Akshay Kumar: ನಾಯಕಿಯೊಂದಿಗೆ ವಯಸ್ಸಿನ ವ್ಯತ್ಯಾಸ: ಟ್ರೋಲ್‌ ಆದ ಅಕ್ಷಯ್‌ ಕುಮಾರ್

ಸೌಂದರ್ಯವನ್ನು ಯೌವನದೊಂದಿಗೆ ಅಳೆಯಲಾಗುತ್ತದೆ. ಹಾಗಾಗಿ ಇಲ್ಲಿ ಕೇವಲ ಕಿರಿಯ ವಯಸ್ಸಿನ ನಟಿಯರಿಗೆ ಮಾತ್ರ ಮನ್ನಣೆ ಎಂದು ನಾನು ಭಾವಿಸುತ್ತೇನೆ

ಅಕ್ಷಯ್‌ ಕುಮಾರ್

ಅಕ್ಷಯ್‌ ಕುಮಾರ್

  • Share this:
ಗುಂಪುಗಾರಿಕೆ, ವರ್ಣಭೇದ ನೀತಿಯಂತಹ ಅನೇಕ ವಿಷಯಗಳಲ್ಲಿ ಇತ್ತೀಚೆಗೆ ಹಲವಾರು ಆರೋಪಗಳಿಗೆ ಗುರಿಯಾಗಿದೆ. ಕಳೆದ ಕೆಲವು ವರ್ಷಗಳಿಂದ, ಹಿಂದಿ ಚಿತ್ರರಂಗವು ಪ್ರಗತಿಪರವಾಗಿ ಬೆಳೆದಿದೆ. ಆದರೂ ಇಂತಹ ನಿದರ್ಶನಗಳು ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತವೆ. ಈಗ ಚಿತ್ರವೊಂದರ ನಟ ಮತ್ತು ನಟಿಯ ನಡುವಿನ ವಯಸ್ಸಿನ ಅಂತರ ಟ್ರೋಲ್‌ಗೆ( Age Troll) ಗುರಿಯಾಗಿದೆ.ಹೆಚ್ಚಿನ ಸಂದರ್ಭಗಳಲ್ಲಿ ಬಾಲಿವುಡ್ (Bollywood Actor) ನಟರ ವಯಸ್ಸು ನಟಿಯರ ವಯಸ್ಸಿಗಿಂತ 2 ಪಟ್ಟು ಹೆಚ್ಚಾಗಿರುತ್ತದೆ. ಸಲ್ಮಾನ್ ಖಾನ್ (Salman Khan) ಮತ್ತು ಅಮೀರ್ ಖಾನ್‌ನಿಂದ (Amir Khan) ಹಿಡಿದು ಅಕ್ಷಯ್ ಕುಮಾರ್‌ನಿಂದ ಅಜಯ್ ದೇವಗನ್‌ವರೆಗೆ (Ajay Devagan), ಅನೇಕ 50ರ ಹರೆಯಕ್ಕಿಂತ ಹೆಚ್ಚಿನ ನಟರು ತಮಗಿಂತ ಅತಿ ಕಿರಿಯರಾದ ನಟಿಯರ ಎದುರು ನಟಿಸಿದ್ದಾರೆ. ಈಗ ಅಕ್ಷಯ್ ಕುಮಾರ್ ಅಭಿನಯದ 'ಪೃಥ್ವಿರಾಜ್' (Prithviraj) ಚಿತ್ರದ ಅಧಿಕೃತ ಟೀಸರ್‌ನಲ್ಲಿ ಅಂತಹ ಒಂದು ನಿದರ್ಶನವನ್ನು ಎತ್ತಿ ತೋರಿಸಲಾಗಿದೆ.

ಟ್ರೇಲರ್ ಬಿಡುಗಡೆಯಾದ ತಕ್ಷಣ, 54 ವರ್ಷದ ಅಕ್ಷಯ್‌ ಕುಮಾರ್, 24 ವರ್ಷದ ಮಾನುಷಿ ಚಿಲ್ಲರ್ ಅವರೊಂದಿಗೆ ಹೇಗೆ ಮತ್ತು ಏಕೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ನಟ-ನಟಿಯರಿಗೆ ಸಿಗುತ್ತಿಲ್ಲ ಕೆಲಸ

ಕಳೆದ ವರ್ಷ, ನಟಿ ದಿಯಾ ಮಿರ್ಜಾ ಚಲನಚಿತ್ರೋದ್ಯಮದಲ್ಲಿ ಇರುವ ಪ್ರಚಲಿತ ವಯೋಮಾನ ಮತ್ತು ಲಿಂಗಭೇದಭಾವ ಉದ್ದೇಶಿಸಿ ಮಾತನಾಡಿದರು. ಸಂದರ್ಶನವೊಂದರಲ್ಲಿ, ಕಿರಿಯ ನಟಿಯರು ಹಿರಿಯ ನಟರ ಜೊತೆ ನಟಿಸುವುದರ ಕುರಿತು ಮಾತನಾಡಿದರು. ಆದರೆ ಹಿರಿಯರ ನಟಿಯರಿಗೆ ಸಾಕಷ್ಟು ಕೆಲಸ ಸಿಗುವುದಿಲ್ಲ ಎನ್ನುತ್ತಾರೆ, ನಟಿ ನೀನಾ ಗುಪ್ತಾ ಉದಾಹರಣೆ ನೀಡಿದರು. 'ಬಧಾಯಿ ಹೋ' ಮೂಲಕ ಪುನರಾಗಮನ ಮಾಡುವ ಮೊದಲು Instagram ಪೋಸ್ಟ್‌ನಲ್ಲಿ ನೀನಾ ಗುಪ್ತಾ ಕೆಲಸ ಕೇಳಬೇಕಾಗಿ ಬಂದ ಅನಿವಾರ್ಯತೆ ಇದ್ದಿದ್ದನ್ನು ಪ್ರಸ್ತಾಪ ಮಾಡಿದ್ದರು ದಿಯಾ ಮಿರ್ಜಾ.

“ಸೌಂದರ್ಯವನ್ನು ಯೌವನದೊಂದಿಗೆ ಅಳೆಯಲಾಗುತ್ತದೆ. ಹಾಗಾಗಿ ಇಲ್ಲಿ ಕೇವಲ ಕಿರಿಯ ವಯಸ್ಸಿನ ನಟಿಯರಿಗೆ ಮಾತ್ರ ಮನ್ನಣೆ ಎಂದು ನಾನು ಭಾವಿಸುತ್ತೇನೆ.

ಮಾನುಷಿ ಚಿಲ್ಲರ್​ ಸದ್ದು

ಅದೃಷ್ಟವಶಾತ್ ಕೆಲವು ನಿರ್ದೇಶಕರು ವಯಸ್ಸಿನ ಗಡಿ ದಾಟಿದ ಪಾತ್ರಗಳನ್ನು ಸೃಷ್ಠಿ ಮಾಡುತ್ತಾರೆ. ಆದಾಗ್ಯೂ, ಉದ್ಯಮದಲ್ಲಿ ವಯಸ್ಸಿನ ಕಾರಣದಿಂದ ಪ್ರಮುಖ ಪಾತ್ರಗಳನ್ನು ಪಡೆಯದ ಅನೇಕ ಮಧ್ಯ ವಯಸ್ಕ ನಟಿಯರಿದ್ದಾರೆ ಎಂದು ದಿಯಾ ಅಭಿಪ್ರಾಯಪಟ್ಟಿದ್ದರು.

ಈಗ ಪೃಥ್ವಿರಾಜ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಮಾನುಷಿ ಅವರ ವಯಸ್ಸಿಗೆ ಸಂಬಂಧಪಟ್ಟಂತೆ ಸದ್ದು ಮಾಡುತ್ತಿರುವ ನೆಟ್ಟಿಗರ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.

ಅಕ್ಷಯ್ ಕುಮಾರ್ ವಯಸ್ಸು - 54 ವರ್ಷ.

ಮಾನುಷಿ ಚಿಲ್ಲರ್ ವಯಸ್ಸು - 24 ವರ್ಷ.

ಏನು ಕರ್ಮ ಇದು... ಇದನ್ನು ಹೇಗೆ ಸಹಿಸಿಕೊಳ್ಳೋದು ?

-ನಾವು ನಮ್ಮ ನಾಯಕರನ್ನು ಹೆಚ್ಚು ಎಚ್ಚರಿಕೆಯಿಂದ ಆರಿಸಬೇಕಾಗಿದೆ.

-ಪೃಥ್ವಿರಾಜ್ ಚೌಹಾಣ್ ತಮ್ಮ 43ನೇ ವಯಸ್ಸಿನಲ್ಲಿ ನಿಧನರಾದರು. ಆದರೆ, ಅವರ ಪಾತ್ರ ಮಾಡಿರುವ ನಟನಿಗೆ 54 ವರ್ಷ. ಇದು ಹೇಗಿದೆ..?

- ದುರದೃಷ್ಟವಶಾತ್ ಬಾಲಿವುಡ್‌ನಲ್ಲಿ 50ಕ್ಕಿಂತ ಕಡಿಮೆ ವಯಸ್ಸಿನ ನಟರಿಲ್ಲ. ಆದರೆ, ಮಾನುಷಿ ಚಿಲ್ಲರ್ ಅವರಿಗೆ 24. ಬಾಲಿವುಡ್‌ನ ದುರದೃಷ್ಟ ಅಂದ್ರೆ, ಇಲ್ಲಿ 50ರ ಆಸುಪಾಸಿನ ನಟಿ ಇಲ್ಲ.

ಇದನ್ನು ಓದಿ: ಮದ್ಯ, ಡ್ರಗ್ಸ್​​ ವ್ಯಸನಕ್ಕೆ ಒಳಗಾಗಿ ಅದರಿಂದ ಹೊರಬಂದ ಬಾಲಿವುಡ್​ ಸ್ಟಾರ್​ಗಳಿವರು

-ನಾಯಕನಿಗೆ 54 ವರ್ಷ

ನಾಯಕಿ ವಯಸ್ಸು 24

ಇದು ಬಾಲಿವುಡ್ ನಮಗೆ ಕೊಡೋ ಲವ್‌ಸ್ಟೋರಿ

ಈ ರೀತಿ ಹಲವು ನೆಟ್ಟಿಗರು ವೈವಿಧ್ಯಮಯವಾಗಿ ಕಾಮೆಂಟ್‌ ಮಾಡಿದ್ದಾರೆ.
Published by:Sharath Sharma Kalagaru
First published: