Alia Bhatt: ಅಯ್ಯೋ ಶಿವನೇ, ಏರ್​ಪೋರ್ಟ್​ನಲ್ಲಿ ಇದ್ಯಾಕ್​ ಹಿಂಗ್​ ಓಡ್ತಿದ್ದಾರೆ ಆಲಿಯಾ ಭಟ್​!

ಇತ್ತೀಚೆಗೆ ಆಲಿಯಾ ತನ್ನ ಬ್ಯಾಗುಗಳನ್ನು ಹೊತ್ತ ಟ್ರಾಲಿ ವೊಂದನ್ನು ಹಿಡಿದುಕೊಂಡು ದೆಹಲಿ (Delhi) ಯ ವಿಮಾನ ನಿಲ್ದಾಣ (Airport) ದಲ್ಲಿ ಅವಸರದಿಂದ ಓಡಿಕೊಂಡು ಹೋಗಿದ್ದಾರಂತೆ ಎಂದು ಹೇಳಲಾಗುತ್ತಿದೆ.

ನಟಿ ಆಲಿಯಾ ಭಟ್​

ನಟಿ ಆಲಿಯಾ ಭಟ್​

  • Share this:
ಬಾಲಿವುಡ್ (Bollywood) ನಟಿ ಆಲಿಯಾ ಭಟ್ (Alia Bhatt) ಅವರು ನಟ ರಣಬೀರ್ ಕಪೂರ್ (Ranbir Kapoor) ಅವರೊಂದಿಗೆ ವಿವಾಹ (Wedding) ವಾದ ಕೆಲವೇ ದಿನಗಳಲ್ಲಿ ಮತ್ತೆ ತಮ್ಮ ತಮ್ಮ ಕೆಲಸಕ್ಕೆ ಮರಳಿರುವುದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಇತ್ತೀಚೆಗೆ ಆಲಿಯಾ ತನ್ನ ಬ್ಯಾಗುಗಳನ್ನು ಹೊತ್ತ ಟ್ರಾಲಿ ವೊಂದನ್ನು ಹಿಡಿದುಕೊಂಡು ದೆಹಲಿ (Delhi) ಯ ವಿಮಾನ ನಿಲ್ದಾಣ (Airport) ದಲ್ಲಿ ಅವಸರದಿಂದ ಓಡಿಕೊಂಡು ಹೋಗಿದ್ದಾರಂತೆ ಎಂದು ಹೇಳಲಾಗುತ್ತಿದೆ. ನಟಿ ಆಲಿಯಾ ಅವಸರವಾಗಿ ಎಲ್ಲೋ ಹೋಗುತ್ತಿರಬಹುದೇ..? ಎಂಬ ಪ್ರಶ್ನೆ ಈ ಸುದ್ದಿ ಕೇಳಿದವರ ಮನಸ್ಸಿನಲ್ಲಿ ಮೂಡುವುದು ಸಹಜ.

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಶೂಟಿಂಗ್​ನಲ್ಲಿ ಆಲಿಯಾ!

ನಿಜವಾಗಿ ಹೇಳುವುದಾದರೆ ತಮ್ಮ ಮುಂಬರುವ ಚಿತ್ರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಚಿತ್ರೀಕರಣದಲ್ಲಿ ನಟಿ ಆಲಿಯಾ ಅವರು ತೊಡಗಿದ್ದು, ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಒಳಗೆ ಹೀಗೆ ಓಡುತ್ತಿರುವುದು ಕಂಡು ಬಂದಿದೆ. ಆಲಿಯಾ ಅವರ ಅಭಿಮಾನಿ ಬಳಗವು ಹಂಚಿಕೊಂಡಿರುವ ಸರಣಿ ಟ್ವೀಟ್ ಗಳಲ್ಲಿ ನಟಿ ತನ್ನ ಚಿತ್ರದ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದನ್ನು ಮತ್ತು ಈ ವಿಡಿಯೋವೊಂದರಲ್ಲಿ, ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಕೂಡ ಆಲಿಯಾ ಅವರೊಂದಿಗೆ ಕಾಣಿಸಿಕೊಂಡಿದ್ದನ್ನು ನೋಡಬಹುದಾಗಿದೆ.

ವೈರಲ್​ ಆಯ್ತು ಆಲಿಯಾ ಭಟ್​ ಶೂಟಿಂಗ್​ ಫೋಟೋ!

ಇವರು ಒಂದು ಫೋಟೋದಲ್ಲಿ, ತುಂಬಾ ದುಃಖಿತರಾಗಿ ಕಾಣಿಸಿಕೊಂಡಿದ್ದು, ಮತ್ತೊಂದು ಫೋಟೋದಲ್ಲಿ ಈಕೆ ನಡೆದುಕೊಂಡು ಬರುವುದನ್ನು ನಾವು ನೋಡಬಹುದು. ಇವರ ಮುಂಬರುವ ಚಿತ್ರದ ಚಿತ್ರೀಕರಣಕ್ಕಾಗಿ, ನಟಿ ಆಲಿಯಾ ಸಂಪೂರ್ಣ ತೋಳಿನ ಟರ್ಟಲ್ ನೆಕ್ ಸ್ವೆಟರ್, ಕಪ್ಪು ಟೈಟ್ಸ್ ಮತ್ತು ಮ್ಯಾಚಿಂಗ್ ಬೂಟ್‌ಗಳನ್ನು ಸಹ ಧರಿಸಿದ್ದರು.

ಇದನ್ನೂ ಓದಿ: ವ್ಹಾ, ಕಿಲ್ಲರ್​​ ಲುಕ್ ಗುರೂ! ಮುಂದಿನ ಸಿನಿಮಾಗಾಗಿ ಅಜಿತ್​ ಕಸರತ್ತು ಜೋರು

ಒಂದು ವಿಡಿಯೋದಲ್ಲಿ, ಚಿತ್ರದ ತಂಡವು ಕ್ಯಾಮೆರಾಗಳು ಮತ್ತು ಇತರ ಸಲಕರಣೆಗಳೊಂದಿಗೆ ಆಲಿಯಾ ಅವರ ಮುಂದೆ ಓಡುತ್ತಿರುವುದನ್ನು ಕಾಣಬಹುದು. ಆಲಿಯಾ ಲಗೇಜ್ ತುಂಬಿದ ಟ್ರಾಲಿಯೊಂದಿಗೆ ಓಡಿಕೊಂಡು ಅವಸರದಿಂದ ಧಾವಿಸುತ್ತಿರುವುದನ್ನು ನೋಡಬಹುದಾಗಿದೆ. ಅವರ ಮುಖದಲ್ಲಿ ಗಂಭೀರತೆ ಇದ್ದು, ಈ ಕ್ಲಿಪ್ ನಲ್ಲಿ ಆಲಿಯಾ ಉದ್ದವಾದ ಕಪ್ಪು ಕೋಟ್ ಅನ್ನು ಸಹ ಧರಿಸಿದ್ದನ್ನು ನಾವು ನೋಡಬಹುದಾಗಿದೆ.


ಚಿತ್ರೀಕರಣದಲ್ಲಿ ನವ ದಂಪತಿಗಳು ಬ್ಯುಸಿ!

ನಟ ರಣಬೀರ್ ಕಪೂರ್ ಅವರನ್ನು ಮದುವೆಯಾದ ಕೆಲವೇ ದಿನಗಳಲ್ಲಿ ಆಲಿಯಾ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದರು. ಆಲಿಯಾ, ಕರಣ್, ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ಹಿರಿಯ ತಾರೆ ಶಬಾನಾ ಅಜ್ಮಿ ಸಹ ಚಿತ್ರದ ಚಿತ್ರೀಕರಣಕ್ಕಾಗಿ ಮುಂಬೈನಿಂದ ದೆಹಲಿಗೆ ಹೋಗುತ್ತಿರುವುದು ಕಂಡು ಬಂದಿದೆ.

ನಿರ್ದೇಶನಕ್ಕೆ ಕರಣ್​ ಜೋಹರ್​ ಕಮ್​ಬ್ಯಾಕ್​!

ಈ ಚಿತ್ರದಲ್ಲಿ ಆಲಿಯಾ ಮತ್ತು ಶಬಾನಾ ಜೊತೆಗೆ ರಣವೀರ್ ಸಿಂಗ್, ಧರ್ಮೇಂದ್ರ ಮತ್ತು ಜಯಾ ಬಚ್ಚನ್ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್ ಮತ್ತು ಸುಮಿತ್ ರಾಯ್ ಬರೆದಿದ್ದಾರೆ. 2016 ರಲ್ಲಿ ಮಾಡಿದಂತಹ ರೋಮ್ಯಾಂಟಿಕ್ ಕಥೆಯಿರುವ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ನಂತರ ಕರಣ್ ಚಲನಚಿತ್ರ ನಿರ್ದೇಶನಕ್ಕೆ ಮರಳಿರುವುದು ಈ ಪ್ರೇಮಕಥೆಯಿಂದ ಎಂದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ: ಕಾಪು ಮಾರಿಗುಡಿಗೆ ಪೂಜಾ ಹೆಗ್ಡೆ ಭೇಟಿ! ದೇವರ ಬಳಿ ಇದೊಂದು ಆಸೆ ಪೂರೈಸುವಂತೆ ಕೇಳಿಕೊಂಡ ನಟಿ

ಜೊತೆಗೆ ಅಯಾನ್ ಮುಖರ್ಜಿ ಅವರ ಫ್ಯಾಂಟಸಿ ಡ್ರಾಮಾ ‘ಬ್ರಹ್ಮಾಸ್ತ್ರ’ ಚಿತ್ರವು ಸಹ ನಟಿ ಆಲಿಯಾ ಅವರ ಕೈಯಲ್ಲಿದೆ. ಈ ಚಿತ್ರದಲ್ಲಿ ಅವರು ತಮ್ಮ ಪತಿ, ನಟ ರಣಬೀರ್ ಕಪೂರ್ ಅವರೊಂದಿಗೆ ಮೊದಲ ಬಾರಿಗೆ ಕಾಣಿಸಿ ಕೊಳ್ಳಲಿದ್ದಾರೆ. ಇದು ಸೆಪ್ಟೆಂಬರ್ 9, 2022 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
Published by:Vasudeva M
First published: