ಬಾಲಿವುಡ್ನ (Bollywood) ಜನಪ್ರಿಯ ಜೋಡಿಗಳಾದ (Couple) ಹ್ಯಾಂಡ್ಸಮ್ ಹಂಕ್ (Handsome Hunk) ರಣಬೀರ್ ಕಪೂರ್ (Ranbir Kapoor) ಮತ್ತು ಕ್ಯೂಟ್ ಬೆಡಗಿ ಆಲಿಯಾ ಭಟ್ ಮದುವೆಯಾಗಿ ಸುಮಾರು ಮೂರು ತಿಂಗಳಾಗುತ್ತದೆ. ಅವರಿಬ್ಬರ ಮದುವೆ ಬಹಳ ಚರ್ಚಿತ ಹಾಗೂ ನಿರೀಕ್ಷಿತವಾಗಿತ್ತು. ಅಭಿಮಾನಿಗಳು ಸಹ ಈ ಜೋಡಿ ಯಾವಾಗ ಹಸೆಮಣೆ ಏರುತ್ತಾರೆ ಎಂದು ಕಾದು ಕುಳಿತಿದ್ದರು. ಈ ವರ್ಷದ ಏಪ್ರಿಲ್ 14ರಂದು ಸಪ್ತಪದಿ ತುಳಿದಿದ್ದ ಜೋಡಿ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಅದು ಆಲಿಯಾ ಹಾಗೂ ರಣಬೀರ್ ಕಪೂರ್ ತಂದೆ ತಾಯಿ ಆಗುತ್ತಿದ್ದಾರೆ. ಆಲಿಯಾ ಗರ್ಭಿಣಿ ಎನ್ನುವ ವಿಚಾರವನ್ನು ಅಭಿಮಾನಿಗಳಿಗೆ (Pregnant) ತಿಳಿಸಿದ್ದಾರೆ.
ಸಿಹಿ ಸುದ್ದಿ ಹಂಚಿಕೊಂಡ ಜೋಡಿ
ಹೌದು, ಈ ಬಗ್ಗೆ ಆಲಿಯಾ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ನಮ್ಮ ಮಗು ಸದ್ಯದಲ್ಲಿ ಬರಲಿದೆ ಎಂದು ಸ್ಕ್ಯಾನಿಂಗ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಇದು ಆಲಿಯಾ ಹಾಗೂ ರಣಬೀರ್ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದ್ದು, ವಿಶ್ಗಳ ಮಳೆ ಸುರಿಸುತ್ತಿದ್ದಾರೆ.
ಆಲಿಯಾ ಮತ್ತು ರಣಬೀರ್ ಮದುವೆಯ ಸಂಬಂಧ ಬಹಳಷ್ಟು ಖಾಸಗಿತನವನ್ನು ಕಾಪಾಡಿಕೊಳ್ಳಲಾಗಿತ್ತು, ಮಾಧ್ಯಮಗಳಿಗೆ ಸಹ ಮದುವೆಯ ದಿನಾಂಕವನ್ನು ಜೋಡಿ ಅಧಿಕೃತವಾಗಿ ಹೇಳಿರಲಿಲ್ಲ. ಅಲ್ಲದೇ ಮದುವೆಯಲ್ಲಿ ಸಹ ಹೆಚ್ಚಿನ ಜನರಿಗೆ ಆಹ್ವಾನ ನೀಡಿರಲಿಲ್ಲ. ಬಾಲಿವುಡ್ ತಾರೆಯರು ರಣಬೀರ್-ಆಲಿಯಾ ಅವರ ಮದುವೆಗೆ ಹಾಜರಾಗಿದ್ದು, ಅದರಲ್ಲಿ ಸೈಫ್ ಅಲಿ ಖಾನ್, ಕರೀನಾ ಕಪೂರ್, ಕರಿಷ್ಮಾ ಕಪೂರ್, ಕರಣ್ ಜೋಹರ್ ಭಾಗಿಯಾಗಿದ್ದರು.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಅಮೃತವರ್ಷಿಣಿ ರಜನಿ, ಅಳುಮುಂಜಿ ಪಾತ್ರ ಸಾಕಾಯ್ತು ಎಂದಿದ್ದೇಕೆ ನಟಿ?
ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಮದುವೆ
ಆಲಿಯಾ ಮತ್ತು ರಣಬೀರ್ ನಡುವೆ ‘ಬ್ರಹ್ಮಾಸ್ತ್ರ’ ಸಿನಿಮಾದ ಶೂಟಿಂಗ್ ಮಧ್ಯೆ ಪ್ರೀತಿ ಚಿಗುರಿತ್ತು. 2017ರಿಂದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಮೇ 2018ರಲ್ಲಿ ನಟಿ ಸೋನಮ್ ಕಪೂರ್ ಅವರ ವಿವಾಹದ ಆರತಕ್ಷತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ಅವರು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು.
ಇನ್ನೂ ಇಬ್ಬರು ಹಲವು ಚಿತ್ರಗಳಲ್ಲಿ ಬ್ಯುಸಿ ಇದ್ದು, ಅಯಾನ್ ಮುಖರ್ಜಿ ಅವರ ನಿರ್ದೇಶನದ ಬ್ರಹ್ಮಾಸ್ತ್ರದಲ್ಲಿ ರಣಬೀರ್ ಮತ್ತು ಆಲಿಯಾ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ, ಅದರ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ಅಕ್ಕಿನೇನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂದೀಪ್ ರೆಡ್ಡಿ ಅವರ ಅನಿಮಲ್ ಚಿತ್ರದಲ್ಲಿಯೂ ರಣಬೀರ್ ರಶ್ಮಿಕಾ ಮಂದಣ್ಣ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಆಲಿಯಾ ಭಟ್ ಪ್ರಸ್ತುತ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ರಣವೀರ್ ಸಿಂಗ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಮನೆಯಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ ಜೊತೆ ಬೊಂಬಾಟ್ ಊಟ ಮಾಡಿದ್ರಂತೆ ಸಲ್ಲು
ಇನ್ನು ಮದುವೆಯಲ್ಲಿ ಆಲಿಯಾ ಧರಿಸಿದ್ದ ಸೀರೆ, ಒಡವೆ ಹಾಗೂ ಮಾಂಗಲ್ಯ ಸರ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು, ಅದರ ಡಿಸೈನ್ ಬೆಲೆ ಎಲ್ಲಾವೂ ಹೆಚ್ಚು ಸುದ್ದಿ ಮಾಡಿತ್ತು ಇನ್ನು ಆಲಿಯಾ ಮದುವೆಯ ದಿನದ ಸಿಂಪಲ್ ಮೇಕಪ್ ಲುಕ್ ಹಾಗೂ ಸಿಂಪಲ್ ಮೆಹೆಂದಿ ಕೂಡ ಹೊಸ ಟ್ರೆಂಡ್ ಸೃಷ್ಟಿ ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ