Arjun Reddy Part 2: 'ಅರ್ಜುನ್​ ರೆಡ್ಡಿ 2'ಗೂ ಅಲ್ಲು ಅರ್ಜುನ್​ಗೂ ಸಂಬಂಧ ಇದೆ ಎನ್ನುತ್ತಿದೆ ಈ ವಿಡಿಯೋ..!

Deleted Scenes Of Ala Vaikuntapuramloo: ಯಾವುದೇ ಸಿನಿಮಾ ಆದರೂ ತೆರೆ ಮೇಲೆ ಬರುವ ಮೊದಲು ಕತ್ತರಿ ಪ್ರಯೋಗಕ್ಕೆ ಒಳಗಾಗಿಯೇ ಇರುತ್ತದೆ. ಅಂದರೆ ಸಿನಿಮಾಗಳು ಎಡಿಟ್​ ಆಗದೆ ರಿಲೀಸ್​ ಆಗುವುದೇ ಇಲ್ಲ. ಎಡಿಟ್​ ಮಾಡುವ ವೇಳೆ ಎಷ್ಟೋ ಸಲ ಹಾಡುಗಳನ್ನೇ ಸಿನಿಮಾದಿಂದ ತೆಗೆದು ಹಾಕಲಾಗುತ್ತದೆ. ಹೀಗಿರುವಾಗ ದೃಶ್ಯಗಳು ಯಾವ ಲೆಕ್ಕ. ಆದರೆ ತೆಗೆದು ಹಾಕಲಾದ ದೃಶ್ಯಗಳು ಯಾವುವು ಅಂತ ತಿಳಿಯೋ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇರುತ್ತದೆ.

ಒಟ್ಟಿನಲ್ಲಿ ಇದೇ ಮೊದಲ ಬಾರಿ ಸ್ಟೈಲಿಷ್ ಲುಕ್ ಬಿಟ್ಟು ರಗಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಅಲ್ಲು ಅರ್ಜುನ್ ಅವರ ಪುಷ್ಪ  ಕಳೆದೊಂದು ತಿಂಗಳಿಂದ ಟಾಲಿವುಡ್​ನ ಟಾಕ್​ ಆಫ್ ದ ಟೌನ್ ಆಗಿರುವುದಂತು ಸುಳ್ಳಲ್ಲ.

ಒಟ್ಟಿನಲ್ಲಿ ಇದೇ ಮೊದಲ ಬಾರಿ ಸ್ಟೈಲಿಷ್ ಲುಕ್ ಬಿಟ್ಟು ರಗಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಅಲ್ಲು ಅರ್ಜುನ್ ಅವರ ಪುಷ್ಪ ಕಳೆದೊಂದು ತಿಂಗಳಿಂದ ಟಾಲಿವುಡ್​ನ ಟಾಕ್​ ಆಫ್ ದ ಟೌನ್ ಆಗಿರುವುದಂತು ಸುಳ್ಳಲ್ಲ.

  • Share this:
- ಅನಿತಾ ಈ,

ಅಲ್ಲು ಅರ್ಜುನ್​  'ಅಲಾ ವೈಕುಂಠಪುರಂಲೋ' ಸಿನಿಮಾ ಆಲ್​ ಟೈಮ್​ ಇಂಡಸ್ಟ್ರಿ ಹಿಟ್​ ಎಂದೇ ಕರೆಯಲಾಗುತ್ತಿರುವ ಬ್ಲಾಕ್​ಬಸ್ಟರ್​. ಕುಟುಂಬ ಸಮೇತ ಚಿತ್ರಮಂದಿರಕ್ಕೆ ತೆರಳಿ ಎಂಜಾಯ್​ ಮಾಡುವಂತಹ ಚಿತ್ರವನ್ನು ಭಾಷೆಯ ಮಿತಿಯಿಲ್ಲದೆ ಪ್ರೇಕ್ಷಕರು ನೋಡುವ ಮೂಲಕ ಹಿಟ್​ ಮಾಡಿದ್ದಾರೆ.

ಯಾವುದೇ ಸಿನಿಮಾ ಆದರೂ ತೆರೆ ಮೇಲೆ ಬರುವ ಮೊದಲು ಕತ್ತರಿ ಪ್ರಯೋಗಕ್ಕೆ ಒಳಗಾಗಿಯೇ ಇರುತ್ತದೆ. ಅಂದರೆ ಸಿನಿಮಾಗಳು ಎಡಿಟ್​ ಆಗದೆ ರಿಲೀಸ್​ ಆಗುವುದೇ ಇಲ್ಲ. ಎಡಿಟ್​ ಮಾಡುವ ವೇಳೆ ಎಷ್ಟೋ ಸಲ ಹಾಡುಗಳನ್ನೇ ಸಿನಿಮಾದಿಂದ ತೆಗೆದು ಹಾಕಲಾಗುತ್ತದೆ. ಹೀಗಿರುವಾಗ ದೃಶ್ಯಗಳು ಯಾವ ಲೆಕ್ಕ. ಆದರೆ ತೆಗೆದು ಹಾಕಲಾದ ದೃಶ್ಯಗಳು ಯಾವುವು ಅಂತ ತಿಳಿಯೋ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇರುತ್ತದೆ.



 




View this post on Instagram




 

#AlaVaikunthapurramulooTeaser Glimpse!! Teaser out on 11th Dec at 4:05PM.


A post shared by Allu Arjun (@alluarjunonline) on





ಈಗ 'ಅಲಾ ವೈಕುಂಠಪುರಂಲೋ' ಚಿತ್ರತಂಡ ಸಹ ಡಿಲೀಟೆಡ್​ ಸೀನ್​ನ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿದೆ. ಅಲ್ಲು ಅರ್ಜುನ್​ ಯೂಟ್ಯೂಬ್​ ಚಾನಲ್​ನಲ್ಲಿ ನಿನ್ನೆ ಈ ವಿಡಿಯೋ ರಿಲೀಸ್​ ಮಾಡಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 10.63 ಲಕ್ಷ ವೀಕ್ಷಣೆ ಸಿಕ್ಕಿದೆ.



ಇಂತಹ ದೃಶ್ಯವನ್ನು ಸಿನಿಮಾದಿಂದ ತೆಗೆದು ಹಾಕಿದ್ದಕ್ಕೆ ಬನ್ನಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇಂತಹ ಕ್ಯೂಟ್​ ಹಾಗೂ ಸೂಪರ್​ ಸೀನ್​ ಅನ್ನು ಹೇಗೆ ಸಿನಿಮಾದಿಂದ ತೆಗೆದು ಹಾಕಿದಿರಿ ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಇನ್​ಸ್ಟಾಗ್ರಾಂನಲ್ಲಿ ಬೋಲ್ಡ್​ ಫೋಟೋ ಪೋಸ್ಟ್ ಮಾಡಿ ಕಮೆಂಟ್​ ಮಾಡದಂತೆ ಸೆಟ್ಟಿಂಗ್​ ಬದಲಾಯಿಸಿದ ಐಂದ್ರಿತಾ ರೇ..!

ಇನ್ನೂ ದೃಶ್ಯದಲ್ಲಿ ಸಾಫ್ಟ್​ ಆಗಿ ಕಾಣುವ ರಾಜ್​ ಪಾತ್ರಧಾರಿಯ ಇನ್ನೊಂದು ಮುಖವನ್ನು ಬಯಲು ಮಾಡುವ ವಿಡಯೋವನ್ನು ನಾಯಕ ಬಂಟು ಶೂಟ್​ ಮಾಡಿರುತ್ತಾನೆ. ಅದನ್ನೇ ಸಿನಿಮಾ ತೆಗೆದರೆ ಅರ್ಜುನ್​ ರೆಡ್ಡಿ ಪಾರ್ಟ್​ 2 ಆಗುತ್ತದೆ ಎನ್ನುವ ಡೈಲಾಗ್​ ಈ ವಿಡಿಯೋದಲ್ಲಿದೆ. ಈ ಡೈಲಾಗ್​ ಈ ವಿಡಯೋದ ಹೈಲೈಟ್​.

Meghana Raj: ಮತ್ತೆ ಮದುಮಗಳಾದ ಮೇಘನಾರಾಜ್​: ವೈರಲ್​ ಆಯ್ತು ಫೋಟೋಗಳು..!


 

 
First published: