ಅಯೋಧ್ಯೆಯಲ್ಲೇ ನಡೆಯಿತು ಅಕ್ಷಯ್​ ಕುಮಾರ್​ ಅಭಿನಯದ ರಾಮ್ ಸೇತು ಚಿತ್ರದ ಮುಹೂರ್ತ

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಶ್ರೀ ರಾಮ ಜನ್ಮಭೂಮಿಯಾದ ಅಯೋಧ್ಯೆಯಲ್ಲಿಯೇ ಚಿತ್ರತಂಡ ರಾಮ್ ಸೇತು ಸಿನಿಮಾದ ಮುಹೂರ್ತ ನೆರವೇರಿಸಿದೆ. ಜೊತೆಗೆ ಖಿಲಾಡಿ ಅಕ್ಷಯ್ ಕುಮಾರ್ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರನ್ನ ಭೇಟಿಯಾಗಿದ್ದಾರೆ.

ಅಯೋಧ್ಯೆಯಲ್ಲಿ ರಾಮ್​ ಸೇತು ಸಿನಿಮಾದ ಚಿತ್ರೀಕರಣ

ಅಯೋಧ್ಯೆಯಲ್ಲಿ ರಾಮ್​ ಸೇತು ಸಿನಿಮಾದ ಚಿತ್ರೀಕರಣ

  • Share this:
ಬಾಲಿವುಡ್ ಸೂಪರ್​ ಸ್ಟಾರ್​ ಅಕ್ಷಯ್ ಕುಮಾರ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರನ್ನು ಭೇಟಿಯಾಗಿದ್ದಾರೆ. ಮಾತ್ರವಲ್ಲ ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿಯೇ ತಮ್ಮ ಚಿತ್ರದ ಮುಹೂರ್ತವನ್ನೂ ನೆರವೇರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಭಾರತದ ಅತಿ ದೊಡ್ಡ ಫಿಲ್ಮ್ ಸಿಟಿ ನಿರ್ಮಾಣವಾಗುತ್ತಿರುವ ನಡುವೆ ಈ ಭೇಟಿ ಸದ್ಯ ಎಲ್ಲರ ಗಮನ ಸೆಳೆದಿದೆ. ಹೌದು, ಬಾಲಿವುಡ್‍ನ ಅತಿ ದೊಡ್ಡ ಸೂಪರ್​ ಸ್ಟಾರ್​ಗಳ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುವ ಖಿಲಾಡಿ ಅಕ್ಷಯ್ ಕುಮಾರ್. ಅದಕ್ಕೆ ಕಾರಣ ಸಲ್ಮಾನ್ ಖಾನ್, ಅಮೀರ್ ಖಾನ್, ಶಾರುಖ್ ಖಾನ್ ಅವರಂತಹ ನಟರೇ ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೆ, ಅಕ್ಷಯ್ ಪ್ರತಿ ವರ್ಷ ಮೂರು ಸಿನಿಮಾಗಳಲ್ಲಿ ಮಿಂಚುತ್ತಾರೆ. ಎಲ್ಲ ಚಿತ್ರಗಳಲ್ಲೂ ಬಾಕ್ಸಾಫಿಸ್ ಲೂಟಿ ಮಾಡುತ್ತಾರೆ. ಇಂತಹ ಅಕ್ಷಯ್ ಸದ್ಯ ಅರ್ಧ ಡಜನ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಮೂರು ದಶಕಗಳ ಸಿನಿಕ  ಜೀವನದಲ್ಲಿ ಅಕ್ಷಯ್ ಕುಮಾರ್ ಬರೋಬ್ಬರಿ 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಶೇಷ ಅಂದರೆ ಲಾಕ್‍ಡೌನ್‍ನಲ್ಲಿ ಎಲ್ಲರೂ ಮನೆಗಳಲ್ಲಿ ಲಾಕ್ ಆಗಿದ್ದರೆ, ಅದರ ನಡುವೆಯೂ ಓಟಿಟಿಯಲ್ಲಿ ಲಕ್ಷ್ಮಿ ಸಿನಿಮಾ ರಿಲೀಸ್ ಮಾಡಿ, ಅಲ್ಲೂ ಸಕ್ಸಸ್ ಕಂಡಿದ್ದರು ಅಕ್ಷಯ್. ಇಂತಹ ಖಿಲಾಡಿ ನಟಿಸಿರುವ ಆ್ಯಕ್ಷನ್ ಸಿನಿಮಾ ಸೂರ್ಯವಂಶಿ ಸದ್ಯ ತೆರೆಗೆ ಬರಲು ರೆಡಿಯಿದೆ. ಅದಾಗುತ್ತಲೇ ಬೆಲ್ ಬಾಟಂ, ಅತ್ರಂಗಿ ರೇ, ರಕ್ಷಾಬಬಂಧನ್, ಪೃಥ್ವಿರಾಜ್ ಸಿನಿಮಾಗಳು ಒಂದಾದ ಮೇಲೊಂದರಂತೆ ಥಿಯೇಟರ್​ಗೆ ಎಂಟ್ರಿ ಕೊಡಲಿವೆ. ಇತ್ತೀಚೆಗಷ್ಟೇ ಬಚ್ಚನ್ ಪಾಂಡೆ ಚಿತ್ರದ ಶೂಟಿಂಗ್‍ ಅನ್ನೂ ಪೂರ್ಣಗೊಳಿಸಿರುವ ಅಕ್ಷಯ್ ಕುಮಾರ್ ಸದ್ಯ ರಾಮ್ ಸೇತು ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

Akshay kumar,Akshay Kumar Bachchan Pandey,Akshay Kumar Bachchan Pandey Shooting Starts,Bachchan Pandey,Akshay Kumar Bachchan Pandey Kriti sanon,jacquenline Fernandez, Ram Setu,Ram Setu bollywood Project,Ram Setu Bollywood Movie,Askhay Kumar Ram Setu Movie,Akshay Kumar Twitter,Akshay Kumar Instagram,Ram Setu,bollywood,Hindi cinema, ಅಕ್ಷಯ್​ ಕುಮಾರ್​, ಕೃತಿ ಸನೋನ್​, ಜಾಕ್ವೆಲಿನ್​ ಫರ್ನಾಂಡಿಸ್​, ಬಚ್ಚನ್ ಪಾಂಡೆ, ಸಾಜಿದ್​ ನಾಡಿಯಾದ್​ ವಾಲಾ Akshay Kumar starrer Bachchan Pandey movie shooting started ae
ಅಕ್ಷಯ್​ ಕುಮಾರ್ ಅಭಿನಯದ ಸಾಲು ಸಾಲು ಸಿನಿಮಾಗಳು ಈ ವರ್ಷ ತೆರೆ ಕಾಣಲು ಸಜ್ಜಾಗಿವೆ.


ಅಭಿಷೇಕ್ ಶರ್ಮಾ ನಿರ್ದೇಶಿಸಲಿರುವ ರಾಮ್ ಸೇತು ಚಿತ್ರದಲ್ಲಿ ಅಕ್ಷಯ್ ಕುಮಾರ್ ಪುರಾತತ್ವಶಾಸ್ತ್ರಜ್ಞನ ಪಾತ್ರದಲ್ಲಿ ನಟಿಸಲಿದ್ದಾರೆ. ಭಾರತೀಯ ಸಂಸ್ಕøತಿ ಪೌರಾಣಿಕ ಹಾಗೂ ವೈಜ್ಞಾನಿಕ ಹಿನ್ನಲೆಯ ಸುತ್ತ ಚಿತ್ರದ ಕಥೆ ಸುತ್ತುತ್ತದೆ ಎನ್ನಲಾಗಿದೆ. ಅಕ್ಷಯ್ ಕುಮಾರ್‍ಗೆ ನಾಯಕಿಯಾಗಿ ಶ್ರೀಲಂಕಾ ಸುಂದರಿ ಜಾಕ್‍ಲೀನ್ ಫರ್ನಾಂಡಿಸ್ ನಟಿಸುತ್ತಿದ್ದು, ನುಶ್ರತ್ ಭರೋಚಾ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ
View this post on Instagram


A post shared by Akshay Kumar (@akshaykumar)


ವಿಶೇಷ ಅಂದರೆ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಶ್ರೀ ರಾಮ ಜನ್ಮಭೂಮಿಯಾದ ಅಯೋಧ್ಯೆಯಲ್ಲಿಯೇ ಚಿತ್ರತಂಡ ರಾಮ್ ಸೇತು ಸಿನಿಮಾದ ಮುಹೂರ್ತ ನೆರವೇರಿಸಿದೆ. ಜೊತೆಗೆ ಖಿಲಾಡಿ ಅಕ್ಷಯ್ ಕುಮಾರ್ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರನ್ನ ಭೇಟಿಯಾಗಿದ್ದಾರೆ.

Akshay Kumar, Bollywood, Bombay Stock Exchange, Buzz Patrol, Buzz Patrol, Film City, film city in Uttar Pradesh, Gautam Buddha Nagar, Greater Noida, Lucknow Municipal bond, Mumbai,Noida,Uttar Pradesh,Uttar Pradesh Chief Minister,Yogi Adityanath, ಅಕ್ಷಯ್​ ಕುಮಾರ್​, ಯೋಗಿ ಆದಿತ್ಯನಾಥ್​, ರಾಮ್​ ಸೇತು ಸಿನಿಮಾ, ಅಯೋಧ್ಯೆ, ಲಕ್ನೋದಲ್ಲಿ ಯೋಗಿ-ಅಕ್ಷಯ್​ ಕುಮಾರ್​ ಭೇಟಿ, ಜಾಕ್ವೆಲಿನ್​ ಫರ್ನಾಂಡಿಸ್​, ಬಾಲಿವುಡ್ ಸಿನಿಮಾ, Akshay kumar meets yogi adityanath, adityanath akshay kumar meeting, akshay kumar yogi adityanath meeting news, Ram Setu star Akshay Kumar met Uttar Pradesh CM Yogi Adityanath in Lucknow ae
ಯೋಗಿ ಆದಿತ್ಯನಾಥ್​ ಹಾಗೂ ಅಕ್ಷಯ್​ ಕುಮಾರ್​ ಭೇಟಿ


ಮರಾಠಿಗರ ಬಾಹುಳ್ಯವುಳ್ಳ ಮಹಾರಾಷ್ಟ್ರದಲ್ಲಿ ಹಿಂದಿ ಚಿತ್ರರಂಗ ಯಾಕೆ ಇರಬೇಕು, ಅದರ ಬದಲಾಗಿ ಹಿಂದಿ ಭಾಷಿಕರೇ ಹೆಚ್ಚಾಗಿರುವ ಉತ್ತರ ಪ್ರದೇಶದಲ್ಲಿ ಹಿಂದಿ ಚಿತ್ರರಂಗವನ್ನು ಸ್ಥಾಪಿಸಬೇಕು ಎಂಬ ಮಾತುಗಳು ಕೇಳಿ ಬಂದ ಹಿನ್ನಲೆಯಲ್ಲಿ ಖುದ್ದು ಯುಪಿ ಸಿಎಂ ಯೋಗಿಜೀ ಸಹ ಆ ಕುರಿತು ಆಸಕ್ತಿವಹಿಸಿದ್ದಾರೆ.
View this post on Instagram


A post shared by Akshay Kumar (@akshaykumar)


ಹೀಗಾಗಿಯೇ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ಬರೋಬ್ಬರಿ ಒಂದು ಸಾವಿರ ಎಕರೆ ಜಾಗದಲ್ಲಿ ಭಾರತದ ಅತಿ ದೊಡ್ಡ ಫಿಲ್ಮ್ ಸಿಟಿ ನಿರ್ಮಾಣದ ಕೆಲಸಗಳೂ ಪ್ರಾರಂಭವಾಗಿವೆ. ಇದೇ ವರ್ಷದಿಂದ ಸಿನಿಮಾಗಳ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸುವ ನಿರೀಕ್ಷೆಗಳೂ ಇವೆ. ರಾಮ್ ಸೇತು ಶೂಟಿಂಗ್ ಸಹ ಅಯೋಧ್ಯೆಯ ಈ ನೂತನ ಫಿಲ್ಮ್ ಸಿಟಿಯಲ್ಲಿಯೇ ನಡೆಯಲಿದೆ. ಈ ಹಿನ್ನಲೆಯಲ್ಲಿ ಖಿಲಾಡಿ ಅಕ್ಷಯ್ ಕುಮಾರ್ ಯುಪಿ ಸಿಎಂರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ..
Published by:Anitha E
First published: