Soorarai Pottru: ತಮಿಳಿನ ಬ್ಲಾಕ್‌ಬಸ್ಟರ್‌ ಸೂರರೈ ಪೊಟ್ರು ಹಿಂದಿ ರಿಮೇಕ್​ನಲ್ಲಿ ಅಕ್ಷಯ್ ಕುಮಾರ್ ?

Akshay Kumar: ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಮ್ ಬಿಡುಗಡೆಯಾಗಿದ್ದು,  ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಅಕ್ಷಯ್ ಕುಮಾರ ಒಂದರ ನಂತರ ಒಂದು ಹಿಟ್ ಚಿತ್ರಗಳನ್ನು ನೀಡುತ್ತಿದ್ದು, ಸಧ್ಯ ಅವರ ಕೈನಲ್ಲಿ 4 ಕ್ಕಿಂತ ಹೆಚ್ಚು ಚಿತ್ರಗಳಿವೆ.

ಸೂರರೈ ಪೊಟ್ರು

ಸೂರರೈ ಪೊಟ್ರು

  • Share this:
ತಮಿಳು ಬ್ಲಾಕ್‌ಬಸ್ಟರ್‌ನ ಹಿಂದಿ ರೀಮೇಕ್, ಸೂರರೈ ಪೊಟ್ರು(Soorarai Pottru) ಕೆಲವು ವಾರಗಳಿಂದ ಭಾರೀ ಸುದ್ದಿಯಲ್ಲಿದೆ. ತಮಿಳಿನ ಖ್ಯಾತ ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಚಿತ್ರ  ಏರ್ ಡೆಕ್ಕನ್ (Air Deccan) ಸಂಸ್ಥಾಪಕ ಜಿ ಆರ್ ಗೋಪಿನಾಥ್ ಅವರ ಜೀವನದ ಕಥೆಯನ್ನು ಆಧಾರಿಸಿದೆ.  ವಿಮಾನಯಾನವನ್ನು ಸಾಮಾನ್ಯ ಜನರಿಗೆ ಕೈಗೆಟುಕುವ  ಮಾಡಲು ಗೋಪಿನಾಥ್  ಅವರು ಪಟ್ಟ ಶ್ರಮ ಮತ್ತು ಕಷ್ಟಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಇನ್ನು ಈ ಚಿತ್ರ ಡಿಜಿಟಲ್ ಪ್ಲ್ಯಾಟ್​ಫಾರ್ಮನಲ್ಲಿ ಬಿಡುಗಡೆಯಾಗಿದ್ದು, ವೀಕ್ಷರಿಂದ ಭಾರೀ ಮೆಚ್ಚುಗೆ ಪಡೆದಿತ್ತು.

ಈ ಚಿತ್ರದ ಮೂಲ ಬರಹಗಾರ್ತಿ ಮತ್ತು ನಿರ್ದೇಶಕಿ ಸುಧಾ ಕೊಂಗಾರ ಪ್ರಸಾದ್, ಜುಲೈನಲ್ಲಿ ಹಿಂದಿ ರಿಮೇಕ್ ಬಗ್ಗೆ ದೃಢಪಡಿಸಿದ್ದಾರೆ. ವರದಿಗಳ ಪ್ರಕಾರ, ಹಿಂದಿ ರಿಮೇಕ್‌ನಲ್ಲಿ ನಾಯಕನಾಗಿ ನಟಿಸಲು ಅಕ್ಷಯ್ ಕುಮಾರ್ ಜೊತೆ ಚಿತ್ರತಂಡ ಮಾತುಕತೆ ನಡೆಸುತ್ತಿದೆ. ಮೂಲಗಳ ಪ್ರಕಾರ, ನಿರ್ದೇಶಕರು ಈ ಚಿತ್ರದ ಬಗ್ಗೆ ಮಾತನಾಡಿದ್ದು, ಎಲ್ಲವೂ ಚರ್ಚೆಯ ಹಂತದಲ್ಲಿದೆ. ನಿರ್ಮಾಪಕರು ಮಾತ್ರ ಅಧಿಕೃತವಾಗಿ ನಿರ್ಧಾರವಾಗಿದೆ. ನಾನು ಹಿಂದಿ ಆವೃತ್ತಿಯನ್ನು ಬರೆಯಲು ಪ್ರಾರಂಭಿಸಬೇಕಾಗಿದೆ,ಎಂದು ಸುಧಾ ಹೇಳಿದ್ದಾರೆ.

ಸೂರರೈ ಪೊಟ್ರು ಚಿತ್ರವನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಿದಾಗ ಸಂತೋಷವಾಗಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಒಟಿಟಿಯಲ್ಲಿ ಬಿಡುಗಡೆ ಮಾಡಬೇಕಾಯಿತು ಎಂದು ಸುಧಾ ಹೇಳಿದ್ದಾರೆ. ಆದರೆ ಚಿತ್ರಕ್ಕೆ ಜನರ ಪ್ರತಿಕ್ರಿಯೆ ನೋಡಿ ತುಂಬಾ ಸಂತೋಷವಾಯಿತು ಎಂದಿದ್ದಾರೆ.

ಇದನ್ನೂ ಓದಿ: ರಹಸ್ಯ ವಿವಾಹದಿಂದ ಎಂಎಂಸ್​ ಲೀಕ್​ ವಿವಾದದವರಗೆ..!

ಇತ್ತೀಚೆಗೆ, ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತಮ್ಮ ಅಧಿಕೃತ ಸಾಮಾಜಿಕ ಖಾತೆಯ ಮೂಲಕ ಈ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇನ್ನು ಟ್ವಿಟ್ಟರ್​ನಲ್ಲಿ ಅಮಿತಾಬ್ ಅವರ ಟ್ವೀಟ್​ಗೆ

ಈ ರೀತಿ ಹಿರಿಯ ನಟರ ಮೆಚ್ಚುಗೆಯ ಮಾತುಗಳು ಮತ್ತು ಈ ರೀತಿಯ ಅದ್ಭುತ ಕ್ಷಣಗಳು ನಿಜಕ್ಕೂ  ಸೂರರೈ ಪೊಟ್ರು ಚಿತ್ರಕ್ಕೆ ಒಂದು ಬಹುಮಾನವಿದ್ದಂತೆ. ನಿಮ್ಮ ಮಾತುಗಳಿಗೆ ತುಂಬಾ ಧನ್ಯವಾದಗಳು ಎಂದು ಹೇಳಿದ್ದಾರೆ.

ಈ ಹಿಂದೆ, ಸೂರರೈ ಪೊಟ್ರು ಚಿತ್ರ  ತಂಡಕ್ಕೆ ಹತ್ತಿರವಿರುವ ಮೂಲವೊಂದು ಚಿತ್ರದ ಹಿಂದಿ ರಿಮೇಕ್​ಗೆ ನಟರನ್ನು ಆಯ್ಕೆ ಮಾಡುತ್ತಿರುವ ಕುರಿತು ಮಾಹಿತಿ ನೀಡಿತ್ತು. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕಥೆಯನ್ನು ಎಲ್ಲರೂ ನೋಡಬೇಕು. ಏಕೆಂದರೆ ನಟ ಸೂರ್ಯ ಮತ್ತು ಸಹ ನಿರ್ಮಾಪಕ ಗುಣೀತ್ ಮೊಂಗಾ ಈ ಚಿತ್ರದ  ಹಕ್ಕನ್ನು ಉಳಿಸಿಕೊಂಡಿದ್ದಾರೆ, ಅವರು ಅಕ್ಷಯ್ ಕುಮಾರ್ ಅವರೊಂದಿಗೆ ಈ ಚಿತ್ರವನ್ನು ಇನ್ನೊಂದು ಹಂತಕ್ಕೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಈಗಾಗಲೇ ಅಕ್ಷಯ್ ಕುಮಾರ್ ಅವರಿಗೆ ಕಥೆಯನ್ನು ವಿವರಿಸಲಾಗಿದೆ, ಅವರಿಗೂ ಕಥೆ ಇಷ್ಟವಾಗಿದೆ. ಅಕ್ಷಯ್ ಕುಮಾರ್ ಚಿತ್ರಕ್ಕೆ ಮೌಖಿಕವಾಗಿ ಒಪ್ಪಿಗೆ ನೀಡಿದ್ದು, ಅವರ ಡೇಟ್​ಗಾಗಿ ಕಾಯುತ್ತಿದ್ದ, ಉಳಿದ ಕೆಲ ಕೆಲಸಗಳು ಬಾಕಿ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಮ್ ಬಿಡುಗಡೆಯಾಗಿದ್ದು,  ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಅಕ್ಷಯ್ ಕುಮಾರ ಒಂದರ ನಂತರ ಒಂದು ಹಿಟ್ ಚಿತ್ರಗಳನ್ನು ನೀಡುತ್ತಿದ್ದು, ಸಧ್ಯ ಅವರ ಕೈನಲ್ಲಿ 4 ಕ್ಕಿಂತ ಹೆಚ್ಚು ಚಿತ್ರಗಳಿವೆ.

ಅಲ್ಲದೇ ಕಳೆದ ಎರಡು ವಾರಗಳಿಂದಲೂ ಅಕ್ಷಯ್ ಕುಮಾರ್ ಲಂಡನ್‌ನಲ್ಲಿದ್ದಾರೆ. ರಂಜಿತ್ ಎಂ ತಿವಾರಿ ನಿರ್ದೇಶನದ  ಸಿಂಡ್ರೆಲಾ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಅಕ್ಷಯ್ ಕುಮಾರ್  ಜೋಡಿಯಾಗಿ ನಟಿ ರಕುಲ್ ಪ್ರೀತ್ ಸಿಂಗ್ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಐಷಾರಾಮಿ ಅಪಾರ್ಟ್​ಮೆಂಟ್​ ಖರೀದಿಸಿದ

ಸಿಂಡ್ರೆಲಾ ಸಿನಿಮಾ ಹೊರತುಪಡಿಸಿ ಅಕ್ಷಯ್ ಕುಮಾರ್ ಅವರು ಸೂರ್ಯವಂಶಿ, ಬಚ್ಚನ್ ಪಾಂಡೆ, ಪೃಥ್ವಿರಾಜ್, ರಕ್ಷಾ ಬಂಧನ, ಅತ್ರಂಗಿ ರೇ, ರಾಮ ಸೇತು, ಒಎಂಜಿ 2, ಸೇರಿದಂತೆ ಹಲವು ಚಿತ್ರಗಳು ಸಜ್ಜಾಗುತ್ತಿದೆ.
Published by:Sandhya M
First published: