ಸಾವಿರಾರು ಜನರೆದುರು ರಣಬೀರ್​ ಕಪೂರ್​ಗೆ ಐ ಲವ್​ ಯೂ ಹೇಳಿದ​ ಆಲಿಯಾ ಭಟ್!

ಅವಾರ್ಡ್​ ಕಾರ್ಯಕ್ರಮವೊಂದರಲ್ಲಿ ಪ್ರಶಸ್ತಿ ಸ್ವೀಕರಿಸಿದ ಆಲಿಯಾ ಭಟ್​ ರಣಬೀರ್​ ಕಪೂರ್​ಗೆ 'ಐ ಲವ್​ ಯೂ' ಎಂದು ಹೇಳಿದ್ದಾರೆ. ಆ ಮಾತು ಕೇಳುತ್ತಿದ್ದಂತೆ ವೇದಿಕೆಯ ಕೆಳಗೆ ಕುಳಿತಿದ್ದ ರಣಬೀರ್​ ಕಪೂರ್​ ಮುಖ ಮುಚ್ಚಿಕೊಂಡು ನಾಚಿಕೊಂಡಿದ್ದಾರೆ.

ರಣಬೀರ್​ ಕಪೂರ್​- ಆಲಿಯಾ ಭಟ್​

ರಣಬೀರ್​ ಕಪೂರ್​- ಆಲಿಯಾ ಭಟ್​

  • News18
  • Last Updated :
  • Share this:

ಬೆಂಗಳೂರು (ಮಾ.24): ಬಾಲಿವುಡ್​ ಸೆಲೆಬ್ರಿಟಿಗಳಾದ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಲವ್​ ಬರ್ಡ್ಸ್​ ಎಂಬುದು ಗುಟ್ಟಾಗಿ ಉಳಿದಿರುವ ವಿಷಯವೇನಲ್ಲ. ಈ ಮೊದಲು ಹಲವು ಬಾರಿ ಒಟ್ಟಿಗೇ ಹೊರದೇಶಕ್ಕೆ ಹೋಗಿ ತಿರುಗಾಡಿಕೊಂಡು ಬಂದಿದ್ದರೂ, ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರೂ ಅವರಿಬ್ಬರ ಸಂಬಂಧದ ಬಗ್ಗೆ ಮುಕ್ತವಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ.

ಇದೀಗ, ಅವಾರ್ಡ್​ ಕಾರ್ಯಕ್ರಮವೊಂದರಲ್ಲಿ ಪ್ರಶಸ್ತಿ ಸ್ವೀಕರಿಸಿದ ಆಲಿಯಾ ಭಟ್​ ರಣಬೀರ್​ ಕಪೂರ್​ಗೆ 'ಐ ಲವ್​ ಯೂ' ಎಂದು ಹೇಳಿದ್ದಾರೆ. ಆ ಮಾತು ಕೇಳುತ್ತಿದ್ದಂತೆ ವೇದಿಕೆಯ ಕೆಳಗೆ ಕುಳಿತಿದ್ದ ರಣಬೀರ್​ ಕಪೂರ್​ ಮುಖ ಮುಚ್ಚಿಕೊಂಡು ನಾಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಕೊನೆಗೂ ಈ ಜೋಡಿಗಳ ಲವ್​ ವಿಚಾರ ಅಧಿಕೃತವಾಗಿಯೇ ಹೊರಬಿದ್ದಂತಾಗಿದೆ.

ಈ ಸಿನಿಮಾಗಳನ್ನ ನೋಡಿದರೆ ನಿಮಗೆ ಸಿಗುತ್ತೆ 69 ಸಾವಿರ ರೂ.; ಇದು ಸತ್ಯ, ಆದರೆ ಕಂಡೀಷನ್ಸ್ ಅಪ್ಲೈ

ಕಳೆದ 5 ವರ್ಷಗಳಿಂದ ಕೈ ಕೈ ಹಿಡಿದು ಸುತ್ತಾಡುತ್ತಿರುವ ಆಲಿಯಾ- ರಣಬೀರ್​ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದ್ದರೂ ಅವರಿಬ್ಬರೂ ಆ ಬಗ್ಗೆ ಸ್ಪಷ್ಟೀಕರಣ ನೀಡಿರಲಿಲ್ಲ. 2019ರ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್​ ಬೆಸ್ಟ್​ ನಟ-ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ವೇಳೆ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಹೋದ ಆಲಿಯಾ ಎಲ್ಲರಿಗೂ ಥ್ಯಾಂಕ್ಸ್​ ಹೇಳುವಾಗ ರಣಬೀರ್​ ಐ ಲವ್​ ಯೂ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಅಭಿಮಾನಿಗಳು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಹಾಗೇ, ಇತ್ತೀಚೆಗೆ ನಡೆದ ಇನ್ನೊಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಣಬೀರ್​ ಆಲಿಯಾ ಜೊತೆಗೆ ರೊಮ್ಯಾಂಟಿಕ್ ಹಾಡೊಂದಕ್ಕೆ ನೃತ್ಯ ಮಾಡಿದ್ದರು. ಇದನ್ನೆಲ್ಲ ನೋಡಿದರೆ ಸದ್ಯದಲ್ಲೇ ರಣಬೀರ್​- ಆಲಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಗುವ ಲಕ್ಷಣಗಳು ಕಾಣುತ್ತಿವೆ.

First published: