿಕ್ ಮಾಡಿದ್ದಾರೆ. ಆದರೆ ಆ ಸೆಲ್ಫಿ ಕ್ಲಿಕ್ಕಿಸಲು ನಟಿ ಪರದಾಡಿದ್ದು ಮಾತ್ರ ವೈರಲ್ ಆಗಿದೆ.
ನಟಿ ಸ್ಯಾಮ್ಸಂಗ್ ಫೋನ್ ಹಿಡಿದು ಸೆಲ್ಫಿ ಕ್ಲಿಕ್ ಮಾಡಿದ್ದಾರೆ. ಈ ಸಂದರ್ಭ ನಟಿ ಮೊಬೈಲ್ ಪಡೆದುಕೊಂಡು ಕ್ಯಾಮೆರಾವನ್ನು ಹುಡುಕಿದ್ದಾರೆ. ನಂತರ ಮೊಬೈಲ್ ತಿರುಗಿಸಿ ಹಿಡಿದು ಕ್ಯಾಮೆರಾ ಹುಡುಕಿದ್ದಾರೆ. ಆ ವೇಳೆ ಅಲ್ಲಿದ್ದ ಯುವತಿ ಜೊತೆ ಕ್ಯಾಮೆರಾ ಎಲ್ಲಿದೆ ಅಂತ ಕೇಳಿ ಆಮೇಲೆ ಸೆಲ್ಫಿ ಕ್ಲಿಕ್ ಮಾಡಿದ್ದಾರೆ.


ಮಾಧ್ಯಮದ ಮೇಲೆ ಗರಂ ಆಗಿದ್ದ ನಟಿ


ಇತ್ತೀಚೆಗೆ ನಟಿ ತಮ್ಮ ಖಾಸಗಿ ಬದುಕಿಗೆ ಇಣುಕಿದ್ದಕ್ಕಾಗಿ ಮಾಧ್ಯಮದ ಬಗ್ಗೆ ಕಿಡಿ ಕಾರಿದ್ದರು. ಬಾಲಿವುಡ್ ನಟಿ ಆಲಿಯಾ ಭಟ್ ಕೋಪ ಮಾಡಿಕೊಳ್ಳುವುದು ಭಾರೀ ಅಪರೂಪ. ಮಾಧ್ಯಮದವರಿಗೆ ಯಾವಾಗಲೂ ಕ್ಯೂಟ್ ಸ್ಮೈಲ್ ಕೊಡುವ ಈ ಚೆಲುವೆ ಈಗ ಮಾತ್ರ ಸಿಕ್ಕಾಪಟ್ಟೆ ಕೋಪ ಮಾಡ್ಕೊಂಡಿದ್ದಾರೆ.ಬಾಲಿವುಡ್ ನಟಿ ಆಲಿಯಾ ಭಟ್ ಅವರು ಸಾಮಾನ್ಯವಾಗಿ ಕೋಪಿಸಿಕೊಳ್ಳುವುದಿಲ್ಲ. ಪ್ರತಿಬಾರಿ ಮಾಧ್ಯಮದ ಮುಂದೆ ಬಂದಾಗ, ಕ್ಯಾಮೆರಾ ಅವರನ್ನು ಮುತ್ತಿಕೊಂಡಾಗ ತಾಳ್ಮೆಯಿಂದಲೇ ವರ್ತಿಸುತ್ತಾರೆ. ಚಂದದ ಸ್ಮೈಲ್ ಕೂಡಾ ಕೊಡ್ತಾರೆ.


ಇದನ್ನೂ ಓದಿ: Alia Bhatt: ಮಗುವಿನ ಫೋಟೋ ಪೋಸ್ಟ್ ಮಾಡಿದ ಆಲಿಯಾ ಭಟ್


ಆದರೆ ಈ ಬಾರಿ ನಟಿ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ. ಅವರ ಕೋಪಕ್ಕೆ ಕಾರಣವೂ ಇದೆ. ಖಾಸಗಿತನಕ್ಕೆ ಧಕ್ಕೆ ತಂದಿದ್ದಕ್ಕಾಗಿ ಆಲಿಯಾ ಅವರು ನಿಜಕ್ಕೂ ತಾಳ್ಮೆ ಕಳೆದುಕೊಂಡಿದ್ದಾರೆ. ಕೆಲವು ಫೋಟೋಗ್ರಫರ್​ಗಳು ನಟಿ ಅವರ ಮನೆಯೊಳಗಿರುವಾಗ ಫೋಟೋ ಕ್ಲಿಕ್ ಮಾಡಿದ್ದು ಅವರ ಕೋಪಕ್ಕೆ ಕಾರಣ. ನಟಿ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಘಟನೆ ಬಗ್ಗೆ ವಿವರಿಸಿದ ನಟಿ, ನನ್ನನ್ನು ತಮಾಷೆ ಮಾಡ್ತಿದ್ದೀರಾ? ನಾನು ಮನೆಯೊಳಗೆ ಇದ್ದೆ. ಎಂದಿನಂತೆಯೇ ಮಧ್ಯಾಹ್ನದ ವೇಳೆ. ಲಿವಿಂಗ್ ರೂಮ್​ನಲ್ಲಿ ಕುಳಿತಿದ್ದೆ. ಯಾರೋ ನನ್ನನ್ನು ನೋಡುವ ಭಾಸವಾಯಿತು.
ನೋಡುವಾಗ ಎದುರಿನ ಕಟ್ಟದಲ್ಲಿ ಇಬ್ಬರು ನಿಂತು ನನ್ನತ್ತ ಕ್ಯಾಮೆರಾ ಫೋಕಸ್ ಮಾಡಿದ್ದರು. ಇದು ಸರಿಯಾ? ಇದು ಖಾಸಗಿತನದ ಮೇಲಿನ ಅತಿಕ್ರಮಣ. ನೀವು ದಾಟಬಾರದ ಒಂದು ಗೆರೆ ಇದೆ. ಆದರೆ ಈಗ ನೀವು ಆ ಎಲ್ಲ ಲೈನ್ ಕ್ರಾಸ್ ಮಾಡಿದ್ದೀರಿ ಎಂದಿದ್ದಾರೆ.


ನಟಿ ಆಲಿಯಾ ಅವರು ಸಾಮಾನ್ಯವಾಗಿ ಹೊರಗೆ ಅತ್ಯಂತ ಖುಷಿಯಲ್ಲಿರುತ್ತಾರೆ. ತಾಳ್ಮೆಯಿಂದ ಮಾಧ್ಯಮದವರಿಗೆ, ಫೋಟೋಗ್ರಫರ್​ಗಳಿಗೆ ಪೋಸ್ ಕೊಡುತ್ತಾರೆ. ಆದರೆ ಈಗ ನಡೆದಿರುವ ಘಟನೆಯಿಂದ ಸಿಟ್ಟಾಗಿದ್ದಾರೆ.ಸೆಲೆಬ್ರಿಟಿಗಳ ಖಾಸಗಿತನಕ್ಕೆ ಧಕ್ಕೆಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಭಿಮಾನಿಯೊಬ್ಬರು ತಮ್ಮ ಹೋಟೆಲ್ ಕೋಣೆಯ ವೀಡಿಯೊವನ್ನು ಹಂಚಿಕೊಂಡಾಗ ವಿರಾಟ್ ಕೊಹ್ಲಿ ಸಿಟ್ಟಾಗಿದ್ದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು