Alia Bhatt: ಯಾವುದೇ ಡಯಟ್​ ಮಾಡದೇ ನ್ಯಾಚುರಲ್​ ಆಗಿಯೇ ತೂಕ ಇಳಿಸಿಕೊಂಡ ಆ್ಯಕ್ಟರ್​!

ಆಲಿಯಾ ಭಟ್​

ಆಲಿಯಾ ಭಟ್​

ಹೆರಿಗೆ ನಂತರ ತೂಕ ಹೆಚ್ಚಾಗುವಿಕೆ ಸಾಮಾನ್ಯ ಸಮಸ್ಯೆ. ಹೆರಿಗೆಯಾಗಿ ಮೂರು ತಿಂಗಳ ನಂತರವಷ್ಟೇ ತೂಕ ಇಳಿಸಲು ಮಹಿಳೆಯರು ವ್ಯಾಯಾಮ, ಯೋಗ ಅಭ್ಯಾಸಗಳನ್ನು ನಡೆಸಲು ವೈದ್ಯರು ಹೇಳುತ್ತಾರೆ. ಈ ಸಮಯದಲ್ಲಿ ಆರೋಗ್ಯಕರ ಜೀವನಶೈಲಿ, ಡಯಟ್ ಸಹಾಯ ಮಾಡುತ್ತದೆ.

  • Share this:

ಮಗುವಿಗೆ (Baby) ಜನ್ಮ ನೀಡುವುದು ಮಹಿಳೆಯ ಜೀವನದಲ್ಲಿ ಮಹತ್ವದ ಘಟ್ಟ. ಮರುಹುಟ್ಟು ಸಿಕ್ಕಿದ ಹಾಗೆ. ಹೆರಿಗೆಯಾದ ನಂತರ ಮಹಿಳೆಯ ದಿನನಿತ್ಯದ ಜೀವನ ಬದಲಾಗುತ್ತದೆ. ಹಲವು ರಾತ್ರಿಗಳು ನಿದ್ದೆಗೆಡಬೇಕಾಗುತ್ತದೆ. ಮಗುವಿನ ಆರೈಕೆಯಲ್ಲಿ ಒತ್ತಡ, ಹೊಟ್ಟೆಯಲ್ಲಿ ನೆರಿಗೆ, ದೇಹದ ತೂಕ ಹೆಚ್ಚಾಗುವುದು  (Weight Gain) ಇತ್ಯಾದಿ ಕಾಣಿಸಿಕೊಳ್ಳುತ್ತದೆ. ತೂಕ ಹೆಚ್ಚಾಗುವಿಕೆಯಿಂದ ಮಾನಸಿಕ ಖಿನ್ನತೆ ಮತ್ತು ಶಾರೀರಿಕ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಹೆರಿಗೆ ನಂತರ ತೂಕ ಹೆಚ್ಚಾಗುವಿಕೆ ಸಾಮಾನ್ಯ ಸಮಸ್ಯೆ. ಹೆರಿಗೆಯಾಗಿ ಮೂರು ತಿಂಗಳ ನಂತರವಷ್ಟೇ ತೂಕ ಇಳಿಸಲು ಮಹಿಳೆಯರು ವ್ಯಾಯಾಮ, ಯೋಗ ಅಭ್ಯಾಸಗಳನ್ನು ನಡೆಸಲು ವೈದ್ಯರು (Docter) ಹೇಳುತ್ತಾರೆ. ಈ ಸಮಯದಲ್ಲಿ ಆರೋಗ್ಯಕರ ಜೀವನಶೈಲಿ, ಡಯಟ್ ಸಹಾಯ ಮಾಡುತ್ತದೆ.


ಮಗುವಿಗೆ ಹಾಲುಣಿಸುವ ಸಮಯದಲ್ಲಿ ಅಧಿಕ ಡಯಟ್ ಮಾಡಿದರೆ ಎದೆಹಾಲು ಕಡಿಮೆಯಾಗಬಹುದು. ಹೀಗಾಗಿ ಆಹಾರ ತೆಗೆದುಕೊಳ್ಳುವ ವಿಷಯದಲ್ಲಿ ಯೋಜನೆ ಮಾಡಬೇಕು.


ಇಷ್ಟೆಲ್ಲಾ ವಿಷಯವನ್ನು ಗಮನದಲ್ಲಿಟ್ಟುಕೊಂಡು ಹೆರಿಗೆ ನಂತರ ತೂಕ ಇಳಿಸಲು ಆರೋಗ್ಯಕರ ಪದ್ದತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯ. ಬಾಲಿವುಡ್‌ ಬೆಡಗಿ ಆಲಿಯಾ ಭಟ್ ಕೂಡ ಈಗ ತಮ್ಮ ತಾಯ್ತನದ ಸಂತಸವನ್ನು ಮನದುಂಬಿ ಅನುಭವಿಸುತ್ತಿದ್ದಾರೆ. ಇವರು ಸೆಲೆಬ್ರೆಟಿ ಬೇರೆ. ತಾಯಿ ಆದ ತಕ್ಷಣ ಅವರ ತೂಕವೂ ಹೆಚ್ಚಾಗುವುದು ಸಾಮಾನ್ಯ.


ಆದರೆ ಆಲಿಯಾ ಭಟ್‌ ಅವರು ತಮ್ಮ ಹೆರಿಗೆಯ ನಂತರ ಕೆಲವೇ ತಿಂಗಳಲ್ಲಿ ಫಿಟ್‌ ಆಗಿ ಕಂಡು ಬಂದಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಬಹುತೇಕರದ್ದು. ಗರ್ಭಧಾರಣೆಯ ನಂತರ ತೂಕ ಹೆಚ್ಚಾಗುವುದು ಸರ್ವೇ ಸಾಮಾನ್ಯ ಸಂಗತಿ. ಹೆರಿಗೆ ನಂತರ ಕೆಲವು ಮಹಿಳೆಯರು ತಮ್ಮ ತೂಕವನ್ನು ಕಳೆದುಕೊಂಡು ಫಿಟ್‌ ಆಗಿ ಕಾಣಿಸುತ್ತಾರೆ. ಇನ್ನು ಕೆಲವರಿಗೆ ಇದು ಸಾಧ್ಯವಾಗುವುದಿಲ್ಲ.


ಸೆಲೆಬ್ರೆಟಿ ಆದರೂ ಸಹ ಆಲಿಯಾ ಭಟ್‌ ಇದಕ್ಕೆ ಭಿನ್ನವಾಗಿಲ್ಲ. ಅವರ ತೂಕ ಇಳಿಕೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚಿಸಲಾಗಿದೆ. ಆಲಿಯಾ ಭಟ್‌ ಅವರು ಸಹಜವಾಗಿ ತಮ್ಮ ತೂಕವನ್ನು ಕಳೆದುಕೊಂಡಿಲ್ಲ ಎಂದು ಅನೇಕರು ಭಾವಿಸಿದ್ದಾರೆ. ಇದಕ್ಕೆ ಉತ್ತರವಾಗಿ ಆಲಿಯಾ ಭಟ್‌ ಅವರು ಹೆರಿಗೆ ನಂತರ ತಾವು ಹೇಗೆ ತೂಕವನ್ನು ಕಳೆದುಕೊಂಡಿದ್ದೇನೆ ಎಂಬುದರ ಕುರಿತು ಪ್ರಾಮಾಣಿಕವಾಗಿ ಉತ್ತರಿಸಿದ್ದಾರೆ.


ಆಲಿಯಾ ಭಟ್‌ ಅವರು ತಮ್ಮ ತೂಕ ಇಳಿಕೆ ಬಗ್ಗೆ ಹೇಳಿರುವುದೇನು?


ಸುದ್ದಿ ಮಾಧ್ಯಮವಾದ ವೋಗ್ ಇಂಡಿಯಾದೊಂದಿಗೆ ಮಾತನಾಡಿದ ಆಲಿಯಾ, “ನನ್ನ ವೃತ್ತಿ ಸಿನಿಮಾ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸಿನಿಮಾದಲ್ಲಿ ಸುಂದರವಾಗಿ ಕಾಣಬೇಕಿರುವುದು ಅಗತ್ಯ ಮತ್ತು ಅನಿವಾರ್ಯತೆ. ನಾನು ನನ್ನ ಮಗಳು ರಾಹಾಗೆ ಜನ್ಮ ನೀಡಿದಾಗ ನನ್ನ ದೇಹ ಎಷ್ಟೆಲ್ಲ ಕಷ್ಟ ಪಟ್ಟಿದೆ ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ.


ನಾನು ಅಸ್ವಾಭಾವಿಕವಾಗಿ ತೂಕ ಇಳಿಕೆ ಮಾಡಿಕೊಂಡಿದ್ದೇನೆ ಎಂದು ಎಲ್ಲರೂ ನಂಬಿದ್ದಾರೆ. ಆದ್ದರಿಂದ ನನ್ನ ಫಿಟ್‌ನೆಸ್‌ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಸೂಕ್ತ ಎಂದು ನಾನು ನನ್ನ ಫಿಟ್‌ನೆಸ್‌ ಕುರಿತು ಎಲ್ಲರ ಮುಂದೆ ಬಹಿರಂಗಪಡಿಸುತ್ತಿದ್ದೆನೆ. ನನ್ನ ವೈದ್ಯರು 12 ವಾರಗಳ ನಂತರ ತೂಕ ಇಳಿಕೆಗೆ ನನಗೆ ಸಲಹೆ ನೀಡಿದ್ದರು. ನಾನು ಹಾಗೆಯೇ ನಡೆದುಕೊಂಡಿದ್ದೆನೆ.


ಇದನ್ನೂ ಓದಿ: ಬೇಸಿಗೆ ರಜೆಗೆ ಬಂಪರ್! OTTಯಲ್ಲಿ ಸಿನಿಮಾ, ಸಿರೀಸ್​ಗಳ ಸರಮಾಲೆ, ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್


“ನಾನು ನನ್ನ ಮಗಳಿಗೆ ಹಾಲುಣಿಸುವ ಕಾರಣದಿಂದ ಬೇಕಾದಹಾಗೆ ತೂಕ ಇಳಿಕೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಇದರಿಂದ ನನ್ನ ಮತ್ತು ನನ್ನ ಮಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಅರಿವು ನನಗೆ ಇತ್ತು. ಆದರೆ ಹೆರಿಗೆ ನಂತರ ನಾನು ಇನ್ನು ನನ್ನ ಮೊದಲಿನ ತೂಕಕ್ಕೆ ಮರಳಿಲ್ಲ. ಇನ್ನು ಅದರ ಪ್ರಯತ್ನದಲ್ಲಿದ್ದೇನೆ” ಎಂದು ಹೇಳಿದ್ದಾರೆ.


“ಹೆರಿಗೆ ನಂತರ ನಾನು ತೂಕವನ್ನು ಸಹಜವಾಗಿ ಇಳಿಸಿಕೊಂಡಿದ್ದೇನೆ. ಅದಕ್ಕೆ ದಿನವೂ 15 ನಿಮಿಷ ವಾಕ್‌ ಹೋಗುತ್ತಿದ್ದೆ. ಉಸಿರಾಟದ ಅನೇಕ ವ್ಯಾಯಾಮಗಳನ್ನು ಮಾಡುತ್ತಿದ್ದೆ. ಇದರಿಂದ ರಕ್ತದ ಹರಿವು ಉತ್ತಮವಾಗುತ್ತಿತ್ತು. ದಿನಾಲೂ ನನ್ನ ತೂಕ ಎಷ್ಟಾಗಿದೆ ಎಂದು ನಾನು ಚೆಕ್‌ ಮಾಡುತ್ತಿರಲಿಲ್ಲ. ಎರಡು ವಾರಕ್ಕೊಮ್ಮೆ ಮಾತ್ರ ಚೆಕ್‌ ಮಾಡುತ್ತಿದ್ದೆ.


ನನ್ನ ಅತ್ತೆ ನನಗೆ 6 ವಾರಗಳ ಕಾಲ ಬಾಣಂತಿಯರಿಗೆ ಕೊಡುವ ವಿಶೇಷ ಲಾಡು ಆದ ಅಂಟಿನ ಉಂಡೆಯನ್ನು ತಿನ್ನಲು ಕೊಟ್ಟಿದ್ದರು. ಹೆಚ್ಚು ತಿನ್ನುವುದರಿಂದ ಗರ್ಭಾವಸ್ಥೆಯಲ್ಲಿ ತೂಕ ಹೆಚ್ಛಾಗುತ್ತದೆ ಎಂಬುದು ಕಟ್ಟು ಕಥೆ.


ಇದನ್ನೂ ಓದಿ: ಓಟಿಟಿಗೆ ಬಂತು ಹೊಯ್ಸಳ! ಇಲ್ಲಿದೆ ಡೀಟೆಲ್ಸ್


ನೀವು ಇನ್ನೊಂದು ಜೀವಕ್ಕೆ ಜನ್ಮಕ್ಕೆ ಜೀವ ನೀಡುವುದರಿಂದ ಹೆಚ್ಚುವರಿ ತೂಕದ ಅವಶ್ಯಕತೆ ನಿಮ್ಮ ದೇಹಕ್ಕೆ ಇರುತ್ತದೆ. ಅದರ ಬಗ್ಗೆ ಕೀಳರಿಮೆ ಬೇಡ. ಅದು ಅಗತ್ಯವಾಗಿದೆ” ಎನ್ನುತ್ತಾರೆ ಆಲಿಯಾ.


ಹಾಗೆಯೇ ತಮ್ಮ ಮಾತನ್ನು ಮುಂದುವರಿಸಿದ ಆಲಿಯಾ ತಮ್ಮ ಮಗಳ ಬಗ್ಗೆಯೂ ಸಹ “ಮಕ್ಕಳು ಯಾವಾಗ ಹೇಗೆ ಇರುತ್ತಾರೋ ಎನ್ನುವುದು ಊಹಿಸುವುದು ಅಸಾಧ್ಯ.
ಅವರು ಯಾವಾಗಲೂ ಖುಷಿಯಾಗಿರಬೇಕೆಂದು ಬಯಸುವುದು ಪ್ರತಿ ತಾಯಿಯ ಆಸೆ ಆಗಿರುತ್ತದೆ. ಮಕ್ಕಳು ಅಳುವುದು ಅವರಿಗೆ ಏನಾದರೂ ಸಮಸ್ಯೆಯಾದಾಗ ಎಂಬುದು ಅರ್ಥ ಮಾಡಿಕೊಳ್ಳಬೇಕು” ಎಂದು ಮಾತನಾಡಿದ್ದಾರೆ.


ಆಲಿಯಾ ಭಟ್‌ ಅವರ ಹಾಲಿವುಡ್‌ ಚಿತ್ರ ತೆರೆಗೆ


ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮೊದಲ ಮಗು ರಾಹಾ ಭಟ್ ಕಪೂರ್ ಅವರನ್ನು ನವೆಂಬರ್ 2022 ರಲ್ಲಿ ಸ್ವಾಗತಿಸಿದರು. ಆಲಿಯಾ ಭಟ್‌ ತನ್ನ ಹಾಲಿವುಡ್ ಚೊಚ್ಚಲ ಹಾರ್ಟ್ ಆಫ್ ಸ್ಟೋನ್ ಮತ್ತು ಕರಣ್ ಜೋಹರ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಎರಡು ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

top videos
    First published: