• Home
  • »
  • News
  • »
  • entertainment
  • »
  • Alia Bhatt-Ranbir Kapoor: ಆಲಿಯಾ ಮಗು ಯಾರನ್ನು ಹೋಲುತ್ತದೆ? ಅಜ್ಜಿ ನೀತು ಕೊಟ್ರು ಉತ್ತರ

Alia Bhatt-Ranbir Kapoor: ಆಲಿಯಾ ಮಗು ಯಾರನ್ನು ಹೋಲುತ್ತದೆ? ಅಜ್ಜಿ ನೀತು ಕೊಟ್ರು ಉತ್ತರ

ಆಲಿಯಾ ಅವರ ಮಗು ಯಾರಂತಿದೆ? ಆಲಿಯಾ ಭಟ್  ಅವರನ್ನು ಹೋಲುತ್ತದೋ ಅಥವಾ ರಣಬೀರ್ ಅವರಂತೆಯೋ? ಅಜ್ಜಿ ನೀತು ಉತ್ತರಿಸಿದ್ದಾರೆ.

ಆಲಿಯಾ ಅವರ ಮಗು ಯಾರಂತಿದೆ? ಆಲಿಯಾ ಭಟ್ ಅವರನ್ನು ಹೋಲುತ್ತದೋ ಅಥವಾ ರಣಬೀರ್ ಅವರಂತೆಯೋ? ಅಜ್ಜಿ ನೀತು ಉತ್ತರಿಸಿದ್ದಾರೆ.

ಆಲಿಯಾ ಅವರ ಮಗು ಯಾರಂತಿದೆ? ಆಲಿಯಾ ಭಟ್ ಅವರನ್ನು ಹೋಲುತ್ತದೋ ಅಥವಾ ರಣಬೀರ್ ಅವರಂತೆಯೋ? ಅಜ್ಜಿ ನೀತು ಉತ್ತರಿಸಿದ್ದಾರೆ.

  • Share this:

ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ (Ranbir Kapoor) ದಂಪತಿ ಮುದ್ದಾದ ಮಗಳೊಂದಿಗೆ (Daughter) ತಮ್ಮ ನಿವಾಸ ವಾಸ್ತುವಿಗೆ ಆಗಮಿಸಿದ್ದಾರೆ. ರಣಬೀರ್ ಪಕ್ಕದಲ್ಲಿಯೇ ಕುಳಿತಿದ್ದ ಆಲಿಯಾ ಕಪ್ಪು ಬಣ್ಣದ ದಿರಿಸು ಧರಿಸಿದ್ದರು. ಪುಟ್ಟ ಕಂದನನ್ನು ಕೈಯಲ್ಲಿ ಹಿಡಿದುಕೊಂಡಿದ್ದ ರಣಬೀರ್ ತಂದೆಯ (Father) ಜವಬ್ದಾರಿಯನ್ನು ನಿರ್ವಹಿಸುತ್ತಿದ್ದುದು ಕಂಡುಬರುತ್ತಿತ್ತು. ಆಸ್ಪತ್ರೆಯಿಂದ (Hospital) ಡಿಸ್‌ಚಾರ್ಜ್ ಆಗಿರುವ ಆಲಿಯಾ ಪುಟ್ಟ ಕಂದನೊಂದಿಗೆ ವಾಸ್ತುವಿಗೆ ಆಗಮಿಸುವಾಗ ಕ್ಯಾಮೆರಾ (Camera) ಕಣ್ಣಿನಲ್ಲಿ ಸೆರೆಯಾಗಿದ್ದಾರೆ.


ಕಂದನೊಂದಿಗೆ ವಾಸ್ತುವಿಗೆ ಪ್ರವೇಶಿಸಿದ ಆಲಿಯಾ


ಆಲಿಯಾ ಕಂದನಿಗೆ ಜನ್ಮನೀಡಿದ ಸುದ್ದಿತಿಳಿದೊಡನೆ ಸ್ನೇಹಿತರು ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸುತ್ತಿದ್ದು ಮಗು ಹಾಗೂ ತಾಯಿಯ ಆರೋಗ್ಯವನ್ನು ವಿಚಾರಿಸುತ್ತಿದ್ದರು. ಇದೀಗ ಪರಿಪೂರ್ಣ ಕುಟುಂಬವು ತಮ್ಮ ನಿವಾಸ ವಾಸ್ತುವನ್ನು ಇಂದು ತಲುಪಿದ್ದು ರಣಬೀರ್ ತಾಯಿ ನೀತು ಕಪೂರ್ ಕೂಡ ವಾಸ್ತುವನ್ನು ತಲುಪಿದ್ದಾರೆ.




ಯಾರನ್ನು ಹೋಲುತ್ತೆ ಮಗು?


ಮಗ ಸೊಸೆ ಹಾಗೂ ಮೊಮ್ಮಗಳೊಂದಿಗೆ ವಾಸ್ತುವಿಗೆ ಬರುವುದಕ್ಕೂ ಮುನ್ನ ನೀತು ಹಲವಾರು ಬಾರಿ ವಾಸ್ತುವಿಗೆ ಆಗಮಿಸಿದ್ದಾರೆ. ಸುದ್ದಿಮಾಧ್ಯಮಗಳಿಗೆ ಇತ್ತೀಚೆಗೆ ತಾನೇ ಆಲಿಯಾ ಹಾಗೂ ಮಗುವಿನ ಬಗ್ಗೆ ಮಾಹಿತಿ ನೀಡಿದ್ದ ನೀತು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದರು. ಇನ್ನು ಮಗುವಿಗೆ ಯಾವ ಹೆಸರನ್ನಿಡಲು ಯೋಚಿಸಿದ್ದೀರಿ ಎಂದು ಕೇಳಿದಾಗ ಅದನ್ನು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಮಗು ಯಾರನ್ನು ಹೋಲುತ್ತಿದೆ ಎಂಬ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ನೀತು, ಮಗು ಇನ್ನೂ ಚಿಕ್ಕದು ಅವಳು ತಂದೆ ರಣಬೀರ್ ಅನ್ನು ಹೋಲುತ್ತಾಳೆಯೇ ಇಲ್ಲವೇ ತಾಯಿ ಆಲಿಯಾಳನ್ನು ಹೋಲುತ್ತಾಳೆಯೇ ಎಂಬುದನ್ನು ಈಗಲೇ ಹೇಳುವುದು ಕಷ್ಟ ಎಂದು ತಿಳಿಸಿದ್ದಾರೆ.


ಇನ್‌ಸ್ಟಾದಲ್ಲಿ ಮಗುವಿನ ಆಗಮನವನ್ನು ಖಾತ್ರಿಪಡಿಸಿದ್ದ ಆಲಿಯಾ


ಮಗುವಿನ ಆಗಮನದ ಸುದ್ದಿಯನ್ನು ಆಲಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಿಂದೆ ತಿಳಿಸಿದ್ದು, ನಮ್ಮ ಜೀವನದ ಅತ್ಯಂತ ಸಿಹಿಯಾದ ಸುದ್ದಿಯಾಗಿ ನಮ್ಮ ಮಗು ಇಲ್ಲಿದೆ ಹಾಗೂ ಅವಳು ಮಾಂತ್ರಿಕ ಹುಡುಗಿ ನಾವಿಬ್ಬರೂ ಸಂತೋಷದಲ್ಲಿ ತೇಲಾಡುತ್ತಿದ್ದೇವೆ. ಆಲಿಯಾ ರಣಬೀರ್ ಕಡೆಯಿಂದ ಪ್ರೀತಿಯ ಆಲಿಂಗನ ಎಂದು ಬರೆದುಕೊಂಡಿದ್ದರು.


ಇದನ್ನೂ ಓದಿ: Katrina Kaif: ವಿಕ್ಕಿ-ಕತ್ರಿನಾ ಮದುವೆಯಲ್ಲಿ ಚಪ್ಪಲಿ ಜಗಳ! ನಡೆದಿದ್ದೇನು?


ಖುಷಿಯಾಗಿರುವ ಆಲಿಯಾ ತಂದೆ ಮಹೇಶ್ ಭಟ್


ಆಲಿಯಾರ ಸಹೋದರ ರಾಹುಲ್ ಭಟ್ ಮಗುವಿನ ಆಗಮನದಿಂದ ತಮ್ಮ ತಂದೆ ಮಹೇಶ್ ಭಟ್ ಹೆಚ್ಚು ಖುಷಿಯಾಗಿರುವುದಾಗಿ ತಿಳಿಸಿದ್ದಾರೆ. ತಮ್ಮ ತಂದೆ ಮಹೇಶ್ ಭಟ್ ಕುರಿತು ಬಾಂಬೆ ಟೈಮ್ಸ್ ಸಂದರ್ಶನದಲ್ಲಿ ತಿಳಿಸಿರುವ ರಾಹುಲ್, ಅವರು ಇದೀಗ ಹೆಮ್ಮೆಯ ವ್ಯಕ್ತಿಯಾಗಿದ್ದಾರೆ. ರಾಹುಲ್ ಹೇಳುವಂತೆ ಆಲಿಯಾರ ಮಗುವಿನ ಆಗಮನವನ್ನು ತಮ್ಮ ಮೊದಲ ಮಗಳು ಪೂಜಾರ ಆಗಮನಕ್ಕೆ ತಂದೆ ಹೋಲಿಸುತ್ತಿದ್ದು ಹೆಚ್ಚು ಖುಷಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.




ತಮಗೆ ಮೊಮ್ಮಗಳು ಹುಟ್ಟಿದ ಖುಷಿಯನ್ನು ಅಜ್ಜ ಮಹೇಶ್ ಭಟ್ ಆನಂದಿತರಾಗಿಯೇ ಬಣ್ಣಿಸಿದ್ದು ಪುಟ್ಟ ಆಲಿಯಾಳನ್ನು ನನ್ನ ಕೈಯಲ್ಲಿಯೇ ಹಿಡಿದುಕೊಂಡ ನೆನಪು ಈಗಲೂ ನನಗೆ ಹಸಿರಾಗಿದೆ. ಈಗ ಆ ಪುಟ್ಟ ಆಲಿಯಾಳೇ ಪುಟ್ಟ ಕಂದನಿಗೆ ತಾಯಿಯಾಗುವಷ್ಟು ದೊಡ್ಡವಳಾಗಿದ್ದಾಳೆ. ಕಾಲ ತುಂಬಾ ವೇಗವಾಗಿ ಚಲಿಸುತ್ತಿದೆ ಎಂದು ಮಹೇಶ್ ಭಟ್ ತಿಳಿಸಿದ್ದರು.


ಸಹೋದರನನ್ನು ನೆನೆದು ಭಾವುಕರಾದ ರಣಧೀರ್ ಕಪೂರ್


ರಿಷಿ ಕಪೂರ್ ಹಾಗೂ ರಾಜೀವ್ ಕಪೂರ್ ಅವರ ಹಿರಿಯಣ್ಣ ರಣಧೀರ್ ಕಪೂರ್ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದು ನಮ್ಮ ಸಂಪೂರ್ಣ ಕಪೂರ್ ಕುಟುಂಬ ರಿಷಿ ಕಪೂರ್ ಅನ್ನು ಮಿಸ್ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ನನ್ನ ಸಹೋದರ ಮತ್ತೊಮ್ಮೆ ಅಜ್ಜನಾಗುತ್ತಿರುವುದನ್ನು ಈಗ ಮಿಸ್ ಮಾಡಿಕೊಂಡಿದ್ದಾನೆ. ಆತ ಎಲ್ಲಿದ್ದಾನೋ ಅಲ್ಲಿಂದಲೇ ತನ್ನ ಮೊಮ್ಮಗಳಿಗೆ ಆಶೀರ್ವಾದ ನೀಡುತ್ತಿದ್ದಾನೆ ಎಂದು ತಿಳಿಸಿದ್ದಾರೆ.


ರಣ್‌ಬೀರ್ ಹಾಗೂ ಆಲಿಯಾ ಆಪ್ತರ ಸಮ್ಮುಖದಲ್ಲಿ ತಮ್ಮ ನಿವಾಸ ವಾಸ್ತುವಿನಲ್ಲಿಯೇ ಏಪ್ರಿಲ್ 14 ರಂದು ವಿವಾಹಿತರಾಗಿದ್ದರು. ಐದು ವರ್ಷಗಳ ಕಾಲ ರಿಲೇಶನ್‌ಶಿಪ್‌ನಲ್ಲಿದ್ದ ದಂಪತಿಗಳು ಸತಿಪತಿಗಳಾಗಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದರು.

Published by:Divya D
First published: