Akshay Kumar: ಇನ್ಮೇಲೆ ತಂಬಾಕಿನ ಜಾಹೀರಾತಿನಲ್ಲಿ ನಾನು ಇರಲ್ಲ ಎಂದ ನಟ, ಕೋಟ್ಯಂತರ ರೂಪಾಯಿ ದಾನ!

Advertisement: ಈ ಜಾಹೀರಾತಿನಲ್ಲಿ ಅಕ್ಷಯ್‌ ಕುಮಾರ್‌ ಕಾಣಿಸಿಕೊಂಡಿದ್ದಕ್ಕೆ ನಟನ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮದ್ಯ ಮತ್ತು ತಂಬಾಕು ಉತ್ಪನ್ನಗಳ ಸೇವನೆಯ ವಿರುದ್ಧ ಮಾತನಾಡಿರುವ ಅವರ ಹಳೆಯ ವೀಡಿಯೊಗಳನ್ನು ಸಹ ಅಭಿಮಾನಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು.

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

  • Share this:
ಬಾಲಿವುಡ್‌ ಖ್ಯಾತ ನಟ ಅಕ್ಷಯ್‌ ಕುಮಾರ್‌ (Bollywood Actor Akshay Kumar) ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೋಲ್‌ಗೊಳಗಾಗಿದ್ದರು. ಇದಕ್ಕೆ ಕಾರಣ ಪಾನ್‌ ಮಸಾಲಾ (Paan Masala)  ಬ್ರ್ಯಾಂಡ್‌ ಜಾಹೀರಾತು. ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಕ್ಷಯ್‌ ಕುಮಾರ್‌ ಅಭಿಮಾನಿಗಳೇ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಎಚ್ಚೆತ್ತುಕೊಂಡ ನಟ ಅಕ್ಷಯ್‌ ಕುಮಾರ್‌ ತಂಬಾಕು ಬ್ರ್ಯಾಂಡ್‌ನ ರಾಯಭಾರಿಯಾಗುವುದಿಲ್ಲ ಎಂದು ಘೋಷಿಸಿದ್ದಾರೆ. ಅಲ್ಲದೆ, ಏಪ್ರಿಲ್ 21 ರ ಗುರುವಾರ ಮಧ್ಯರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ (Social Media) ಹೇಳಿಕೆ ನೀಡುವ ಮೂಲಕ ಅಕ್ಷಯ್ ಕುಮಾರ್ ಅವರು ತಮ್ಮ ಅಭಿಮಾನಿಗಳ ಕ್ಷಮೆಯನ್ನೂ ಕೋರಿದ್ದಾರೆ.

ತಂಬಾಕು ಬ್ರ್ಯಾಂಡ್‌ ರಾಯಭಾರಿಯಿಂದ ಹಿಂದೆ ಸರಿದ ಅಕ್ಷಯ್‌ ಕುಮಾರ್..!

ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರ ಜತೆ ಏಲಕ್ಕಿ ಉತ್ಪನ್ನಗಳ ಪಾನ್‌ ಮಸಾಲಾ ಬ್ರ್ಯಾಂಡ್‌ ರಾಯಭಾರಿಯಾಗಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಇತ್ತೀಚೆಗೆ ಸೇರಿಕೊಂಡಿದ್ದರು. ಆದರೆ, ಇದು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಬ್ರ್ಯಾಂಡ್ ಆಗಿದೆ. ಈ ಹಿನ್ನೆಲೆ ಅಕ್ಷಯ್‌ ಕುಮಾರ್‌ ನಿರ್ಧಾರವನ್ನು ಅವರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ.

ಈ ಹಿನ್ನೆಲೆ, ಜಾಹೀರಾತಿನಲ್ಲಿ ಕಾಣಿಸಿಕೊಂಡ ಕೆಲ ದಿನಗಳ ಬಳಿಕ ಅಕ್ಷಯ್‌ ಕುಮಾರ್‌ ಈಗ ಇನ್ಸ್ಟಾಗ್ರಾಮ್‌, ಟ್ವಿಟ್ಟರ್‌ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಆ ಬ್ರ್ಯಾಂಡ್‌ನ ರಾಯಭಾರಿಯಾಗಿಯೂ ಹಿಂದೆ ಸರಿದಿದ್ದಾರೆ.

ಅಕ್ಷಯ್‌ ಕುಮಾರ್‌ ಹೇಳಿದ್ದೇನು..?
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ನಟ ಅಕ್ಷಯ್‌ ಕುಮಾರ್‌, "ನನ್ನನ್ನು ಕ್ಷಮಿಸಿ, ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆಯು ನನ್ನ ಮೇಲೆ ಗಾಢವಾಗಿ ಪರಿಣಾಮ ಬೀರಿದೆ. ನಾನು ತಂಬಾಕ ಸೇವನೆಯನ್ನು ಒಪ್ಪುವುದಿಲ್ಲ . ಆದರೂ, ವಿಮಲ್ ಎಲಾಚಿ ಅವರೊಂದಿಗಿನ ನನ್ನ ಒಡನಾಟದ ಬಗ್ಗೆ   ನಿಮ್ಮ ಅಭಿಪ್ರಾಯಗಳನ್ನು  ನಾನು ಗೌರವಿಸುತ್ತೇನೆ. ಹಾಗೂ, ನಮ್ರತೆಯಿಂದ ನಾನು (ಬ್ರ್ಯಾಂಡ್‌ ರಾಯಭಾರಿಯಾಗಿ) ಹಿಂದೆ ಸರಿಯುತ್ತೇನೆ’’ ಎಂದಿದ್ದಾರೆ.

ಅಲ್ಲದೆ, ಈ ಬ್ರ್ಯಾಂಡ್‌ನ ರಾಯಭಾರಿಯಾಗಿ ತಾನು ಪಡೆದ ಸಂಪೂರ್ಣ ಹಣವನ್ನು  ಯೋಗ್ಯವಾದ ಕಾರಣಕ್ಕಾಗಿ ಕೊಡುಗೆ ನೀಡಲು ನಿರ್ಧರಿಸಿರುವುದಾಗಿಯೂ ಬಾಲಿವುಡ್‌ ನಟ ಘೋಷಿಸಿದರು.

‘’ನಾನು ಸಂಪೂರ್ಣ ಅನುಮೋದನೆ ಶುಲ್ಕವನ್ನು ಯೋಗ್ಯವಾದ ಕಾರಣಕ್ಕಾಗಿ ಕೊಡುಗೆ ನೀಡಲು ನಿರ್ಧರಿಸಿದ್ದೇನೆ. ಬ್ರ್ಯಾಂಡ್ ನನ್ನ ಮೇಲೆ ಬದ್ಧವಾಗಿರುವ ಒಪ್ಪಂದದ ಕಾನೂನು ಅವಧಿಯವರೆಗೆ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ಮುಂದುವರಿಸಬಹುದು. ಆದರೆ ನನ್ನ ಭವಿಷ್ಯದ ಆಯ್ಕೆಗಳನ್ನು ಮಾಡುವಲ್ಲಿ ನಾನು ಅತ್ಯಂತ ಜಾಗರೂಕರಾಗಿರುತ್ತೇನೆ ಎಂದು ಭರವಸೆ ನೀಡುತ್ತೇನೆ.  ಪ್ರತಿಯಾಗಿ ನಾನು ನಿಮ್ಮ ಪ್ರೀತಿ ಮತ್ತು ಶುಭಾಶಯಗಳನ್ನು ಬೇಡುವುದನ್ನು ಶಾಶ್ವತವಾಗಿ ಮುಂದುವರಿಸುತ್ತೇನೆ’’ ಎಂದೂ ಅಕ್ಷಯ್‌ ಕುಮಾರ್‌ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ಸಮಂತಾ ಬಳಿಕ ಈ ನಟಿ ಮೇಲೆ ನಾಗಚೈತನ್ಯಗೆ ಪ್ಯಾರ್​ಗೆ ಆಗ್ಬಿಟೈತೆ! ಮದ್ವೆ ಫಿಕ್ಸ್ ಅಂತ ಗುಸು ಗುಸು

ಬಾಲಿವುಡ್‌ ನಟ ಮಾಡಿರುವ ಪೋಸ್ಟ್‌  ಹೀಗಿದೆ
View this post on Instagram


A post shared by Akshay Kumar (@akshaykumar)


 ವಿವಾದವೇನು..?
ಪಾನ್‌ ಮಸಾಲಾ ಬ್ರ್ಯಾಂಡ್‌ನ ಇತ್ತೀಚಿನ ಜಾಹೀರಾತಿನಲ್ಲಿ, ಶಾರುಖ್ ಮತ್ತು ಅಜಯ್ ದೇವಗನ್ ಅವರು ಅಕ್ಷಯ್ ಕುಮಾರ್ ಅವರನ್ನು 'ವಿಮಲ್ ಯೂನಿವರ್ಸ್'ಗೆ ಸ್ವಾಗತಿಸುತ್ತಿರುವುದು ನೋಡಬಹುದಾಗಿದೆ. ಅವರೆಲ್ಲರೂ ವಿಮಲ್‌ ಕಂಪನಿಯ ಶೈಲಿಯ ಸೆಲ್ಯೂಟ್‌ ಅನ್ನು ಹೊಡೆದು ಎಲಾಚಿ (ಏಲಕ್ಕಿ) ಯನ್ನು ತಿನ್ನುವುದನ್ನ ವಿಡಿಯೋದಲ್ಲಿ ನೋಡಬಹುದು.

ಈ ಜಾಹೀರಾತಿನಲ್ಲಿ ಅಕ್ಷಯ್‌ ಕುಮಾರ್‌ ಕಾಣಿಸಿಕೊಂಡಿದ್ದಕ್ಕೆ ನಟನ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮದ್ಯ ಮತ್ತು ತಂಬಾಕು ಉತ್ಪನ್ನಗಳ ಸೇವನೆಯ ವಿರುದ್ಧ ಮಾತನಾಡಿರುವ ಅವರ ಹಳೆಯ ವೀಡಿಯೊಗಳನ್ನು ಸಹ ಅಭಿಮಾನಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಒದಿ: KGF 2ಗೆ ಫಿದಾ ಆದ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡ, ರಾಕಿ ಬಾಯ್ ಹವಾ ಹೇಗಿದೆ ನೋಡಿ

ಇನ್ನು, ನಟ ಅಕ್ಷಯ್‌ ಕುಮಾರ್‌ ಕೊನೆಯದಾಗಿ  ಬಚ್ಚನ್ ಪಾಂಡೆ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ, ಅವರ ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ರಕ್ಷಾ ಬಂಧನ, ರಾಮಸೇತು, ಪೃಥ್ವಿರಾಜ್ ಮತ್ತು ಸೆಲ್ಫೀ ಯಂತಹ ಚಿತ್ರಗಳಿದ್ದು, ಫುಲ್ ಬ್ಯುಸಿ ಇದ್ದಾರೆ.
Published by:Sandhya M
First published: