Laxmmi Bomb: ಅಕ್ಷಯ್​ ಕುಮಾರ್​ ನಟನೆಯ ಲಕ್ಷ್ಮಿ ಬಾಂಬ್​ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ಫಿಕ್ಸ್​..!

Akshay Kumar: ಗುಲಾಬೊ ಸಿತಾಬೊ ನಂತರ ಬಾಲಿವುಡ್​ನ ಇನ್ನೂ ಕೆಲವು ಸಿನಿಮಾಗಳು ಒಟಿಟಿ ಮೂಲಕ ರಿಲೀಸ್​ ಆಗಲು ಸಜ್ಜಾಗಿವೆ. ಅವುಗಳು ಅಕ್ಷಯ್​ ಕುಮಾರ್ ಅವರ ಲಕ್ಷ್ಮಿ ಬಾಂಬ್​ ಸಹ ಒಂದು. ಈ ಸಿನಿಮಾ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಪ್ರದರ್ಶನಗೊಳ್ಳಲಿದ್ದು, ರಿಲೀಸ್​ ದಿನಾಂಕ ಫಿಕ್ಸ್​ ಆಗಿದೆಯಂತೆ. ಹೀಗೊಂದು ಸುದ್ದಿ ಬಿ-ಟೌನ್​ ಅಂಗಳದಲ್ಲಿ ಹರಿದಾಡುತ್ತಿದೆ.

ಲಕ್ಷ್ಮಿ ಬಾಂಬ್​ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​

ಲಕ್ಷ್ಮಿ ಬಾಂಬ್​ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​

  • Share this:
ಲಾಕ್​ಡೌನ್​ನಿಂದಾಗಿ ಮುಚ್ಚಿದ ಚಿತ್ರಮಂದಿರಗಳನ್ನು ತೆರೆಯಲು ಇನ್ನೂ ಅನುಮತಿ ದೊರೆತಿಲ್ಲ. ಬಿಡುಗಡೆಯ ಹೊಸ್ತಿಲಲ್ಲಿರುವ ಸಿನಿಮಾಗಳು ಹಾಗೇ ಇವೆ. ಪ್ರೇಕ್ಷಕರು ಮನರಂಜನೆಗಾಗಿ ಡಿಜಿಟಲ್​ ವೇದಿಕೆಯ ಮೊರೆ ಹೋಗಿದ್ದಾರೆ. ಸಾಲ ಮಾಡಿ ಸಿನಿಮಾ ನಿರ್ಮಿಸಿದ ನಿರ್ಮಾಪಕರೂ ಬಡ್ಡಿ ಕಟ್ಟಲಾಗದೆ ತಮ್ಮ ಚಿತ್ರಗಳನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲು ಮುಂದಾಗುತ್ತಿದ್ದಾರೆ. 

ಇತ್ತೀಚೆಗಷ್ಟೆ ಅಮಿತಾಭ್​ ಬಚ್ಚನ್​ ಹಾಗೂ ಆಯುಷ್ಮಾನ್​ ಖುರಾನ ಅಭಿನಯದ ಗುಲಾಬೊ  ಸಿತಾಬೊ ಚಿತ್ರ ಒಟಿಟಿ ಮೂಲಕ ಅಮೆಜಾನ್​ ಪ್ರೈಂನಲ್ಲಿ ರಿಲೀಸ್​ ಆಗಿದೆ. ಶೂಜಿತ್​ ಸರ್ಕಾರ್ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಅಷ್ಟಾಗಿ ಯಶಸ್ವಿಯಾಗದೇ ಹೋದರೂ, ಲಾಕ್​ಡೌನ್​ನಲ್ಲಿ ಈ ಸಿನಿಮಾದಿಂದಾಗಿ ಕೊಂಚ ರಿಲ್ಯಾಕ್ಸ್​ ಆಗುವಂತಾಗಿದೆ.

Akshay Kumar shares his look of Laxmmi Bomb look on Navratri
'ಲಕ್ಷ್ಮಿ ಬಾಂಬ್​' ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಲುಕ್​


ಗುಲಾಬೊ ಸಿತಾಬೊ ನಂತರ ಬಾಲಿವುಡ್​ನ ಇನ್ನೂ ಕೆಲವು ಸಿನಿಮಾಗಳು ಒಟಿಟಿ ಮೂಲಕ ರಿಲೀಸ್​ ಆಗಲು ಸಜ್ಜಾಗಿವೆ. ಅವುಗಳು ಅಕ್ಷಯ್​ ಕುಮಾರ್ ಅವರ ಲಕ್ಷ್ಮಿ ಬಾಂಬ್​ ಸಹ ಒಂದು. ಈ ಸಿನಿಮಾ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಪ್ರದರ್ಶನಗೊಳ್ಳಲಿದ್ದು, ಆಗಸ್ಟ್​ 15ಕ್ಕೆ ಲಾರೆನ್ಸ್​ ನಿರ್ದೇಶನದ ಲಕ್ಷ್ಮಿ ಬಾಂಬ್ ರಿಲೀಸ್​ ಆಗಲಿದೆಯಂತೆ. ಹೀಗೊಂದು ಸುದ್ದಿ ಬಿ-ಟೌನ್​ ಅಂಗಳದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Kriti Sanon-Sushant: ಕಣ್ಣೀರು ತರಿಸುತ್ತೆ ಅಗಲಿದ ಗೆಳೆಯ ಸುಶಾಂತ್​​ ಕುರಿತು ಕೃತಿ ಸನೋನ್ ಬರೆದ ಈ ಸಾಲುಗಳು..!

ಲಾರೆನ್ಸ್​ ಲಕ್ಷ್ಮಿ ಬಾಂಬ್​ ಚಿತ್ರವನ್ನು ಡಿಸ್ನಿ ಹಾಟ್​ಸ್ಟಾರ್​ಗೆ 125 ಕೋಟಿಗೆ ಮಾರಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಸುಶಾಂತ್​ ನಟೆನಯ 'ದಿಲ್ ಬೇಚಾರಾ', 'ಗುಂಜನ್​ ಸಕ್ಸೇನಾ ದ ಕಾರ್ಗಿಲ್​ ಗರ್ಲ್' ಸೇರಿದಂತೆ ಹಲವಾರು ಸಿನಿಮಾಗಳು ಒಟಿಟಿ ಮೂಲಕ ರಿಲೀಸ್​ ಆಗಲಿವೆ.

Nithya Menen: ನಾವು ಚೆನ್ನಾಗಿದ್ದರೆ ಮಾತ್ರ ಬೇರೆಯವರಿಗೆ ನೆರವಾಗಬಹುದು ಎಂದ ನಿತ್ಯಾ ಮೆನನ್​..!


ಇದನ್ನೂ ಓದಿ: ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಅನುಪಮಾ ಪರಮೇಶ್ವರನ್​..!
First published: