ಕೋರೋನಾ ವೈರಸ್​ ಹರಡುತ್ತಿರುವ ಬೆನ್ನಲ್ಲೇ ದೇಶದ ಜನತೆಗೆ ಹೊಸ ಸಂದೇಶ ನೀಡಿದ ಅಕ್ಷಯ್​ ಕುಮಾರ್​

ಕೊರೋನಾ ವೈರಸ್​ ನಿಯಂತ್ರಣಕ್ಕೆ ಇಡೀ ದೇಶವೇ ಹೋರಾಡುತ್ತಿದೆ. ಈ ಮಧ್ಯೆ ಅಕ್ಷಯ್​ ಕುಮಾರ್​ ಕೇಂದ್ರ ಸರ್ಕಾರದ ಜಾಹೀರಾತೊಂದರಲ್ಲಿ ನಟಿಸಿದ್ದಾರೆ. ಕೊರೋನಾ ಆತಂಕದಿಂದ ಹಾಗೂ ಮನೆಗಳಿಂದ ಹೊರಬಂದು, ಎಲ್ಲ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಎಲ್ಲ ಬಗೆಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಮತ್ತೆ ಕೆಲಸಗಳಿಗೆ ಮರಳಬೇಕು ಎಂಬ ಸಂದೇಶವನ್ನು ಸಾರಲಾಗಿದೆ.

news18-kannada
Updated:June 3, 2020, 9:37 AM IST
ಕೋರೋನಾ ವೈರಸ್​ ಹರಡುತ್ತಿರುವ ಬೆನ್ನಲ್ಲೇ ದೇಶದ ಜನತೆಗೆ ಹೊಸ ಸಂದೇಶ ನೀಡಿದ ಅಕ್ಷಯ್​ ಕುಮಾರ್​
ಅಕ್ಷಯ್​ ಕುಮಾರ್​
  • Share this:
ಕೊರೋನಾ ವೈರಸ್ ಅಟ್ಟಹಾಸ ಮಿತಿಮೀರಿದೆ. ಭಾರತದಲ್ಲೇ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದ್ದು, ಬಲಿಯಾದವರ ಸಂಖ್ಯೆ 6 ಸಾವಿರ ಸಮೀಪಿಸಿದೆ. ಈ ಕಣ್ಣಿಗೆ ಕಾಣದ ವೈರಸ್​ಗೆ ಕಡಿವಾಣ ಹಾಕಲು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳೂ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಅದರ ಬೆನ್ನಲ್ಲೇ ಕಳೆದ ಎರಡೂವರೆ ತಿಂಗಳಿನಿಂದ ದೇಶಾದ್ಯಂತರ ಲಾಕ್​​ಡೌನ್ ಘೋಷಿಸಲಾಗಿದೆ.

ವಿಶ್ವದೆಲ್ಲೆಡೆ ಕೊರೋನಾ ಮರಣಮೃದಂಗ ಮುಂದುವರಿಯುತ್ತಿದ್ದು, ಹೊರದೇಶಗಳಲ್ಲಿದ್ದ ಭಾರತೀಯರು, ತಾಯ್ನಾಡಿಗೆ ಮರಳುತ್ತಿದ್ದಾರೆ. ಹಾಗೇ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಿಕೊಂಡಿದ್ದ ವಲಸೆ ಕಾರ್ಮಿಕರು ಸಹ, ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಬದುಕು ಕಟ್ಟಿಕೊಳ್ಳಲು ಬಂದ ನಗರದಲ್ಲಿ ಇರಲಾಗದೇ ಊರಿಗೂ ಹೋಗಲಾರದೇ ಲಕ್ಷಾಂತರ ಮಂದಿ ಗೊಂದಲದಲ್ಲೇ ಮುಳುಗಿದ್ದಾರೆ. ಇನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸೆಲೆಬ್ರಿಟಿಗಳೂ ಮುಂದಾಗಿದ್ದಾರೆ.

ಅದರಲ್ಲಂತೂ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಪಿಎಂ ಕೇರ್ಸ್​ಗೆ 25 ಕೋಟಿ ರೂಪಾಯಿ, ಮಹಾರಾಷ್ಟ್ರ ಪೊಲೀಸರಿಗೆ 1.50 ಕೋಟಿ ರೂಪಾಯಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಿಗೆ 30 ಕೋಟಿ ರೂಪಾಯಿಗೂ ಹೆಚ್ಚು ಹಣ ದೇಣಿಗೆ ನೀಡಿದ್ದಾರೆ. ಆ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.ಇಷ್ಟು ಸಾಲದು ಎಂಬಂತೆ ಅದರ ಜತೆಗೆ ಕೊರೊನಾ ಸಮಯದಲ್ಲೇ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕಿರುಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಅಕ್ಷಯ್.

ಈಗಾಗಲೇ ಎಲ್ಲ ರೀತಿ ಕಠಿಣ ಕ್ರಮಗಳನ್ನು ಕೈಗೊಂಡು, ದೇಶವನ್ನೇ ಎರಡೂವರೆ ತಿಂಗಳ ಕಾಲ ಲಾಕ್​ಡೌನ್ ಮಾಡಿ, ಆರ್ಥಿಕ ವ್ಯವಸ್ಥೆ ನೆಲಕಚ್ಚುವ ದುಸ್ಥಿತಿ ನಿರ್ಮಾಣವಾಗಿದ್ದರೂ, ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಈ ವೈರಸ್ಅನ್ನು ಸಂಪೂರ್ಣವಾಗಿ ತಹಬದಿಗೆ ತರುವುದು ಅಸಾಧ್ಯವಾಗಿದ್ದು, ಮುನ್ನೆಚ್ಚರಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದರ ಜತೆಗೇ ಬದಕುವುದನ್ನು ಕಲಿಯಲೇಬೇಕು ಎಂದೂ ಕೇಂದ್ರ ಸರ್ಕಾರವೂ ಹೇಳಿದೆ. ಕೊರೋನಾ ಆತಂಕದಿಂದ ಹಾಗೂ ಮನೆಗಳಿಂದ ಹೊರಬಂದು, ಎಲ್ಲ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಎಲ್ಲ ಬಗೆಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಮತ್ತೆ ಕೆಲಸಗಳಿಗೆ ಮರಳಬೇಕು ಎಂಬ ಸಂದೇಶ ಸಾರುವ ಒಂದೂವರೆ ನಿಮಿಷದ ಕಿರುಚಿತ್ರ ಮಾಡಲಾಗಿದೆ. ಈ ಜಾಹೀರಾತಿನಲ್ಲಿ ಖಿಲಾಡಿ ಅಕ್ಷಯ್ ಕುಮಾರ್ ನಟಿಸಿದ್ದಾರೆ.ಡಾಕ್ಟರ್​​ಗಳು, ವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು ಸೇರಿದಂತೆ ಹಲವಾರು ಮಂದಿ ಈಗಲೂ ಕೆಲಸ ಮಾಡುತ್ತಿದ್ದಾರೆ. ಅವರೂ ಭಯದಿಂದ ಮನೆಯಲ್ಲೇ ಕುಳಿತಿದ್ದರೆ ಹೇಗೆ? ಹೀಗಾಗಿಯೇ ಮುಖಕ್ಕೆ ಮಾಸ್ಕ್ ಧರಿಸಿರಬೇಕು, ಆಗಾಗ ಕೈ ತೊಳೆಯುತ್ತಿರಬೇಕು ಹಾಗೂ ಜನರಿಂದ ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಂಡು ಕೆಲಸದ ಸ್ಥಳಗಳಲ್ಲಿ ಎಚ್ಚರಿಕೆ ವಹಿಸಿದರೆ ಸಾಕು ಎಂದು ಕಿವಿಮಾತು ಹೇಳಿದ್ದಾರೆ ಅಕ್ಷಯ್. ಹಾಗೇ ಇದು ತಲೆಬಿಸಿ ಮಾಡಿಕೊಳ್ಳುವ ಸಮಯವಲ್ಲ, ಒಬ್ಬರಿಗೊಬ್ಬರು ಸಪೋರ್ಟ್ ಮಾಡುವ ಸಮಯ ಎಂದೂ ಈ ಕಿರುಚಿತ್ರದಲ್ಲಿ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅಕ್ಷಯ್ ಅವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
First published: June 3, 2020, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading