Alia Bhatt: ಆಕ್ಟಿಂಗ್ ಮಾತ್ರವಲ್ಲ, ಆಲಿಯಾ ಆದಾಯದ ಮೂಲ ಹೀಗಿದೆ, ಬರುತ್ತೆ ಭಾರೀ ಸಂಭಾವನೆ!

ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ನಟ, ನಟಿಯರು ಅವರ ಅಭಿರುಚಿಗೆ ತಕ್ಕಂತೆ ಅವರ ಹಣವನ್ನು ಹೂಡಿಕೆ ಮಾಡಿ ನಟನೆಯ ಆದಾಯದೊಂದಿಗೆ ಇನ್ನಿತರೆ ಆದಾಯಗಳು ಸಹ ಬರುವಂತೆ ಮಾಡಿಕೊಂಡಿರುತ್ತಾರೆ. ಮನುಷ್ಯನಿಗೆ ಇವತ್ತಿನ ದಿನಗಳಲ್ಲಿ ಎರಡು ಆದಾಯದ ಅವಶ್ಯಕತೆ ತುಂಬಾನೇ ಇದೆ ಅಂತ ಹೇಳಬಹುದು. ಹಾಗಾದರೆ ಬನ್ನಿ ಇಲ್ಲೊಬ್ಬ ಬಾಲಿವುಡ್ ನಟಿ ತನ್ನ ನಟನೆಯ ವೃತ್ತಿಯ ಜೊತೆಗೆ ಏನೆಲ್ಲಾ ಕೆಲಸ ಮಾಡುತ್ತಾರೆ ಮತ್ತು ಎಷ್ಟು ಮೂಲಗಳಿಂದ ಅವರಿಗೆ ಭಾರಿ ಆದಾಯ ಬರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ನಟ, ನಟಿಯರು ಅವರ ಅಭಿರುಚಿಗೆ ತಕ್ಕಂತೆ ಅವರ ಹಣವನ್ನು ಹೂಡಿಕೆ ಮಾಡಿ ನಟನೆಯ ಆದಾಯದೊಂದಿಗೆ ಇನ್ನಿತರೆ ಆದಾಯಗಳು ಸಹ ಬರುವಂತೆ ಮಾಡಿಕೊಂಡಿರುತ್ತಾರೆ. ಮನುಷ್ಯನಿಗೆ ಇವತ್ತಿನ ದಿನಗಳಲ್ಲಿ ಎರಡು ಆದಾಯದ ಅವಶ್ಯಕತೆ ತುಂಬಾನೇ ಇದೆ ಅಂತ ಹೇಳಬಹುದು. ಹಾಗಾದರೆ ಬನ್ನಿ ಇಲ್ಲೊಬ್ಬ ಬಾಲಿವುಡ್ ನಟಿ ತನ್ನ ನಟನೆಯ ವೃತ್ತಿಯ ಜೊತೆಗೆ ಏನೆಲ್ಲಾ ಕೆಲಸ ಮಾಡುತ್ತಾರೆ ಮತ್ತು ಎಷ್ಟು ಮೂಲಗಳಿಂದ ಅವರಿಗೆ ಭಾರಿ ಆದಾಯ ಬರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ನಟ, ನಟಿಯರು ಅವರ ಅಭಿರುಚಿಗೆ ತಕ್ಕಂತೆ ಅವರ ಹಣವನ್ನು ಹೂಡಿಕೆ ಮಾಡಿ ನಟನೆಯ ಆದಾಯದೊಂದಿಗೆ ಇನ್ನಿತರೆ ಆದಾಯಗಳು ಸಹ ಬರುವಂತೆ ಮಾಡಿಕೊಂಡಿರುತ್ತಾರೆ. ಮನುಷ್ಯನಿಗೆ ಇವತ್ತಿನ ದಿನಗಳಲ್ಲಿ ಎರಡು ಆದಾಯದ ಅವಶ್ಯಕತೆ ತುಂಬಾನೇ ಇದೆ ಅಂತ ಹೇಳಬಹುದು. ಹಾಗಾದರೆ ಬನ್ನಿ ಇಲ್ಲೊಬ್ಬ ಬಾಲಿವುಡ್ ನಟಿ ತನ್ನ ನಟನೆಯ ವೃತ್ತಿಯ ಜೊತೆಗೆ ಏನೆಲ್ಲಾ ಕೆಲಸ ಮಾಡುತ್ತಾರೆ ಮತ್ತು ಎಷ್ಟು ಮೂಲಗಳಿಂದ ಅವರಿಗೆ ಭಾರಿ ಆದಾಯ ಬರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

  • Share this:
ಕ್ರಿಕೆಟ್ ಆಟಗಾರರು ಮತ್ತು ಎಲ್ಲಾ ಚಲನಚಿತ್ರೋದ್ಯಮದ ನಟ, ನಟಿಯರು (Actress)ತಮ್ಮ ವೃತ್ತಿಯ ಜೊತೆಗೆ ತಮ್ಮ ಹಣವನ್ನು ಬೇರೆ ಬೇರೆ ವ್ಯವಹಾರಗಳಲ್ಲಿ (Business) ಹೂಡಿಕೆ ಮಾಡಿರುವುದನ್ನು ನಾವು ಇತ್ತೀಚಿನ ವರ್ಷಗಳಲ್ಲಿ ತುಂಬಾನೇ ನೋಡಬಹುದಾಗಿದೆ. ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ನಟ, ನಟಿಯರು ಅವರ ಅಭಿರುಚಿಗೆ ತಕ್ಕಂತೆ ಅವರ ಹಣವನ್ನು ಹೂಡಿಕೆ (Investment) ಮಾಡಿ ನಟನೆಯ ಆದಾಯದೊಂದಿಗೆ ಇನ್ನಿತರೆ ಆದಾಯಗಳು ಸಹ ಬರುವಂತೆ ಮಾಡಿಕೊಂಡಿರುತ್ತಾರೆ. ಮನುಷ್ಯನಿಗೆ ಇವತ್ತಿನ ದಿನಗಳಲ್ಲಿ ಎರಡು ಆದಾಯದ ಅವಶ್ಯಕತೆ ತುಂಬಾನೇ ಇದೆ ಅಂತ ಹೇಳಬಹುದು. ಹಾಗಾದರೆ ಬನ್ನಿ ಇಲ್ಲೊಬ್ಬ ಬಾಲಿವುಡ್ ನಟಿ ತನ್ನ ನಟನೆಯ (Acting) ವೃತ್ತಿಯ ಜೊತೆಗೆ ಏನೆಲ್ಲಾ ಕೆಲಸ ಮಾಡುತ್ತಾರೆ ಮತ್ತು ಎಷ್ಟು ಮೂಲಗಳಿಂದ ಅವರಿಗೆ ಭಾರಿ ಆದಾಯ ಬರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ

ಆ ನಟಿ ಬೇರೆ ಯಾರೂ ಅಲ್ಲ, ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ಆಲಿಯಾ ಭಟ್ ಎಂದು ಹೇಳಬಹುದು. ಈ ನಟಿ ಬಾಲಿವುಡ್ ನ ಹೆಸರಾಂತ ನಿರ್ಮಾಪಕರಾದ ಕರಣ್ ಜೋಹರ್ ಅವರು 2012 ರಲ್ಲಿ ‘ಸ್ಟೂಡೆಂಟ್ ಆಫ್ ದಿ ಇಯರ್’ ಎಂಬ ಅವರ ಚಲಚಿತ್ರದಿಂದ ಬಾಲಿವುಡ್ ಗೆ ಪದಾರ್ಪಣೆ ಮಾಡಿದರು. ಅಲ್ಲಿಂದ, ಅವರು ಇಂದಿನವರೆಗೂ ಹಿಂದಿರುಗಿ ನೋಡಲಿಲ್ಲ. ನಂತರ ಹೈವೇ (2014), 2 ಸ್ಟೇಟ್ಸ್ (2014), ಬದ್ರಿನಾಥ್ ಕಿ ದುಲ್ಹನಿಯಾ (2017), ಡಿಯರ್ ಜಿಂದಗಿ (2016), ಉಡ್ತಾ ಪಂಜಾಬ್ (2016), ರಾಝಿ (2018) ಮತ್ತು ಇತ್ತೀಚೆಗೆ ಗಂಗೂಬಾಯಿ ಕಾಥಿಯಾವಾಡಿ (2022) ಚಿತ್ರಗಳಲ್ಲಿ ತಮ್ಮ ಅಭಿನಯದೊಂದಿಗೆ ಪ್ರಮುಖ ನಟಿಯರಲ್ಲಿ ಒಬ್ಬರಾಗಿ ತಮ್ಮನ್ನು ತಾವು ಬಾಲಿವುಡ್ ನಲ್ಲಿ ಸ್ಥಾಪಿಸಿಕೊಂಡರು. ಆಲಿಯಾ ಅವರ ಹೊಸ ಚಿತ್ರ ‘ಡಾರ್ಲಿಂಗ್ಸ್’ ಈಗಾಗಲೇ ಸ್ಟ್ರೀಮಿಂಗ್ ಮಾಧ್ಯಮವಾದ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

ಪ್ರತಿ ಸಿನೆಮಾಕ್ಕೆ ಆಲಿಯಾ ಭಟ್ ತೆಗೆದುಕೊಳ್ಳುವ ಸಂಭಾವನೆ ಎಷ್ಟು?

2014 ರಿಂದ ಕೆಲವು ಬಾರಿ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ರಲ್ಲಿ ಆಲಿಯಾ ಭಟ್ ಅವರು ಕಾಣಿಸಿಕೊಂಡಿದ್ದಾರೆ ಮತ್ತು ಫೋರ್ಬ್ಸ್ ಏಷ್ಯಾ 2017 ರ ಅಂಡರ್ 30 ಪಟ್ಟಿಯಲ್ಲಿ ಸಹ ನಟಿ ಕಾಣಿಸಿಕೊಂಡಿದ್ದಾರೆ. ಸುದ್ದಿ ಮಾಧ್ಯಮದ ಪ್ರಕಾರ, 2021 ರಲ್ಲಿ ಭಟ್ ಅವರ ನಿವ್ವಳ ಮೌಲ್ಯವು 517 ಕೋಟಿ ರೂಪಾಯಿ ಇದೆಯಂತೆ ಎಂದು ಹೇಳಲಾಗಿತ್ತು. ಬರೀ ಚಲನಚಿತ್ರಗಳಿಂದ ಅವರು ಇಷ್ಟೊಂದು ಹಣ ಗಳಿಸುತ್ತಿದ್ದಾರೆ ಅಂತ ಅಂದುಕೊಂಡರೆ ಅದು ತಪ್ಪು. ಏಕೆಂದರೆ ಈ ನಟಿಗೆ ನಟನೆಯನ್ನು ಹೊರತುಪಡಿಸಿ ಇನ್ನೂ ಮೂರು ಬೇರೆ ಬೇರೆ ಆದಾಯದ ಮೂಲಗಳಿಂದ ಹಣ ಬರುತ್ತದೆ. ಆಲಿಯಾ ಭಟ್ ಅವರು ತಾವು ನಟಿಸುವ ಪ್ರತಿ ಚಿತ್ರಕ್ಕೂ 15 ರಿಂದ 18 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ: Alia Bhatt: ಒಂದು ಇನ್​ಸ್ಟಾಗ್ರಾಮ್ ಪೋಸ್ಟ್​ಗೆ ಆಲಿಯಾ ಪಡೆಯೋ ಸಂಭಾವನೆ ಎಷ್ಟು ಗೊತ್ತೇ?

ಫೋರ್ಬ್ಸ್ ಪ್ರಕಾರ, ಇವರು ನಟಿಸಿದ ಕನಿಷ್ಠ ಆರು ಚಿತ್ರಗಳು ಆರಂಭಿಕ ವಾರಗಳಲ್ಲಿ ವಿಶ್ವದಾದ್ಯಂತ 15 ಮಿಲಿಯನ್ ಡಾಲರ್ ಎಂದರೆ ಅಂದಾಜು 118 ಕೋಟಿ ರೂಪಾಯಿ ಹಣವನ್ನು ಗಳಿಸಿದೆ. ಆದರೆ ಚಲನಚಿತ್ರಗಳ ಹೊರತಾಗಿ, ಆಲಿಯಾ ತಮ್ಮ ವ್ಯಾಪಾರೋದ್ಯಮಗಳಿಂದ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಚಲನಚಿತ್ರಗಳನ್ನು ಹೊರತುಪಡಿಸಿ ಆಲಿಯಾ ಭಟ್ ಅವರ ಆದಾಯದ ಮೂರು ಮೂಲಗಳು ಇಲ್ಲಿವೆ ನೋಡಿ.

ಮಕ್ಕಳ ಬಟ್ಟೆಯ ಬ್ರ್ಯಾಂಡ್ ನ ಮಾಲೀಕರು ಆಲಿಯಾ

ಆಲಿಯಾ ಭಟ್ 2 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಬಟ್ಟೆ ಬ್ರ್ಯಾಂಡ್ ಆಗಿರುವ ಎಡ್-ಎ-ಮಮ್ಮಾದ ಸ್ಥಾಪಕ ಮತ್ತು ಮಾಲೀಕರಾಗಿದ್ದಾರೆ. ಅಕ್ಟೋಬರ್ 2020 ರಲ್ಲಿ ಶುರು ಮಾಡಿದ ಈ ಬ್ರ್ಯಾಂಡ್ ಪರಿಸರ ಸ್ನೇಹಿ ಬ್ರ್ಯಾಂಡ್ ಆಗಿದ್ದು, ಇದು ನೈಸರ್ಗಿಕ ಬಟ್ಟೆಗಳು ಮತ್ತು ಪ್ಲಾಸ್ಟಿಕ್ ಮುಕ್ತ ಬಟನ್ ಗಳನ್ನು ಬಳಸಿ ಬಟ್ಟೆಗಳನ್ನು ತಯಾರಿಸುತ್ತದೆ. ಬಿಸಿನೆಸ್ ಇನ್ಸೈಡರ್ ಪ್ರಕಾರ, ಈ ಬ್ರ್ಯಾಂಡ್ 2021 ರಲ್ಲಿ 10ರಷ್ಟು ದೊಡ್ಡದಾಗಿ ಬೆಳೆದಿದೆ ಮತ್ತು 150 ಕೋಟಿ ರೂಪಾಯಿಗಳ ವ್ಯವಹಾರವಾಗಿ ಬೆಳೆದು ನಿಂತಿದೆ.

“ನಾನು ಇನ್ನೂ ವ್ಯವಹಾರದ ಬಗ್ಗೆ ಕಲಿಯುತ್ತಿದ್ದೇನೆ, ಆದರೆ ಒಂದು ವರ್ಷದಲ್ಲಿ ನಾವು ಏನು ಸಾಧಿಸಿದ್ದೇವೆ ಎಂಬುದರ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಇದು ಬಹುತೇಕ ಅವಾಸ್ತವಿಕವಾಗಿದೆ. ಸಣ್ಣ ಕನಸಾಗಿ ಪ್ರಾರಂಭವಾದದ್ದು ಈಗ 150 ಕೋಟಿ ರೂಪಾಯಿಗಳ ವ್ಯವಹಾರವಾಗುವ ಹಾದಿಯಲ್ಲಿದೆ. ನಮ್ಮ ಹೊಸ ಕೆಲಸಗಳಿಂದ ನಾನು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದೇನೆ. ನನ್ನ ಅಸಾಧಾರಣ ತಂಡಕ್ಕೆ ಎಲ್ಲಾ ಕ್ರೆಡಿಟ್ ಸಲ್ಲಬೇಕು. ನಮ್ಮ ಮುಂದಿನ ಗಮನವು ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಮುಂದಿನ ವರ್ಷ ನಮ್ಮ ಗ್ರಾಹಕರಿಗೆ ದೊಡ್ಡ, ಇನ್ನೂ ಉತ್ತಮವಾದ ಬಟ್ಟೆಗಳನ್ನು ಒದಗಿಸುವುದು" ಎಂದು ಭಟ್ ಹೇಳಿದರು.ಪ್ರೊಡಕ್ಷನ್ ಹೌಸ್ ಎಟರ್ನಲ್ ಸನ್ಶೈನ್ ನ ಒಡತಿ ಆಲಿಯಾ

ಈ ವರ್ಷದ ಆರಂಭದಲ್ಲಿ, ಭಟ್ ತಮ್ಮದೇ ಆದ ನಿರ್ಮಾಣ ಸಂಸ್ಥೆ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಅನ್ನು ಪ್ರಾರಂಭಿಸಿದರು. ಪ್ರೊಡಕ್ಷನ್ ಹೌಸ್ ನ ಮೊದಲ ಪ್ರಾಜೆಕ್ಟ್ ಇತ್ತೀಚೆಗೆ ಬಿಡುಗಡೆಯಾದ ‘ಡಾರ್ಲಿಂಗ್ಸ್’ ಚಿತ್ರವಾಗಿದ್ದು, ಇದನ್ನು ನಟ ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಹ-ನಿರ್ಮಾಣ ಮಾಡಿದೆ. 80 ಕೋಟಿ ರೂಪಾಯಿಗೆ ನೆಟ್‌ಫ್ಲಿಕ್ಸ್ ಸ್ವಾಧೀನಪಡಿಸಿಕೊಂಡಿರುವ ಈ ಚಿತ್ರದಲ್ಲಿ ಭಟ್ ಮತ್ತು ಶೆಫಾಲಿ ಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:  Alia Bhatt: ತಾಯಿಯಾಗುತ್ತಿರುವ ಆಲಿಯಾಳದ್ದು ಧೈರ್ಯಶಾಲಿ ನಿರ್ಧಾರ! ಕರೀನಾ ಕಪೂರ್ ಮೆಚ್ಚುಗೆ ಮಾತು

"ಡಾರ್ಲಿಂಗ್ಸ್ ಚಿತ್ರದ ಭಾಗವಾಗಲು ನಾನು ನಿಜವಾಗಿಯೂ ಉತ್ಸುಕಳಾಗಿದ್ದೆ, ಇದು ಸಾಕಷ್ಟು ಹಾಸ್ಯ ಮತ್ತು ಡಾರ್ಕ್ ಕಾಮಿಡಿಯ ಪ್ರಮಾಣಗಳೊಂದಿಗೆ ಒಳ್ಳೆಯ ಕಥೆಯನ್ನು ಹೊಂದಿದೆ. ನಿರ್ಮಾಪಕನಾಗಿ ನನ್ನ ಮೊದಲ ಚಿತ್ರವಾಗಿ ‘ಡಾರ್ಲಿಂಗ್ಸ್’ ಅನ್ನು ಹೊರ ತರಲು ನಾನು ತುಂಬಾನೇ ರೋಮಾಂಚನಗೊಂಡಿದ್ದೇನೆ, ಅದೂ ಸಹ ನನ್ನ ನೆಚ್ಚಿನ ಶಾರುಖ್ ಖಾನ್ ಮತ್ತು ರೆಡ್ ಚಿಲ್ಲೀಸ್ ಅವರ ಸಹಯೋಗದೊಂದಿಗೆ" ಎಂದು ಆಲಿಯಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನೂ ಅನೇಕ ವ್ಯವಹಾರಗಳಲ್ಲಿ ಹಣ ಹೂಡಿಕೆ

ನಟಿ ಆಲಿಯಾ ಭಟ್ ಕೆಲವು ವ್ಯವಹಾರಗಳಲ್ಲಿ ಅಘೋಷಿತ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಮುಂಬೈ ಮೂಲದ ವೈಯಕ್ತಿಕ ಸ್ಟೈಲಿಂಗ್ ವೇದಿಕೆಯಾದ ಸ್ಟೈಲ್ ಕ್ರ್ಯಾಕರ್ ನಲ್ಲಿ ಅವರ ಆರಂಭಿಕ ಹೂಡಿಕೆಗಳಲ್ಲಿ ಒಂದಾಗಿತ್ತು. ಗಂಗೂಬಾಯಿ ಕಾಥಿಯಾವಾಡಿಯ ನಟಿ 2017 ರಲ್ಲಿ ಫ್ಯಾಷನ್ ವ್ಯವಹಾರದಲ್ಲಿ ಹಣವನ್ನು ಹೂಡಿಕೆ ಮಾಡಿದ್ದರು. "ನಾನು ಸಕ್ರಿಯವಾಗಿ ಹಣವನ್ನು ಹೂಡಿಕೆ ಮಾಡಲು ಹುಡುಕುತ್ತಿಲ್ಲ, ಆದರೆ ಅರ್ಚನಾ ಅನೇಕ ವರ್ಷಗಳಿಂದ ನನ್ನ ಸ್ಟೈಲಿಸ್ಟ್ ಆಗಿದ್ದಾಳೆ ಮತ್ತು ಸ್ಟೈಲ್ ಕ್ರ್ಯಾಕರ್ ಬಗ್ಗೆ ನನಗೆ ತಿಳಿದಾಗ, ಇದು ತುಂಬಾನೇ ಚೆನ್ನಾಗಿದೆ ಅಂತ ಅನ್ನಿಸಿತು" ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

ಇ-ಕಾಮರ್ಸ್ ವೆಬ್‌ಸೈಟ್ ನೈಕಾದಲ್ಲಿ ಹಣ ಹೂಡಿಕೆ

2020 ರಲ್ಲಿ, ಆಲಿಯಾ ಭಟ್ ಅವರು ಇ-ಕಾಮರ್ಸ್ ವೆಬ್‌ಸೈಟ್ ನೈಕಾದಲ್ಲಿ ಹಣವನ್ನು ಹೂಡಿಕೆ ಮಾಡಿದರು, ಇದು 2012 ರಲ್ಲಿ ಪ್ರಾರಂಭವಾಯಿತು ಮತ್ತು ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ನೈಕಾ ಸ್ಥಾಪಕ ಮತ್ತು ಸಿಇಒ ಫಲ್ಗುಣಿ ನಾಯರ್ ಹೇಳಿಕೆಯೊಂದರಲ್ಲಿ ಆಲಿಯಾ ಬ್ರ್ಯಾಂಡ್ ಮತ್ತು ಭಾರತೀಯ ಕಂಪನಿಯಾಗಿದ್ದರಿಂದ ಇದರಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸಿದ್ದರು ಎಂದು ಹೇಳಿದ್ದರು.

"ಆಲಿಯಾ ಮತ್ತು ನಾನು 2012 ರಲ್ಲಿ ನೈಕಾ ಪ್ರಾರಂಭಿಸಿದ್ದೆವು ಎಂಬುದರ ಬಗ್ಗೆ ಬಹಳ ಆಸಕ್ತಿದಾಯಕ ಕಥೆಗಳು ಇವೆ. ನೈಕಾದಲ್ಲಿ ಆಲಿಯಾ ಹೂಡಿಕೆ ಮಾಡಲು ಬಯಸಿದ್ದು ಈ ಕಾರಣಗಳಿಂದ ಎಂದು ಹೇಳಬಹುದು. ಅದು ಭಾರತೀಯ ಕಂಪನಿ ಮತ್ತು ಅಲ್ಲದೆ ಇದು ಮಹಿಳೆಯಿಂದ ಸ್ಥಾಪಿಸಲ್ಪಟ್ಟಿದ್ದು ಆಗಿದೆ” ಎಂದು ಫಲ್ಗುಣಿ ಅವರು ಹೇಳಿದರು.ಫೂಲ್ ಧೂಪದ್ರವ್ಯ ಡಾಟ್ ಕೋ ನಲ್ಲಿ ಹೂಡಿಕೆ

ಇದಲ್ಲದೆ, ಭಟ್ ಅವರು ಐಐಟಿ ಕಾನ್ಪುರದ ಬೆಂಬಲಿತ ಡಿ 2 ಸಿ ಕಂಪನಿಯಾದ ಪೂಲ್ ಡಾಟ್ ಕೋ ನಲ್ಲಿ ಹೂಡಿಕೆ ಮಾಡಿದ್ದಾರೆ, ಇದು ಹೂವಿನ ತ್ಯಾಜ್ಯವನ್ನು ಧೂಪದ್ರವ್ಯದ ಉತ್ಪನ್ನಗಳಾಗಿ ಮರುಬಳಕೆ ಮಾಡುತ್ತದೆ. ಮಾಧ್ಯಮದ ವರದಿಯ ಪ್ರಕಾರ, ಈ ಬ್ರ್ಯಾಂಡ್ ಕಳೆದ ಎರಡು ವರ್ಷಗಳಲ್ಲಿ ತುಂಬಾನೇ ಬೆಳವಣಿಗೆಯನ್ನು ಸಾಧಿಸಿದೆ.

ಇದನ್ನೂ ಓದಿ:  Ranbir and Alia: ರಣಬೀರ್ ಕಪೂರ್ ಸೆಟ್‌ನಲ್ಲಿ ಹೇಗಿರ್ತಾರೆ? ಈ ಬಗ್ಗೆ ಖುದ್ದು ಆಲಿಯಾ ಏನು ಹೇಳಿದ್ದಾರೆ ಗೊತ್ತಾ?

"ಫೂಲ್ ಧೂಪದ್ರವ್ಯವು ಅದರ ಉತ್ತಮ ನೈಸರ್ಗಿಕ ಸುಗಂಧಗಳು ಮತ್ತು ಅದ್ಭುತ ಪ್ಯಾಕೇಜಿಂಗ್ ಗೆ ಎದ್ದು ಕಾಣುತ್ತದೆ. ನಮ್ಮ ನದಿಗಳನ್ನು ಸ್ವಚ್ಛವಾಗಿಡಲು, ಚರ್ಮದ ಆರೈಕೆಗೆ ಒಂದು ಪರ್ಯಾಯವನ್ನು ರಚಿಸಲು ಮತ್ತು ಭಾರತದಲ್ಲಿ ಮಹಿಳೆಯರಿಗೆ ಉದ್ಯೋಗವನ್ನು ಒದಗಿಸಲು ಕೊಡುಗೆ ನೀಡುವ ಮರುಬಳಕೆ ಮಾಡಿದ ಹೂವುಗಳಿಂದ ಧೂಪದ್ರವ್ಯವನ್ನು ತಯಾರಿಸುವ ಈ ದೃಷ್ಟಿಕೋನ ನನಗೆ ತುಂಬಾನೇ ಇಷ್ಟವಾಯಿತು” ಎಂದು ಆಲಿಯಾ ಹೇಳುತ್ತಾರೆ.
Published by:Ashwini Prabhu
First published: