Alia Bhatt: ಆಲಿಯಾ​ ಮದ್ವೆ ಸೀರೆಗೂ, ಕಂಗನಾಗೂ ಇರೋ​ ಲಿಂಕ್ ಏನು? `ಕಾಂಟ್ರವರ್ಸಿ ಕ್ವೀನ್​’ ಸ್ಟೈಲ್​ ಕಾಪಿ ಮಾಡಿದ್ರಾ ರಣಬೀರ್​ ಪತ್ನಿ?

ವಿಶೇಷವಾಗಿ ಮದುವೆ(Marriage)ಗಳಂತಹ ಆಚರಣೆಯಲ್ಲಿ ನಟಿಯರು ಇನ್ನೆಲ್ಲೂ ನೋಡಿರಬಾರದೆಂಬಂತಹ ವಸ್ತ್ರಧರಿಸಿ ಕ್ಯಾಮೆರಾಗಳಿಗೆ ಪೋಸ್ ನೀಡಲು ಇಷ್ಟಪಡುತ್ತಾರೆ.

ಆಲಿಯಾ ಭಟ್​, ಕಂಗನಾ

ಆಲಿಯಾ ಭಟ್​, ಕಂಗನಾ

  • Share this:
ಬಾಲಿವುಡ್(Bollywood) ಎಂದರೆ ಥಳುಕು-ಬಳುಕಿನ ಲೋಕ. ಈ ಚಿತ್ರರಂಗದಲ್ಲಿ ಸಿನೆ ತಾರೆಯರು ಕೇವಲ ಚಿತ್ರಗಳಿಗಷ್ಟೇ ಅಲ್ಲ ಆಫ್ ಸ್ಕ್ರೀನ್(Off Screen) ನಲ್ಲಿಯೂ ತಮ್ಮ ಅಲಂಕಾರ, ಉಡುಗೆ-ತೊಡುಗೆಗಳಿಗಾಗಿ ಸದಾ ಪ್ರಚಲಿತದಲ್ಲಿರುತ್ತಾರೆ. ಅದರಲ್ಲೂ ನಟಿಯರೆಂದ(Actress)ರೆ ಕೇಳಬೇಕೆ? ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಎಲ್ಲರ ಗಮನ ಅವರ ಔಟ್ ಫಿಟ್(Outfit) ಗಳ ಮೇಲೆ ಹೋಗಬೇಕೆಂಬ ಆಸೆ ಹೊಂದಿರುತ್ತಾರೆ. ಅದರಲ್ಲೂ ವಿಶೇಷವಾಗಿ ಮದುವೆ(Marriage)ಗಳಂತಹ ಆಚರಣೆಯಲ್ಲಿ ನಟಿಯರು ಇನ್ನೆಲ್ಲೂ ನೋಡಿರಬಾರದೆಂಬಂತಹ ವಸ್ತ್ರಧರಿಸಿ ಕ್ಯಾಮೆರಾಗಳಿಗೆ ಪೋಸ್ ನೀಡಲು ಇಷ್ಟಪಡುತ್ತಾರೆ.

ಸಖತ್​  ವೈರಲ್​ ಆಗುತ್ತಿದೆ ಆಲಿಯಾ ಭಟ್​ ಮದುವೆ ಸೀರೆ!

ಇತ್ತೀಚೆಗೆ ನಡೆದ ಬಾಲಿವುಡ್ ಚಿತ್ರರಂಗದ ತಾರೆಯರಾದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರ ಮದುವೆ ಕಾರ್ಯಕ್ರಮ ಎಲ್ಲೆಡೆ ಸದ್ದು ಮಾಡಿದೆ. ಅದರಲಿ ಮದುವಣಗಿತ್ತಿಯಾಗಿ ಅಲಂಕರಿಸಿಕೊಂಡಿದ್ದ ಆಲಿಯಾ ಭಟ್ ಅವರ ಸೀರೆ ಅನೇಕ ಅಲಂಕಾರ ಪ್ರೀಯ ನಾರಿ ಮಣಿಯರ ಗಮನ ಸೆಳೆದಿರುವುದು ಸುಳ್ಳಲ್ಲ. ಆದರೆ, ಆಲಿಯಾ ತಮ್ಮ ಮದುವೆಯ ಆ ದಿನದಂದು ಉಟ್ಟಿದ್ದ ಸೀರೆಯು ಹಿಂದೊಮ್ಮೆ ಇನ್ನೊಬ್ಬ ಬಾಲಿವುಡ್ ನಟಿ ಕಂಗನಾ ಅವರು ತೊಟ್ಟಿದ್ದ ಸೀರೆಗೆ ಸಾಮ್ಯತೆ ಹೊಂದಿರುವುದನ್ನು ಅಭಿಮಾನಿಗಳು ಪತ್ತೆ ಹಚ್ಚಿದ್ದು ಇದೀಗ ಆ ಬಗ್ಗೆ ಮಾಡಲಾಗಿರುವ ಪೋಸ್ಟ್ ಸಮಾಜಿಕ ಮಾಧ್ಯಮಗಳಲ್ಲಿ ಬಿಸಿ ಬಿಸಿ ಸುದ್ದಿಗೆ ಗ್ರಾಸವಾಗಿದೆ.

ಕಂಗನಾ ತೊಟ್ಟಿದ್ದ ಸೀರೆಗೂ ಆಲಿಯಾ ಸೀರೆಗೂ ಇದೆ ಲಿಂಕ್​!

ಈ ಹಿಂದೆ 2020 ರಲ್ಲಿ ನಡೆದಿದ್ದ ಕಂಗನಾ ಅವರ ಸಹೋದರನ ಮದುವೆಯ ಸಮಾರಂಭದಲ್ಲಿ ಕಂಗನಾ ಅವರು ಸಬ್ಯಸಾಚಿ ಅವರಿಂದ ವಿನ್ಯಾಸ ಮಾಡಲ್ಪಟ್ಟಿದ್ದ ಒಂದು ಸೀರೆಯನ್ನು ಧರಿಸಿದ್ದರು. ಇದೀಗ ಏಪ್ರಿಲ್ 14 ರಂದು ನಡೆದಿರುವ ಆಲಿಯಾ ಅವರ ಮದುವೆ ಸಮಾರಂಭದಲ್ಲಿ ಸ್ವತಃ ಆಲಿಯಾ ಅವರು ಧರಿಸಿದ್ದ ಸೀರೆ ಕಂಗನಾ ಅವರ ಅಂದಿನ ಸೀರೆಯೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದ್ದು ಅದನ್ನು ಅಭಿಮಾನಿಗಳು ಪತ್ತೆ ಹಚ್ಚಿ ಆ ಎರಡು ಸೀರೆಗಳು ಕಾಣುವಂತೆ ಪಿಕ್ ಒಂದನ್ನು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Ranbir Kapoor ಗೆ ಸಿಕ್ತು 2.5 ಕೋಟಿ ವೆಡ್ಡಿಂಗ್ ಗಿಫ್ಟ್, ಅತಿಥಿಗಳಿಗೆ ಕೊಟ್ಟ ಉಡುಗೊರೆ ಏನು ಗೊತ್ತೇ?

ಸದ್ಯ ಆ ಪಿಚ್ ಈಗ ವೈರಲ್ ಆಗಿದ್ದು ಬಳಕೆದಾರರಿಂದ ತರಾವರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ ಈ ಎರಡು ಸೀರೆಗಳನ್ನು ಜನಪ್ರೀಯ ಫ್ಯಾಷನ್ ವಿನ್ಯಾಸಗಾರ ಸಬ್ಯಸಾಚಿ ಅವರೇ ವಿನ್ಯಾಸ ಮಾಡಿರುವುದು. ಈ ಪೋಸ್ಟಿಗೆ ಸಂಬಂಧಿಸಿದಂತೆ ಒಬ್ಬ ಬಳಕೆದಾರರು "ಹಲವು ಸಮಯದ ಹಿಂದೆಯೇ ಕಂಗನಾ ಅವರಿಂದ ಈ ರೀತಿಯ ಸೀರೆ ತೊಟ್ಟಲ್ಪಟ್ಟಿತ್ತು" ಎಂದು ಹೇಳಿದರೆ ಇನ್ನೊಬ್ಬ ಬಳಕೆದಾರರು "ಓಹ್, ಆಲಿಯಾ ಅವರ ಮದುವೆ ಸೀರೆ ಕಂಗನಾ ತೊಟ್ಟಿದ್ದ ಸೀರೆಯಿಂದ ಪ್ರಭಾವಿತವಾಗಿದೆ" ಎಂದು ಕಿಚಾಯಿಸಿದ್ದಾರೆ.

ಇದನ್ನೂ ಓದಿ: ಮೆಹಂದಿ ಕಾರ್ಯಕ್ರಮದಲ್ಲಿ ಹಾಜರಿದ್ರು ರಿಷಿ ಕಪೂರ್​! ಇದು ಹೇಗೆ ಸಾಧ್ಯ ಅಂತೀರಾ? ಫೋಟೋ ನೋಡಿ

ಆಲಿಯಾ ವಿರುದ್ಧ ಕಿಡಿಕಾರಿದ್ದ ಕಂಗನಾ!

ಈ ಹಿಂದೆ ಹಲವು ಬಾರಿ ಕಂಗನಾ ಅವರು ಆಲಿಯಾ ಅವರ ವಿರುದ್ಧ ಸ್ವಜನಪಕ್ಷಪಾತದ ಉತ್ಪನ್ನ ಎಂದು ಹೇಳಿದ್ದಲ್ಲದೆ, ಆಲಿಯಾ ಕರಣ್ ಜೋಹರ್ ಅವರ ಕೈಗೊಂಬೆ ಎಂತಲೂ ಸಹ ಟೀಕೆ ಮಾಡಿದ್ದಾರೆ. 2019 ರಲ್ಲಿ ಒಮ್ಮೆ ಕಂಗನಾ ಅವರನ್ನು ಆಲಿಯಾ ಅವರೊಂದಿಗೆ ಹೋಲಿಕೆ ಮಾಡಿದ ಸಂದರ್ಭದಲ್ಲಿ ಅದಕ್ಕೆ ಕಂಗನಾ ತೀವ್ರ ಬೇಸರ ವ್ಯಕ್ತಪಡಿಸಿದ್ದರು ಹಾಗೂ ಗಲ್ಲಿ ಬಾಯ್ ಚಿತ್ರದಲ್ಲಿನ ಆಲಿಯಾ ಅವರ ನಟನೆಯನ್ನು ಅತಿ ಸಾಧಾರಣವಿತ್ತೆಂದು ಟೀಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
Published by:Vasudeva M
First published: