Akshay-Samantha: ಸಮಂತಾ ಮನೆಯೊಳಗೆ ಕಳ್ಳನಂತೆ ನುಗ್ಗಿದ ಅಕ್ಷಯ್ ಕುಮಾರ್, ಮುಂದೆ? ವಿಡಿಯೋ ನೋಡಿ

ಇವರಿಬ್ಬರು ಒಂದು ಹೊಸ ಟಿವಿ ಜಾಹೀರಾತಿ(Advertisement)ನಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಆ ಜಾಹೀರಾತಿನಲ್ಲಿ ಅಕ್ಷಯ್, ಸಮಂತಾ ಮನೆಗೆ ಕಳ್ಳನಂತೆ ನುಗ್ಗಿದ್ದಾರೆ.ಈ ಇಬ್ಬರೂ ಸ್ಟಾರ್ ನಟರು ಒಂದು ಸ್ನ್ಯಾಕ್(Snack) ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಅವರ ಅಭಿಮಾನಿಗಳು(Fans) ಇದನ್ನು ನೋಡಿ ಫುಲ್ ಫಿದಾ ಆಗಿರುವುದಂತೂ ನಿಜ.

ಸಮಂತಾ, ಅಕ್ಷಯ್​ ಕುಮಾರ್​

ಸಮಂತಾ, ಅಕ್ಷಯ್​ ಕುಮಾರ್​

  • Share this:
ಬಾಲಿವುಡ್ ನಟ ಅಕ್ಷಯ್ ಕುಮಾರ್(Akshay Kumar), ತೆಲುಗು ನಟಿ ಸಮಂತಾ ರುತು ಪ್ರಭು(Samantha Ruthu Prabhu) ಅವರ ಮನೆಗೆ ಕಳ್ಳನಂತೆ ನುಗ್ಗಿದ್ದು ನೈಜ ಘಟನೆಯಲ್ಲಿ ಅಲ್ಲ, ಇವರಿಬ್ಬರು ಒಂದು ಹೊಸ ಟಿವಿ ಜಾಹೀರಾತಿ(Advertisement)ನಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಆ ಜಾಹೀರಾತಿನಲ್ಲಿ ಅಕ್ಷಯ್, ಸಮಂತಾ ಮನೆಗೆ ಕಳ್ಳನಂತೆ ನುಗ್ಗಿದ್ದಾರೆ.ಈ ಇಬ್ಬರೂ ಸ್ಟಾರ್ ನಟರು ಒಂದು ಸ್ನ್ಯಾಕ್(Snack) ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಅವರ ಅಭಿಮಾನಿಗಳು(Fans) ಇದನ್ನು ನೋಡಿ ಫುಲ್ ಫಿದಾ ಆಗಿರುವುದಂತೂ ನಿಜ. ಈ ಒಂದು ನಿಮಿಷದ ಟಿವಿ ಜಾಹೀರಾತಿನಲ್ಲಿ ನಟ ಅಕ್ಷಯ್ ರಾತ್ರಿ ನಟಿ ಸಮಂತಾ ಮನೆಗೆ ಬರುವ ಕಳ್ಳನಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಅಡುಗೆ ಮನೆಯಲ್ಲಿದ್ದ ಒಂದು ತಿಂಡಿ ಪ್ಯಾಕೆಟ್(Snack Packet) ಅನ್ನು ನೋಡಿ ಅವರು ತಾನು ಆ ಮನೆಗೆ ಏಕೆ ಬಂದಿದ್ದೇನೆ ಎನ್ನುವುದನ್ನೇ ಮರೆತು ಬಿಡುತ್ತಾರೆ. ಅದೇ ಸಮಯಕ್ಕೆ ಸಮಂತಾ(Samantha) ಮತ್ತು ಅವಳ ಕುಟುಂಬ ಸದಸ್ಯರು ಆ ಪ್ಯಾಕೆಟ್ ಅನ್ನು ಅಕ್ಷಯ್ ತಿನ್ನಬೇಕು ಎನ್ನುವಷ್ಟರಲ್ಲಿಯೇ ಅವರನ್ನು ಹಿಡಿಯುತ್ತಾರೆ. ಸಮಂತಾ ಅವರನ್ನು ಹಿಡಿದು ಆ ಪ್ಯಾಕೆಟ್‌ನಲ್ಲಿರುವ ತಿಂಡಿಯನ್ನು ಸ್ವತಃ ತಾನೇ ಮೊದಲು ಸವಿಯಲು ಅಕ್ಷಯ್‌ರಿಂದ ಅದನ್ನು ಕಸಿದುಕೊಳ್ಳುತ್ತಾರೆ.

ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅಕ್ಷಯ್​ - ಸಮಂತಾ!

ಆ ಜಾಹೀರಾತಿನಲ್ಲಿ ಸಮಂತಾ ತಾಯಿಯ ಪಾತ್ರದಲ್ಲಿ ನಟಿಸಿದವರು ಅಕ್ಷಯ್‌ಗೆ ಮಗನೇ ನೀವು ಇದನ್ನು ತಿನ್ನಿರಿ ಎಂದು ಹೇಳಿದಾಗ ಸಮಂತಾ ಅದನ್ನು ಅಕ್ಷಯ್‌ಗೆ ಕೊಡುತ್ತಾರೆ. ಒಂದನ್ನು ತನ್ನ ಬಾಯಿಯಲ್ಲಿಟ್ಟುಕೊಂಡ ನಂತರ ಅಕ್ಷಯ್‌ಗೆ ಅದು ತುಂಬಾನೇ ರುಚಿಸುತ್ತದೆ. ಆ ಪ್ಯಾಕೇಟನ್ನೇ ತೆಗೆದುಕೊಂಡು ತಿನ್ನಲು ಪ್ರಾರಂಭಿಸುತ್ತಾರೆ. ಎಲ್ಲಾ ತಿಂದು ಮುಗಿಸಿದ ನಂತರ ಅಕ್ಷಯ್ ತಾನು ಅಲ್ಲಿಂದ ಹೊರಡುವುದಾಗಿ ಹೇಳುತ್ತಾರೆ. ಆಗ ಸಮಂತಾ ಪ್ರೀತಿಯಿಂದ ನಿಲ್ಲಿ ನಿಮಗೆ ಹೋಗಲು ಒಂದು ಕಾರನ್ನು ಬರ ಹೇಳಿದ್ದೇವೆ ಎಂದು ಹೇಳಿದಾಗ ಹಿನ್ನೆಲೆಯಲ್ಲಿ ಪೊಲೀಸ್ ವಾಹನದ ಸೈರನ್ ಕೇಳಿಸುತ್ತದೆ.


ಇದನ್ನು ಓದಿ: ಈ​ ಸ್ಟಾರ್​​ ಜೊತೆ ಕಮ್​ಬ್ಯಾಕ್​ ಮಾಡ್ತಾರಂತೆ ಅನುಷ್ಕಾ ಶೆಟ್ಟಿ.. ಅಭಿಮಾನಿಗಳ ಆಸೆ ಕೊನೆಗೂ ಈಡೇರುತ್ತಿದೆ!

ಒಂದೇ ಸಿನಿಮಾದಲ್ಲಿ ನಟಿಸ್ತಾರಾ ಅಕ್ಕಿ-ಸಮಂತಾ?

ಇವರಿಬ್ಬರು ಸ್ಟಾರ್ ನಟರ ಹಲವಾರು ಅಭಿಮಾನಿಗಳು ಈ ಜಾಹೀರಾತನ್ನು ನೋಡಿ ತುಂಬಾನೇ ಇಷ್ಟ ಪಟ್ಟಿದ್ದು, ಅನೇಕರು ಇವರಿಬ್ಬರನ್ನು ಒಂದೇ ಚಲನಚಿತ್ರದಲ್ಲಿ ಒಟ್ಟಿಗೆ ನಟಿಸುವುದನ್ನು ನೋಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಅಕ್ಷಯ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಈ ಜಾಹೀರಾತಿಗೆ ಅಭಿಮಾನಿಯೊಬ್ಬರು "ನಮಗೆ ಈ ಜೋಡಿ ಬೇಕು ಸರ್” ಎಂದು ಬರೆದಿದ್ದಾರೆ. ಇನ್ನೊಬ್ಬರು ಟ್ವಿಟ್ಟರ್‌ನಲ್ಲಿ, "ಅಕ್ಷಯ್ ಕುಮಾರ್ ಮತ್ತು ಸಮಂತಾ ಪ್ರಭು ಅವರನ್ನು ಒಂದೇ ಚಿತ್ರದಲ್ಲಿ ಒಟ್ಟಿಗೆ ನೋಡಲು ನಾವು ಇಷ್ಟಪಡುತ್ತೇವೆ" ಎಂದು ಹೇಳಿದ್ದಾರೆ. "ಈ ಜೋಡಿ ಕನಿಷ್ಠ ಒಂದು ಚಲನಚಿತ್ರವನ್ನಾದರೂ ಒಟ್ಟಿಗೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಇನ್ನೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: ‘ರೌಡಿ ಬಾಯ್ಸ್’ ಸಿನಿಮಾದಲ್ಲಿ ನಟಿ ಅನುಪಮಾ ಕಿಸ್ಸಿಂಗ್ ಸೀನ್​ ಬಗ್ಗೆಯೇ ಚರ್ಚೆ, ವಿಡಿಯೋ ನೋಡಿ

ಅಕ್ಷಯ್​ ಕೈಯಲ್ಲಿದೆ ಸಾಲು ಸಾಲು ಚಿತ್ರಗಳು!

ಅಕ್ಷಯ್ ಇತ್ತೀಚೆಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನುಶ್ರತ್ ಭರುಚ್ಚ ಅವರೊಂದಿಗೆ ‘ರಾಮಸೇತು’ ಚಿತ್ರದ ಚಿತ್ರೀಕರಣದಲ್ಲಿದ್ದರು ಮತ್ತು ಈಗಾಗಲೇ ಇವರು ‘ಬಚ್ಚನ್ ಪಾಂಡೆ’ ಮತ್ತು ‘ರಕ್ಷಾ ಬಂಧನ್’ ಚಿತ್ರಗಳ ಚಿತ್ರೀಕರಣ ಮುಗಿಸಿದ್ದಾರೆ. ಅವರು ಇತ್ತೀಚೆಗೆ ಪೀರಿಯಡ್ ಡ್ರಾಮಾ ‘ಪೃಥ್ವಿರಾಜ್‌’ ಟ್ರೈಲರ್ ಅನ್ನು ಅನಾವರಣಗೊಳಿಸಿದರು. ಜೊತೆಗೆ ಒಎಂಜಿ2 - ಓ ಮೈ ಗಾಡ್ ಚಿತ್ರದಲ್ಲಿಯೂ ಸಹ ಇವರು ಕೆಲಸ ಮಾಡಲಿದ್ದಾರೆ.
Published by:Vasudeva M
First published: