Allu Arjun: ಮತ್ತೊಂದು ಹೊಸ ದಾಖಲೆ ಬರೆದ ಅಲ್ಲು ಅರ್ಜುನ್​ ಸ್ಟೆಪ್​ ಹಾಕಿರುವ ಬುಟ್ಟ ಬೊಮ್ಮಾ ಹಾಡು

Butta Bomma Song: ಅಲ್ಲು ಅರ್ಜುನ್​ ಹಾಗೂ ತ್ರಿವಿಕ್ರಮ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದ ಅಲಾ ವೈಕುಂಠಪುರಂಲೋ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಸಿನಿಮಾದ ಹಾಡುಗಳು ಸಹ ಪ್ರೇಕ್ಷಕರ ಮನ ಗೆದಿದ್ದವು. ಕಲೆಕ್ಷನ್​ ವಿಷಯದಲ್ಲಿ ಈಗಾಗಲೇ ದಾಖಲೆ ಮಾಡಿರುವ ಈ ಸಿನಿಮಾ, ಈಗ ಹಾಡಿನ ವಿಷಯದಲ್ಲಿ ಮತ್ತೊಂದು ಹೊಸ ರೆಕಾರ್ಡ್​ ನಿರ್ಮಿಸಿದೆ.

Anitha E | news18-kannada
Updated:August 1, 2020, 7:14 PM IST
Allu Arjun: ಮತ್ತೊಂದು ಹೊಸ ದಾಖಲೆ ಬರೆದ ಅಲ್ಲು ಅರ್ಜುನ್​ ಸ್ಟೆಪ್​ ಹಾಕಿರುವ ಬುಟ್ಟ ಬೊಮ್ಮಾ ಹಾಡು
ಅಲಾ ವೈಕುಂಠಪುರಂಲೋ ಸಿನಿಮಾದ ಪೋಸ್ಟರ್​
  • Share this:
ಅಲ್ಲು ಅರ್ಜುನ್​ ಅಭಿನಯದ ಸಿನಿಮಾ ಅಲಾ ವೈಕುಂಠಪುರಂಲೋ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಿತ್ತು. ಈ ಚಿತ್ರದ ಹಾಡುಗಳು ರಿಲೀಸ್ ಆದಾಗಿನಿಂದ ಇಲ್ಲಿಯವರೆಗೂ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸುತ್ತಿವೆ. ದಾಖಲೆಯ ಮೇಲೆ ದಾಖಲೆ ಬರೆಯುತ್ತಿವಎ. 

ಅಲ್ಲು ಅರ್ಜುನ್​ ಹಾಗೂ ತ್ರಿವಿಕ್ರಮ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದ ಅಲಾ ವೈಕುಂಠಪುರಂಲೋ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಸಿನಿಮಾದ ಹಾಡುಗಳು ಸಹ ಪ್ರೇಕ್ಷಕರ ಮನ ಗೆದಿದ್ದವು. ಕಲೆಕ್ಷನ್​ ವಿಷಯದಲ್ಲಿ ಈಗಾಗಲೇ ದಾಖಲೆ ಮಾಡಿರುವ ಈ ಸಿನಿಮಾ, ಈಗ ಹಾಡಿನ ವಿಷಯದಲ್ಲಿ ಮತ್ತೊಂದು ಹೊಸ ರೆಕಾರ್ಡ್​ ನಿರ್ಮಿಸಿದೆ.

Ala Vaikuntapurramuloo movie 36 days worldwide collections and Allu Arjun created history
ಅಲ್ಲು ಅರ್ಜುನ್


ಅಲಾ ವೈಕುಂಠಪುರಂಲೋ ಸಿನಿಮಾದ ಹಾಡುಗಳಲ್ಲಿ ರಾಮುಲೊ ರಾಮುಲಾ ಹಾಗೂ ಬುಟ್ಟ ಬೊಮ್ಮ ಹೆಚ್ಚು ಖ್ಯಾತಿ ಪಡೆದವು. ಅದರಲ್ಲೂ ಅಲ್ಲು ಅರ್ಜುನ್​ ಸಖತ್ ಸ್ಟೆಪ್ ಹಾಕಿರುವ ಬುಟ್ಟ ಬೊಮ್ಮ  ವಿಡಿಯೋ ಹಾಡು ಬಿಡುಗೆಯಾದಾಗಲೇ ಯೂಟ್ಯೂಬ್​ನಲ್ಲಿ ಕೋಟಿ ಕೋಟಿ ವೀಕ್ಷಣೆ ಪಡೆದುಕೊಂಡಿತ್ತು.ಈಗ ಇದೇ ಹಾಡಿಗೆ ಮಾರ್ಚ್​ ತಿಂಗಳಿನಿಲ್ಲಿ ಯೂಟ್ಯೂಬ್​ನಲ್ಲಿ 19 ಕೋಟಿಗೂ ಅಧಿಕ ವೀಕ್ಷಣೆ ಸಿಕ್ಕಿತ್ತು. 200 ಮಿಲಿಯನ್​ಗೆ ಅಂದರೆ 20 ಕೋಟಿಗೆ ಬಹಳ ಹತ್ತಿರದಲ್ಲಿತ್ತು.



ಥಮನ್​ ಸಂಗೀತ ನಿರ್ದೇಶನದ ಈ ಹಾಡನ್ನು ಅರ್ಮಾನ್ ಮಲ್ಲಿಕ್​ ಹಾಡಿದ್ದಾರೆ. ಈ ಹಾಡು ಈಗ ಹೊಸ ದಾಖಲೆ ಮಾಡಿದೆ. ಹೌದು, ಈ ಹಾಡಿಗೆ ಈಗ ಯೂಟ್ಯೂಬ್​ನಲ್ಲಿ 30 ಕೋಟಿ ವೀಕ್ಷಣೆ ಸಿಕ್ಕಿದ್ದು, 150 ಕೋಟಿಗೂ ಹೆಚ್ಚು ಶೇರ್ ಆಗಿದೆ. ಈ ವಿಷಯವನ್ನು ಥಮನ್​ ಹಂಚಿಕೊಂಡಿದ್ದಾರೆ.



ತೆಲುಗಿನಲ್ಲಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ವೀಕ್ಷಣೆ ಪಡೆದ ಹಾಡು ಇದಾಗಿದೆ. ಈ ಹಾಡಿಗೆ ಲೋಕಲ್​ನಿಂದ ​ಜಾಗತಿಕ ಮಟ್ಟದವರೆಗೆ ಅಭಿಮಾನಿಗಳಿದ್ದಾರೆ.ಇತ್ತೀಚೆಗಷ್ಟೆ ಕ್ರಿಕೆಟಿಗ ಡೇವಿಡ್​ ವಾರ್ನರ್​ ತಮ್ಮ ಹೆಂಡತಿ ಹಾಗೂ ಮಗುವಿನೊಂದಿಗೆ ಡ್ಯಾನ್ಸ್​ ಮಾಡಿ ವಿಡಿಯೋ ಹಂಚಿಕೊಂಡಿದ್ದರು. ನಟಿ ಶಿಲ್ಪಾ ಹಾಗೂ ತಂಗಿ ಶಮಿತಾ ಶೆಟ್ಟಿ ಸಹ ಈ ಇದೇ ಹಾಡಿಗೆ ಟಿಕ್​ಟಾಕ್​ನಲ್ಲಿ ಸ್ಟೆಪ್​ ಹಾಕಿದ್ದರು.










View this post on Instagram





It’s tiktok time #buttabomma get out of your comfort zone people lol @candywarner1


A post shared by David Warner (@davidwarner31) on






ವಿಶ್ವದಾದ್ಯಂತ ಖ್ಯಾತಿ ಪಡೆದ ನೂರು ವಿಡಿಯೋ ಹಾಡುಗಳಲ್ಲಿ ಬುಟ್ಟ ಬೊಮ್ಮ 15ನೇ ಸ್ಥಾನದಲ್ಲಿದೆಯಂತೆ. ಈ ಬಗ್ಗೆ ಇಂಗ್ಲಿಷ್​ ಪತ್ರಿಕೆಯೊಂದು ವರದಿ ಮಾಡಿದ್ದು, ಈ ಬಗ್ಗೆ ಸಂಗೀತ ನೀರ್ದೇಶಕ ಥಮನ್​  ಈ ಹಿಂದೆ ಟ್ವೀಟ್​ ಮಾಡಿದ್ದರು.

WE made it again !! ♥️#ButtaBomma enters into no #15 in #topglobalvideos #sensationalbuttabomma 🎧🎬✍️



ತೆಲುಗು ಹಾಡೊಂದು ವಿಶ್ವ ಮಟ್ಟದಲ್ಲಿ ದಾಖಲೆ ನಿರ್ಮಿಸಿರುವುದು ನಿಜಕ್ಕೂ ಖುಷಿಯ ವಿಷಯ. ಇನ್ನು ಈ ಸಿನಿಮಾದ ಆಲ್ಬಂನಲ್ಲಿರುವ ವಿಡಿಯೋ ಹಾಡುಗಳಿಗೆ ಯೂಟ್ಯೂಬ್​ನಲ್ಲಿ ಒಟ್ಟಾರೆ ನೂರು ಕೋಟಿ ಅಂದರೆ ಒಂದು ಬಿಲಿಯನ್​ ವೀಕ್ಷಣೆ ಸಿಕ್ಕಿದೆಯಂತೆ
Published by: Anitha E
First published: August 1, 2020, 7:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading