ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ (Ranbir Kapoor) ಜೋಡಿ ತಾವೂ ಪೋಷಕರಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದು, ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನು ಹರಿಸುತ್ತಿದ್ದಾರೆ. ಆದರೆ ಆಲಿಯಾ ಗರ್ಭಿಣಿ (Pregnant) ಎಂದು ಅಭಿಮಾನಿಗಳಿಗೆ ತಿಳಿಯುತ್ತಿದ್ದ ಹಾಗೆ ಅಭಿಮಾನಿಗಳು ನಟಿ ದೀಪಿಕಾ ಪಡುಕೋಣೆಯನ್ನು (Deepika Padukone) ಟ್ರೋಲ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ (Social Media) ತುಂಬಾ ಸದ್ಯ ದೀಪಿಕಾ ಟ್ರೆಂಡಿಂಗ್ನಲ್ಲಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಮಾಡುವುದಲ್ಲದೇ, ವಿಚಿತ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
Deepika Padukone after listening about Alia Bhatt 's pregnancy : pic.twitter.com/MH8heeeBFG
— Vanshhh (@VanshKansalji) June 27, 2022
ಹೌದು, ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮದುವೆಯಾಗಿ ಕೇವಲ 2 ತಿಂಗಳಾಗಿದೆ. ಬಹು ಬೇಗನೆ ಈ ಜೋಡಿ ಗುಡ್ ನ್ಯೂಸ್ ನೀಡಿದೆ. ಆದರೆ ದೀಪಿಕಾ ಹಾಗೂ ರಣವೀರ್ ಸಿಂಗ್ ಮದುವೆಯಾಗಿ ಸುಮಾರು 3 ವರ್ಷಗಳಾಗಿದೆ. ಆದರೆ ಮಕ್ಕಳಾಗಿಲ್ಲ. ಹಾಗಾಗಿ ನಿಮ್ಮದು ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದು, ಜೊತೆಗೆ ನೆಟ್ಟಿಗರು ಟ್ರೋಲ್ ಕೂಡ ಮಾಡುತ್ತಿದ್ದಾರೆ.
After #AliaBhatt pregnancy news!
Deepika to Ranveer : pic.twitter.com/3H0XOskLPd
— Varad Ralegaonkar (@varadr_tistic) June 27, 2022
Alia gets pregnant
Deepika to Ranveer :- pic.twitter.com/wT5ESx41t8
— Anshika Malik (@malikanshika43) June 27, 2022
ಇದನ್ನೂ ಓದಿ: ನಾನು ಪುನೀತ್ ರಾಜ್ಕುಮಾರ್ ಫ್ಯಾನ್ ಎಂದ ನಾಗ ಚೈತನ್ಯ, ಸಮಂತಾ ಮಾಜಿ ಪತಿಗೆ ಅಪ್ಪು ಮಾದರಿಯಂತೆ
ಹಾಗೆಯೇ, ಸೋನಮ್ ಕಪೂರ್ ಗರ್ಭಿಣಿಯಾದಾಗ ಹಾಗೂ ಪ್ರಿಯಾಂಕಾ ಚೋಪ್ರಾ ತಾಯಿಯಾದ ವಿಚಾರ ತಿಳಿದಾಗ ಸಹ ದೀಪಿಕಾ ಅವರನ್ನು ಜನ ಟ್ರೋಲ್ ಮಾಡಿದ್ದರು. ಈಗಂತೂ ರಣಬೀರ್ ಹಾಗೂ ಆಲಿಯಾ ವಿಚಾರವಾಗಿ ಜನ ಹೆಚ್ಚಾಗಿಯೇ ಅವರ ಕಾಲನ್ನು ಎಳೆಯುತ್ತಿದ್ದಾರೆ. ದೀಪಿಕಾ ಹಾಗೂ ರಣಬೀರ್ ಒಂದಾನೊಂದು ಕಾಲದಲ್ಲಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಆದರೆ ಕೆಲ ಕಾರಣಗಳಿಂದ ದೂರಾಗಿದ್ದರು. ಹಾಗಾಗಿ ಈಗ ಮತ್ತೆ ಟ್ರೋಲ್ ಮಾಡಿದ್ದಾರೆ.
#RanbirKapoor
*Alia Bhatt gets pregnant*
Ranbeer singh to deepika Padukone:- pic.twitter.com/z6UjdeSiM1
— शिवAnsh🔱 (@ImSanskariLadka) June 27, 2022
ಇದನ್ನೂ ಓದಿ: ಆಲಿಯಾ ಭಟ್ ಗರ್ಭಿಣಿ, ಶುಭ ಸುದ್ದಿ ಹಂಚಿಕೊಂಡ ದಂಪತಿ
ಆಲಿಯಾ ಹಾಗೂ ರಣಬೀರ್ಗೆ ವಿಶ್ ಮಾಡಿದ ದೀಪಿಕಾ
ಆಲಿಯಾ ಮತ್ತು ರಣಬೀರ್ ನಡುವೆ ‘ಬ್ರಹ್ಮಾಸ್ತ್ರ’ ಸಿನಿಮಾದ ಶೂಟಿಂಗ್ ಮಧ್ಯೆ ಪ್ರೀತಿ ಚಿಗುರಿತ್ತು. 2017ರಿಂದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಮೇ 2018ರಲ್ಲಿ ನಟಿ ಸೋನಮ್ ಕಪೂರ್ ಅವರ ವಿವಾಹದ ಆರತಕ್ಷತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ಅವರು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ