RRR: ರಾಜಮೌಳಿ ಚಿತ್ರದಲ್ಲಿ ಯಾವುದೇ ಪಾತ್ರ ನಿರ್ವಹಿಸಲು ಸಿದ್ಧಳಿದ್ದೆ ಎಂದ ಆಲಿಯಾ ಭಟ್

RRR: ರಾಜಮೌಳಿ ಅವರನ್ನು ವಿಮಾನ ನಿಲ್ದಾಣದಲ್ಲಿ ಅಕಸ್ಮಾತ್ ಆಗಿ ಭೇಟಿ ಆಗಿದ್ದರಿಂದ ತಮಗೆ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು ಎಂಬುದನ್ನು ಆಲಿಯಾ ಹೇಳಿಕೊಂಡಿದ್ದಾರೆ.

ಅಲಿಯಾ ಭಟ್

ಅಲಿಯಾ ಭಟ್

  • Share this:
ರಾಜಮೌಳಿ ( SS Rajamouli) ಅವರ ಮಹತ್ವದ ಚಿತ್ರ ಆರ್​ಆರ್​ಆರ್​ (RRR) ಮೂಲಕ, ಬಾಲಿವುಡ್ ತಾರೆ ಆಲಿಯಾ ಭಟ್ (Alia Bhatt) ಅವರು ದಕ್ಷಿಣ ಸಿನಿಮಾ ರಂಗಕ್ಕೆ (South debut) ಪಾದಾರ್ಪಣೆ ಮಾಡಲಿದ್ದಾರೆ. ಮಾಧ್ಯಮ ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಇಂದು ಮುಂಬೈನಲ್ಲಿ (Mumbai) ಚಿತ್ರದ ಟ್ರೈಲರನ್ನು (Trailer ) ಬಿಡುಗಡೆ ಮಾಡಲಾಯಿತು. ಚಿತ್ರದ ನಿರ್ಮಾಪಕರಲ್ಲದೆ, ಈ ಸಂದರ್ಭದಲ್ಲಿ ಅಲಿಯಾ ಭಟ್, ಜೂನಿಯರ್ ಎನ್‍ಟಿಆರ್ ( Jr NTR) ಮತ್ತು ಅಜಯ್ ದೇವಗನ್ (Ajay Devgan) ಉಪಸ್ಥಿತರಿದ್ದರು. ಕೌಟುಂಬಿಕ ಸಮಾರಂಭವೊಂದರಲ್ಲಿ ಭಾಗವಹಿಸಬೇಕಾಗಿ ಬಂದ ಕಾರಣದಿಂದ ರಾಮ್ ಚರಣ್(Ram Charan) ಅವರು ಈ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವುದು ಸಾಧ್ಯವಾಗಲಿಲ್ಲ.

ಸೀತೆಯ ಪಾತ್ರ
ಸಿನಿಮಾದಲ್ಲಿ ಸೀತೆಯ ಪಾತ್ರವನ್ನು ಮಾಡುತ್ತಿರುವ ಅಲಿಯಾ ಭಟ್ ಅವರ ಕುರಿತು ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ರಾಜಮೌಳಿ ಅವರನ್ನು ವಿಮಾನ ನಿಲ್ದಾಣದಲ್ಲಿ ಅಕಸ್ಮಾತ್ ಆಗಿ ಭೇಟಿ ಆಗಿದ್ದರಿಂದ ತಮಗೆ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು ಎಂಬುದನ್ನು ಆಲಿಯಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: RRR ಸಿನಿಮಾಗೆ ಕನ್ನಡದಲ್ಲೇ ಡಬ್​ ಮಾಡಿದ ಜೂ.NTR: ರಶ್ಮಿಕಾ ಮಂದಣ್ಣಗೆ ಮಾತ್ರ ಕನ್ನಡ ಕಷ್ಟನಾ?

“ನಾನು ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದಾಗ, ನಾನು ಅವರ ಬಳಿ ಹೋಗಿ, ‘ಸರ್ ! ನಾನು ನಿಮ್ಮ ಜೊತೆ ಕೆಲಸ ಮಾಡಬೇಕು. ನಾನು ಏನು ಬೇಕಾದರೂ ಮಾಡುತ್ತೇನೆ, ಕೇವಲ ನಿಮ್ಮ ಸಿನಿಮಾದಲ್ಲಿ ಒಂದು ಪಾತ್ರ ಕೊಡಿ’ ಎಂದು ಹೇಳಿದೆ” ಎಂದು ಆಲಿಯಾ ಭಟ್ ತಿಳಿಸಿದ್ದಾರೆ.

ಆನ್‍ಲೈನ್ ಮಾತುಕತೆ
ಅದೇ ಸಂದರ್ಭಲ್ಲಿ ರಾಜಮೌಳಿ ಅವರು ಆರ್‍ಆರ್‍ಆರ್ ಸಿನಿಮಾದ ಸೀತೆಯ ಪಾತ್ರಕ್ಕಾಗಿ ನಟಿಯ ಹುಡುಕಾಟ ನಡೆಸಿದ್ದರು. ಸಿನಿಮಾದ ಕುರಿತು ಕೆಲವು ಆನ್‍ಲೈನ್ ಮಾತುಕತೆಗಳನ್ನು ನಡೆಸಿದ ಬಳಿಕ, ಅಂತಿಮವಾಗಿ ಆಲಿಯಾ ಅವರು ಹೈದರಾಬಾದ್‍ಗೆ ಹೋಗಿ, ಔಷಚಾರಿಕವಾಗಿ ಸಿನಿಮಾಗೆ ಸಹಿ ಹಾಕಿದರು. “ನಾನು ರಾಜಮೌಳಿ ಅವರ ಸಿನಿಮಾದಲ್ಲಿ , ಕೇವಲ ನಡೆದಾಡುವ ಪಾತ್ರವನ್ನು ಕೂಡ ಮಾಡಲು ಸಿದ್ಧಳಿದ್ದೆ, ಏಕೆಂದರೆ ನಾನು ಅವರ ದೃಷ್ಟಿಕೋನ ಮತ್ತು ಸಿನಿಮಾದ ಭಾಗವಾಗಲು ಬಯಸುತ್ತೇನೆ” ಎಂದು ಆಲಿಯಾ ಹೇಳಿದ್ದಾರೆ.

ಭಾಷೆಯ ಕುರಿತು ಹೆಚ್ಚು ಹೆದರಿದ್ದೆ
ನನಗೆ ಸೀತೆಯ ಪಾತ್ರ ಸಿಕ್ಕಿದಾಗ ನಾನು ಉತ್ಸುಕಳು ಮತ್ತು ನರ್ವಸ್ ಆಗಿದ್ದೆ. ನಾನು ಭಾಷೆಯ ಕುರಿತು ಹೆಚ್ಚು ಹೆದರಿದ್ದೆ, ಏಕೆಂದರೆ ನಾನು ಸಾಲುಗಳನ್ನು ಹೃದಯದಿಂದ ಕಲಿಯಬೇಕಿತ್ತು. ನಾನು ಆ ಸಾಲುಗಳನ್ನು ಸರಿಯಾಗಿ ಹೇಳಿದ್ದೇನೆ ಮತ್ತು ವಿರಾಮಗಳನ್ನು ಸರಿಯಾಗಿ ತೆಗೆದುಕೊಂಡಿದ್ದೇನೆ ಎಂಬುದನ್ನು ಖಚಿತಪಡಿಸಿಕೊಳ್ಳಬಯಸಿದ್ದೆ. ಆದರೆ ನಾನು ಸೆಟ್‍ಗೆ ಹೋದಾಗ ರಾಜಮೌಳಿ ಸರ್ ಪ್ರತಿಯೊಂದನ್ನು ಸಿದ್ಧವಾಗಿಟ್ಟಿದ್ದರು ಮತ್ತು ನನಗೆ ಎಲ್ಲವೂ ಅತ್ಯಂತ ಸುಗಮವಾಗುವಂತೆ ಮಾಡಿದ್ದರು. ಸಿನಿಮಾ ಮುಗಿದಾಗ, ಅದು ಮುಗಿಯಿತೆಂದು ನನಗೆ ಬೇಸರವಾಗಿತ್ತು. ಭವಿಷ್ಯದಲ್ಲಿ ಅವರೊಂದಿಗೆ ಇನ್ನಷ್ಟು ಸಿನಿಮಾಗಳನ್ನು ಮಾಡುವ ನಿರೀಕ್ಷೆ ಇದೆ” ಎಂದು ಆಲಿಯಾ ಹೇಳಿದ್ದಾರೆ.

ತೆಲುಗು ಭಾಷೆ ಕಲಿತೆ
ಡಬ್ಬಿಂಗ್ ಮಾಡುವ ಬದಲು, ತನ್ನ ಧ್ವನಿಯನ್ನೇ ಕೊಡಬೇಕು ಎಂಬ ಕಾರಣಕ್ಕಾಗಿ ಆಲಿಯಾ ತೆಲುಗು ಭಾಷೆಯನ್ನು ಕೂಡ ಕಲಿತಿದ್ದರು. ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ಜನವರಿ 6 ರಂದು ಬಿಡುಗಡೆ ಆಗಬೇಕಿತ್ತು ಮತ್ತು ಆರ್‍ಆರ್‍ಆರ್ ಸಿನಿಮಾದ ಜೊತೆ ಕ್ಲ್ಯಾಶ್ ಆಗುವುದರಲ್ಲಿತ್ತು.

ಇದನ್ನೂ ಓದಿ: ಜೂ. ಎನ್​ಟಿಆರ್ ಕನ್ನಡದ ಡಬಿಂಗ್ ನೋಡಿ ಖುಷಿಪಟ್ರಂತೆ ಅವರ ಕನ್ನಡಿಗ ತಾಯಿ

ಆದರೆ ಬನ್ಸಾಲಿ ಅವರು ತಮ್ಮ ತಂಡದೊಂದಿಗೆ ಈ ಚಿತ್ರವನ್ನು ಮುಂದೂಡಲು ನಿರ್ಧರಿಸಿ ಮತ್ತು ಫೆಬ್ರವರಿ 18 ರಂದು ಬಿಡುಗಡೆ ಮಾಡಲು ನಿರ್ಧರಿಸಿದರು. ಹಾಗೆ ಆಗಿದ್ದಲ್ಲಿ, ಆಲಿಯಾ ಮತ್ತು ಅಜಯ್ ದೇವಗನ್ ಇಬ್ಬರ ಚಿತ್ರಗಳು ಕ್ಲಾಶ್ ಆಗುತ್ತಿದ್ದವು. ಏಕೆಂದರೆ ಆ ಎರಡೂ ಚಿತ್ರಗಳಲ್ಲಿ ಅವರಿಬ್ಬರು ನಟಿಸಿದ್ದಾರೆ.
Published by:vanithasanjevani vanithasanjevani
First published: