Ali Fazal: ಮಿರ್ಜಾಪುರದ `ಗುಡ್ಡು’ ಭಾಯ್​ ಟು ಹಾಲಿವುಡ್​: ಜೆರಾರ್ಡ್ ಬಟ್ಲರ್ ಜೊತೆ ಅಲಿ ಫಜಲ್ ಆಕ್ಟಿಂಗ್​!

Ali Fazal: ವರದಿಯ ಪ್ರಕಾರ, ಕಂದಹಾರ್, ಸಂಪೂರ್ಣವಾಗಿ ಸೌದಿ ಅರೇಬಿಯಾದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರಪ್ರಥಮ ಹಾಲಿವುಡ್ ಸಿನಿಮಾವಾಗಿದೆ

ಅಲಿ ಫಜಲ್, ಸ್ಕಾಟಿಷ್ ನಟ ಜೆರಾರ್ಡ್

ಅಲಿ ಫಜಲ್, ಸ್ಕಾಟಿಷ್ ನಟ ಜೆರಾರ್ಡ್

  • Share this:
ಅಲಿ ಫಜಲ್ (Ali Fazal) ಈಗ ಬಾಲಿವುಡ್ (Bollywood) ಸಿನಿಮಾ ಮತ್ತು ಟಿವಿಯಲ್ಲಿ ಪ್ರಖ್ಯಾತ ಹೆಸರು. ವೆಬ್ ಸರಣಿಗಳ ಮೂಲಕ ಸಿಕ್ಕಾಪಟ್ಟೆ ಜನಪ್ರಿಯರಾಗಿರುವ ಇವರು, ಮಿರ್ಜಾಪುರ ವೆಬ್ ಸರಣಿಯ ‘ಗುಡ್ಡು’ ಪಾತ್ರ ವೀಕ್ಷಕರಿಂದ ವಿಶೇಷ ಪ್ರಶಂಸೆ ಗಳಿಸಿತ್ತು. ವಿಕ್ಟೋರಿಯಾ ಅಂಡ್ ಅಬ್ದುಲ್ ( Victoria & Abdul)ಹಾಗೂ ಡೆತ್ ಆಫ್ ನೈಲ್‍ನ (Death on the Nile)ಬಳಿಕ, ಅಲಿ ಫಜಲ್ ಮುಂದಿನ ಹಾಲಿವುಡ್ ಪ್ರಾಜೆಕ್ಟ್‌ಗೆ (Hollywood project)ಸಹಿ ಹಾಕಿದ್ದಾರೆ. ಅವರು ಅಮೆರಿಕನ್ ಚಿತ್ರ ನಿರ್ದೇಶಕ ರಿಕ್ ರೋಮನ್ ವಾಗ್ (Ric Roman Waugh) ಆ್ಯಕ್ಷನ್ ಸಿನಿಮಾ ಕಂದಹಾರ್‌ನಲ್ಲಿ (Kandahar) ನಟಿಸಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ.

ಟಾಮ್ ಹ್ಯಾರಿಸ್ ಪಾತ್ರ
ಜ್ಯಾಕ್ ನೈಡರ್ ಅವರ, ಐತಿಹಾಸಿಕ ಎಪಿಕ್ ಸಿನಿಮಾ 300 ಮತ್ತು ಹ್ಯಾಸ್ ಫಾಲನ್ ಸರಣಿಗಳ ಮೂಲಕ ಅಪಾರ ಜನ ಮನ್ನಣೆ ಗಳಿಸಿರುವ ಸ್ಕಾಟಿಷ್ ನಟ ಜೆರಾರ್ಡ್ ಬಟ್ಲರ್, ಈ ಸಿನಿಮಾದಲ್ಲಿ ಟಾಮ್ ಹ್ಯಾರಿಸ್ ಎಂಬ ಅಂಡರ್ ಕವರ್ ಸಿಐಎ ಏಜೆಂಟ್ ಪಾತ್ರ ನಿರ್ವಹಿಸುತ್ತಿದ್ದಾರೆ. ವರದಿಯ ಪ್ರಕಾರ, ಸಿನಿಮಾದ ಕಥೆಯಲ್ಲಿ ಹ್ಯಾರಿಸ್ ಪ್ರತಿಕೂಲ ಪ್ರದೇಶವೊಂದರಲ್ಲಿ ಸಿಲುಕಿಕೊಂಡಿರುತ್ತಾರೆ ಮತ್ತು “ಗಣ್ಯ ವಿಶೇಷ ಪಡೆಗಳನ್ನು” ಅಫ್ಘಾನ್ ನಗರದಿಂದ ಹೊರ ತಂದು, ಯಶಸ್ವಿಯಾಗಿ ತಪ್ಪಿಸಿಕೊಳ್ಳಲು ಭಾಷಾನುವಾದಕನೊಬ್ಬನ ಜೊತೆ ಕೈ ಜೋಡಿಸಬೇಕಿರುತ್ತದೆ.

ಇದನ್ನೂ ಓದಿ: KL Rahul: ಭಾವಿ ಮಾವ ಸುನೀಲ್​ ಶೆಟ್ಟಿ ಜೊತೆ ಕಾಣಿಸಿಕೊಂಡ ಕೆ.ಎಲ್​.ರಾಹುಲ್​: ಶೀಘ್ರ ಮೇವ ಕಲ್ಯಾಣ ಪ್ರಾಪ್ತಿರಸ್ತು!

ಕಂದಹಾರ್ ಸಿನಿಮಾದಲ್ಲಿ, ಡಿಸ್ನಿಯ ಲೈವ್ ಆ್ಯಕ್ಷನ್ ರಿಮೇಕ್‍ನಲ್ಲಿ ಸುಲ್ತಾನನ ಪಾತ್ರ ನಿರ್ವಹಿಸಿದ್ದ ಇರಾನಿಯನ್ ಅಮೆರಿಕನ್ ನಟ ನಾವಿದ್ ನೆಗಬಾನ್ ಕೂಡ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಚಿತ್ರಕಥೆ ಬರೆದಿರುವ ಮಿಶೆಲ್ ಲಾಫಾರ್ಚುನ್, ಗುಪ್ತಚರ ಆಪರೇಟಿವ್ ಆಗಿ ತಮ್ಮ ಸ್ವಂತ ಅನುಭವವನ್ನೇ ಬರಹದ ರೂಪಕ್ಕೆ ಇಳಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಿರ್ಮಾಣ
ರಿಕ್ ರೋಮನ್ ವಾಗ್ ಮತ್ತು ಜೆರಾರ್ಡ್ ಬಟ್ಲರ್ ಅವರ ಈ ಹಿಂದಿನ ಸಹಯೋಗಗಳ ಇತಿಹಾಸ ಗಮನಿಸಿ, ಆ ಮೂಲಕ ನಿರ್ಣಯಿಸುವುದಾದರೆ, ಚಿತ್ರದ ಕಥಾವಸ್ತುವು ಸಾಕಷ್ಟು ಸೂತ್ರ ರೂಪವನ್ನು ಧ್ವನಿಸುತ್ತದೆ. ಮಾಧ್ಯಮ ಒಂದರ ವರದಿಯ ಪ್ರಕಾರ, ಕಂದಹಾರ್, ಸಂಪೂರ್ಣವಾಗಿ ಸೌದಿ ಅರೇಬಿಯಾದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರಪ್ರಥಮ ಹಾಲಿವುಡ್ ಸಿನಿಮಾವಾಗಿದೆ.

ತಾರೆಯರ ದಂಡೇ
ಅಲಿ ಫಜಲ್ ಅವರ ಡೆತ್ ಆಫ್ ದ ನೈಲ್, ಅಗತಾ ಕ್ರಿಸ್ಟೀ ಅವರ ಅದೇ ಹೆಸರಿನ ಜನಪ್ರಿಯ ಕಾದಂಬರಿಯನ್ನು ಆಧರಿಸಿದ ಸಿನಿಮಾ. ಚಿತ್ರೀಕರಣ ಪೂರ್ಣಗೊಂಡರೂ ಡೆತ್ ಆಫ್ ದ ನೈಲ್ ಸಿನಿಮಾ ಬಿಡುಗಡೆಗೆ ಒಂದಲ್ಲ ಒಂದು ಅಡ್ಡಿ ಉಂಟಾಗುತ್ತಲೇ ಇದೆ. ಅದನ್ನು 2020ರ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸಾಂಕ್ರಾಮಿಕದ ಕಾರಣದಿಂದ ಮುಂದೂಡಲ್ಪಟ್ಟಿತ್ತು.

ಡೆತ್ ಆಫ್ ದ ನೈಲ್‍ನ ತಾರೆಯರಲ್ಲಿ ಒಬ್ಬರಾಗಿರುವ ಆರ್ಮಿ ಹ್ಯಾಮರ್ ಮೇಲೆ ಅತ್ಯಾಚಾರದ ಆರೋಪ ಹೊರಿಸಲ್ಪಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಇದು ಕೂಡ ಸಿನಿಮಾ ಬಿಡುಗಡೆಗೆ ತಡೆ ಉಂಟಾಗಲು ಒಂದು ಕಾರಣವಾಯಿತು. ಈ ಸಿನಿಮಾದಲ್ಲಿ ಗ್ಯಾಲ್ ಗಡೋಟ್ , ಅನ್ನಟೆ ಬೆನಿಂಗ್, ರಸೆಲ್ ಬ್ರಾಂಡ್, ಡಾನ್ ಫ್ರೆಂಚ್, ರೋಸ್ ಲೆಸ್ಲಿ, ಎಮ್ಮ ಮ್ಯಾಕಿ, ಸೋಫಿ ಒಕೊನೆಡೋ, ಜೆನ್ನಿಫರ್ ಸೌಂಡರ್ಸ್ ಮತ್ತು ಲೆಟಿಟಿಯಾ ರೈಟ್ ಮುಂತಾದ ಜನಪ್ರಿಯ ತಾರೆಯರ ದಂಡೇ ಚಿತ್ರದಲ್ಲಿ ನಟಿಸುತ್ತಿದೆ.

ಜನಪ್ರಿಯ ಮಿರ್ಜಾಪುರ ಸರಣಿ
ಕರಣ್‌ ಅಂಶುಮಾನ್‌ ಮತ್ತು ಪುನೀತ್‌ ಕೃಷ್ಣ ನಿರ್ಮಾಣದ ಮಿರ್ಜಾಪುರ ಸರಣಿಯಲ್ಲಿ ರಿತೇಶ್‌ ಸಿಧ್ವಾನಿ ಮತ್ತು ಫರ್ಹಾನ್‌ ಅಖ್ತರ್‌ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಪೂರ್ವ ಉತ್ತರ ಪ್ರದೇಶದ ಪಟ್ಟಣದಲ್ಲಿ ಭ್ರಷ್ಟಾಚಾರ, ಅಪರಾಧ, ಆಡಳಿತದ ವೈಫಲ್ಯ, ಮಾಫಿಯಾದ ಡಾನ್‌ಗಳ ಹಿಡಿತದ ಕಥಾವಸ್ತುವುಳ್ಳ ಸರಣಿ ಇದು.

ಇದನ್ನೂ ಓದಿ: Ranveer Singh‌:‌ ಸ್ಟೈಲ್‌ ಐಕಾನ್ ರಣವೀರ್‌ ಸಿಂಗ್ ಗಡ್ಡ ಮತ್ತು ಹೊಳೆಯುವ ಕೂದಲಿನ ರಹಸ್ಯ ಇಷ್ಟೇ ಅಂತೆ ನೋಡಿ...

ಈ ಎರಡನೇ ಅವತರಣಿಕೆಯಲ್ಲಿ ಮಿರ್ಜಾಪುರದ ಭೂಗತ ಲೋಕದ 'ರಾಜʼಪಟ್ಟಕ್ಕಾಗಿ ಗುಡ್ಡು ಪಂಡಿತ್ ಮತ್ತು ಮುನ್ನಾ ಭೈಯಾ ನಡೆಯುವ ಕಿತ್ತಾಟದ ಕಥೆಯಿದೆ. ಪಂಕಜ್‌ ತ್ರಿಪಾಠಿ, ದಿವ್ಯೇಂದು ಶರ್ಮಾ, ಅಲಿ ಫಝಲ್‌, ಶ್ವೇತಾ ತ್ರಿಪಾಠಿ, ರಸಿಕ ದುಗಲ್‌, ಹರ್ಷಿತಾ ಗೌರ್‌, ಶೀಬಾ ಚಡ್ಡಾ, ರಾಜೇಶ್‌ ತೈಲಂಗ್‌, ಅಮಿತ್‌ ಸಿಯಾಲ್‌, ಇಶಾ ತಲ್ವಾರ್‌, ಪ್ರಿಯಾಂಶು ಪೈನ್ಯುಲಿ, ಅಂಜುಂ ಶರ್ಮಾ ಮತ್ತು ವಿಜಯ್‌ ವರ್ಮಾ ತಾರಾಗಣದಲ್ಲಿದ್ದಾರೆ.
Published by:vanithasanjevani vanithasanjevani
First published: