Akshay Kumar: ತಾಯಿಯ ನಿಧನದ ನಂತರ ಮತ್ತೆ ಚಿತ್ರೀಕರಣಕ್ಕೆ ಲಂಡನ್​ಗೆ ಹಾರಿದ ಅಕ್ಷಯ್ ಕುಮಾರ್

Bollywood: ಗಂಭೀರ ಆರೋಗ್ಯ ಸ್ಥಿತಿಯಲ್ಲಿದ್ದ ಅವರಿಗೆ ಆಸ್ಪತ್ರೆಯ ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದರು. ತಾಯಿಯ ಆರೋಗ್ಯದ ವಿಚಾರ ತಿಳಿಯುತ್ತಿದ್ದಂತೆ , ಲಂಡನ್​ನಲ್ಲಿ ಚಿತ್ರೀಕರಣದಲ್ಲಿದ್ದ ಅಕ್ಷಯ್ ಕುಮಾರ್  ಭಾರತಕ್ಕೆ ವಾಪಾಸ್​ ಆಗಿದ್ದರು

ಅಕ್ಷಯ್ ಕುಮಾರ್ ಕುಟುಂಬದೊಂದಿಗೆ

ಅಕ್ಷಯ್ ಕುಮಾರ್ ಕುಟುಂಬದೊಂದಿಗೆ

  • Share this:
ಬಾಲಿವುಡ್ ನಟ ಅಕ್ಷಯ್ ಕುಮಾರ್(Akshay Kumar)  ಲಂಡನ್​ನಲ್ಲಿ ತಮ್ಮ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದ ಸಮಯದಲ್ಲಿ ತಮ್ಮ ತಾಯಿ ಅರುಣಾ ಭಾಟಿಯಾ(Aruna Bhatia) ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ  ಸೆಪ್ಟೆಂಬರ್ 6 ರಂದು ಆಸ್ಪತ್ರೆಗೆ ದಾಖಲಿಸಿದ ನಂತರ ದೇಶಕ್ಕೆ ಮರಳಿದ್ದರು, ಆದರೂ  ದುರದೃಷ್ಟವಶಾತ್, ಎರಡು ದಿನಗಳ ನಂತರ, ಸೆಪ್ಟೆಂಬರ್ 8 ರಂದು ಅವರು ನಿಧನರಾಗಿದ್ದಾರೆ.  ಈಗ, ವರದಿಗಳ ಪ್ರಕಾರ ರಂಜಿತ್ ತಿವಾರಿ ನಿರ್ದೇಶನದ ತನ್ನ ಮುಂದಿನ ಚಿತ್ರ ಸಿಂಡ್ರೆಲಾ ಚಿತ್ರೀಕರಣಕ್ಕಾಗಿ ನಟ ಸೆಪ್ಟೆಂಬರ್ 10 ರಂದು ಲಂಡನ್‌ಗೆ(Lodon) ಹಿಂತಿರುಗಿದ್ದಾರೆ ಎಂದು ಹೇಳಲಾಗುತ್ತಿದೆ.   

ಒಂದು ಮೂಲದ ಪ್ರಕಾರ, "ಅಕ್ಷಯ್ ಸಂಪೂರ್ಣವಾಗಿ  ವೃತ್ತಿಪರತೆ ಮತ್ತು  ಜನರು  ಮುಂದಿನ ದಿನಗಳನ್ನು ಗಮನಿಸಿ ಮುಂದುವರೆಯಬೇಕು ಎಂಬ  ಮಾತನ್ನು ನಂಬುತ್ತಾರೆ. 100 % ಜನರು ನಿರ್ಮಾಣ ತಂಡ ಮತ್ತು ಸಿಬ್ಬಂದಿಯಲ್ಲಿ ಭಾಗಿಯಾಗಿರುವುದರಿಂದ ಚಲನಚಿತ್ರದ ಶೂಟಿಂಗ್‌ಗಳನ್ನು ಸ್ಥಗಿತಗೊಳಿಸಿದಾಗ, ವಿಶೇಷವಾಗಿ ನಡೆಯುತ್ತಿರುವ ಈ ಕೊರೊನಾ ಕಠಿಣ ಸಮಯದಲ್ಲಿ ಹಣಕಾಸಿನ ಸಮಸ್ಯೆಯ ಗಂಭೀರತೆಯನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಅವರು ತನ್ನ ತಾಯಿಯೊಂದಿಗೆ ಕಳೆದ ಕೆಲವು ದಿನಗಳಲ್ಲಿ ಇದ್ದರು, ಕಳೆದೆರಡು ದಿನಗಳಿಂದ ಎಲ್ಲಾ ಆಚರಣೆಗಳನ್ನು ಮಾಡಿ ಮುಗಿಸಿದ್ದಾರೆ. ಈಗ ಕೆಲಸವನ್ನು ಪುನರಾರಂಭಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸಿನಿಮಾದ ಸೆಟ್​ನಲ್ಲಿ ಅಮಿತಾಭ್ ಬಚ್ಚನ್ ಮೇಲೆ ರೇಗಿದ್ದ ಫರಾ ಖಾನ್.!

ಈ ಚಿತ್ರವು 2018 ರ ತಮಿಳು ಚಿತ್ರ ರತ್ಸಾಸನ್‌ನ  ರಿಮೇಕ್ ಆಗಿದ್ದು,  ರಾಕುಲ್ ಪ್ರೀತ್ ಸಿಂಗ್ ನಾಯಕಿಯಾಗಿ ಅಭಿನಯಿಸಿದ್ದಾರೆ.  ಅಕ್ಷಯ್ ವೃತ್ತಿ ವಿಷಯದಲ್ಲಿ ಅದ್ಭುತವಾದ ಪ್ಯಾಕ್  ವೇಳಾಪಟ್ಟಿಯನ್ನು ಹೊಂದಿದ್ದಾರೆ. ಅವರು ಭೂಮಿ ಪೆಡ್ನೇಕರ್  ಜೊತೆ ರಕ್ಷಾ ಬಂಧನ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದು,  ಓ ಮೈ ಗಾಡ್ 2 ಮತ್ತು ರಾಮ ಸೇತು ಚಿತ್ರಗಳಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್  ಸ್ಪೈ ಥ್ರಿಲ್ಲರ್ ಬೆಲ್ ಬಾಟಮ್‌ನಲ್ಲಿ ಕಾಣಿಸಿಕೊಂಡಿದ್ದರು. ಹಾಗೂ  ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಗಂಭೀರ ಆರೋಗ್ಯ ಸ್ಥಿತಿಯಲ್ಲಿದ್ದ ಅವರಿಗೆ ಆಸ್ಪತ್ರೆಯ ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದರು. ತಾಯಿಯ ಆರೋಗ್ಯದ ವಿಚಾರ ತಿಳಿಯುತ್ತಿದ್ದಂತೆ , ಲಂಡನ್​ನಲ್ಲಿ ಚಿತ್ರೀಕರಣದಲ್ಲಿದ್ದ ಅಕ್ಷಯ್ ಕುಮಾರ್  ಭಾರತಕ್ಕೆ ವಾಪಾಸ್​ ಆಗಿದ್ದರು. ತಮ್ಮ ತಾಯಿ ನಿಧನವಾಗಿರುವ ಸುದ್ದಿಯನ್ನು ಸ್ವತಃ ನಟ ಅಕ್ಷಯ್ ಕುಮಾರ್ ಅವರೇ ಖಚಿತಪಡಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದಅವರು, ‘ನನ್ನ ತಾಯಿಯೇ ನನ್ನ ಮೂಲ. ಇಂದು ನಾನು ಬಹಳಷ್ಟು ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ಅಮ್ಮ ಶ್ರೀಮತಿ ಅರುಣಾ ಭಾಟಿಯಾ ಇಂದು ಬೆಳಿಗ್ಗೆ ಶಾಂತಿಯುತವಾಗಿ ಈ ಜಗತ್ತನ್ನು ತೊರೆದರು. ನನ್ನ ತಾಯಿ ಗುಣಮುಖರಾಗಲೆಂದು ಬಯಸಿದ ನಿಮ್ಮ ಪ್ರಾರ್ಥನೆಯನ್ನು ನಾನು ಮತ್ತು ನನ್ನ ಕುಟುಂಬವು ಹೃದಯಪೂರ್ವಕವಾಗಿ ಗೌರವಿಸುತ್ತೇವೆ. ಓಂ ಶಾಂತಿ’ ಎಂದು ಬರೆದುಕೊಂಡಿದ್ದರು.

ಇನ್ನು ತಮಿಳು ಬ್ಲಾಕ್‌ಬಸ್ಟರ್‌ನ ಹಿಂದಿ ರೀಮೇಕ್, ಸೂರರೈ ಪೊಟ್ರು ಹಿಂದಿ ರಿಮೇಕ್​ನಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಿಷ್ಟೇ ಅಲ್ಲದೇ ಅಕ್ಷಯ್ ಕುಮಾರ್ ಹಲವು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಅಭಿಮಾನಿಗಳನ್ನು ತೆರೆಯ ಮೇಲೆ ರಂಜಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಮೊದಲಿನಿಂದಲೂ ಕೆಲಸದ ವಿಚಾರದಲ್ಲಿ  ಬದ್ಧತೆಯನ್ನು ಕಾಪಾಡಿಕೊಂಡಿದ್ದಾರೆ.  ಅವರು ಸಮಯ ಮತ್ತು ಆರೋಗ್ಯ ವಿಚಾರದಲ್ಲಿ ಕೂಡ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ.

ಇದನ್ನೂ ಓದಿ: ತನ್ನ ಬಯೋಪಿಕ್​ನಲ್ಲಿ ಐಶ್ವಯಾ ರೈ ನಾಯಕಿಯಾಗಬೇಕೆಂದು ಬಯಸಿದ್ದ ಜಯಲಲಿತಾ..!

ಇತ್ತೀಚಿನ ದಿನಗಳಲ್ಲಿ ಅಕ್ಷಯ್ ಕುಮಾರ್ ಬಹಳಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಒಂದರ ಮೇಲೊಂದರಂತೆ ಹಿಟ್ ಚಿತ್ರವನ್ನು ನೀಡುತ್ತಿದ್ದಾರೆ.
Published by:Sandhya M
First published: