ರಾಜಮೌಳಿ ಅವರ 'RRR​' ಸಿನಿಮಾಗಾಗಿ ಅಲಿಯಾ ಭಟ್​ ತೆಗೆದುಕೊಂಡಿದ್ದು ಎಷ್ಟು ಕೋಟಿ ಗೊತ್ತಾ..?

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಲಿಯಾಗೆ ಒಂದು ದಿನ ಮುಂಚಿತವಾಗಿಯೇ ಸಿಹಿ ಸುದ್ದಿ ಸಿಕ್ಕಿದೆ. ರಾಜಮೌಳಿ ಅವರ 'RRR' ಸಿನಿಮಾದಲ್ಲಿ ಅವರು ಕೋಟಿ ಕೋಟಿ ಸಂಭಾವನೆ ಪಡೆದಿದ್ದಾರಂತೆ. ಟಾಲಿವುಡ್​ನಲ್ಲಿ ಮೊದಲ ಸಿನಿಮಾದಲ್ಲೇ ಸ್ಟಾರ್​ ನಿರ್ದೇಶಕನ ರಾಜಮೌಳಿ ಅವರ ಜತೆಗೆ ಕೆಲಸ ಮಾಡುವುದರೊಂದಿಗೆ ಕೈ ತುಂಬ ಹಣ ಸಿಕ್ಕಿರುವುದು ಅದೃಷ್ಟ.

news18
Updated:March 15, 2019, 5:44 PM IST
ರಾಜಮೌಳಿ ಅವರ 'RRR​' ಸಿನಿಮಾಗಾಗಿ ಅಲಿಯಾ ಭಟ್​ ತೆಗೆದುಕೊಂಡಿದ್ದು ಎಷ್ಟು ಕೋಟಿ ಗೊತ್ತಾ..?
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಅಲಿಯಾ ಭಟ್​
news18
Updated: March 15, 2019, 5:44 PM IST
ವಿಭಿನ್ನ ಪಾತ್ರಗಳ ಮೂಲಕ ಹಾಗೂ ಸಹಜ ಅಭಿನಯದಿಂದಲೇ ಬಾಲಿವುಡ್​ನಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿರುವ ನ್ಯಾಚುರಲ್​ ಬ್ಯೂಟಿ ಅಲಿಯಾ ಭಟ್​. ಇವರ ಹೆಸರು ಇತ್ತೀಚೆಗೆ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ. ಅದಕ್ಕೆ ಕಾರಣ ರಾಜಮೌಳಿ ನಿರ್ದೇಶನದ 'RRR' ಸಿನಿಮಾ.

ಇದನ್ನೂ ಓದಿ: ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಡಬಲ್​ ಗಿಫ್ಟ್​: ಪುನೀತ್​ ಹೊಸ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ..!

ಈ ಸಿನಿಮಾದಲ್ಲಿ ಅಲಿಯಾ ರಾಮ್​ ಚರಣ್​ ತೇಜಾಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದರಿಂದಾಗಿಯೇ ಇವರ ಹೆಸರನ್ನು ಟಾಲಿವುಡ್ ಪ್ರೇಕ್ಷಕರು ಈಗ ಇಂಟರ್​ನೆಟ್​ನಲ್ಲಿ ಹುಡುಕಾಡುತ್ತಿದ್ದಾರೆ. ಅದರಲ್ಲೂ ಇಂದು ಈ ಬ್ಯೂಟಿ ಹುಟ್ಟುಹಬ್ಬ.2012ರಲ್ಲಿ  ಕರಣ್​ ಜೋಹರ್​ ನಿರ್ಮಾಣದ 'ಸ್ಟುಡೆಂಟ್​ ಆಫ್​ ದಿ ಇಯರ್​' ಸಿನಿಮಾ ಮೂಲಕ ಬಿ-ಟೌನ್​ಗೆ ಕಾಲಿಟ್ಟ ಅಲಿಯಾ, ಕೇವಲ ಗ್ಲಾಮರ್​ ಗೊಂಬೆಯಾಗದೆ 'ಹೈವೆ', 'ಉಡ್ತಾ ಪಂಜಾಬ್'​, 'ರಾಝಿ' ಸೇರಿದಂತೆ ಸಾಕಷ್ಟು ಅಭಿನಯ ಪ್ರಧಾನ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದರು.

'ರಾಝಿ' ಸಿನಿಮಾದ ನಂತರ ಬಿ-ಟೌನ್​ನಲ್ಲಿ ಅಲಿಯಾ ಸಂಭಾವನೆ 9 ಕೋಟಿಗೂ ಹೆಚ್ಚಿದೆ. ಇದರಿಂದಾಗಿಯೇ ಈಗ 'RRR' ಸಿನಿಮಾಗಾಗಿ 12 ಕೋಟಿ ಸಂಭಾವನೆ ಪಡೆದಿದ್ದಾರಂತೆ ಅಲಿಯಾ. ಹೀಗೆಂದು ಸುದ್ದಿವೊಂದು ಈಗ ಟಾಲಿವುಡ್​ ಗಲ್ಲಿಗಳಲ್ಲಿ ಗುಲ್ಲಾಗಿದೆ. ಸದ್ಯ ಈ ವಿಷಯ ಈಗ ತೆಲುಗು ಸಿನಿ ರಂಗದಲ್ಲಿ ಚರ್ಚೆಗೆ ಹಾಟ್ ಟಾಪಿಕ್​ ಆಗಿದೆ.PHOTOS: ಸೀರೆಯುಟ್ಟು ಕ್ಯಾಮೆರಾಗೆ ಪೋಸ್​ ನೀಡಿದ ತುಪ್ಪದ ಹುಡುಗಿ ರಾಗಿಣಿ ..!
First published:March 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ