Brahmastra Movie: ಹೈದ್ರಾಬಾದ್​ನಲ್ಲಿ ಬ್ರಹ್ಮಾಸ್ತ್ರ ಟೀಮ್; ಆಲಿಯಾ ಹಾಡಿಗೆ ಅಭಿಮಾನಿಗಳು ಫುಲ್ ಫಿದಾ!

ಬಾಲಿವುಡ್​ನ ಸಕ್ಸಸ್​ ಫುಲ್​ ನಟಿ ಆಲಿಯಾ ಭಟ್,​ ಹೈದ್ರಾಬಾದ್​ನಲ್ಲಿ ಬ್ರಹ್ಮಾಸ್ತ್ರ ಚಿತ್ರದ ಹಾಡನ್ನು ತೆಲುಗಿನಲ್ಲಿ ತುಂಬಾ ಸರಾಗವಾಗಿ ಹಾಗೂ ಸುಂದರವಾಗಿ ಹಾಡಿದ್ದನ್ನು ಕೇಳಿದ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.

ಆಲಿಯಾ, ರಣಬೀರ್​ ಕಪೂರ್​

ಆಲಿಯಾ, ರಣಬೀರ್​ ಕಪೂರ್​

  • Share this:
ರಣಬೀರ್ ಕಪೂರ್ , ಆಲಿಯಾ ಭಟ್, ಮೌನಿ ರಾಯ್ ನಟನೆಯ ಬಹುನಿರೀಕ್ಷಿತ  'ಬ್ರಹ್ಮಾಸ್ತ್ರ' (Brahmastra) ಸಿನಿಮಾವು ಕನ್ನಡ, ತೆಲುಗು, ತಮಿಳು ಸೇರಿ ಅನೇಕ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಆಲಿಯಾ ಭಟ್, ರಣಬೀರ್ ಕಪೂರ್ (Ranbir Kapoor) ಅವರು ಹೈದರಾಬಾದ್‌ನಲ್ಲಿ ಚಿತ್ರ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ರಣಬೀರ್ ಕಪೂರ್ ಅವರು ತೆಲುಗಿನಲ್ಲಿ ಮಾತನಾಡಿ ಹೈದರಾಬಾದ್‌ (Hyderabad) ಜನರನ್ನು ಮೆಚ್ಚಿಸುವ ಪ್ರಯತ್ನ ಮಾಡಿದ್ದಾರೆ. ಇತ್ತ ಆಲಿಯಾ ಭಟ್​ (Alia Bhatt) ತೆಲುಗಿನಲ್ಲೇ ಕೇಸರಿಯಾ ಎಂದು ಹಾಡು ಹಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ.  ಆ ವೇಳೆ ಅವರು ರಣಬೀರ್ ಕಪೂರ್ ಕಡೆಗೆ ಸನ್ನೆ ಮಾಡಿದರು. ಅದನ್ನು ನೋಡಿ ರಣಬೀರ್ ಕಪೂರ್ ನಾಚಿ ನೀರಾದ ಸನ್ನಿವೇಶ ಕೂಡ ನಡೆದಿದೆ.

ಸೆಪ್ಟೆಂಬರ್​ 9 ರಂದು ಚಿತ್ರ ರಿಲೀಸ್​

ಬ್ರಹ್ಮಾಸ್ತ್ರ  ಸೋಷಿಯೋ  ಫ್ಯಾಂಟಸಿ ಚಿತ್ರವಾಗಿದೆ,  ಬ್ರಹ್ಮಾಸ್ತ್ರ ಚಿತ್ರ ಮೂರು ಭಾಗಗಳಾಗಿ ಜನರ ಮುಂದೆ ಬರಲಿದೆ. ಇದೀಗ ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ನಿರ್ಮಾಪಕರು, ನಿರ್ದೇಶಕರು ಹಾಗೂ ಇಡೀ ಚಿತ್ರ ತಂಡ ಈಗಾಗಲೇ ಚಿತ್ರದ ಪ್ರಚಾರದಲ್ಲಿ ಫುಲ್​ ಬ್ಯುಸಿ ಆಗಿದೆ.  ಸಿನಿಮಾ ಪ್ರಮೋಷನ್​ಗೆಂದು ಇಡೀ ಚಿತ್ರತಂಡ ಹೈದ್ರಾಬಾದ್​ಗೆ ಬಂದಿದೆ.


ಚಿತ್ರತಂಡದಿಂದ ಪ್ರೆಸ್​ಮೀಟ್​

ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯಬೇಕಿದ್ದ ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಪ್ರೀ ರಿಲೀಸ್ ಕಾರ್ಯಕ್ರಮವನ್ನು ರದ್ದಾದ ಬಳಿಕ ಖ್ಯಾತ ನಟ ಜೂನಿಯರ್​ ಎನ್​ಟಿಆರ್​, ನಿರ್ದೇಶಕ ರಾಜಮೌಳಿ ಬ್ರಹ್ಮಾಸ್ತ್ರದ ತಂಡ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

ತೆಲುಗು ಅಭಿಮಾನಿಗಳ ಮನಗೆದ್ದ ಆಲಿಯಾ

ಈ ಪ್ರೆಸ್ ಮೀಟ್ ನಲ್ಲಿ ಆಲಿಯಾ ಹಾಡಿರುವ ಹಾಡೊಂದು ವೈರಲ್ ಆಗಿದೆ. ಬ್ರಹ್ಮಾಸ್ತ್ರ ಚಿತ್ರದ ನಟಿ ಆಲಿಯಾ ಭಟ್, ಗರ್ಭಿಣಿಯಾಗಿದ್ರು  ಸಿನಿಮಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಹೈದ್ರಾಬಾದ್​ನಲ್ಲಿ ಸಿನಿಮಾ ಬಗ್ಗೆ ಮಾತಾಡಿ ನಟಿ ಆಲಿಯಾ, ತೆಲುಗು ಅಭಿಮಾನಿಗಳಿಗಾಗಿ ಬ್ರಹ್ಮಾಸ್ತ್ರದಲ್ಲಿ ಕುಂಕುಮಲ ನುವ್ವೆ ಚೆರಗಾ ಪ್ರಿಯಾ ಹಾಡನ್ನು ತೆಲುಗಿನಲ್ಲಿ ಹಾಡಿದ್ದಾರೆ.

ಇದನ್ನೂ ಓದಿ: Alia Bhatt: ಬೇಬಿ ಆನ್ ಬೋರ್ಡ್ ಎಂದು ಬರೆದಿದ್ದ ಡ್ರೆಸ್ ಧರಿಸಿ ಫೋಟೋಗೆ ಪೋಸ್​ ಕೊಟ್ಟ ಆಲಿಯಾ ಭಟ್
 

 

 


View this post on Instagram


 

 

 


A post shared by Viral Bhayani (@viralbhayani)


ಆಲಿಯಾ ಭಟ್​ ಹಾಡಿಗೆ ಅಭಿಮಾನಿಗಳು ಫಿದಾ

ಬಾಲಿವುಡ್​ನ ಸಕ್ಸಸ್​ ಫುಲ್​ ನಟಿ ಆಲಿಯಾ ಭಟ್,​ ಹೈದ್ರಾಬಾದ್​ನಲ್ಲಿ ಬ್ರಹ್ಮಾಸ್ತ್ರ ಚಿತ್ರದ ಹಾಡನ್ನು ತೆಲುಗಿನಲ್ಲಿ ತುಂಬಾ ಸರಾಗವಾಗಿ ಹಾಗೂ ಸುಂದರವಾಗಿ ಹಾಡಿದ್ದನ್ನು ಕೇಳಿದ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಈ ಹಾಡನ್ನು ಜನಪ್ರಿಯ ಗಾಯಕ ಸಿದ್ ಶ್ರೀರಾಮ್ ತೆಲುಗಿನಲ್ಲಿ ಹಾಡಿದ್ದಾರೆ. ಈ ಹಾಡು ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ.

ಇತ್ತೀಚೆಗೆ ಈ ಚಿತ್ರದ 2ನೇ ಹಾಡು ಬಿಡುಗಡೆಯಾಗಿದೆ. "ದೇವ ದೇವಾ" ಎಂಬ ಹಾಡು ಫುಲ್​ ಹಿಟ್​ ಆಗಿದೆ . ಬ್ರಹ್ಮಾಸ್ತ್ರವನ್ನು ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್ಲೈಟ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದು, ಈ ಚಿತ್ರಕ್ಕಾಗಿ ಭಾರಿ ಬಜೆಟ್ ಅನ್ನು ನಿಗದಿಪಡಿಸಲಾಗಿದೆ. ಕರಣ್ ಜೋಹರ್, ರಣಬೀರ್ ಕಪೂರ್, ಅಯನ್ ಮುಖರ್ಜಿ, ಅಪೂರ್ವ ಮೆಹ್ತಾ ಮತ್ತು ನಮಿತ್ ಮಲ್ಹೋತ್ರಾ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಪ್ರೀತಮ್ ಸಂಗೀತ ನೀಡುತ್ತಿದ್ದಾರೆ. ಈ ಫ್ಯಾಂಟಸಿ ಸಾಹಸದಲ್ಲಿ ಮೌನಿ ರಾಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದು ವಿಶೇಷವೆಂದರೆ ನಿರ್ದೇಶಕ ಎಸ್ ಎಸ್ ರಾಜಮೌಳಿ ಈ ಚಿತ್ರವನ್ನು ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ.
Published by:Pavana HS
First published: