Akshith Shashikumar: ಕನ್ನಡದ ಮತ್ತೊಬ್ಬ ಹ್ಯಾಂಡ್ಸಮ್ ಹೀರೋ ಅಕ್ಷಿತ್ ಶಶಿಕುಮಾರ್! ಅಪ್ಪನಂತೆ ನೃತ್ಯದಲ್ಲಿ ಎಕ್ಸ್​ಪರ್ಟ್

ಅಕ್ಷಿತ್ ಶಶಿಕುಮಾರ್ ಕಥೆಗಳನ್ನ ಕೇಳುತ್ತಿದ್ದಾರೆ. ಒಳ್ಳೆ ಕಥೆಗಳ ನಿರೀಕ್ಷೆಯಲ್ಲೂ ಇದ್ದಾರೆ. ಅಷ್ಟರಲ್ಲಿಯೇ ಅಕ್ಷಿತ್​ಗೆ ಒಂದು ಕಥೆ ಇಷ್ಟ ಆಗಿದೆ. ಆ ಕಥೆಯ ಪಾತ್ರಕ್ಕಾಗಿಯೇ ಅಕ್ಷಿತ್ ಈಗ ತಯಾರಿ ನಡೆಸಿದ್ದಾರೆ. ಉತ್ತರ ಕರ್ನಾಟಕ ಭಾಷೆ ಮಾತನಾಡೋ ಪಾತ್ರವೇ ಇದಾಗಿರೋದು ವಿಶೇಷ.

ಅಕ್ಷಿತ್ ಶಶಿಕುಮಾರ್ ಸಖತ್ ಲುಕ್

ಅಕ್ಷಿತ್ ಶಶಿಕುಮಾರ್ ಸಖತ್ ಲುಕ್

  • Share this:
ಚಂದನವನದಲ್ಲಿ ಅನೇಕರು ಹ್ಯಾಂಡ್ಸಮ್ (Handsome Hero) ಹೀರೋ ಇದ್ದಾರೆ. ಆದರೆ ಆ ಒಂದು ಟೈಮ್​ ನಲ್ಲಿ ಆ ಹೀರೋ ಎಲ್ಲರ ಫೇವರಿಟ್ ಆಗಿದ್ದರು. ಅವರ ನೃತ್ಯಕ್ಕೆ ಸೋಲದೇ ಇರೋ ಪ್ರೇಕ್ಷಕರೇ ಇರಲಿಲ್ಲ. ಹೌದು, ಕನ್ನಡದ ನಾಯಕ ನಟ ಶಶಿಕುಮಾರ್ (Shashikumar) ಹಾಗೆ ಇದ್ದವರು. ಎಲ್ಲರಿಗೂ ಇಷ್ಟ ಆಗುತ್ತಿದ್ದರು ಶಶಿಕುಮಾರ್. ಲೇಡಿ ಫ್ಯಾನ್ ಫಾಲೋಯಿಂಗ್ ಕೂಡ ಜಾಸ್ತಿ ಇತ್ತು. ಇಂತಹ ಈ ನಾಯಕ ನಟನ ಪುತ್ರ ಈಗ ಇಂಡಸ್ಟ್ರೀಗೆ ಕಾಲಿಟ್ಟಿದ್ದಾರೆ. ಶಶಿಕುಮಾರ್ ಹಾಗೇನೆ ಅಕ್ಷಿತ್ ಶಶಿಕುಮಾರ (Akshith Shashikumar)ಕೂಡ ಹ್ಯಾಂಡ್ಸಮ್ ಆಗಿರೋದು ವಿಶೇಷ. ಈಗಾಗಲೇ ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿಲು ಆರಂಭಿಸಿದ್ದಾರೆ. ಮೊದಲ ಸಿನಿಮಾದಲ್ಲಿ ಒಂದು ಸಣ್ಣ ಭರವಸೆ ಮೂಡಿಸಿದ್ದಾರೆ. ತಂದೆ ಶಶಿಕುಮಾರ್ ಅವರ ಹಾಗೆ ನೃತ್ಯದ ಮೂಲಕವೂ ಜನರ ಗಮನ ಸೆಳೆದಿದ್ದಾರೆ.

ಅಕ್ಷಿತ್ ಶಶಿಕುಮಾರ್ ಕನ್ನಡದ ಮತ್ತೊಬ್ಬ ಹ್ಯಾಂಡ್ಸಮ್ ಹೀರೋ

ಅಕ್ಷಿತ್ ಶಶಿಕುಮಾರ್ ಅವರಿಗೆ ಅಭಿನಯ ಗೊತ್ತಿದೆ. ತಂದೆಯಿಂದಲೇ ಅದು ಬಂದಿದೆ ಅಂದ್ರೆ ತಪ್ಪಿಲ್ಲ. ಕಲಾವಿದರ ಮನೆಯಲ್ಲಿ ಬೇಡ ಅಂದ್ರೂ ಕಲಾವಿದರೇ ಹುಟ್ಟೋದು. ಅದೃಷ್ಟ ದುರಾದೃಷ್ಟ ಅದೆಲ್ಲ ನಂತರದ ಮಾತು. ಆದರೆ ಪ್ರಯತ್ನ ಅಂತಲಾದರೂ ಬೇಕಲ್ವೇ?

Akshith Shashikumar Special Interview on his new projects
ಅಕ್ಷಿತ್ ಶಶಿಕುಮಾರ್ ಮಸ್ತ್ ಪೋಸ್


ಅಕ್ಷಿತ್ ಶಶಿಕುಮಾರ್ ಮೊದಲ ಪ್ರಯತ್ನದಲ್ಲಿ ಅಪ್ಪನ ಹೆಸರನ್ನ ಎಲ್ಲೂ ಹೇಳದೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಆದರೆ ಅದು ನಮ್ಮ ಚಂದನವನದಲ್ಲಿ ಅಲ್ಲ ಅನ್ನೊದೇ ರಿಯಾಲಿಟಿ.

ಅಪ್ಪನ ಹೆಸರು ಬಳಸಿಕೊಳ್ಳಲೇ ಬಾರದು ಅಂತ ನಿರ್ಧರಿಸಿದ್ದರು

ಅಕ್ಷಿತ್ ಶಶಿಕುಮಾರ್ ಅಪ್ಪನ ಹೆಸರು ಬಳಸಿಕೊಳ್ಳಬಾರದು ಅಂತಲೇ ನಿರ್ಧರಿಸಿದ್ದರು. ಹಾಗಾಗಿಯೇ ಕನ್ನಡದ ಚಿತ್ರಕ್ಕೆ ಕಾಲಿಡೋ ಮೊದಲು, ಟಾಲಿವುಡ್​ನಲ್ಲಿಯೇ ಅಕ್ಷಿತ್ ಹೆಜ್ಜೆ ಇಟ್ಟರು.

ಇದನ್ನೂ ಓದಿ:Indian Models: ಭಾರತದಲ್ಲಿ IIM ಪದವೀಧರರಿಗಿಂತ ಹೆಚ್ಚು ವೇತನ ಪಡೆಯುತ್ತಾರೆ ಮಾಡೆಲ್​ಗಳು!

ಅಲ್ಲಿ ತಾವು ಯಾರೂ ಅನ್ನೋದು ಹೇಳಲೇ ಇಲ್ಲ. ಬದಲಾಗಿ ಒಬ್ಬ ಸಾಮಾನ್ಯ ಯುವಕನಾಗಿಯೇ ಆಡಿಷನ್ ಕೂಡ ಕೊಟ್ಟರು. ಮೊದಲ ಪ್ರಯತ್ನದಲ್ಲಿ ಒಂದ್ ಸಿನಿಮಾಕೂ ಆಫರ್ ಪಡೆದರು.

Akshith Shashikumar Special Interview on his new projects
ಅಕ್ಷಿತ್ ಶಶಿಕುಮಾರ್ ಫೋಟೋ ಶೂಟ್


ಹಾಗೆ ಸಿಕ್ಕ ಮೊದಲ ತೆಲುಗು ಸಿನಿಮಾನೇ ಸೀತಾಯಣ ಚಿತ್ರವೇ ಆಗಿದೆ. ಇದು ಬಂದ್ಮೇಲೆ ಅಕ್ಷಿತ್ ಪಯಣ ಚಂದನವನದಲ್ಲಿಯೇ ಆಗಿದೆ. ಆ ಸಿನಿಮಾ ಹೆಸರು ಸೂಪರ್ ಆಗಿಯೇ ಇದೆ. ಇದು ಚೆನ್ನಾಗಿಯೇ ಹೋಗಿದೆ. ಜನರ ಗಮನ ಸೆಳೆಯೋವಲ್ಲಿ ಅಕ್ಷಿತ್ ಯಶಸ್ವಿ ಆಗಿದ್ದಾರೆ.

ಕನ್ನಡದ ಓ ಮೈ ಲವ್ ಚಿತ್ರದಲ್ಲಿ ಅಕ್ಷಿತ್ ಡ್ಯಾನ್ಸಿಂಗ್ ಪ್ರತಿಭೆ ಅನಾವರಣ

ಈ ಚಿತ್ರದ ಹೆಸರು ಓ ಮೈ ಲವ್. ಈ ಸಿನಿಮಾದಲ್ಲಿ ಅಕ್ಷಿತ್ ಅಪ್ಪನಂತೆ ಹಾಡೊಂದರಲ್ಲಿ ಒಳ್ಳೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಜನರಿಗೂ ಇದು ಇಷ್ಟ ಆಗಿದೆ. ಲಕ್ಷ ಲಕ್ಷ ವೀವ್ಸ್​ಗಳೂ ಈ ಚಿತ್ರದ ಡ್ಯಾನ್ಸಿಂಗ್ ಹಾಡಿಗೆ ಬಂದಿವೆ. ಸಿನಿಮಾ ಪ್ರೇಮಿಗಳು ಈ ಹಾಡನ್ನ ಮೆಚ್ಚಿಕೊಂಡಿದ್ದಾರೆ.

ಖೆಯೊಸ್ ಎಂಬ ಮೆಡಿಕಲ್ ಮಿಸ್ಟರಿ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್
ಅಕ್ಷಿತ್​ಗೆ ಸಿನಿಮಾ ಪ್ರೀತಿ ತುಂಬಾನೇ ಇದೆ. ಒಳ್ಳೆ ಕಥೆಯಲ್ಲಿ ಅಭಿನಯಿಸಬೇಕು ಅನ್ನೋ ಹಂಬಲ ಅಕ್ಷಿತ್​​ ಗೆ ಇದೆ. ಹಾಗೆ ಈಗ ಬಂದಿರೋ ಸಿನಿಮಾದಹೆಸರು ಕೂಡ ವಿಶೇಷವಾಗಿ ಇದೆ. ವಿಚಿತ್ರವೂ ಅನಿಸುತ್ತದೆ. ಖೆಯೊಸ್ ಅಂತಲೇ ಶೀರ್ಷಿಕೆ ಇರೋ ಈ ಚಿತ್ರದಲ್ಲಿ ಅಕ್ಷಿತ್​ ಗೆ ಜೋಡಿಯಾಗಿ ಕನ್ನಡತಿ ಅದಿತಿ ಪ್ರಭುದೇವ ಇದ್ದಾರೆ.

Akshith Shashikumar Special Interview on his new projects
ಅಕ್ಷಿತ್ ಶಶಿಕುಮಾರ್ ಹೊಸ ಸಿನಿಮಾ ಪೋಸ್ಟರ್


ಮೆಡಿಕಲ್ ಮಿಸ್ಟರಿ ಕಥೆಯುಳ್ಳ ಈ ಚಿತ್ರದ ಕೆಲಸ ನಡೀತಾ ಇದೆ. ಚಿತ್ರದ ಆರ್. ಆರ್ ಕೂಡ ಈಗ ನಡೆಯುತ್ತಿದೆ. ವೆಂಕಟೇಶ್ ಪ್ರಸಾದ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಮೆಡಿಕಲ್ ಮಿಸ್ಟರಿ ಕಥೆಯಲ್ಲಿ ಅಭಿನಯಿಸಿರೋ ಅಕ್ಷಿತ್ ಶಶಿಕುಮಾರ್ ಅವರ ಈ ಸಿನಿಮಾ ಇದೇ ವರ್ಷ ನವೆಂಬರ್ ತಿಂಗಳಲ್ಲಿಯೇ ರಿಲೀಸ್ ಪ್ಲಾನಿಂಗ್ ನಡೆಯುತ್ತಿದೆ.

ಸದ್ಯ ಬೇರೆ ಬೇರೆ ಕಥೆ ಕೇಳುತ್ತಿರೋ ಅಕ್ಷಿತ್ ಶಶಿಕುಮಾರ್
ಅಕ್ಷಿತ್ ಶಶಿಕುಮಾರ್ ಕಥೆಗಳನ್ನ ಕೇಳುತ್ತಿದ್ದಾರೆ. ಒಳ್ಳೆ ಕಥೆಗಳ ನಿರೀಕ್ಷೆಯಲ್ಲೂ ಇದ್ದಾರೆ. ಅಷ್ಟರಲ್ಲಿಯೇ ಅಕ್ಷಿತ್​ಗೆ ಒಂದು ಕಥೆ ಇಷ್ಟ ಆಗಿದೆ. ಆ ಕಥೆಯ ಪಾತ್ರಕ್ಕಾಗಿಯೇ ಅಕ್ಷಿತ್ ಈಗ ತಯಾರಿ ನಡೆಸಿದ್ದಾರೆ. ಉತ್ತರ ಕರ್ನಾಟಕ ಭಾಷೆ ಮಾತನಾಡೋ ಪಾತ್ರವೇ ಇದಾಗಿರೋದು ವಿಶೇಷ.

ಇದನ್ನೂ ಓದಿ: Krishi Thapanda Birthday: ನಗು ಮೊಗದ ಮಲ್ಲಿಗೆ-ನಕ್ಕರೆ ಸ್ವರ್ಗವೇ ಧರೆಗೆ! ಕೃಷಿ ತಾಪಂಡ ಎಂಬ ಉತ್ಸಾಹದ ಚಿಲುಮೆಗೆ ಹ್ಯಾಪಿ ಬರ್ತ್​ ಡೇ

ಅಕ್ಷಿತ್ ಶಶಿಕುಮಾರ್ ವರ್ಕೌಟ್ ಕೂಡ ಮಾಡುತ್ತಿದ್ದಾರೆ. ತಮ್ಮ ದೇಹದ ತೂಕವನ್ನೂ ಇಳಿಸಿಕೊಡು, ಬೇರೆ ರೀತಿಯಲ್ಲಿ ಕಾಣಲು ಪ್ಲಾನ್ ಮಾಡಿದ್ದಾರೆ. ಈ ಒಂದು ಬಲಾವಣೆ ಫೋಟೋ ಶೂಟ್​ ಒಂದಕ್ಕಾಗಿಯೇ ಅನ್ನೊದು ಅಷ್ಟೇ ಸತ್ಯ.

ಜೈ ಜೈ ಜಾನಕಿ ರಾಮ್ ಸಿನಿಮಾದಲ್ಲೂ ಅಕ್ಷಿತ್ ಶಶಿಕುಮಾರ್
ಅಕ್ಷಿತ್ ಶಶಿಕುಮಾರ್ ಚಿತ್ರ ಪಯಣ ಈಗಷ್ಟೇ ಶುರು ಆಗಿದೆ. ಅಷ್ಟರಲ್ಲಿಯೇ ಒಂದಷ್ಟು ಸಿನಿಮಾ ಮಾಡಿರೋದು ವಿಶೇಷವೇ ಸರಿ. ಅದರಂತೆ ಅಕ್ಷಿತ್ ಶಶಿಕುಮಾರ್, ಜೈ ಜೈ ಜಾನಕಿ ರಾಮ್ ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಚಿತ್ರದ ವಿಷಯ ಕೂಡ ವಿಶೇಷವಾಗಿಯೇ ಇದೆ. ಇದನ್ನ ಸಿದ್ಧಾರ್ಥ್ ಡೈರಕ್ಷನ್ ಮಾಡುತ್ತಿದ್ದಾರೆ.

ಅಕ್ಷಿತ್ ಶಶಿಕುಮಾರ್ ಚಿತ್ರ ಜೀವನದಲ್ಲಿ ಹೊಸದಾಗಿ ಹೆಜ್ಜೆ ಇಟ್ಟಿದ್ದಾರೆ. ಇವರ ಪಯಣ ಇನ್ನಷ್ಟು ಮತ್ತಷ್ಟು ಸುಗಮವಾಗಲಿ, ಅಕ್ಷಿತ್ ಶಶಿಕುಮಾರ್ ಬಳಿಯಲ್ಲಿರೋ ಆ ಟ್ಯಾಲೆಂಟ್ ಹೊರಗಡೆ ಬರೋ ಸಿನಿಮಗಳು ಸಿಗಲಿ, ಪಾತ್ರಗಳು ಸಿಗಲಿ. ಗುಡ್ ಲಕ್ ಅಕ್ಷಿತ್.
First published: