• Home
  • »
  • News
  • »
  • entertainment
  • »
  • ಸೀತಾಯಣ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಅಕ್ಷಿತ್​ ಎಂಟ್ರಿ: ಶಶಿ ಕುಮಾರ್​ ಮಗನ ಬೆಂಬಲಕ್ಕೆ ನಿಂತ ಶಿವಣ್ಣ

ಸೀತಾಯಣ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಅಕ್ಷಿತ್​ ಎಂಟ್ರಿ: ಶಶಿ ಕುಮಾರ್​ ಮಗನ ಬೆಂಬಲಕ್ಕೆ ನಿಂತ ಶಿವಣ್ಣ

ಸೀತಾಯಣ ಸಿನಿಮಾದ ಟೀಸರ್​ ರಿಲೀಸ್​ ಮಾಡಿದ ಶಿವಣ್ಣ

ಸೀತಾಯಣ ಸಿನಿಮಾದ ಟೀಸರ್​ ರಿಲೀಸ್​ ಮಾಡಿದ ಶಿವಣ್ಣ

Seethayana Teaser: ಟೀಸರ್​ ರಿಲೀಸ್ ಮಾಡಿರು ಶಿವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಸೋದರ ಸಮಾನರಾಗಿರುವ ಶಶಿ ಕುಮಾರ್ ಅವರ ಮಗ ಅಭಿನಯಿಸಿರುವ ಚಿತ್ರದ ಟೀಸರ್​ ಬಿಡುಗಡೆ ಮಾಡಿದ್ದು ಖುಷಿ ತಂದಿದೆ ಎಂದಿದ್ದಾರೆ. 

  • Share this:

ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ನಲ್ಲಿಸ್ಟಾರ್​ ನಟನಾಗಿ ಮಿಂಚಿದ ಶಶಿ ಕುಮಾರ್​ ನಂತರದಲ್ಲಿ ಕಾರಣಾಂತರದಿಂದ ಬಣ್ಣದ ಲೋಕದಿಂದ ಕೊಂಚ ದೂರ ಉಳಿದರು. ಆಗೊಂದು ಈಗೊಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಟನ ಮಗ ಈಗ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಶಶಿ ಕುಮಾರ್ ಅವರ ಮಗ ಅಕ್ಷಿತ್​ ಈಗ ನಾಯಕನಾಗಿ ಕನ್ನಡದ ಪ್ರೇಕ್ಷಕರಿಗೆ ಪರಿಚಯವಾಗಲಿದ್ದಾರೆ. ಅದಕ್ಕಾಗಿ ಜೋರಾದ ಸಿದ್ಧತೆ ನಡೆದಿದೆ. ಈಗಾಗಲೇ ಅಕ್ಷಿತ್ ಅವರ ಮೊದಲ ಚಿತ್ರದ ಚಿತ್ರೀಕರಣ ಮುಗಿದಿದೆ. ಇನ್ನೇನು ಎಲ್ಲ ಸರಿ ಹೋದರೆ ಆದಷ್ಟು ಬೇಗ ಅಕ್ಷಿತ್​ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ. ಅಕ್ಷಿತ್​ ಅಭಿನಯದ ಚೊಚ್ಚಲ ಸಿನಿಮಾ ಸೀತಾಯಣದ  ಚಿತ್ರತಂಡಕ್ಕೆ ಶಿವಣ್ಣ ಬೆಂಬಲವಾಗಿ ನಿಂತಿದ್ದಾರೆ. ಸಿನಿಮಾದ ಟೀಸರ್​ ಅನ್ನು ರಿಲೀಸ್​ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ಹ್ಯಾಟ್ರಿಕ್​ ಹೀರೋ. ಇನ್ನು ಶಶಿ ಕುಮಾರ್​ ತಮ್ಮ ಮಗನನ್ನು ಏಕಕಾಲಕ್ಕೆ ಬೇರೆ ಭಾಷೆಗಳಲ್ಲೂ ಲಾಂಚ್​ ಮಾಡುವ ಉದ್ದೇಶ ಹೊಂದಿದ್ದಾರೆ. 


ಲಲಿತಾ ರಾಜ್ಯ ಲಕ್ಷ್ಮಿ ನಿರ್ಮಾಣದ ಈ ಸಿನಿಮಾವನ್ನು ಪ್ರಭಾಕರ್​ ಆರಿಪಾಕ​ ನಿರ್ದೇಶನ ಮಾಡುತ್ತಿದ್ದಾರೆ. ಅನಾಹಿತ್ ಭೂಷನ್​ ನಾಯಕಿಯಾಗಿ ಅಕ್ಷಿತ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್ ಅನ್ನು ಶಿವಣ್ಣ ರಿಲೀಸ್ ಮಾಡಿದ್ದಾರೆ.
ಟೀಸರ್​ ರಿಲೀಸ್ ಮಾಡಿರು ಶಿವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಸೋದರ ಸಮಾನರಾಗಿರುವ ಶಶಿ ಕುಮಾರ್ ಅವರ ಮಗ ಅಭಿನಯಿಸಿರುವ ಚಿತ್ರದ ಟೀಸರ್​ ಬಿಡುಗಡೆ ಮಾಡಿದ್ದು ಖುಷಿ ತಂದಿದೆ ಎಂದಿದ್ದಾರೆ.ಇನ್ನು ಅಕ್ಷಿತ್​ ಅಭಿನಯದ ಸೀತಾಯಣ ಏಕಕಾಲಕ್ಕೆ ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳಿನಲ್ಲೂ ತೆರೆ ಕಾಣಲಿದೆ. ಈ ಚಿತ್ರದ ಟೀಸರ್ ನೋಡಿದರೆ, ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ ಎನಿಸುತ್ತಿದೆ. ಇನ್ನು ಟೀಸರ್​ನಲ್ಲಿ ಅಕ್ಷಿತ್​ ಅವರ ಅಭಿನಯ ಸದ್ಯಕ್ಕೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

Published by:Anitha E
First published: