2015 ರಿಂದ 2021 ರವರೆಗೆ ಬದಲಾದ ಮೇಕಪ್​ ಜಗತ್ತಿನ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ ಅಲಯಾ ಎಫ್‌: ನೆಟ್ಟಿಗರು ಫಿದಾ

ನಟಿ ಅಲಯಾ ಎಫ್ ಸ್ವತಃ ತಾವೇ ಮೇಕಪ್ ಮಾಡಿಕೊಳ್ಳುವ ಮೂಲಕ ಕಳೆದ 5 ವರ್ಷದಲ್ಲಿ ಮೇಕಪ್ ಜಗತ್ತಿನಲ್ಲಿ ಎಷ್ಟೆಲ್ಲಾ ರೆವಲ್ಯೂಷನ್​ ಆಗಿದೆ ಎನ್ನುವುದನ್ನು ತೋರಿಸಿದ್ದಾರೆ.

Alaya F (Photo:Google)

Alaya F (Photo:Google)

  • Share this:
ಸ್ಟೈಲ್ ಐಕಾನ್, ನಟಿ ಅಲಯಾ ಎಫ್‌ ತಮ್ಮ ಇನ್​ಸ್ಟಾ ಗ್ರಾಂ ಖಾತೆಯಲ್ಲಿ ಡಿಫರೆಂಟ್ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು ಫ್ಯಾಷನ್​, ಮೇಕಪ್ ಪ್ರಿಯರ ಗಮನ ಸೆಳೆಯುತ್ತಿದೆ. ಹೌದು, 2015 ರಿಂದ ಇಲ್ಲಿಯವರೆಗೆಹೊಸ ಮೇಕಪ್ ಪ್ರಾಡಕ್ಟ್​​​ ಹಾಗೂ ಮೇಕಪ್​​ ಮಾಡುವ ಹೊಸ ವಿಧಾನಗಳಲ್ಲಿ ಎಷ್ಟೆಲ್ಲಾ ಅದ್ಭುತ ಬದಲಾವಣೆಗಳಾಗಿದೆ? ಆಕೆಯ ಮೇಕಪ್​ ಜಗತ್ತು ಹೇಗೆಲ್ಲಾ ವಿಕಾಸವಾಗುತ್ತಾ ಬಂದಿದೆ ಎನ್ನುವ ಝಲಕ್ ಒಳಗೊಂಡ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ನಟಿ ಅಲಯಾ ಎಫ್ ಸ್ವತಃ ತಾವೇ ಮೇಕಪ್ ಮಾಡಿಕೊಳ್ಳುವ ಮೂಲಕ ಕಳೆದ 5 ವರ್ಷದಲ್ಲಿ ಮೇಕಪ್ ಜಗತ್ತಿನಲ್ಲಿ ಎಷ್ಟೆಲ್ಲಾ ರೆವಲ್ಯೂಷನ್​ ಆಗಿದೆ ಎನ್ನುವುದನ್ನು ತೋರಿಸಿದ್ದಾರೆ. 23 ವರ್ಷದ ಈ ನಟಿ ತಮ್ಮ ಮುಖದ ಮಧ್ಯ ಭಾಗಕ್ಕೆ ಒಂದು ಲಂಬವಾದ ಗೆರೆಯನ್ನು ಎಳೆದುಕೊಂಡು ಒಂದು ಭಾಗದಲ್ಲಿ 2021 ರ ಮೇಕಪ್ ಪ್ರದರ್ಶಿಸಿದರೆ  ಇನ್ನೊಂದೆಡೆ 2015 ರ ಮೇಕಪ್ ಟ್ರೆಂಡ್​​ ಹೇಗಿತ್ತು ಅನ್ನೋದನ್ನ ಆ ಕಾಲಘಟ್ಟದ ಪ್ರಾಡಕ್ಟ್​ಗಳನ್ನು ಬಳಸಿಯೇ ವ್ಯತ್ಯಾಸಗಳನ್ನು ತೋರಿಸಿದ್ದಾರೆ.

ಕನ್ಸೀಲರ್ ಹಚ್ಚುವ ಬೇಸಿಕ್ ಮೇಕಪ್ ನಿಂದ ಆರಂಭವಾಗುವ ಈ ವೀಡಿಯೋ ದಲ್ಲಿ ಎರಡು ಕಡೆ ಫೌಂಡೇಷನ್​​ ಹಚ್ಚುವ ಮೂಲಕ 2021 ರಲ್ಲಿ ಫೌಂಡೇಷನ್ ಹೇಗಿದೆ ಅನ್ನೋದನ್ನ ತೋರಿಸುತ್ತಾರೆ. ಆ ನಂತರ 2015 ರಲ್ಲಿ ಹೆಚ್ಚೆಚ್ಚು ಫೌಂಡೇಷನ್ ಹಚ್ಚುತ್ತಾ ಸಾಗುತ್ತಾರೆ. ಇದರಲ್ಲಿ ಅಲಯಾ 2015 ನಲ್ಲಿ ಹೆಚ್ಚು ಫೌಂಡೇಷನ್ ಹಚ್ಚಿಕೊಳ್ಳುವುದನ್ನು ನಾವು ಗಮನಿಸಬಹುದು. 2021 ಕಡಿಮೆ ಫೌಂಡೇಷನ್ ಕಾಣುತ್ತದೆ. ಇದಾದ ನಂತರ ಎರಡು ಬದಿಯಲ್ಲೂ ಪೌಡರ್ ಹಚ್ಚಿಕೊಳ್ಳುತ್ತಾರೆ.


View this post on Instagram


A post shared by ALAYA F (@alayaf)


ಈ ಮೇಕಪ್ ಟ್ವಿಸ್ಟ್​​ ಹೀಗೆ ಮುಂದುವರೆಯುತ್ತದೆ. ಆ ನಂತರ ಎರಡು ಬದಿಯ ಫೇಸ್​ಗೆ ಹೈಲೈಟರ್ ಹಚ್ಚಿಕೊಳ್ಳುತ್ತಾರೆ. ಮತ್ತೆ ಎರಡು ಬದಿಯ ಫೇಸ್​​ಗೂ ಕಾಂಟೋರಿಂಗ್ ಮಾಡಿಕೊಳ್ಳುತ್ತಾರೆ. ಫೇಸ್​ ಮೇಕಪ್​ ಬಳಿಕ ಐ ಮೇಕಪ್​ ಮಾಡಿಕೊಳ್ಳುವ ಆಲ್ಯಾ 2015ರ ಭಾಗದಲ್ಲಿ ಅತಿ ಗಾಢವಾದ ಬೋಲ್ಡ್​ ಐ ಲೈನರ್ ಹಚ್ಚಿ ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ 2021 ರ ಐ ಮೇಕಪ್ ಬಹಳ ಸೆಟಲ್ ಆಗಿರುತ್ತದೆ. ನಂತರ ಲಿಪ್​ ಮೇಕಪ್ ಮಾಡಿಕೊಳ್ಳುವ ಅಲಯಾ 2015 ರ ಭಾಗದಲ್ಲಿ ಕಡುಗೆಂಪು ಬಣ್ಣದ ಬೋಲ್ಡ್ ಲಿಪ್​ಸ್ಟಿಕ್ ಹಚ್ಚಿಕೊಳ್ಳುತ್ತಾರೆ. ಆದರೆ 2021 ರ ಲಿಪ್​ಸ್ಟಿಕ್​ ಬಹಳ ಮಿನಿಮಲ್ ಆಗಿದ್ದು ಸಿಂಪಲ್​ ಲುಕ್​ನಿಂದ ಕಂಗೊಳಿಸುತ್ತದೆ.

ಈ ಪೋಸ್ಟ್​ಗೆ '2015 ರಲ್ಲಿ' ಎಂದು ಕ್ಯಾಪ್ಷನ್​ ಹಾಕಿದ್ದ ಅಲಯಾ, ಆಗ ಮೇಕಪ್ ಆಯ್ಕೆ ಬಹಳ ತ್ರಾಸದಾಯಕ ಅನ್ನಿಸುತ್ತಿತ್ತು. ಆದರೆ ಕಳೆದ ಅಷ್ಟೂ ವರ್ಷಗಳಲ್ಲಿ ನಾನು ಮೇಕಪ್​ ಬಗ್ಗೆ ಹಂತ ಹಂತವಾಗಿ ಸಾಕಷ್ಟು ಕಲಿತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಇನ್​ಸ್ಟಾ ಗ್ರಾಂ ರೀಲ್​ನಲ್ಲಿ ಆಕೆಯ ಮೇಕಪ್​ ಲುಕ್​ನಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗಿವೆ ಎನ್ನುವುದನ್ನು ಗಮನಿಸಬಹುದು. ಒಟ್ಟಿನಲ್ಲಿ ಎರಡು ವರ್ಷಗಳು ಕೂಡ ಬಹಳ ವಿಭಿನ್ನವಾಗಿದ್ದು, ವಿಶಿಷ್ಟವಾಗಿದೆ. ಎರಡೂ ಕೂಡ ಆಕೆಯ ಬದುಕಿನ ಬಹು ಮುಖ್ಯ ಅಂಶಗಳು ಎನ್ನುವುದನ್ನು ತಿಳಿಸಿದ್ದಾರೆ.

ಸೋಮವಾರ ಶೇರ್​ ಮಾಡಿದ ಈ ಪೋಸ್ಟ್​ 56,114 ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅಲಯಾ ಅವರ ಈ ಪೋಸ್ಟ್​ಗೆ ಗಾಯಕಿ ಲೀಸಾ ಮಿಶ್ರಾ ' ಹ್ಹಹ್ಹಹ್ಹಹ್ಹ... ನನ್ನದು ಪೆನ್ಸಿಲ್​ನಷ್ಟು ಸೂಕ್ಷ್ಮವಾದ ಐಬ್ರೋ ಆಗಿದ್ದು, ಲೋವರ್ ಲ್ಯಾಶ್​ ಐ ಲೈನರ್​' ಎಂದು ಕಮೆಂಟಿಸಿದ್ದಾರೆ.
First published: