ಬಾಲಿವುಡ್​ ವೆಡ್ಸ್​ ಹಾಲಿವುಡ್​: ನಿಕ್​-ಪ್ರಿಯಾಂಕಾ ಮದುವೆ ಪಕ್ಕಾ...!

news18
Updated:July 27, 2018, 12:41 PM IST
ಬಾಲಿವುಡ್​ ವೆಡ್ಸ್​ ಹಾಲಿವುಡ್​: ನಿಕ್​-ಪ್ರಿಯಾಂಕಾ ಮದುವೆ ಪಕ್ಕಾ...!
  • News18
  • Last Updated: July 27, 2018, 12:41 PM IST
  • Share this:
ನ್ಯೂಸ್​ 18 ಕನ್ನಡ 

ಬಹು ದಿನಗಳ ಗೆಳೆಯ ಹಾಗೂ ಅಮೆರಿಕನ್​ ಗಾಯಕ ನಿಕ್​ ಜೋನಸ್​ ಜತೆ ಪ್ರಿಯಾಂಕಾ ಮದುವೆ ಪಕ್ಕಾ ಆಗಿದೆ. ಕಳೆದ ಕೆಲ ತಿಂಗಳಿನಿಂದ ನಿಕ್​ ಜತೆ ಸುತ್ತಾಟದಲ್ಲಿದ್ದ ಪ್ರಿಯಾಂಕಾ, ಇತ್ತೀಚೆಗಷ್ಟೆ ನಿಕ್​ ಜೊತೆ ಭಾರತಕ್ಕೂ ಬಂದಿದ್ದರು.

ಈ ಭೇಟಿ ವೇಳೆ ನಿಕ್​ ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಅವರನ್ನು ಭೇಟಿ ಮಾಡಿದ್ದು, ಪಿಗ್ಗಿ ಕುಟುಂಬದೊಂದಿಗೆ ಗೋವಾದಲ್ಲಿ ಕೆಲಕಾಲ ಸಮಯ ಕಳೆದಿದ್ದರು. ಈ ವೇಳೆ ಇವರಿಬ್ಬರ ಮದುವೆ ವಿಚಾರವಾಗಿ ಎರಡೂ ಮನೆಯವರು ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿತ್ತು.

ಜುಲೈ 18ರಂದು ಲಂಡನ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಪ್ರಿಯಾಂಕಾ ಅಂದೇ ನಿಕ್​ ಜತೆ ಉಂಗುರು ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಪೀಪಲ್​ ನಿಯತಕಾಲಿಕೆಯೊಂದು ವರದಿ ಮಾಡಿದೆ. ಆ ವರದಿ ಪ್ರಕಾರ ಪಿಗ್ಗಿ-ನಿಕ್​ ಸದ್ಯದಲ್ಲೇ ವಿವಾಹವಾಗಲಿ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಈಗ ಈ ವಿಷಯಕ್ಕೆ ಪುಷ್ಠಿ ನೀಡುವಂತೆ ಪಿಗ್ಗಿ ಸಲ್ಮಾನ್​ ಖಾನ್​ ಅಭಿನಯಿಸುತ್ತಿರುವ 'ಭಾರತ್'​ ಸಿನಿಮಾದಿಂದ ಹೊರ ನಡೆದಿದ್ದಾರೆ. ಹೌದು 'ಭಾರತ್'​ ಸಿನಿಮಾದಲ್ಲಿ ಅಭಿನಯಿಸಲೆಂದೇ ಪ್ರಿಯಾಂಕಾ ಭಾರತಕ್ಕೆ ಬಂದಿದ್ದರು. ಆದರೆ ನಿಕ್​ ಜತೆ ಸಮಯ ಕಳೆಯಲು ಈ ಸಿನಿಮಾದಿಂದ ಹೊರ ಹೋಗುತ್ತಿರುವುದಾಗಿ ಪಿಗ್ಗಿ ತಿಳಿಸಿದ್ದಾರಂತೆ.

ಹೌದು ಈ ವಿಷಯವನ್ನು 'ಭಾರತ್​' ಸಿನಿಮಾದ ನಿರ್ದೇಶಕ ಅಲಿ ಅಬ್ಬಾಸ್​ ಜಫರ್​ ಖುದ್ದು ಹೇಳಿಕೊಂಡಿದ್ದಾರೆ. 'ಪ್ರಿಯಾಂಕಾ ಅವರ ಈ ನಿರ್ಧಾರದಿಂದ ಖುಷಿಯಾಗಿದೆ. ಅವರು ಇನ್ನೂ 'ಭಾರತ್​' ಸಿನಿಮಾದ ತಂಡದೊಂದಿಗೆ ಇಲ್ಲ. ಅವರ ಹೊಸ ಜೀವನಕ್ಕೆ ಚಿತ್ರ ತಂಡದ ಪರವಾಗಿ ಶುಭ ಕೋರುತ್ತಿದ್ದೇವೆ' ಎಂದು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಮುಂಬೈ ಮಿರರ್​ ವರದಿ ಮಾಡಿರುವಂತೆ ಪಿಗ್ಗಿ ಮಂಗಳವಾರ ತಮ್ಮ ವಿವಾಹದ ವಿಷಯವನ್ನು ಮಂಗಳವಾರ 'ಭಾರತ್​' ಸಿನಿಮಾ ತಂಡದೊಂದಿಗೆ ಹಂಚಿಕೊಂಡಿದ್ದಾರಂತೆ.

ಆದರೆ ಪ್ರಿಯಾಂಕಾ ಚೋಪ್ರಾ 'ಭಾರತ್​' ಸಿನಿಮಾದಿಂದ ಹೊರ ನಡೆಯಲು ಕಾರಣ ಹಾಲಿವುಡ್​ನಲ್ಲಿ ಬೇರೆ ಯಾವುದೋ ದೊಡ್ಡ ಅವಕಾಶ ಸಿಕ್ಕಿರಬೇಕು ಎಂದು ಕೆಲವೊಂದು ಮೂಲಗಳು ಹೇಳುತ್ತಿವೆ. ಆದರೆ ಮನರಂಜನೆ ವೆಬ್​ಸೈಟ್​ ಒಂದು ವರದಿ ಮಾಡಿರುವ ಪ್ರಕಾರ ನಿಕ್​ ಜೋನಸ್​ ಜತೆ ವಿವಾಹ ನಿಶ್ಚಯವಾಗಿರುವುದಕ್ಕೆ ಪಿಗ್ಗಿ ಈ ಸಿನಿಮಾದಿಂದ ಹೊರ ನಡೆದಿದ್ದಾರಂತೆ.

'ಭಾರತ್'​ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಜತೆ ದಿಶಾ ಪಠಾನಿ ಸಹ ಅಭಿನಯಿಸುತ್ತಿದ್ದು, ಸಲ್ಲು ಈ ಸಿನಿಮಾದಲ್ಲಿ ಬೈಕ್​ ಸ್ಟಂಟ್​ ಮ್ಯಾನ್​ ಪಾತ್ರ ನಿರ್ವಹಿಸಲಿದ್ದಾರೆ.

 
First published: July 27, 2018, 12:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading