Laxmmi Bomb OTT Release: ನೂರು ಕೋಟಿಗೆ ಲಕ್ಷ್ಮಿ ಬಾಂಬ್, 30 ಕೋಟಿಗೆ ನಿಶ್ಯಬ್ಧಂ ಸೇಲ್​...!

Nishabdham OTT Release: ಸಿನಿ ಕಾರ್ಮಿಕರು ಹಾಗೂ ಕಷ್ಟದಲ್ಲಿರುವ ನಿರ್ಮಾಪಕರಿಗಾಗಿ ಕೆಲವು ಸಿನಿಮಾಗಳನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲು ಚಿತ್ರತಂಡಗಳು ಯೋಚಿಸುತ್ತಿದೆ. ಅದರಲ್ಲೂ ಟಾಲಿವುಡ್​ನಲ್ಲಿ ಹಲವಾರು ಸಿನಿಮಾಗಳು ಒಟಿಟಿ ಮೂಲಕ ರಿಲೀಸ್​ ಆಗಲು ತಯಾರಿ ನಡೆಸಿವೆಯಂತೆ. 

Anitha E | news18-kannada
Updated:May 9, 2020, 6:39 PM IST
Laxmmi Bomb OTT Release: ನೂರು ಕೋಟಿಗೆ ಲಕ್ಷ್ಮಿ ಬಾಂಬ್, 30 ಕೋಟಿಗೆ ನಿಶ್ಯಬ್ಧಂ ಸೇಲ್​...!
ಲಕ್ಷ್ಮಿ ಬಾಂಬ್ ಹಾಗೂ ನಿಶ್ಯಬ್ಧಂ ಸಿನಿಮಾದ ಪೋಸ್ಟರ್​ಗಳು
  • Share this:
ಲಾಕ್​ಡೌನ್​ನಿಂದಾಗಿ ಚಿತ್ರಮಂದಿರಗಳು ಹಾಗೂ ಮಲ್ಪಿಪ್ಲೆಕ್ಸ್​ಗಳು ಬಂದ್​ ಆಗಿವೆ. ಸದ್ಯಕ್ಕೆ ಹತ್ತಿರದಲ್ಲಿ ಅವುಗಳನ್ನು ತೆರೆಯುವ ಸೂಚನೆಯೇ ಕಾಣುತ್ತಿಲ್ಲ. ಇದರಿಂದಾಗಿ ರಿಲೀಸ್​ಗೆ ಕಾದಿರುವ ಸಿನಿಮಾಗಳೂ ಬಿಡುಗಡೆ ಭಾಗ್ಯವಿಲ್ಲದೆ ಹಾಗೇ ಇವೆ. ಇದರಿಂದಾಗಿ ಇಂತಹ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸಿನಿ ಕಾರ್ಮಿಕರು ಹಾಗೂ ನಿರ್ಮಾಪಕರೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ. 

ಸಿನಿ ಕಾರ್ಮಿಕರು ಹಾಗೂ ಕಷ್ಟದಲ್ಲಿರುವ ನಿರ್ಮಾಪಕರಿಗಾಗಿ ಕೆಲವು ಸಿನಿಮಾಗಳನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲು ಚಿತ್ರತಂಡಗಳು ಯೋಚಿಸುತ್ತಿದೆ. ಅದರಲ್ಲೂ ಟಾಲಿವುಡ್​ನಲ್ಲಿ ಹಲವಾರು ಸಿನಿಮಾಗಳು ಒಟಿಟಿ ಮೂಲಕ ರಿಲೀಸ್​ ಆಗಲು ತಯಾರಿ ನಡೆಸಿವೆಯಂತೆ. ಅಂದರೆ ಥಿಯೇಟರ್ ಬದಲು ಇಂಟರ್ನೆಟ್​ನಲ್ಲೇ ಈ ಸಿನಿಮಾಗಳನ್ನ ವೀಕ್ಷಿಸಬಹುದು.

Akshay Kumar shares his look of Laxmmi Bomb look on Navratri
'ಲಕ್ಷ್ಮಿ ಬಾಂಬ್​' ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಲುಕ್​


ಅಕ್ಷಯ್​ ಕುಮಾರ್​ ನಟನೆಯ ಲಕ್ಷ್ಮಿಬಾಂಬ್​ ನೂರು ಕೋಟಿ ಹಾಗೂ ಅನುಷ್ಕಾ ಶೆಟ್ಟಿ ನಟನೆಯ ನಿಶ್ಯಬ್ಧಂ ಸಿನಿಮಾ 30 ಕೋಟಿಗೆ ಮಾರಾಟವಾಗಲಿದೆಯಂತೆ. ಈ ಬಗ್ಗೆ ಚಿತ್ರತಂಡಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಆದಷ್ಟು ಬೇಗ ಒಟಿಟಿ ಪ್ಲಾಟ್​ಫಾರ್ಮ್​ ಮೂಲಕ ಸಿನಿಮಾಗಳು ತೆರೆ ಕಾಣಲಿವೆ ಅನ್ನೋ ಸುದ್ದಿ ಹರಿದಾಡುತ್ತಿದೆ.

anushka shetty is followed by 3 million followers in Instagram
ಅನುಷ್ಕಾ ಶೆಟ್ಟಿ


ಲಕ್ಷ್ಮಿ ಬಾಂಬ್​ ಸಿನಿಮಾದ ನಿರ್ದೇಶಕ ಲಾರೆನ್ಸ್​ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಅದು ಮುಗಿದ ಕೂಡಲೇ ಅವರು ಸಿನಿಮಾವನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲಿದ್ದಾರಂತೆ.

Arjun Kapoor: ಲಾಕ್​ಡೌನ್​ನಲ್ಲಿ ಅಮ್ಮನನ್ನು ನೆನೆದ ಅರ್ಜುನ್​ ಕಪೂರ್​: ಇಲ್ಲಿವೆ ಬಾಲ್ಯದ ಚಿತ್ರಗಳು..!

 

 
First published: May 9, 2020, 2:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading