ಬಾಲಿವುಡ್ನ (Bollywood) ಜನಪ್ರಿಯ ಜೋಡಿಗಳಾದ (Couple) ಹ್ಯಾಂಡ್ಸಮ್ ಹಂಕ್ (Handsome Hunk) ರಣಬೀರ್ ಕಪೂರ್ (Ranbir Kapoor) ಮತ್ತು ಕ್ಯೂಟ್ ಬೆಡಗಿ ಆಲಿಯಾ ಭಟ್ ಮದುವೆಯಾಗಿ ಸುಮಾರು ಮೂರು ತಿಂಗಳಾಗುತ್ತದೆ. ಅವರಿಬ್ಬರ ಮದುವೆ ಬಹಳ ಚರ್ಚಿತ ಹಾಗೂ ನಿರೀಕ್ಷಿತವಾಗಿತ್ತು. ಅಭಿಮಾನಿಗಳು ಸಹ ಈ ಜೋಡಿ ಯಾವಾಗ ಹಸೆಮಣೆ ಏರುತ್ತಾರೆ ಎಂದು ಕಾದು ಕುಳಿತಿದ್ದರು. ಈ ವರ್ಷದ ಏಪ್ರಿಲ್ 14ರಂದು ಸಪ್ತಪದಿ ತುಳಿದಿದ್ದ ಜೋಡಿ ಅಭಿಮಾನಿಗಳಿಗೆ ನಿನ್ನೆಯಷ್ಟೇ ಮತ್ತೊಂದು ಗುಡ್ ನ್ಯೂಸ್ ನೀಡಿತತು. ತಾವು ಪೋಷಕರಾಗುತ್ತಿದ್ದೇವೆ ಎಂಬುದನ್ನ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿತ್ತು. ಇದೀಗ ಈ ಜೋಡಿ ತಮ್ಮ ಹೊಸ ಬಾಳಿಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದೆ.
ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಆಲಿಯಾ
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಿಕೊಂಡಿರುವ ಆಲಿಯಾ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ನಾವು ಪ್ರತಿಯೊಬ್ಬರ ಮೆಸೇಜ್ ಓದಲು ಹಾಗೂ ಪ್ರತಿಕ್ರಿಯಿಸಲು ಪ್ರಯತ್ನಿಸಿದ್ದೇವೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಎಂದಿಗೂ ಚಿರಋಣಿ. ಈ ವಿಶೇಷ ದಿನವನ್ನು ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದದೊಂದಿಗೆ ಆಚರಿಸಲು ಸಂತಸವಾಗುತ್ತದೆ. ಥ್ಯಾಂಕ್ಯೂ ಎಂದು ಪೋಸ್ಟ್ ಮಾಡಿದ್ದಾರೆ.
![Alia Bhatt pregnant actress posts thanking story to all fans and wishers]()
ಆಲಿಯಾ ಮತ್ತು ರಣಬೀರ್
ಇದಲ್ಲದೇ ಕೆಲ ವಿಚಾರವಾಗಿ ಕೋಪಗೊಂಡಿರುವ ಆಲಿಯಾ ಖಾಸಗಿ ಮಾಧ್ಯಮವೊಂದರ ಬರಹದ ವಿರುದ್ಧ ಕಿಡಿಕಾರಿದ್ದಾರೆ. ನಾವು 2022ನೇ ಇಸವಿಯಲ್ಲಿದ್ದೇವೆ ಸ್ವಲ್ಪ ಚಿಂತನೆ ಬದಲಾಗಲಿ ಎಂದು ಸಹ ಬರೆದು ಸ್ಟೋರಿ ಹಾಕಿದ್ದಾರೆ. ಅದೇನೇ ಇರಲಿ ಆಲಿಯಾ ಹಾಗೂ ರಣವೀರ್ ಈ ಸಂತಸದ ಸುದ್ದಿಯನ್ನು ಹೇಳುತ್ತಿದ್ದ ಹಾಗೆಯೇ ಇಡೀ ಇಂಟರ್ನೆಟ್ ತುಂಬಾ ಅದೇ ಸುದ್ದಿಯಾಗಿತ್ತು. ಈ ಜೋಡಿಗೆ ಬಾಲಿವುಡ್ನಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಅಭಿಮಾನಿಗಳು, ಸ್ಟಾರ್ ನಟ ನಟಿಯರು ವಿಶ್ ಮಾಡಿದ್ದಾರೆ.
ನಿನ್ನೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದ ಆಲಿಯಾ ನಮ್ಮ ಮಗು ಸದ್ಯದಲ್ಲಿ ಬರಲಿದೆ ಎಂದು ಸ್ಕ್ಯಾನಿಂಗ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದರು.
ಇದನ್ನೂ ಓದಿ: ಸಂಜು ವೆಡ್ಸ್ ಗೀತಾ ಸಿನಿಮಾ ಮಾಡೋಕೆ ಚೈನ್ ಅಡ ಇಟ್ಟಿದ್ರಂತೆ ನಾಗಶೇಖರ್, ಸೂಪರ್ ಹಿಟ್ ಸಿನಿಮಾದ ಮೇಕಿಂಗ್ ಸ್ಟೋರಿ
ಆಲಿಯಾ ಮತ್ತು ರಣಬೀರ್ ಮದುವೆಯ ಸಂಬಂಧ ಬಹಳಷ್ಟು ಖಾಸಗಿತನವನ್ನು ಕಾಪಾಡಿಕೊಳ್ಳಲಾಗಿತ್ತು, ಮಾಧ್ಯಮಗಳಿಗೆ ಸಹ ಮದುವೆಯ ದಿನಾಂಕವನ್ನು ಜೋಡಿ ಅಧಿಕೃತವಾಗಿ ಹೇಳಿರಲಿಲ್ಲ. ಅಲ್ಲದೇ ಮದುವೆಯಲ್ಲಿ ಸಹ ಹೆಚ್ಚಿನ ಜನರಿಗೆ ಆಹ್ವಾನ ನೀಡಿರಲಿಲ್ಲ. ಬಾಲಿವುಡ್ ತಾರೆಯರು ರಣಬೀರ್-ಆಲಿಯಾ ಅವರ ಮದುವೆಗೆ ಹಾಜರಾಗಿದ್ದು, ಅದರಲ್ಲಿ ಸೈಫ್ ಅಲಿ ಖಾನ್, ಕರೀನಾ ಕಪೂರ್, ಕರಿಷ್ಮಾ ಕಪೂರ್, ಕರಣ್ ಜೋಹರ್ ಭಾಗಿಯಾಗಿದ್ದರು.
ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಮದುವೆ
ಆಲಿಯಾ ಮತ್ತು ರಣಬೀರ್ ನಡುವೆ ‘ಬ್ರಹ್ಮಾಸ್ತ್ರ’ ಸಿನಿಮಾದ ಶೂಟಿಂಗ್ ಮಧ್ಯೆ ಪ್ರೀತಿ ಚಿಗುರಿತ್ತು. 2017ರಿಂದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಮೇ 2018ರಲ್ಲಿ ನಟಿ ಸೋನಮ್ ಕಪೂರ್ ಅವರ ವಿವಾಹದ ಆರತಕ್ಷತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ಅವರು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು.
ಇದನ್ನೂ ಓದಿ: ಆಲಿಯಾ ಭಟ್ ಗರ್ಭಿಣಿ, ಶುಭ ಸುದ್ದಿ ಹಂಚಿಕೊಂಡ ದಂಪತಿ
ಇನ್ನೂ ಇಬ್ಬರು ಹಲವು ಚಿತ್ರಗಳಲ್ಲಿ ಬ್ಯುಸಿ ಇದ್ದು, ಅಯಾನ್ ಮುಖರ್ಜಿ ಅವರ ನಿರ್ದೇಶನದ ಬ್ರಹ್ಮಾಸ್ತ್ರದಲ್ಲಿ ರಣಬೀರ್ ಮತ್ತು ಆಲಿಯಾ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ, ಅದರ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ಅಕ್ಕಿನೇನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂದೀಪ್ ರೆಡ್ಡಿ ಅವರ ಅನಿಮಲ್ ಚಿತ್ರದಲ್ಲಿಯೂ ರಣಬೀರ್ ರಶ್ಮಿಕಾ ಮಂದಣ್ಣ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಆಲಿಯಾ ಭಟ್ ಪ್ರಸ್ತುತ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ರಣವೀರ್ ಸಿಂಗ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ