HOME » NEWS » Entertainment » ALIA BHATT OUT AND PRIYANKA CHOPRA IN FOR SS RAJAMOULI IN RRR RMD

ಆಲಿಯಾ ಭಟ್ ಔಟ್, ಪ್ರಿಯಾಂಕಾ ಚೋಪ್ರಾ ಇನ್; RRR ಚಿತ್ರತಂಡದಿಂದ ಅಚ್ಚರಿಯ ನಿರ್ಧಾರ!

ಆಲಿಯಾ ಸಿನಿಮಾಗಳನ್ನು ನೋಡದಂತೆ ಆಂದೋಲನ ಆರಂಭವಾಗಿದೆ. ಇದು ತಮ್ಮ ಸಿನಿಮಾದ ಮೇಲೂ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕೆ ಎಸ್ಎಸ್ ರಾಜಮೌಳಿ ಆಲಿಯಾರನ್ನು ಚಿತ್ರತಂಡದಿಂದ ಕೈ ಬಿಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

news18-kannada
Updated:August 25, 2020, 3:43 PM IST
ಆಲಿಯಾ ಭಟ್ ಔಟ್, ಪ್ರಿಯಾಂಕಾ ಚೋಪ್ರಾ ಇನ್; RRR ಚಿತ್ರತಂಡದಿಂದ ಅಚ್ಚರಿಯ ನಿರ್ಧಾರ!
ಆಲಿಯಾ ಭಟ್
  • Share this:
ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟ ನಂತರದಲ್ಲಿ ಬಾಲಿವುಡ್ನಲ್ಲಿ ನೆಪೋಟಿಸಂಗೆ ಮಣೆ ಹಾಕುವವರ ವಿರುದ್ಧ ಅನೇಕರು ಧ್ವನಿ ಎತ್ತಿದ್ದಾರೆ. ಕರಣ್ ಜೋಹರ್, ಆಲಿಯಾ ಭಟ್, ಮಹೇಶ್ ಭಟ್ ಸೇರಿ ಸಾಕಷ್ಟು ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರ ಸಿನಿಮಾವನ್ನು ಬ್ಯಾನ್ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಆರಂಭವಾಗಿದೆ. ಅಚ್ಚರಿ ಎಂದರೆ ಸ್ಟಾರ್ ನಟರ ಮಕ್ಕಳು ಎನಿಸಿಕೊಂಡಿರುವವರನ್ನು ಚಿತ್ರತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕೆಲ ನಿರ್ಮಾಪಕರು ಭಯ ಬೀಳುತ್ತಿದ್ದಾರೆ. ಹೀಗಿರುವಾಗಲೇ ಆಲಿಯಾ ಭಟ್ ಅವರನ್ನು ಆರ್ಆರ್ಆರ್ ಚಿತ್ರತಂಡ ಕೈ ಬಿಟ್ಟಿದೆ ಎನ್ನುವ ಮಾತು ಹರಿದಾಡಿದೆ.

ಆಲಿಯಾ ಭಟ್ ಪ್ರತಿ ಸಿನಿಮಾಗೂ ಕರಣ್ ಜೋಹರ್ ಅವರ ಬಂಡವಾಳ ಹೂಡುತ್ತಾರೆ. ಆಲಿಯಾಗೆ ಅವಕಾಶ ಸಿಗುತ್ತಿರುವುದಕ್ಕೆ ಕರಣ್ ಕಾರಣ ಎನ್ನುವ ಮಾತು ಕೂಡ ಚರ್ಚೆಯಲ್ಲಿದೆ. ಹೀಗಾಗಿ, ಆಲಿಯಾ ಸಿನಿಮಾಗಳನ್ನು ನೋಡದಂತೆ ಆಂದೋಲನ ಆರಂಭವಾಗಿದೆ. ಇದು ತಮ್ಮ ಸಿನಿಮಾದ ಮೇಲೂ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕೆ ಎಸ್ಎಸ್ ರಾಜಮೌಳಿ ಆಲಿಯಾರನ್ನು ಚಿತ್ರತಂಡದಿಂದ ಕೈ ಬಿಟ್ಟಿದ್ದಾರೆ. ಈ ಸ್ಥಾನಕ್ಕೆ ಪ್ರಿಯಾಂಕಾ ಚೋಪ್ರಾ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

ಇದನ್ನೂ ಓದಿ: ಪಾಕಿಸ್ತಾನದ ಈ ಸ್ಟಾರ್ ನಟಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗರ್ಲ್​ಫ್ರೆಂಡ್?

ಆದರೆ, ಬಾಲಿವುಡ್ ಮಂದಿ ಇದನ್ನು ಅಲ್ಲಗಳೆದಿದ್ದಾರೆ. ಆಲಿಯಾ ಖ್ಯಾತಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ರೀತಿಯ ಸುದ್ದಿ ಹರಿಬಿಡಲಾಗಿದೆ ಎಂದು ಕೆಲವರು ಹೇಳಿದ್ದಾರೆ. ಮಹೇಶ್ ಭಟ್ ಅವರ ಮಗಳು ಎನ್ನುವ ಕಾರಣಕ್ಕೆ ಆಲಿಯಾ ಭಟ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈಗ ಹರಿದಾಡುತ್ತಿರುವ ವಿಚಾರದಲ್ಲಿ ಹುರುಳಿಲ್ಲ ಎಂಬುದು ಸಿನಿ ಪಂಡಿತರ ಮಾತು.

ಆಲಿಯಾ ಭಟ್ ಈಗಾಗಲೇ ಸಿನಿಮಾ ಕ್ಯಾರೆಕ್ಟರ್ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆಲಿಯಾ ತೆಲುಗು ಕೂಡ ಕಲಿಯುತ್ತಿದ್ದಾರಂತೆ. ಸಿನಿಮಾಗೆ ಅವರೇ ಡಬ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊರೋನಾ ವೈರಸ್ ಇರುವ ಕಾರಣ ಸಿನಿಮಾ ಶೂಟಿಂಗ್ ನಿಲ್ಲಿಸಲಾಗಿದೆ. ಕೊರೋನಾ ವೈರಸ್ ಹಾವಳಿ ಪೂರ್ಣಗೊಂಡ ನಂತರದಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.
Published by: Rajesh Duggumane
First published: August 25, 2020, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories