• Home
  • »
  • News
  • »
  • entertainment
  • »
  • Alia Bhatt: ಮುಗಿಯದ `ಗಂಗೂಬಾಯಿ’ ಸಂಕಷ್ಟ! ಕೋರ್ಟ್ ಮೆಟ್ಟಿಲೇರಿದ ಕಾಮಾಟಿಪುರದ ಶಾಸಕ

Alia Bhatt: ಮುಗಿಯದ `ಗಂಗೂಬಾಯಿ’ ಸಂಕಷ್ಟ! ಕೋರ್ಟ್ ಮೆಟ್ಟಿಲೇರಿದ ಕಾಮಾಟಿಪುರದ ಶಾಸಕ

ನಟಿ ಆಲಿಯಾ ಭಟ್

ನಟಿ ಆಲಿಯಾ ಭಟ್

ಈ ಸಿನಿಮಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಾಮಾಟಿಪುರ(Kamathipura)ದ ಜನತೆ ಹಾಗೂ ಸ್ಥಳೀಯ ಶಾಸಕ(MLA)ರು ‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದು, ಸಿನಿಮಾ ಬಿಡುಗಡೆ ಮಾಡಬಾರದು ಎಂದು ದಾವೆ ಹೂಡಿದ್ದಾರೆ.

  • Share this:

ಬಾಲಿವುಡ್(Bollywood)​ನಲ್ಲಿ ಈಗ ‘ಗಂಗೂಬಾಯಿ ಕಾಥಿಯಾವಾಡಿ’(Gangubai Kathiawadi) ಸಿನಿಮಾದೇ ಹವಾ. ಫೆಬ್ರವರಿ25ರಂದು ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್(Release)​ ಆಗುತ್ತಿದೆ. ಇನ್ನೂ ಕೇವಲ 2 ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಸಿನಿಮಾದ ಸುತ್ತ ವಿವಾದ(Controversy) ಹುತ್ತ ಸೃಷ್ಟಿಯಾಗಿದೆ. ಜನಾಂಗೀಯ ನಿಂಧನೆ ಸೇರಿ ಸಾಕಷ್ಟು ಆರೋಪಗಳು ಈ ಸಿನಿಮಾದ ಮೇಲೆ. ಇನ್ನೂ ಗಂಗೂಬಾಯಿ ಅವರ ದತ್ತು ಪುತ್ರ ಕೂಡ ಕೋರ್ಟ್​ ಮೆಟ್ಟಿಲೇರಿದ್ದಾರೆ. ಸಿನಿಮಾ ರಿಲೀಸ್ ಮಾಡದಂತೆ ತಡೆ ಕೋರಿ ಮನವಿ ಸಲ್ಲಿಸಿದ್ದಾರೆ. ಇದೀಗ ಈ ಸಿನಿಮಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಾಮಾಟಿಪುರ(Kamathipura)ದ ಜನತೆ ಹಾಗೂ ಸ್ಥಳೀಯ ಶಾಸಕ(MLA)ರು ‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದು, ಸಿನಿಮಾ ಬಿಡುಗಡೆ ಮಾಡಬಾರದು ಎಂದು ದಾವೆ ಹೂಡಿದ್ದಾರೆ.


‘ಕಾಮಾಟಿಪುರದ ಬಗ್ಗೆ ಕೆಟ್ಟ ಸಂದೇಶ ಕೊಟ್ಟಿದ್ದಾರೆ’


‘ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ಕಾಮಾಟಿಪುರದ ಬಗ್ಗೆ ಕೆಟ್ಟದಾಗಿ ಚಿತ್ರಿಸಲಾಗಿದೆ. ಸಿನಿಮಾ ಬಿಡುಗಡೆ ಆದರೆ ಕಾಮಾಟಿಪುರದ ನಿವಾಸಿಗಳ ಬಗ್ಗೆ ಸಾರ್ವಜನಿಕರು ಕೆಟ್ಟದಾಗಿ ಯೋಚಿಸಲಿದ್ದಾರೆ. ಇಲ್ಲಿನ ನಿವಾಸಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಲಿದ್ದಾರೆ. ಇಲ್ಲಿ ವಾಸಿಸಲು ಯಾರು ಬರುವುದಿಲ್ಲ. ಇಲ್ಲಿಇರುವವರೂ ಕೂಡ ಜಾಗ ಖಾಲಿ ಮಾಡುವ ಪರಿಸ್ಥಿತಿ ಬಂದರು ಬರಬಹುದು. ಹೀಗಾಗಿ ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು. ಇಲ್ಲ ಸಿನಿಮಾದಲ್ಲಿ ಕಾಮಾಟಿಪುರ ಹೆಸರನ್ನು ತೆಗೆಯಬೇಕು ಎಂದು ಸ್ಥಳೀಯ ಶಾಸಕ ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.


ಬಾಂಬೆ ಹೈ ಕೋರ್ಟ್​ನಲ್ಲಿ ಅರ್ಜಿ ಹಾಕಿದ ಶಾಸಕ ಅಮಿನ್ !


ಹೌದು, ಗಂಗೂಬಾಯಿ ಕಾಥಿಯಾವಾಡಿ ಸಿನಿಮಾಗೆ ತಡೆ ಕೋರಿ, ಶಾಸಕ ಅಮಿನ್ ಪಟೇಲ್ ಹಾಗೂ ಕಾಮಾಟಿಪುರದ ನಿವಾಸಿಗಳು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದು, ಅರ್ಜಿ ಇನ್ನಷ್ಟೆ ವಿಚಾರಣೆಗೆ ಬರಬೇಕಿದೆ.ಕಾಮಾಟಿಪುರದಲ್ಲಿ ಈ ಹಿಂದೆ ಹಲವು ವೇಶ್ಯಾಗೃಹಗಳಿದ್ದವು. ಆದರೆ ಕಾಲಾಂತರದಲ್ಲಿ ಎಲ್ಲವೂ ನಿಷ್ಕಿಯವಾದವು. ಹಿಂದೆ ಕಾಮಾಟಿಪುರದ ರಾಣಿಯಂತಿದ್ದ ಗಂಗೂಬಾಯಿಯ ನಿಜ ಜೀವನದ ಕತೆಯನ್ನೇ ಆಧರಿಸಿ 'ಗಂಗೂಬಾಯಿ ಕಾಥಿಯಾವಾಡಿ' ಸಿನಿಮಾ ಮಾಡಲಾಗಿದೆ.


ಇದನ್ನೂ ಓದಿ: ಡಿಪ್ಪಿ ಆಯ್ತು ಈಗ ಆಲಿಯಾ ಮೇಲೆ ಕಂಗನಾ ಕಣ್ಣು, 200 ಕೋಟಿ ಬೂದಿ ಆಗುತ್ತೆ ಅಂದಿದ್ಯಾಕೆ ಕಾಂಟ್ರವರ್ಸಿ ಕ್ವೀನ್​?


ಸಿನಿಮಾ ಕನಸು ಹೊತ್ತು ಬಂದ ಯುವತಿಯ ಕಥೆ!


ಸಿನಿಮಾದಲ್ಲಿ ನಟಿಸುವ ಕನಸು ಹೊತ್ತು ಮುಂಬೈಗೆ ಬಂದಿದ್ದ ಯುವತಿ ಮೋಸಕ್ಕೆ ಬಿದ್ದು ಮುಂಬೈನ ರೆಡ್ ಲೈಟ್ ಏರಿಯಾ ಸೇರುವ ಕಥೆ. ಮುಂದೊಂದು ದಿನ ಅದೇ ಕಾಮಾಟಿಪುರದ ಅಧಿ ನಾಯಕಿಯಾಗಿ ಬೆಳೆಯುವ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. 'ಗಂಗೂಬಾಯಿ ಕಾಠಿಯಾವಾಡಿ' ಹುಸೈನ್ ಜೈದಿ ಬರೆದ ಪುಸ್ತಕವನ್ನು ಆಧರಿಸಿದ ಬಯೋಗ್ರಾಫಿಕಲ್ ಕೈಂ ಡ್ರಾಮಾ. ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸೆಕ್ಸ್ ವರ್ಕರ್ ಆಗಿದ್ದ ಮಾಫಿಯಾ ಕ್ವೀನ್ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ.


ಇದನ್ನೂ ಓದಿ: ಗಂಗೂಬಾಯಿ ಕಾಠಿಯಾವಾಡಿ ಯಾರು? ಬನ್ಸಾಲಿ ಸಿನಿಮಾದ ಸುತ್ತ ವಿವಾದವೇಕೆ? ಇಲ್ಲಿದೆ ಡಿಟೇಲ್ಸ್


ಚಿತ್ರತಂಡದ ಮೇಲೆ ಗುಡುಗಿದ ಗಂಗೂಬಾಯಿ ಪುತ್ರ


ಗಂಗೂಬಾಯಿ ಅವರ ದತ್ತು ಪುತ್ರ ಎಂದು ಹೇಳಿಕೊಂಡಿರುವ ಬಾಬು ರಾವ್‍ಜೀ ಶಾ ಮತ್ತು ಮೊಮ್ಮಗಳು ಭಾರತಿ ಚಿತ್ರದ ಟ್ರೇಲರ್ ನೋಡಿ ಕೋಪಕೊಂಡಿದ್ದಾರೆ.“ನನ್ನ ತಾಯಿಯನ್ನು ವೇಶ್ಯೆಯನ್ನಾಗಿ ಪರಿವರ್ತಿಸಲಾಗಿದೆ. ಜನರು ಈಗ ನನ್ನ ತಾಯಿಯ ಬಗ್ಗೆ  ಇಲ್ಲ ಸಲ್ಲದ ಮಾತುಗಳನ್ನು ಆಡತೊಡಗಿದ್ದಾರೆ” ಎಂದು ಬಾಬು ರಾವ್‍ಜೀ ಶಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. 2020ರಲ್ಲಿ, ಗಂಗೂಬಾಯಿ ಅವರ ಕುರಿತು ಸಿನಿಮಾ ಮಾಡಲಾಗುತ್ತಿದೆ ಎಂಬುವುದು ಗೊತ್ತಾದ ದಿನದಿಂದ, ಆಕೆಯ ಕುಟುಂಬ ತಲೆ ಮರೆಸಿಕೊಳ್ಳುತ್ತಾ ಮತ್ತು ಮನೆಗಳನ್ನು ಬದಲಾಯಿಸುತ್ತಾ ಬಂದಿದೆ ಎಂದು ಆ ಕುಟುಂಬದ ವಕೀಲ ನರೇಂದ್ರ ಹೇಳಿದ್ದಾರೆ.

Published by:Vasudeva M
First published: