Alia Bhatt: ಮೀಡಿಯಾ ಬಳಿ ಕ್ಷಮೆ ಕೇಳಿದ ಆಲಿಯಾ ಭಟ್! ಕಾರಣವೇನು?

Alia Bhatt: ನಟಿ ಆಲಿಯಾ ಭಟ್ ಇತ್ತೀಚೆಗೆ ಪಾಪ್ಪರಾಜಿಗಳಿಗೆ ಕ್ಷಮೆ ಕೇಳಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಸಂಭ್ರಮದಲ್ಲಿರೋ ನಟಿ ಈ ರೀತಿ ಮಾಡಲು ಕಾರಣ ಏನು ಗೊತ್ತೇ?

ಆಲಿಯಾ ಭಟ್

ಆಲಿಯಾ ಭಟ್

  • Share this:
ಆಲಿಯಾ ಭಟ್ (Alia Bhatt) ಪಾಪರಾಜಿಗೆ ಪೋಸ್ ಕೊಡದೆ ಹೋಗುವುದೇ ಇಲ್ಲ. ಎಷ್ಟೇ ಗಡಿಬಿಡಿ ಇದ್ದರೂ ನಟಿ ಮೀಡಿಯಾ ಜೊತೆ ಚೆನ್ನಾಗಿ ನಡೆದುಕೊಳ್ಳುತ್ತಾರೆ. ಆಲಿಯಾ ಇಮೇಜ್ ರಣಬೀರ್ ಕಪೂರ್​​ಗಿಂತ (Ranbir Kapoor) ಚೆನ್ನಾಗಿದೆ ಎಂದೇ ಹೇಳಬಹುದು. ಬಾಲಿವುಡ್​ನ (Bollywood) ಕ್ಯೂಟ್ ನಟಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪುಟ್ಟ ಕಂದನ ಸ್ವಾಗತಿಸಲು ಕಾಯುತ್ತಿರುವ ಆಲಿಯಾ ಭಟ್ ಇತ್ತೀಚೆಗೆ ರಿಲೀಸ್ ಆದ ಬ್ರಹ್ಮಾಸ್ತ್ರ (Brahmastra) ಸಕ್ಸಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಬಾಯ್ಕಾಟ್ ಬ್ರಹ್ಮಾಸ್ತ್ರ ಟ್ರೆಂಡ್​​ಗಳ ಮಧ್ಯೆಯೂ ಸಿನಿಮಾ ಸಖತ್ ಸೌಂಡ್ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಾಯ್ಕಾಟ್ ಆಗುವ ಟ್ರೆಂಡ್ ಜೋರಾಗಿತ್ತು. ಆದರೆ ಆ ಸಂದರ್ಭದಲ್ಲಿಯೂ ನೆಟ್ಟಿಗರು ಮಾತ್ರ ವಿ ಲವ್ ಯೂ ಆಲಿಯಾ ಎಂದು ಟ್ರೆಂಡ್ ಮಾಡಿದ್ದರು. ನಟಿ ಆಲಿಯಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ರೀತಿಯಲ್ಲಿಯೇ ಸುದ್ದಿ ಮಾಡುತ್ತಾರೆ.

ಈಗ ನಟಿ ಮಿಡಿಯಾ ಬಳಿ ಕ್ಷಮೆ ಕೇಳಿ ಮತ್ತೆ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ನಟಿ ಕ್ಷಮೆ ಕೇಳಿದ್ದು ಯಾಕೆ ಗೊತ್ತಾ? ತುಂಬಾ ಚಿಕ್ಕ ಕಾರಣಕ್ಕೆ ಕ್ಷಮೆ ಕೇಳಿದ್ದಾರೆ ಆಲಿಯಾ. ವಿಡಿಯೋ ಈಗ ವೈರಲ್ ಆಗಿದ್ದು ಆಲಿಯಾ ನಮಗೆ ಇದೇ ಕಾರಣಕ್ಕೆ ಇಷ್ಟವಾಗ್ತಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಕ್ಷಮಿಸಿ ಎಂದ ನಟಿ

ಕಾರಿನೊಳಗೆ ಕುಳಿತುಕೊಂಡೇ ಪಾಪ್ಸ್ ಜೊತೆ ಮಾತನಾಡಿದ ನಟಿ ಆಲಿಯಾ ಸಾರಿ, ನಾನು ನನಗೆ ನಡೆಯೋಕಾಗಲ್ಲ ಎಂದು ಹೇಳಿ ಅಲ್ಲಿಂದಲೇ ಸ್ಮೈಲ್ ಕೊಟ್ಟು ಕೈ ಬೀಸಿದ್ದಾರೆ. ನಟಿಯ ಈ ನಡವಳಿಕೆ ಮೀಡಿಯಾ ಹಾಗೂ ಫೋಟೊಗ್ರಫರ್​ಗಳ ಮನ ಗೆದ್ದಿದ್ದು ನಟಿ ಇದ್ದ ಹಾಗೆಯೇ ಅವರ ವಿಡಿಯೋ ಹಾಗೂ ಫೋಟೋಗಳನ್ನು ಶೂಟ್ ಮಾಡಿದ್ದಾರೆ.


ಇದನ್ನೂ ಓದಿ: Sushanth Singh Rajput: ಬಾಲಿವುಡ್ ನಾಶಮಾಡಲು ಇದೊಂದು ಅಸ್ತ್ರ ಸಾಕಂತೆ, ಸುಶಾಂತ್ ಸಿಂಗ್ ಸಹೋದರಿಯ ಶಾಕಿಂಗ್ ಟ್ವೀಟ್​

ಬ್ರಹ್ಮಾಸ್ತ್ರ ಸೂಪರ್ ಹಿಟ್

ಬಾಲಿವುಡ್ ಹಂಗಾಮಾ ಪ್ರಕಾರ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಭಾರತದಲ್ಲಿ ಇದುವರೆಗೆ ರೂ 143 ಕೋಟಿ ಗಳಿಸಿದ್ದು, ವಿದೇಶಗಳಲ್ಲಿ  ರೂ 65 ಕೋಟಿ ಗಳಿಸಿದೆ. ಸಿನಿಮಾದ ಜಾಗತಿಕ ಒಟ್ಟು ಕಲೆಕ್ಷನ್ ನಾಲ್ಕು ದಿನಗಳಲ್ಲಿ ರೂ 209 ಕೋಟಿಗೆ ತಲುಪಿದೆ. ಪದ್ಮಾವತ್ ($11.50 ಮಿಲಿಯನ್), ಧೂಮ್ 3 ($10.30 ಮಿಲಿಯನ್), ಸುಲ್ತಾನ್ ($9.60 ಮಿಲಿಯನ್), ದಿಲ್ವಾಲೆ ($8.80 ಮಿಲಿಯನ್) ಮತ್ತು ದಂಗಲ್ ($8.70 ಮಿಲಿಯನ್) ನಂತರ ವಿದೇಶದಲ್ಲಿ ಅತಿ ಹೆಚ್ಚು ದಾಖಲೆಯ ಗಳಿಕೆ ಮಾಡಿದ ಸಿನಿಮಾ ಆಗಿರಲಿದೆ ಬ್ರಹ್ಮಾಸ್ತ್ರ.

ನಿರಂತರ ಬಾಯ್ಕಾಟ್ ಕರೆಗಳು ಮತ್ತು ಹಲವಾರು ವಿವಾದಗಳ ನಡುವೆ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆ ಮಾಡಲಾಯಿತು. ಬ್ಯಾಕ್-ಟು-ಬ್ಯಾಕ್ ಸೋಲುಗಳ ನಂತರ ಹಿಂದಿ ಚಲನಚಿತ್ರೋದ್ಯಮದಲ್ಲಿ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡು ರಿಲೀಸ್ ಆದ ಸಿನಿಮಾ ಇದು. 410 ಕೋಟಿಯ ಸಿನಿಮಾ ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ಬಾಲಿವುಡ್ ಮತ್ತೆ  ಮಕಾಡೆ ಮಲಗದಿರಲು ಹಾಗೂ ದೊಡ್ಡ ಬಜೆಟ್ ಸಿನಿಮಾ ಹೀನಾಯ ಸೋಲು ಕಾಣದಿರುವುದು ಕೂಡಾ ಅಗತ್ಯವಾಗಿತ್ತು.

ಇದನ್ನೂ ಓದಿ: Jacqueline Fernandez: ಜಾಕ್ಲಿನ್​ಗೆ ಫ್ರೆಶ್ ನೋಟಿಸ್! ನಾಳೆ ವಿಚಾರಣೆ

ಅತಿಥಿ ಪಾತ್ರದಲ್ಲಿ ರಣಬೀರ್ ಕಪೂರ್ ಮಾಜಿ ಗೆಳತಿ ದೀಪಿಕಾ

ಬಹು ನಿರೀಕ್ಷೆಗಳ ನಡುವೆ ರಿಲೀಸ್ ಆದ ಸಿನಿಮಾ ಸದ್ಯ ನಿರ್ಮಾಪಕರು ಹಾಗೂ ಚಿತ್ರತಂಡಕ್ಕೆ ನಿರಾಳವನ್ನು ನೀಡಿದೆ. ಅಮಿತಾಬ್ ಬಚ್ಚನ್, ನಾಗಾರ್ಜುನ ಅಕ್ಕಿನೇನಿ, ಮೌನಿ ರಾಯ್, ಡಿಂಪಲ್ ಕಪಾಡಿಯಾ ಮತ್ತು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.
Published by:Divya D
First published: