`ಬ್ರಹ್ಮಾಸ್ತ್ರ’ ಸಿನಿಮಾ ಬಗ್ಗೆ ಕನ್ನಡದಲ್ಲೇ ಟ್ವೀಟ್​ ಮಾಡಿದ ಆಲಿಯಾ ಭಟ್​: ನಮ್ಮ ನಟಿಗೆ ಜಂಭ ಎಂದ ಕನ್ನಡಿಗರು!

ನಟಿ ಆಲಿಯಾ ಭಟ್(Aliya Bhatt)​ ಕನ್ನಡ(Kannada)ದಲ್ಲೇ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಅಷ್ಟೇ ಅಲ್ಲದೇ ಆಲಿಯಾ ಭಟ್​ ಅವರ ಕನ್ನಡ ಪ್ರೇಮಕ್ಕೆ ಕನ್ನಡಿಗರು ಕ್ಲೀನ್​ ಬೋಲ್ಡ್​ ಆಗಿದ್ದಾರೆ. 

ಕನ್ನಡದಲ್ಲೇ ಟ್ವೀಟ್​ ಮಾಡಿದ ಆಲಿಯಾ ಭಟ್​

ಕನ್ನಡದಲ್ಲೇ ಟ್ವೀಟ್​ ಮಾಡಿದ ಆಲಿಯಾ ಭಟ್​

  • Share this:
ಈಗೆಲ್ಲಾ ಯಾವುದೇ ಸಿನಿಮಾ ಮಡಿದರೂ ಎಲ್ಲ ಭಾಷೆ (Language)ಗಳಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್​ ಇರುತ್ತೆ. ಪ್ಯಾನ್​ ಇಂಡಿಯಾ (Pan India) ಸಿನಿಮಾಗಳದ್ದೇ ಹವಾ ಈಗ. ಅದರಂತೆ ಬಾಲಿವುಡ್​ನ ಕ್ಯೂಟ್​ ಕಪಲ್​ ನಟ ರಣಬೀರ್​ ಕಪೂರ್ (Ranbir Kapoor) ​ ಹಾಗೂ ಆಲಿಯಾ ಭಟ್ (Alia Bhatt)​ ನಿಜ ಜೀವನದಲ್ಲಿ ಪರಸ್ಪರ ಪ್ರೀತಿಸುತ್ತಿದ್ದಾರೆ. ಅಚ್ಚರಿ ಎಂದರೆ, ಇವರ ನಟನೆಯ ಒಂದೇಒಂದು ಸಿನಿಮಾ ಕೂಡ ತೆರೆಗೆ ಬಂದಿಲ್ಲ. ಇವರು ಒಟ್ಟಾಗಿ ನಟಿಸುತ್ತಿರುವ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾದ ಕೆಲಸಗಳು ಸಾಕಷ್ಟು ವಿಳಂಬವಾಗಿದೆ. ಚಿತ್ರ ಸೆಟ್ಟೇರಿ ಕೆಲ ವರ್ಷಗಳೇ ಕಳೆದರೂ ಸಿನಿಮಾ ಮಾತ್ರ ಪೂರ್ಣಗೊಂಡಿಲ್ಲ. ಚಿತ್ರತಂಡ ಕೂಡ ಈ ಬಗ್ಗೆ ಅಪ್ಡೇಟ್​ ನೀಡಿರಲಿಲ್ಲ. ಈಗ ಈ ಚಿತ್ರದ ಮೋಷನ್​ ಪೋಸ್ಟರ್​ (Brahmastra Motion Poster) ರಿಲೀಸ್​ ಆಗಿದೆ. ಇದನ್ನು ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದರ ಜೊತೆ ಹೊಸ ಅಪ್​ಡೇಟ್​ ಅಂದರೆ, ಸಿನಿಮಾದ ಬಿಡುಗಡೆ ದಿನಾಂಕ ಕೂಡ ಘೋಷಣೆ ಮಾಡಲಾಗಿದೆ. ಈ ಬಗ್ಗೆ ನಟಿ ಆಲಿಯಾ ಭಟ್ (Aliya Bhatt)​ ಕನ್ನಡ (Kannada)ದಲ್ಲೇ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಅಷ್ಟೇ ಅಲ್ಲದೇ ಆಲಿಯಾ ಭಟ್​ ಅವರ ಕನ್ನಡ ಪ್ರೇಮಕ್ಕೆ ಕನ್ನಡಿಗರು ಕ್ಲೀನ್​ ಬೋಲ್ಡ್​ ಆಗಿದ್ದಾರೆ. 

ಮೂರು ಪಾರ್ಟ್​ಗಳಲ್ಲಿ ಬ್ರಹ್ಮಾಸ್ತ್ರ ದರ್ಶನ!

ಬಾಲಿವುಡ್​ನ ‘ಬ್ರಹ್ಮಾಸ್ತ್ರ’ (Brahmastra Movie) ಸಿನಿಮಾ ಸಹ ಕನ್ನಡದಲ್ಲಿ ತೆರೆಕಾಣಲಿದೆ. ಆ ಚಿತ್ರದ ಬಗ್ಗೆ ನಟಿ ಆಲಿಯಾ ಭಟ್ (Alia Bhatt)​ ಅವರು ಕನ್ನಡದಲ್ಲೇ ಟ್ವೀಟ್​ ಮಾಡಿದ್ದಾರೆ. ಮೂರು ಪಾರ್ಟ್​ಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. ಮೊದಲ ಭಾಗಕ್ಕೆ ‘ಬ್ರಹ್ಮಾಸ್ತ್ರ: ಪಾರ್ಟ್ ಒನ್​ ಶಿವ’ ಎಂದು ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ನಟ ರಣಬೀರ್​ ಕಪೂರ್​ ಅವರು ಶಿವನ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಮೋಷನ್​ ಪೋಸ್ಟರ್​ನಿಂದ ಅಭಿಮಾನಿಗಳಲ್ಲಿ ಭಾರಿ ಕೌತುಕ ನಿರ್ಮಾಣ ಆಗಿದೆ. ರಣಬೀರ್​ ಕಪೂರ್​​ ಅವರ ಲುಕ್​ ಸಖತ್​ ಕ್ಯೂರಿಯಾಸಿಟಿ ಹುಟ್ಟಿಸಿದೆ.


ಇದನ್ನು ಓದಿ : 2022ಕ್ಕೆ ಬಾಲಿವುಡ್​​ನಲ್ಲಿ ತೆರೆ ಕಾಣಲಿರುವ ಮಹಿಳಾ ಪ್ರಧಾನ ಸಿನಿಮಾಗಳಿವು..!

ಕನ್ನಡದಲ್ಲೇ ಟ್ವೀಟ್​ ಮಾಡಿದ ಆಲಿಯಾ!

‘ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ. ಮಹಾಯೋಧನೊಬ್ಬನ ಉದಯವಾಗಲಿದೆ. 09.09.2022 ಈ ದಿನಾಂಕದೊಂದಿಗೆ ಬ್ರಹ್ಮಾಸ್ತ್ರ ಪಾರ್ಟ್​ ಒನ್​: ಶಿವನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ​’ ಎಂದು ಆಲಿಯಾ ಭಟ್​ ಕನ್ನಡಲ್ಲೇ ಟ್ವೀಟ್​ ಮಾಡಿದ್ದಾರೆ.‘ಈಶಾ ವಿಶ್ವದಲ್ಲಿ ಏನೋ ನಡೆಯುತ್ತಿದೆ. ಇದು ಸಾಮಾನ್ಯ ಜೀವಿಗಳ ತಿಳುವಳಿಕೆಯನ್ನು ಮೀರಿದೆ’ ಎಂದು ರಣಬೀರ್​ ಕಪೂರ್​​ ಮೋಷನ್​ ಪೋಸ್ಟರ್​ನಲ್ಲಿ ಹೇಳಿದ್ದಾರೆ. ಬಾಲಿವುಡ್​ನಲ್ಲಿ ಸಖತ್​ ಬೇಡಿಕೆ ಇಟ್ಟುಕೊಂಡಿರುವ ಅವರು ಇದೇ ಮೊದಲ ಬಾರಿಗೆ ‘ಆರ್​ಆರ್​ಆರ್​’ ಸಿನಿಮಾದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.ಇದನ್ನು ಓದಿ : ಭಾರತದ ಗಲ್ಲಾಪೆಟ್ಟಿಗೆ ಲೂಟಿ ಹೊಡೆದ `ಸ್ಪೈಡರ್​ ಮ್ಯಾನ್​‘: ಒಂದೇ ದಿನಕ್ಕೆ ಇಷ್ಟೊಂದು ಕಲೆಕ್ಷನ್​!

ನಮ್ಮವ್ರಿಗೆ ಜಂಭ ಎಂದ ಕನ್ನಡಿಗರು!

ಇನ್ನೂ ಆಲಿಯಾ ಭಟ್​ ಕನ್ನಡದಲ್ಲಿ ಟ್ವೀಟ್​ ಮಾಡಿರುವುದನ್ನು ಕಂಡು ಕನ್ನಡಿಗರು ಫುಲ್​ ಖುಷ್​ ಆಗಿದ್ದಾರೆ. ಇವರನ್ನು ನೋಡಿ ಕಲಿಯುವಂತೆ ರಶ್ಮಿಕಾ ಮಂದಣ್ಣಅವರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಇವರಿಗೆ ಇರುವ ಕನ್ನಡ ಅಭಿಮಾನ ನಿಮಗೆ ಇಲ್ಲ. ಇಲ್ಲೇ ಹುಟ್ಟು ಬೆಳೆದ ನಿಮಗೆ ಕನ್ನಡ ಮೇಲೆ ಪ್ರೀತಿಯಿಲ್ಲ. ಇವರು ಎಲ್ಲೋ ಹುಟ್ಟಿ ಕನ್ನಡ ಮೇಲೆ ಪ್ರೀತಿ ಇಟ್ಟಿದ್ದಾರೆ ಎಂದು ರಶ್ಮಿಕಾ ಮಂದಣ್ಣ ಅವರಿಗೆ ಕ್ಲಾಸ್​ ತೆಗೆದುಕೊಳ್ಳುತ್ತಿದ್ದಾರೆ. ಪುಷ್ಪ ಪ್ರಚಾರ ವೇಳೆ ಕನ್ನಡದಲ್ಲಿ ಡಬ್​ ಮಾಡಲು ಟೈಂ ಸಿಕ್ಲಿಲ್ಲ ಎಂದು ಹೇಳಿದ್ದ ರಶ್ಮಿಕಾ ವಿರುದ್ಧ ಕನ್ನಡಿಗರು ಗರಂ ಆಗಿದ್ದರು.
Published by:Vasudeva M
First published: