Varun Dhawan: ನಟ ವರುಣ್ ಧವನ್​ಗೆ ಈ ನಟಿಯೂ ಒಬ್ಬ ಕಾಂಪಿಟೇಟರ್‌ ಅಂತೆ! ಯಾರದು?

ವರುಣ್ ಧವನ್ ಚಿತ್ರೋದ್ಯಮದಲ್ಲಿ ಅವರ ಸ್ಪರ್ಧೆಯು ಕೇವಲ ನಟರಿಗೆ ಮಾತ್ರ ಸೀಮಿತವಾಗಿಲ್ಲವಂತೆ ಎಂದು ಬಹಿರಂಗಪಡಿಸಿದರು. ಅವರು "ನಾನು ನಟಿಯೊಂದಿಗೂ ಸಮಾನವಾಗಿ ನಿಕಟವಾಗಿ ಸ್ಪರ್ಧಿಸುತ್ತೇನೆ ಎಂದು ಭಾವಿಸುವ ಏಕೈಕ ವ್ಯಕ್ತಿ" ಎಂದು ಮನಬಿಚ್ಚಿ ಹೇಳಿಕೊಂಡರು. ಹಾಗಿದ್ರೆ ಯಾರದು ಆ ನಟಿ?

ಕರಣ್ ಜೋಹಾರ್, ಅನಿಲ್ ಕಪೂರ್ ಮತ್ತು ವರುಣ್ ಧವನ್

ಕರಣ್ ಜೋಹಾರ್, ಅನಿಲ್ ಕಪೂರ್ ಮತ್ತು ವರುಣ್ ಧವನ್

  • Share this:
ಈ ಬಾರಿಯ ‘ಕಾಫಿ ವಿತ್ ಕರಣ್’ ಶೋ (Koffee with Karan Show) ನಲ್ಲಿ ಬಂದಿರುವ ನಟ ಮತ್ತು ನಟಿಯರು ತಮ್ಮ ಜೀವನದ ತುಂಬಾನೇ ಆಸಕ್ತಿದಾಯಕ ಸತ್ಯವನ್ನು ಮನಬಿಚ್ಚಿ ಹೇಳಿಕೊಳ್ಳುತ್ತಿದ್ದಾರೆ. ಬಾಲಿವುಡ್ ನ ಜನಪ್ರಿಯ ನಿರ್ಮಾಪಕರಾದ ಕರಣ್ ಜೋಹರ್ (Karan Johar) ಅವರು ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋ ನ ಸೀಸನ್ 7 ರಲ್ಲಿ ಇದುವರೆಗೆ ಶೋ ನಲ್ಲಿ ಬಂದಿರುವ ನಟ ಮತ್ತು ನಟಿಯರು ಅನೇಕ ರೀತಿಯ ರಹಸ್ಯಗಳನ್ನು ಈ ಶೋ ನಲ್ಲಿ ತೆರೆದಿಟ್ಟಿದ್ದಾರೆ. ಈ ಶೋ ನ ಈ ಸೀಸನ್ 7 ರಲ್ಲಿ ತೆಲುಗು ನಟ ವಿಜಯ್ ದೇವರಕೊಂಡ (Vijay Deverakonda), ಬಾಲಿವುಡ್ ನಟಿ ಕತ್ರಿನಾ ಕೈಫ್, ಸೋನಮ್ ಕಪೂರ್ ಎಲ್ಲರೂ ಬಂದು ಹೋಗಿದ್ದಾಯಿತು.

ಕಾಫಿ ವಿಥ್ ಕರಣ್ ಶೋ ನಲ್ಲಿ ವರುಣ್ ಧವನ್ 
ಈಗ ಈ ಶೋ ನ ಹನ್ನೊಂದನೇ ಎಪಿಸೋಡ್ ನಲ್ಲಿ ನಟ ಅನಿಲ್ ಕಪೂರ್ ಮತ್ತು ವರುಣ್ ಧವನ್ ಅವರು ಬಂದಿದ್ದರು. ಇವರು ಮದುವೆ, ಸಂಬಂಧಗಳು ಮತ್ತು ಚಿತ್ರೋದ್ಯಮದಲ್ಲಿನ ಸ್ಪರ್ಧೆಯ ಬಗ್ಗೆ ಮನಬಿಚ್ಚಿ ಮಾತಾಡಿದರು.

ಆ ಕಾಂಪಿಟೇಟರ್‌ ನಟಿ ಯಾರು 
ಈ ಶೋ ನಲ್ಲಿ, ವರುಣ್ ಧವನ್ ಚಿತ್ರೋದ್ಯಮದಲ್ಲಿ ಅವರ ಸ್ಪರ್ಧೆಯು ಕೇವಲ ನಟರಿಗೆ ಮಾತ್ರ ಸೀಮಿತವಾಗಿಲ್ಲವಂತೆ ಎಂದು ಬಹಿರಂಗಪಡಿಸಿದರು. ಅವರು "ನಾನು ನಟಿ ಆಲಿಯಾ ಭಟ್ ಅವರೊಂದಿಗೆ ಸಮಾನವಾಗಿ ನಿಕಟವಾಗಿ ಸ್ಪರ್ಧಿಸುತ್ತೇನೆ ಎಂದು ಭಾವಿಸುವ ಏಕೈಕ ವ್ಯಕ್ತಿ" ಎಂದು ಮನಬಿಚ್ಚಿ ಹೇಳಿಕೊಂಡರು.

ಇದನ್ನೂ ಓದಿ: Bollywood Couple: ಬಾಲಿವುಡ್​ನ ಈ ಸ್ಟಾರ್​ ಜೋಡಿಗೆ ಆತ್ಮವಿಶ್ವಾಸದ ಜೊತೆ ಅಹಂಕಾರನೂ ಇದ್ಯಂತೆ; ಖ್ಯಾತ ಜ್ಯೋತಿಷಿ

"ಈ ಸಮಾಜದಲ್ಲಿ ನಮ್ಮ ಚಿತ್ರದಲ್ಲಿ ಅಭಿನಯಿಸುವ ನಾಯಕಿಯರು ಸಹ ಹೀರೋಗಳಿಗಿಂತ ಏನು ಕಡಿಮೆ ಇಲ್ಲ, ನಾಯಕ ನಟರಿಗಿಂತಲೂ ನಟಿಯರು ದೊಡ್ಡವರಾಗಿರಬಹುದು ಎಂದು ನಾವು ಒಪ್ಪಿಕೊಳ್ಳಲು ಪ್ರಾರಂಭಿಸಬೇಕು. ಆಲಿಯಾ ಭಟ್ ಅವರ ದೊಡ್ಡ ದೊಡ್ಡ ಸಿನೆಮಾ ಓಪನಿಂಗ್ ಗಳೊಂದಿಗೆ, ಪುರುಷ ನಟನಾಗಿ, ನಾನು ಅವರಿಂದ ತುಂಬಾನೇ ಸ್ಫೂರ್ತಿಯನ್ನು ಪಡೆಯುತ್ತೇನೆ ಮತ್ತು ಅದನ್ನು ಪ್ರದರ್ಶಕನಾಗಿಯೂ ನಾನು ಅವರ ನಟನೆಯನ್ನು ನೋಡಲು ಇಷ್ಟಪಡುತ್ತೇನೆ" ಎಂದು ವರುಣ್ ಧವನ್ ಹೇಳಿದರು.

ಮುಂಬರುವ ಸಂಚಿಕೆಯ ಪ್ರೋಮೋ ರಿಲೀಸ್ 
ಸೋಮವಾರ, ಕರಣ್ ಜೋಹರ್ ಮುಂಬರುವ ಸಂಚಿಕೆಯ ಪ್ರೋಮೋವನ್ನು ಬಿಡುಗಡೆ ಮಾಡಿದರು ಮತ್ತು ಆ ವೀಡಿಯೋದಲ್ಲಿ, ಅನಿಲ್ ಕಪೂರ್ ಲೈಂಗಿಕತೆಯು ತನಗೆ ತಾರುಣ್ಯವನ್ನು ಮರಳಿ ಪಡೆಯುವಂತೆ ಮಾಡುತ್ತದೆ ಎಂದು ಒಪ್ಪಿಕೊಂಡರು. ಆದರೆ ಈ ಹೇಳಿಕೆಯನ್ನು ಅವರು "ಡಾನ್ಸ್ ಮಾಡಿ ಸುಸ್ತಾಯಿತು" ಎಂದು ಹೇಳುವ ಮೊದಲೇ ಈ ಹೇಳಿಕೆಯನ್ನು ನೀಡಿದ್ದರು. ಈ ಇಬ್ಬರು ನಟರು ಶೋ ನಲ್ಲಿ ತುಂಬಾನೇ ಜೋಕ್ಸ್ ಮಾಡಿದರು ಎಂದು ಹೇಳಲಾಗುತ್ತಿದೆ.

ಕರಣ್ ಅವರು ಅನಿಲ್ ಕಪೂರ್ ಅವರನ್ನು ಚಿಕ್ಕವರೆಂದು ಭಾವಿಸುವ ಮೂರು ವಿಷಯಗಳನ್ನು ಹೇಳುವಂತೆ ಕೇಳುವುದರೊಂದಿಗೆ ಪ್ರೋಮೋ ಪ್ರಾರಂಭವಾಯಿತು, ಅದಕ್ಕೆ ಅವರು "ಸೆಕ್ಸ್ ಸೆಕ್ಸ್ ಸೆಕ್ಸ್" ಎಂದು ಉತ್ತರಿಸಿದರು, ಇದನ್ನು ಕೇಳಿದ ಕರಣ್ ಮತ್ತು ವರುಣ್ ಇಬ್ಬರು ಒಂದು ಕ್ಷಣ ತಬ್ಬಿಬ್ಬಾಗಿದಂತೂ ನಿಜ. ಇದಾದ ಕೆಲವೇ ಕ್ಷಣಗಳಲ್ಲಿ ಅನಿಲ್ ಕಪೂರ್ ತಮ್ಮ ಹೇಳಿಕೆಗೆ "ಇದೆಲ್ಲವೂ ಸ್ಕ್ರಿಪ್ಟ್ ಆಗಿದೆ" ಎಂದು ಹೇಳಿದರು.

ಕರಣ್ ಪ್ರಶ್ನೆಗೆ ವರುಣ್ ಧವನ್ ಅವರ ಉತ್ತರ ಹೇಗಿತ್ತು 
ಮತ್ತೊಂದೆಡೆ, ಕರಣ್ ಕೇಳಿದ ಪ್ರತಿಯೊಂದು ಪ್ರಶ್ನೆಗೂ ವರುಣ್ ಧವನ್ ಅವರು ಇನ್ನೊಬ್ಬ ನಾಯಕ ನಟ ಅರ್ಜುನ್ ಕಪೂರ್ ಅವರ ಹೆಸರನ್ನೆ ಪದೇ ಪದೇ ತೊಗೋಳ್ತಾ ಇರುವುದನ್ನು ನೋಡಿ ಕರಣ್ ತುಂಬಾನೇ ನಕ್ಕು ನಕ್ಕು ಸುಸ್ತಾದರು. ನಟಿಯರಾದ ಕತ್ರಿನಾ ಕೈಫ್ ಅಥವಾ ದೀಪಿಕಾ ಪಡುಕೋಣೆ ಅವರೊಂದಿಗೆ ಕೆಲಸ ಮಾಡಲು ಬಯಸುವಿರಾ ಎಂದು ಕರಣ್ ಅವರು ವರುಣ್ ಅವರನ್ನು ಕೇಳಿದಾಗ, ವರುಣ್ "ನಾನು ಯಾವಾಗಲೂ ಮಗುವಿನಂತೆ ಕಾಣುತ್ತೇನೆ ಎಂದು ನನಗೆ ಯಾವಾಗಲೂ ಹೇಳಲಾಗುತ್ತದೆ" ಎಂದು ಹೇಳಿದರು.

ಇದನ್ನೂ ಓದಿ:  Action Director Ravi Varma: ಬಾಲಿವುಡ್ ಅಂಗಳದಲ್ಲಿ ರವಿ ವರ್ಮಾ ಸಾಹಸ!

ನಂತರ ಕರಣ್ ಪ್ರಶ್ನಿಸಿ "ಅವರು ನಿಮಗಿಂತ ವಯಸ್ಸಾದವರಂತೆ ಕಾಣುತ್ತಾರೆ ಎಂದು ನೀವು ಭಾವಿಸುತ್ತೀರಾ?" ಅಂತ ಕೇಳಿಯೇ ಬಿಟ್ಟರು. ಇದಕ್ಕೆ ವರುಣ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡರು ಮತ್ತು "ನಾನು ಚಿಕ್ಕವನಂತೆ ಕಾಣುತ್ತಿದ್ದೇನೆ ಎಂದು ನನಗೆ ತಿಳಿಸಲಾಗಿದೆ" ಎಂದು ಹೇಳಿದರು. ನಂತರ, ಇಬ್ಬರೂ ಅತಿಥಿಗಳು ಮುಖಾಮುಖಿ ಸುತ್ತಿನಲ್ಲಿ ತಮ್ಮ ತಮ್ಮ ನೆಚ್ಚಿನ ಡ್ಯಾನ್ಸ್ ಸ್ಟೆಪ್ ಗಳನ್ನು ಹಾಕಿದ್ದನ್ನು ಸಹ ಇಲ್ಲಿ ನೋಡಬಹುದು. ಇವರಿಬ್ಬರ ಈ ಎಪಿಸೋಡ್ ಸೆಪ್ಟೆಂಬರ್ 15 ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ನಲ್ಲಿ ಬೆಳಿಗ್ಗೆ 12 ಗಂಟೆಗೆ ಪ್ರಸಾರವಾಗಲಿದೆ.
Published by:Ashwini Prabhu
First published: