• Home
  • »
  • News
  • »
  • entertainment
  • »
  • Alia Bhatt: ಆಲಿಯಾ ಭಟ್​ ಬ್ಯಾಂಕ್​ ಅಕೌಂಟ್​​ನಲ್ಲಿ ಎಷ್ಟು ದುಡ್ಡಿದೆ ಅಂತ ಅವರಿಗೇ ಗೊತ್ತಿಲ್ವಂತೆ!

Alia Bhatt: ಆಲಿಯಾ ಭಟ್​ ಬ್ಯಾಂಕ್​ ಅಕೌಂಟ್​​ನಲ್ಲಿ ಎಷ್ಟು ದುಡ್ಡಿದೆ ಅಂತ ಅವರಿಗೇ ಗೊತ್ತಿಲ್ವಂತೆ!

ಆಲಿಯಾ ಭಟ್​

ಆಲಿಯಾ ಭಟ್​

ಸ್ಟೂಡೆಂಟ್‌ ಆಫ್‌ ದ ಇಯರ್‌ (Student Of the Year) ಚಿತ್ರದಿಂದ ಆರಂಭಿಸಿ ಇತ್ತೀಚಿಗಿನ ಬ್ರಹ್ಮಾಸ್ತ್ರ (Bhramastra) ದವರೆಗೆ ಸಾಕಷ್ಟು ಹಿಟ್‌ ಚಿತ್ರಗಳನ್ನು ನೀಡಿರುವ ಆಲಿಯಾ ಸದ್ಯ ತಾಯಾಗ್ತಾ ಇದ್ದಾರೆ. ಇತ್ತೀಚಿಗೆ ಮಾತನಾಡ್ತಾ ತನ್ನ ತಾಯಿಯೇ ನಮ್ಮ ಹಣಕಾಸು ವ್ಯವಹಾರಗಳನ್ನೆಲ್ಲ ನಿಭಾಯಿಸ್ತಾರೆ ಅನ್ನೋ ವಿಷ್ಯವನ್ನು ಅವರು ಬಹಿರಂಗಪಡಿಸಿದ್ದಾರೆ.

ಮುಂದೆ ಓದಿ ...
  • Share this:

ಬಾಲಿವುಡ್​ (Bollywood) ನಲ್ಲಿ ಕ್ಯೂಟ್‌ ನಟಿ ಆಲಿಯಾ ಭಟ್‌ (Alia Bhatt) ಚಿತ್ರರಂಗದ ಹಿನ್ನೆಲೆಯಿಂದ ಬಂದವರಾದ್ರೂ ಇಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಿದ್ದು ಅವರ ನಟನೆಯಿಂದ ಮಾತ್ರ. ಸ್ಟೂಡೆಂಟ್‌ ಆಫ್‌ ದ ಇಯರ್‌ (Student Of the Year) ಚಿತ್ರದಿಂದ ಆರಂಭಿಸಿ ಇತ್ತೀಚಿಗಿನ ಬ್ರಹ್ಮಾಸ್ತ್ರ (Bhramastra) ದವರೆಗೆ ಸಾಕಷ್ಟು ಹಿಟ್‌ ಚಿತ್ರಗಳನ್ನು ನೀಡಿರುವ ಆಲಿಯಾ ಸದ್ಯ ತಾಯಾಗ್ತಾ ಇದ್ದಾರೆ. ಇತ್ತೀಚಿಗೆ ಮಾತನಾಡ್ತಾ ತನ್ನ ತಾಯಿಯೇ ನಮ್ಮ ಹಣಕಾಸು ವ್ಯವಹಾರಗಳನ್ನೆಲ್ಲ ನಿಭಾಯಿಸ್ತಾರೆ ಅನ್ನೋ ವಿಷ್ಯವನ್ನು ಅವರು ಬಹಿರಂಗಪಡಿಸಿದ್ದಾರೆ.


“ಹಣ ಗಳಿಸೋದು ಮಾತ್ರ ನಾನು, ನಿಭಾಯಿಸೋದು ತಾಯಿಯೇ!”


ತನ್ನ ತಾಯಿ ಸೋನಿ ರಜ್ದಾನ್ ತನ್ನ ಹಣಕಾಸು ವ್ಯವಹಾರವನ್ನು ನಿಭಾಯಿಸುತ್ತಾರೆ ಅಂತ ಆಲಿಯಾ ಭಟ್‌ ಹೇಳಿಕೊಂಡಿದ್ದಾರೆ. ನನಗೆ ಹಣದೊಂದಿಗೆ ಇರುವ ಸಂಬಂಧ ಹಣವನ್ನು ಗಳಿಸೋದು ಮಾತ್ರ ಎಂದು ಆಲಿಯಾ ಹೇಳಿಕೊಂಡಿದ್ದಾರೆ. 2012 ರಿಂದ ನಟಿಯಾಗಿ ಕೆಲಸ ಮಾಡುತ್ತಿರುವ ಆಲಿಯಾ ಭಟ್‌ ಸಾಲು ಸಾಲು ಹಿಟ್‌ ಚಿತ್ರಗಳನ್ನು ನೀಡಿರುವ ನಟಿ. ಈಗಾಗಲೇ ಅವರು ಬ್ಯೂಟಿ ಬ್ರ್ಯಾಂಡ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಅಲ್ಲದೇ ತಮ್ಮದೇ ಆದ ಉಡುಪಿನ ಬ್ರಾಂಡ್ ಅನ್ನು ಪ್ರಾರಂಭಿಸಿದ್ದಾರೆ. ಅಲ್ಲದೇ ಪ್ರೊಡಕ್ಷನ್ ಹೌಸ್ ಅನ್ನು ಕೂಡ ಪ್ರಾರಂಭಿಸಿದ್ದಾರೆ.


“ಬ್ಯಾಂಕ್‌ ಅಕೌಂಟ್‌ ನಲ್ಲಿ ಎಷ್ಟು ಹಣವಿದೆ ಎಂದು ತಿಳಿದಿಲ್ಲ!”


ಇತ್ತೀಚಿನ ಸಂವಾದದ ಸಮಯದಲ್ಲಿ, ನಟಿ ಆಲಿಯಾ ಭಟ್‌ ತಾನು ಹಣಕಾಸು ವ್ಯವಹಾರ ನೋಡಿಕೊಳ್ಳದ ಕಾರಣ ನನ್ನ ಬ್ಯಾಂಕ್‌ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿದಿಲ್ಲ ಎಂತ ಹೇಳಿದ್ದಾರೆ. ಆ ಸಂಖ್ಯೆಗಳನ್ನು ಅರ್ಥಮಾಡಿಕೊಳ್ಳಲು ಕೆಲವೊಮ್ಮೆ ತನ್ನ ಟೀಂ ಜೊತೆ ಕುಳಿತುಕೊಳ್ಳುತ್ತೇನೆ ಎಂತಲೂ ಆಲಿಯಾ ಹೇಳಿದ್ದಾರೆ. ಆದ್ರೆ, ನನಗೆ ಹಣಕಾಸು ವ್ಯವಹಾರದ ಬಗ್ಗೆ ನಿರ್ದಿಷ್ಟ ಕಲ್ಪನೆಯಿದೆ. ಆದ್ರೆ ನನ್ನ ತಾಯಿ ಅದನ್ನು ಚೆನ್ನಾಗಿ ನಿಭಾಯಿಸ್ತಾ ಇದ್ದಾರೆ ಅಂತಾ ಆಲಿಯಾ ಭಟ್‌ ಹೇಳಿದ್ರು.


ಇದನ್ನೂ ಓದಿ: ಗೌರಿ ಖಾನ್ ತನ್ನನ್ನು ಬಿಟ್ಟು ಹೋಗ್ತೇನೆ ಅಂತ ಹೆದರಿಸಿದ್ರೆ ಶಾರುಖ್ ಖಾನ್ ಸಿಟ್ಟಲ್ಲಿ ಏನ್ ಮಾಡ್ತಾರಂತೆ ಗೊತ್ತಾ?


ಬ್ರಹಾಸ್ತ್ರದಲ್ಲಿ ಕಮಾಲ್​ ಮಾಡಿದ್ದ ಆಲಿಯಾ!


ಇನ್ನು ಆಲಿಯಾ ಭಟ್‌ ನಟಿ ಕೊನೆಯದಾಗಿ ಅಯಾನ್ ಮುಖರ್ಜಿಯವರ 'ಬ್ರಹ್ಮಾಸ್ತ್ರ'ದಲ್ಲಿ ರಣಬೀರ್ ಕಪೂರ್ ಜೊತೆ ನಟಿಸಿದ್ದರು. ಈ ವರ್ಷ ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಈ ಮಧ್ಯೆ, ಆಲಿಯಾ ಭಟ್ ಅವರು ಕರಣ್ ಜೋಹರ್ ಅವರ ಮುಂದಿನ ನಿರ್ದೇಶನದ ಚಿತ್ರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಯಲ್ಲಿ ರಣವೀರ್ ಸಿಂಗ್, ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಫೆಬ್ರವರಿ 10, 2023 ರಂದು ಚಿತ್ರಮಂದಿರಗಳಿಗೆ ಬರಲಿದೆ. ಅಲ್ಲದೇ ಆಲಿಯಾ ಗಾಲ್ ಗಡೋಟ್ ಅಭಿನಯದ 'ಹಾರ್ಟ್ ಆಫ್ ಸ್ಟೋನ್' ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.


ಇದೇ ವರ್ಷ ಎಪ್ರಿಲ್‌ ನಲ್ಲಿ ನಟಿ ಆಲಿಯಾ ಭಟ್‌ ಹಾಗೂ ನಟ ರಣಬೀರ್‌ ಕಪೂರ್‌ ಮದುವೆ ನೆರವೇರಿತ್ತು. ಕ್ಯೂಟ್‌ ಕಪಲ್‌ ಗೆ ಅಭಿಮಾನಿಗಳು ಶುಭ ಹಾರೈಸಿದ್ದರು. ಅಲ್ಲದೇ ತಮ್ಮ ಮೊದಲ ಮಗುವಿನ ಆಗಮನಕ್ಕಾಗಿ ಕಾಯುತ್ತಿರುವ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇತ್ತೀಚಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದರು.


ಇದನ್ನೂ ಓದಿ: ಒಂದು ಕಾಲದ ಟಾಪ್ ಹೀರೋಯಿನ್, ಈಗ ಗುರುತೇ ಸಿಗದಂತೆ ಆಗಿದ್ದಾರೆ! ಏನಾಯ್ತು ಈ ನಟಿಗೆ?


ಬೇಬಿ ಶವರ್‌ ನಲ್ಲಿ ಆಲಿಯಾ ಅವರ ಸಹೋದರಿ ಶಾಹೀನ್ ಭಟ್, ಪೂಜಾ ಭಟ್, ರಣಬೀರ್ ಅವರ ತಾಯಿ ನೀತು ಕಪೂರ್, ಸಹೋದರಿ ರಿದ್ಧಿಮಾ ಕಪೂರ್ ಸಾಹ್ನಿ, ಸೋದರ ಸಂಬಂಧಿ ಕರಿಷ್ಮಾ ಕಪೂರ್ ಮತ್ತು ಅಜ್ಜಿ ನೀಲಾ ದೇವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಮುಂಬೈನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಯಾನ್ ಮುಖರ್ಜಿ, ಮತ್ತು ರಾಝಿ ನಟಿಯ ಆಪ್ತರಾದ ಅನುಷ್ಕಾ ರಂಜನ್ ಮತ್ತು ಆಕಾಂಕ್ಷಾ ರಂಜನ್ ಕೂಡ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಫೋಟೋಗಳನ್ನು ಆಲಿಯಾ ಭಟ್‌ ಸಾಮಾಜಿಕ ಜಾಲತಾಣ ಇನ್‌ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Published by:ವಾಸುದೇವ್ ಎಂ
First published: