Shiv Subrahmanyam: 2 ಸ್ಟೇಟ್ಸ್ ಚಿತ್ರದಲ್ಲಿ ಆಲಿಯಾ ಭಟ್ ತಂದೆಯ ಪಾತ್ರದಲ್ಲಿ ಅಭಿನಯಿಸಿದ ಶಿವ ಸುಬ್ರಮಣ್ಯಂ ಇನ್ನಿಲ್ಲ..!

ಹಿಂದಿಯ '2 ಸ್ಟೇಟ್ಸ್' (2 States) ಚಿತ್ರದಲ್ಲಿ ನಟಿ ಆಲಿಯಾ ಭಟ್ (Alia Bhatt) ಅವರ ತಂದೆಯ ಪಾತ್ರ ಮಾಡಿದ ಸಹನಟ ಎಂದಾಕ್ಷಣ ಎಲ್ಲರಿಗೂ ಕಣ್ಮುಂದೆ ಬರುವವರು ಎಂದರೆ ನಟ ಮತ್ತು ಖ್ಯಾತ ಚಿತ್ರ ಕಥೆಗಾರ ಶಿವ ಸುಬ್ರಮಣ್ಯಂ (Shivkumar Subramaniam) ಎಂದಲ್ಲಿ ತಪ್ಪಾಗುವುದಿಲ್ಲ. ಅಭಿಮಾನಿಗಳಿಗೆ ಕೆಟ್ಟ ಸುದ್ದಿ ಏನಪ್ಪಾ ಎಂದರೆ ಇವರು ಕಳೆದ ಭಾನುವಾರ ರಾತ್ರಿ ನಿಧನರಾಗಿದ್ದಾರೆ.

 ಶಿವ ಸುಬ್ರಮಣ್ಯಂ

ಶಿವ ಸುಬ್ರಮಣ್ಯಂ

  • Share this:
ಹಿಂದಿಯ '2 ಸ್ಟೇಟ್ಸ್' (2 States) ಚಿತ್ರದಲ್ಲಿ ನಟಿ ಆಲಿಯಾ ಭಟ್ (Alia Bhatt) ಅವರ ತಂದೆಯ ಪಾತ್ರ ಮಾಡಿದ ಸಹನಟ ಎಂದಾಕ್ಷಣ ಎಲ್ಲರಿಗೂ ಕಣ್ಮುಂದೆ ಬರುವವರು ಎಂದರೆ ನಟ ಮತ್ತು ಖ್ಯಾತ ಚಿತ್ರ ಕಥೆಗಾರ ಶಿವ ಸುಬ್ರಮಣ್ಯಂ (Shivkumar Subramaniam) ಎಂದಲ್ಲಿ ತಪ್ಪಾಗುವುದಿಲ್ಲ. ಅಭಿಮಾನಿಗಳಿಗೆ ಕೆಟ್ಟ ಸುದ್ದಿ ಏನಪ್ಪಾ ಎಂದರೆ ಇವರು ಕಳೆದ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಹೌದು, ಅವರು '2 ಸ್ಟೇಟ್ಸ್' ಚಿತ್ರದಲ್ಲಿ ನಟಿ ಅಲಿಯಾ ಭಟ್ ಮತ್ತು ನಟ ಅರ್ಜುನ್ ಕಪೂರ್ (Arjun Kapoor) ಅವರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಂತಹ ನಟ ಶಿವ ಸುಭ್ರಮಣ್ಯಂ. ಇಷ್ಟೇ ಅಲ್ಲದೆ ಇವರು 'ಮೀನಾಕ್ಷಿ ಸುಂದರೇಶ್ವರ್' ಚಿತ್ರದಲ್ಲಿ ಅಭಿನಯಿಸಿದ್ದರು ಮತ್ತು 'ಪರಿಂದಾ' ಮತ್ತು 'ಹಜಾರೋ ಖ್ವಾಯಿಷೇ ಐಸಿ' ಮೆಚ್ಚುಗೆ ಪಡೆದ ಚಲನಚಿತ್ರಗಳ ಚಿತ್ರಕಥೆಯನ್ನು ಬರೆಯುವುದರ ಮೂಲಕ ತುಂಬಾನೇ ಹೆಸರು ಮಾಡಿದ್ದವರು ಎಂದು ಹೇಳಬಹುದು. ಇನ್ನು, ಇವರ ನಿಧನಕ್ಕೆ ಇಡೀ ಚಿತ್ರರಂಗವೇ ಸಂತಾಪ ಸೂಚಿದ್ದು, ಗಣ್ಯರು ಕಂಬನಿ ಮಿಡಿದಿದ್ದಾರೆ.

ಮುಂಬೈಯಲ್ಲಿ ಅಂತ್ಯಕ್ರಿಯೆ:

ಇವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಮುಂಬೈಯಲ್ಲಿರುವ ಅಂಬೋಲಿಯ ಸೀಸರ್ ರಸ್ತೆಯಲ್ಲಿರುವ ಮೋಕ್ಷಧಾಮ್ ಹಿಂದೂ ರುದ್ರಭೂಮಿಯಲ್ಲಿ ಮಧ್ಯಾಹ್ನ ನಡೆಯಿತು ಎಂದು ಹೇಳಲಾಗುತ್ತಿದೆ. ಇವರು 'ನೇಲ್ ಪಾಲಿಶ್', 'ಹಿಚ್ಕಿ', 'ರಾಕಿ ಹ್ಯಾಂಡ್ಸಮ್', 'ಸ್ಟಾನ್ಲಿ ಕಾ ಡಬ್ಬಾ' ಸೇರಿದಂತೆ ಹಲವಾರು ಹಿಂದಿ ಚಲನಚಿತ್ರಗಳು ಮತ್ತು ವೆಬ್ ಸಿರೀಸ್ ಗಳ ಭಾಗವಾಗಿದ್ದರು.

ಸುಭ್ರಮಣ್ಯಂ ನಿಧನಕ್ಕೆ ಹನ್ಸಲ್ ಮೆಹ್ತಾ ಟ್ವೀಟ್ ಮೂಲಕ ಸಂತಾಪ:

ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಅವರು "ಅತ್ಯಂತ ಗೌರವಾನ್ವಿತ ಮತ್ತು ಉದಾತ್ತ ಆತ್ಮಗಳಲ್ಲಿ ಒಂದಾದ ನಮ್ಮ ಪ್ರೀತಿಯ ಶಿವ ಸುಬ್ರಹ್ಮಣ್ಯಂ ಅವರ ನಿಧನದ ಬಗ್ಗೆ ನಾವು ನಿಮಗೆ ತಿಳಿಸಲು ಬಯಸುತ್ತೇವೆ. ನಂಬಲು ಅಸಾಧ್ಯವಾದ ಪ್ರತಿಭಾವಂತ, ಅವರು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಹೆಚ್ಚು ಪ್ರೀತಿಸಲ್ಪಡುತ್ತಿದ್ದರು ಮತ್ತು ಗೌರವಿಸಲ್ಪಟ್ಟರು" ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: SSLC Exam:10ನೇ ತರಗತಿ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಪುಷ್ಪಾ ಚಿತ್ರದ ಡೈಲಾಗ್..!

ನಾವು ಅವರ ಪತ್ನಿ ದಿಯಾ, ಅವರ ತಾಯಿ, ತಂದೆ, ರೋಹನ್, ರಿಂಕಿ ಮತ್ತು ಕುಟುಂಬಕ್ಕೆ ಸಂತಾಪವನ್ನು ಸೂಚಿಸುತ್ತೇವೆ. ಭಾನು ಚಿಟ್ಟಿ ಮತ್ತು ಶಿವನ ಕುಟುಂಬದ ಎಲ್ಲರೂ ಮತ್ತು ಅವರ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಆ ಭಗವಂತ ನೀಡಲಿ ಎಂದು ಅವರು ಹೇಳಿದರು.

ಸುಭ್ರಮಣ್ಯಂ ನಿಧನಕ್ಕೆ ಗಣ್ಯರಿಂದ ಸಂತಾಪ:

ಮೆಹ್ತಾ ಪೋಸ್ಟ್ ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಕಾಮೆಂಟ್ ವಿಭಾಗಕ್ಕೆ ಧಾವಿಸಿ ನಟನಿಗೆ ಗೌರವ ಸಲ್ಲಿಸಿದರು. ಹಠಾತ್ ನಿಧನಕ್ಕೆ ಪ್ರತಿಕ್ರಿಯಿಸಿರುವ ಚಲನಚಿತ್ರ ನಿರ್ಮಾಪಕ ನಿಖಿಲ್ ಅಡ್ವಾಣಿ ಅವರು ಒಡೆದ ಹೃದಯದ ಎಮೋಜಿಯನ್ನು ಹಾಕಿದ್ದಾರೆ. "ಭಯಾನಕ ಸುದ್ದಿ. ದುಃಖ ಕೊನೆಗೊಳ್ಳುವುದಿಲ್ಲ. ಒಬ್ಬ ಮಹಾನ್ ವ್ಯಕ್ತಿ, ಮತ್ತು ನಂಬಲಸಾಧ್ಯವಾದ ಪ್ರತಿಭೆ. ಬಹಳ ಬೇಗನೆ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ರಣವೀರ್ ಶೋರೆ ಅವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Sanjay Dutt: ಬಾಲಿವುಡ್​ನಲ್ಲಿ `ಆ’ ರೀತಿಯ ಸಿನಿಮಾಗಳು ಮತ್ತೆ ಬರಲಿ! ಹಿಂಗ್ಯಾಕ್​ ಅಂದ್ರು ಸಂಜಯ್​ ದತ್​ ನೀವೇ ನೋಡಿ..

1989ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ:

ಅಭಿಮನ್ಯು ದಸ್ಸಾನಿ ಮತ್ತು ಸಾನ್ಯಾ ಮಲ್ಹೋತ್ರಾ ಅಭಿನಯದ ಕರಣ್ ಜೋಹರ್ ಅವರ ನಿರ್ಮಾಣದ 'ಮೀನಾಕ್ಷಿ ಸುಂದರೇಶ್ವರ' ಚಿತ್ರದಲ್ಲಿ ಶಿವ ಸುಬ್ರಮಣ್ಯಂ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರು ಸನ್ಯಾ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ, ಇದು ಅರೇಂಜ್ಡ್ ಮ್ಯಾರೇಜ್ ಮತ್ತು ಸಂಬಂಧಗಳ ಪರಿಕಲ್ಪನೆಯನ್ನು ಆಧರಿಸಿದ ಕಥೆಯಾಗಿದೆ. ಅವರು ನಾನಾ ಪಾಟೇಕರ್ ಅವರ 'ಪ್ರಹಾರ್' ಚಿತ್ರದ ಅಭಿನಯಕ್ಕಾಗಿಯೂ ಹೆಸರು ವಾಸಿಯಾಗಿದ್ದಾರೆ. ಸುಬ್ರಮಣ್ಯಂ ಅವರು 1989 ರಲ್ಲಿ ತೆರೆಕಂಡ 'ಪರಿಂದಾ' ಚಿತ್ರದ ಮೂಲಕ ತಮ್ಮ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸಿದರು, ಇದಕ್ಕಾಗಿ ಅವರು ಚಿತ್ರಕಥೆಯನ್ನು ಬರೆದಿದ್ದರು ಮತ್ತು ಪೋಷಕ ಪಾತ್ರದಲ್ಲಿಯೂ ಸಹ ಅದರಲ್ಲಿ ನಟಿಸಿದ್ದರು.

1942: ಎ ಲವ್ ಸ್ಟೋರಿ, ಈಸ್ ರಾತ್ ಕಿ ಸುಬಾ ನಹೀ, ಅರ್ಜುನ್ ಪಂಡಿತ್, ಚಮೇಲಿ ಮತ್ತು ತೀನ್ ಪತ್ತಿ ಚಿತ್ರಗಳಿಗೆ ಚಿತ್ರಕಥೆ ಬರೆದ ಕೀರ್ತಿ ಅವರಿಗೆ ಸಲ್ಲುತ್ತದೆ. ಒಬ್ಬ ನಟನಾಗಿ, ಅವರು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ತಮ್ಮ ಅದ್ಭುತ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದ್ದರು.
Published by:shrikrishna bhat
First published: