ರಿಷಬ್​ ಶೆಟ್ಟಿ ನಟನೆಯ ಬೆಲ್​ ಬಾಟಂ ಹಿಂದಿ ರಿಮೇಕ್​ನಲ್ಲಿ ಸ್ಟಾರ್​ ನಟ

news18-kannada
Updated:November 15, 2019, 11:43 AM IST
ರಿಷಬ್​ ಶೆಟ್ಟಿ ನಟನೆಯ ಬೆಲ್​ ಬಾಟಂ ಹಿಂದಿ ರಿಮೇಕ್​ನಲ್ಲಿ ಸ್ಟಾರ್​ ನಟ
  • Share this:
ಸ್ಯಾಂಡಲ್​ವುಡ್​ನಲ್ಲಿ ರಿಷಬ್​ ಶೆಟ್ಟಿ ಮತ್ತು ಹರಿಪ್ರಿಯಾ ಕಾಂಬಿನೇಷನ್​ನ ‘ಬೆಲ್​ ಬಾಟಂ‘ ಸಿನಿಮಾ ಪ್ರದರ್ಶನ ಕಂಡು ಭಾರೀ ಪ್ರಶಂಸೆ ಗಿಟ್ಟಿಸಿಕೊಂಡಿತ್ತು. ಇದೀಗ ಶೆಟ್ರ ‘ಬೆಲ್​ ಬಾಟಂ‘ ಸಿನಿಮಾವನ್ನು ಬಾಲಿವುಡ್​ ಸ್ಟಾರ್​ನಟರೊಬ್ಬರು ಮೆಚ್ಚಿಕೊಂಡಿದ್ದು. ಹಿಂದಿಯಲ್ಲಿ ರಿಮೇಕ್​ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ರಿಷಬ್​ ಶೆಟ್ಟಿ ನಿರ್ವಹಿಸಿದ ಡಿಟೆಕ್ಟೀವ್​ ದಿವಾಕರ್​ ಪಾತ್ರವನ್ನು ಬಾಲಿವುಡ್​ ಸೂಪರ್​ ಸ್ಟಾರ್​ ಅಕ್ಷಯ್​ ಕುಮಾರ್​ ಮಾಡಲಿದ್ದಾರೆ ಎಂದು ಟೈಮ್ಸ್​ ಸಮೂಹದ ಜೂಮ್​ ವರದಿ ಮಾಡಿದೆ. ಬೆಲ್​ ಬಾಟಂ ಸಿನಿಮಾವನ್ನು ರಂಜಿತ್​ ತಿವಾರಿ ನಿರ್ದೇಶನ ಮಾಡಲಿದ್ದು, ನಿಖಿಲ್​ ಅಡ್ವಾಣಿ ನಿರ್ಮಾಣ ಮಾಡಲಿದ್ದಾರೆ.

ಈ ಕುರಿತಂತೆ ಮಾತನಾಡಿದ ರಿಷಬ್​ ‘ಬೆಲ್​ಬಾಟಂ' ಸಿನಿಮಾ ಹಿಂದಿ ಮತ್ತು ತೆಲುಗು ರಿಮೇಕ್​​​ ರೈಟ್ಸ್​ ಸೇಲ್​ ಆಗಿರುವ ವಿಚಾರ ನನಗೆ ತಿಳಿದಿತ್ತು. ಆದರೆ ಹಿಂದಿಯಲ್ಲಿ ನಟ ಅಕ್ಷಯ್​ ಕುಮಾರ್​​ ನಟಿಸಲಿದ್ದಾರೆ ಎಂಬ ಮಾಹಿತಿ ಗೊತ್ತಿರಲಿಲ್ಲ. ಅಂತಹ ಹೆಸರಾಂತ ನಟ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದರೆ ಅದೋಂದು ಸಂಭ್ರಮದ ವಿಷಯ. ಕನ್ನಡ ಚಿತ್ರಕ್ಕೆ ಸಿಕ್ಕ ಗೌರವ. ನಾನು ಮಾಡಿದ ಪಾತ್ರದಲ್ಲಿ ಅವರನ್ನು ನೋಡಲು ಅಷ್ಟೇ ಕಾತುರನಾಗಿದ್ದೇನೆ‘ ಎಂದಿದ್ದಾರೆ.

‘ಬೆಲ್​ಬಾಟಂ


ನಟಿ ಹರಿಪ್ರಿಯಾ ಕೂಡ ಈ ಬಗ್ಗೆ ಮಾತನಾಡಿ ‘ಬೆಲ್​ ಬಾಟಂ ಸಿನಿಮಾ ಹಿಂದಿಗೆ ರಿಮೇಕ್​ ಆಗುತ್ತಿರುವುದು ಕೇಳಿ ಸಂತೋಷ ಆಯಿತು. ನಾಯಕನ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸುತ್ತಿದ್ದಾರೆ ಎಂಬ ಸುದ್ದಿ ಇನ್ನು ಅಚ್ಚರಿ ತಂದಿದೆ. ನಾಯಕಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ನನ್ನಲ್ಲಿದೆ‘ ಎಂದರು.

80ನೇ ದಶಕದ ರೆಟ್ರೋ ಸ್ಟೈಲಿನ ‘ಬೆಲ್​ ಬಾಟಂ‘ ಸಿನಿಮಾದ ಚಿತ್ರಕತೆಯನ್ನು ಟಿ.ಕೆ ದಯಾನಂದ್​ ಬರೆದಿದ್ದಾರೆ. ಜಯತೀರ್ಥ ನಿರ್ದೇಶನ ಮಾಡಿದ್ದಾರೆ.  ಈ ಸಿನಿಮಾ ಬಾಕ್ಸ್​ ಆಫೀಸಿನಲ್ಲಿ ಭರ್ಜರಿ ಸೌಂಡ್​ ಮಾಡಿದೆ. ಶತದಿನ ಪ್ರದರ್ಶನವನ್ನು ಕಂಡಿದೆ.

ಇದನ್ನೂ ಓದಿ: 34ನೇ ಹ್ಯಾಟ್ರಿಕ್​ ಗೋಲು ಬಾರಿಸಿದ ಮೆಸ್ಸಿ; ಬಾರ್ಸಿಲೋನಕ್ಕೆ ಭರ್ಜರಿ ಜಯಇದನ್ನೂ ಓದಿ: PAN card rules: ಇನ್ಮೇಲೆ ಪಾನ್​ ಕಾರ್ಡ್​ ಬಳಕೆದಾರರು ಈ ತಪ್ಪು ಮಾಡಿದರೆ 10 ಸಾವಿರ ದಂಡ!

First published:November 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading