ಈ ಚಲನಚಿತ್ರೋದ್ಯಮದಲ್ಲಿ ಇರುವಂತಹ ಸೆಲೆಬ್ರೆಟಿಗಳ ಬಗ್ಗೆ ಅದರಲ್ಲೂ ಬಾಲಿವುಡ್ನ (Bollywood) ನಟ ಮತ್ತು ನಟಿಯರ (Actor, Actress) ಬಗ್ಗೆ ಪ್ರತಿದಿನ ಒಂದಲ್ಲ ಒಂದು ಹೊಸ ಸುದ್ದಿ, ವದಂತಿಗಳು ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹರಿದಾಡುತ್ತಲೇ ಇರುತ್ತವೆ ಅಂತ ಹೇಳಬಹುದು. ಬಾಲಿವುಡ್ ನಟಿಯರಲ್ಲಿ ತುಂಬಾನೇ ಸುದ್ದಿಯಲ್ಲಿರುವ ನಟಿಯರ ಪೈಕಿ ನಟಿ ಆಲಿಯಾ ಭಟ್ (Alia Bhatt) ಸಹ ಒಬ್ಬರು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ನಟಿ ಆಲಿಯಾ ಅವರು ಒಂದು ವರ್ಷದಿಂದ ಸುದ್ದಿಯಲ್ಲಿದ್ದದ್ದು ಅವರ ಮದುವೆಯಿಂದಾಗಿ ಮತ್ತು ಮಗುವಿಗೆ ಜನ್ಮ ನೀಡುತ್ತಿರುವ ಸುದ್ದಿಗಳಿಂದಾಗಿ ಅಂತ ಹೇಳಬಹುದು. ನಟಿ ಆಲಿಯಾ ಈಗ ಮತ್ತೆ ಸುದ್ದಿಯಲ್ಲಿರುವುದು ಒಂದು ಹಳೆಯ ವೀಡಿಯೋದಿಂದಾಗಿ. ಹೌದು.. ಆಲಿಯಾ 2017 ರಲ್ಲಿ ಐಫಾ ಅಥವಾ ಐಐಎಫ್ಎ ಅವಾರ್ಡ್ ಸಮಾರಂಭದಲ್ಲಿ ತಮ್ಮ ಡ್ಯಾನ್ಸ್ ಪ್ರದರ್ಶನ ನೀಡಿದ ಹಳೆಯ ವೀಡಿಯೋದಿಂದಾಗಿ ಸುದ್ದಿಯಲ್ಲಿದ್ದಾರೆ ಅಂತ ಹೇಳಬಹುದು.
ಏನಿದೆ ಆಲಿಯಾ ಭಟ್ ಅವರ ಹಳೆಯ ವೀಡಿಯೋದಲ್ಲಿ?
ಈ ಹಳೆಯ ವಿಡಿಯೋದಲ್ಲಿ 'ಲಡ್ಕಿ ಬ್ಯೂಟಿಫುಲ್ ಕರ್ ಗಯಿ ಚುಲ್' ಎಂಬ ಹಿಟ್ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ನಟಿ ಬಾಲಿವುಡ್ ನಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿನ ಸ್ವಜನಪಕ್ಷಪಾತದ ಆರೋಪಗಳಿಂದ ತಪ್ಪಿಸಿಕೊಳ್ಳಲು ಅವರಿಗೆ ಕಷ್ಟವಾಗಿದೆ ಅಂತ ಹೇಳಬಹುದು. ಹಳೆಯ ಕ್ಲಿಪ್ ನಲ್ಲಿ ಆಲಿಯಾ ಅವರು 'ಕಪೂರ್ ಅಂಡ್ ಸನ್ಸ್' ಹಾಡಿನ ಭಾಗಗಳನ್ನು ತೆಗೆದುಕೊಂಡು ಡ್ಯಾನ್ಸ್ ಮತ್ತು ರ್ಯಾಪ್ ಮಾಡುವುದನ್ನು ನಾವು ನೋಡಬಹುದು. ಈ ವೀಡಿಯೋದಲ್ಲಿ ಇರುವುದು ಬರೀ ನಟಿಯ ಡ್ಯಾನ್ಸ್ ಮಾತ್ರವೇ ಅಲ್ಲ.
varun's reaction is sending me so badpic.twitter.com/KBFcYcUev1
— ⚰️ (@apparitionnow) January 4, 2023
ಮಧ್ಯೆ ಮಧ್ಯೆ ಆಲಿಯಾ ಮಾಡುತ್ತಿದ್ದ ಡ್ಯಾನ್ಸ್ ಮತ್ತು ರ್ಯಾಪ್ ಗಳನ್ನು ನೋಡಿ ನಟರು ನೀಡಿದ ತಮಾಷೆ ಅಂತ ಅನ್ನಿಸುವ ಪ್ರತಿಕ್ರಿಯೆಗಳನ್ನು ಸಹ ನೀವು ನೋಡಬಹುದು. ಇವರೆಲ್ಲರ ಪ್ರತಿಕ್ರಿಯೆಗಳನ್ನು ನೋಡಿದರೆ ಇವರಿಗೆ ಆಲಿಯಾ ಭಟ್ ಅವರು ವೇದಿಕೆಯ ಮೇಲೆ ಮಾಡುತ್ತಿರುವುದು ಏನು ಅಂತ ಅರ್ಥವಾದಂತಿಲ್ಲ ಅಂತ ಹೇಳಬಹುದು. ವರುಣ್ ಧವನ್, ಅರ್ಮಾನ್ ಮಲಿಕ್ ಮತ್ತು ಸೋನಿ ರಜ್ದಾನ್ ನಟಿ ಏನು ಮಾಡುತ್ತಿದ್ದಾರೆ ಅಂತ ಅರ್ಥವಾಗದಂತೆ ಪ್ರತಿಕ್ರಿಯೆ ನೀಡಿದ್ದು, ಒಂದು ಜೋಕ್ ನಂತೆಯೇ ಕಂಡು ಬಂದಿದೆ. ನಟರ ಮುಖದಲ್ಲಿ ಒಂದು ರೀತಿಯ ಗೊಂದಲವಿದ್ದು, ಅರೇ ಆಲಿಯಾ ಏನು ಮಾಡುತ್ತಿದ್ದಾರೆ ಎನ್ನುವ ಹಾಗೆ ಇದೆ ಎನ್ನಬಹುದು.
ವೀಡಿಯೋ ನೋಡಿ ನೆಟ್ಟಿಗರು ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ
"ಬಾದ್ ಶಾ ಗೆ ಆದ್ಯತೆ ನೀಡುವ ಏಕೈಕ ಸಮಯ ಇದು" ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ. "ಆಲಿಯಾ ಅವರ ಪಿಆರ್ ವೀಡಿಯೋವನ್ನು ನೀವು ನೋಡಲು ಬಯಸುವುದಿಲ್ಲ" ಎಂದು ಇನ್ನೊಬ್ಬರು ತಮಾಷೆ ಮಾಡಿದರು. "ಇದು ನನಗೆ ದೈಹಿಕ ನೋವನ್ನು ಉಂಟು ಮಾಡಿತು" ಎಂದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳಿದರು. "ಅವರು ಭಯಾನಕವಾಗಿ ಹಾಡುತ್ತಿರುವಾಗ ಪ್ರೇಕ್ಷಕರು ಎಷ್ಟು ಶಾಂತಯುತವಾಗಿ ನೋಡುತ್ತಿದ್ದಾರೆ ಎಂಬುದು ನನಗೆ ಇಷ್ಟವಾಯಿತು" ಎಂದು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಸ್ವಜನಪಕ್ಷಪಾತದ ವಿಷಯದ ಬಗ್ಗೆ ಮಾತನಾಡುವುದಾದರೆ, ಕರಣ್ ಜೋಹರ್ ಅವರು ಆಲಿಯಾ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ ಮತ್ತು ಅಂತರ್ಜಾಲದಲ್ಲಿನ ಜನರು ಅದರ ಬಗ್ಗೆ ನಕಾರಾತ್ಮಕವಾಗಿರಲು ಯಾವುದೇ ಕಾರಣವನ್ನು ನೋಡುವುದಿಲ್ಲ. ಸಿದ್ಧಾರ್ಥ್ ಕಾನನ್ ಗೆ ನೀಡಿದ ಸಂದರ್ಶನದಲ್ಲಿ, "ಆಲಿಯಾ ಮತ್ತು ನಾನು ಒಬ್ಬರನ್ನೊಬ್ಬರು ಅಳುವಂತೆ ಮಾಡಿಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ. ಆನ್ಲೈನ್ ನಲ್ಲಿ ನಾವಿಬ್ಬರೂ ಹಂಚಿಕೊಳ್ಳುವ ಸಂಬಂಧದ ಬಗ್ಗೆ ನಾನು ಸಾಕಷ್ಟು ದ್ವೇಷವನ್ನು ನೋಡುತ್ತೇನೆ. ಜನರು ಏಕೆ ಇಷ್ಟು ಕೋಪಗೊಳ್ಳುತ್ತಾರೆ ಎಂದು ನನಗೆ ತಿಳಿದಿಲ್ಲ. ನನಗೆ ಇಷ್ಟವಾದವರನ್ನ ಪ್ರೀತಿಸಲು ನನಗೆ ಅನುಮತಿ ಇದೆ" ಎಂದು ಕರಣ್ ಜೋಹರ್ ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ