Akshay Kumar: ಕೊನೆಗೂ ಸಿಕ್ತಾ ಅಕ್ಷಯ್​ಗೆ 120 ಕೋಟಿ ಸಂಭಾವನೆ: ಧನುಷ್​ ಜತೆ ಅಭಿನಯಿಸೋಕೆ ಓಕೆ ಎಂದ ಆ್ಯಕ್ಷನ್ ಕಿಂಗ್​..!

Akshay Kumar: ಬಿ-ಟೌನ್​ನಲ್ಲಿ ತುಂಬಾ ಬ್ಯುಸಿ ಇರುವ ನಟ ಅಂದ್ರೆ ಅದು ಅಕ್ಷಯ್​ ಕುಮಾರ್​. ಅವರು ಸಿನಿಮಾದಲ್ಲಿ ಇದ್ದಾರೆ ಎಂದರೆ ಸಾಕು ಜನರು ಸಿನಿಮಾ ನೋಡೋಕೆ ಚಿತ್ರಮಂದಿರಕ್ಕೆ ಬರುತ್ತಾರೆ. ಅವರ ಚಿತ್ರಗಳು ಕೋಟಿ ಕೋಟಿ ಬಾಚಿಕೊಳ್ಳುತ್ತಿವೆ. ಹೀಗಿರುವಾಗಲೇ ಅವರ ಹೊಸ ಸಿನಿಮಾ ಕುರಿತ ಮಾಹಿತಿಯೊಂದು ಹೊರ ಬಿದ್ದಿದೆ.

'ಅತ್ರಂಗಿ ರೇ' ಸಿನಿಮಾದಲ್ಲಿ ಅಕ್ಷಯ್​ ಕುಮಾರ್​, ಸಾರಾ ಅಲಿ ಖಾನ್ ಹಾಗೂ ಧನುಷ್​

'ಅತ್ರಂಗಿ ರೇ' ಸಿನಿಮಾದಲ್ಲಿ ಅಕ್ಷಯ್​ ಕುಮಾರ್​, ಸಾರಾ ಅಲಿ ಖಾನ್ ಹಾಗೂ ಧನುಷ್​

  • Share this:
ನಿರ್ದೇಶಕ ಆನಂದ್​ ಎಲ್​ ರೈ ಅವರ ಸಿನಿಮಾದಲ್ಲಿ ಅಭಿನಯಿಸೋಕೆ ಬಾಲಿವುಡ್​ನ ಆ್ಯಕ್ಷನ್​ ಕಿಂಗ್​ ಅಕ್ಷಯ್​ ಕುಮಾರ್​ 120 ಕೋಟಿ ಸಂಭಾವನೆ ಕೇಳಿದ್ದಾರೆ ಅನ್ನೋ ಸುದ್ದಿ ಇತ್ತು. ಆ ಚಿತ್ರಕ್ಕೆ ಅಕ್ಕಿ ಸಹಿ ಹಾಕಿದ್ದಾರಂತೆ.

ಬಿ-ಟೌನ್​ನಲ್ಲಿ ತುಂಬಾ ಬ್ಯುಸಿ ಇರುವ ನಟ ಅಂದ್ರೆ ಅದು ಅಕ್ಷಯ್​ ಕುಮಾರ್​. ಅವರು ಸಿನಿಮಾದಲ್ಲಿ ಇದ್ದಾರೆ ಎಂದರೆ ಸಾಕು ಜನರು ಸಿನಿಮಾ ನೋಡೋಕೆ ಚಿತ್ರಮಂದಿರಕ್ಕೆ ಬರುತ್ತಾರೆ. ಅವರ ಚಿತ್ರಗಳು ಕೋಟಿ ಕೋಟಿ ಬಾಚಿಕೊಳ್ಳುತ್ತಿವೆ. ಹೀಗಿರುವಾಗಲೇ ಅವರ ಹೊಸ ಸಿನಿಮಾ ಕುರಿತ ಮಾಹಿತಿಯೊಂದು ಹೊರ ಬಿದ್ದಿದೆ.

Akshay Kumar Signs Aanand L Rai's Musical 'Atrangi Re', to Share Screen Space with Sara Ali Khan and Dhanush
'ಅತ್ರಂಗಿ ರೇ' ಸಿನಿಮಾದ ಪೋಸ್ಟರ್​


Akshay Kumar Signs Aanand L Rai's Musical 'Atrangi Re', to Share Screen Space with Sara Ali Khan and Dhanush
ನಟ ಅಕ್ಷಯ್​ ಕುಮಾರ್​


ಆನಂದ್​ ಎಲ್​. ರೈ ಅವರ ಮುಂದಿನ ಸಿನಿಮಾ 'ಅತ್ರಂಗಿ ರೇ'ಯಲ್ಲಿ ಅಕ್ಷಯ್ ನಟಿಸುವುದು ಖಚಿತವಾಗಿದೆ. ಈ ಬಗ್ಗೆ ಖುದ್ದು ಅಕ್ಷಯ್​ ಹೇಳಿಕೆ ನೀಡಿದ್ದಾರೆ. ಈ ಚಿತ್ರದಲ್ಲಿ ಕಾಲಿವುಡ್​ನ ಖ್ಯಾತ ನಟ ಧನುಷ್​ ಮತ್ತೆ ಹಿಂದಿ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ. ಇವರೊಂದಿಗೆ ಸಅರಾ ಅಲಿ ಖಾನ್​ ನಟಿಸುತ್ತಿದ್ದಾರೆ.

ಇದನ್ನೂ ಓದಿ: Sunny leone: ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಹೆದರಿದ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​: ಕಾರಣ ಇಲ್ಲಿದೆ..!

'ಆನಂದ್​ ಎಲ್​ ರೈ ಸಿನಿಮಾ ಕತೆ ಹೇಳುತ್ತಿದ್ದಂತೆಯೇ ನಾನು ಓಕೆ ಎಂದಿದ್ದೆ. ಇದು ಸವಾಲಿನ ಪಾತ್ರವಾಗಿದ್ದು, ಬಹಳ ವಿಶೇಷವೂ ಹೌದು' ಎಂದಿದ್ದಾರೆ ಅಕ್ಷಯ್​ ಕುಮಾರ್​.

 ಈ ಸಿನಿಮಾದಲ್ಲಿ ಅಭಿನಯಿಸೋಕೆ ಅಕ್ಷಯ್​ 120 ಕೋಟಿ ಸಂಭಾವನೆಯ ಬೇಡಿಕೆ ಇಟ್ಟಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು. ಅದರಲ್ಲೂ ಈ ಸಿನಿಮಾದಲ್ಲಿ ಬಹಳ ವಿಶೇಷ ಪಾತ್ರದಲ್ಲಿ ಅಕ್ಕಿ ನಟಿಸುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಹೀಗಿರುವಾಗ ಅವರ ಸಂಭಾವನೆ ವಿಷಯ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಈ ಪಾತ್ರಕ್ಕಾಗಿ ನಿಜಕ್ಕೂ 120 ಕೋಟಿ ಬೇಡಿಕೆ ಇಟ್ಟಿದ್ದಾರಾ..? ಹಾಗಿದ್ದರೆ ಸಿನಿಮಾದ ಒಟ್ಟಾರೆ ಬಜೆಟ್​ ಎಷ್ಟು? ಅನ್ನೋ ಸಾಕಷ್ಟು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ.

ಇದನ್ನೂ ಓದಿ: Mahesh Babu: ನಿಜಕ್ಕೂ ಪ್ರಿನ್ಸ್​ ಮಹೇಶ್​ ಬಾಬುಗೆ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಆಗಿದೆಯಾ: ಇಲ್ಲಿದೆ ಮಾಹಿತಿ..!

ಇದೊಂದು ಮ್ಯೂಸಿಕಲ್​ ಸಿನಿಮಾ ಆಗಿದ್ದು, ಹಿಮಾಂಶು ಶರ್ಮಾ ಬರೆದಿರುವ ಕತೆಯನ್ನು ಆನಂದ್​ ಎಲ್​. ರೈ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರ ಮಾರ್ಚ್​ 1ರಿಂದ ಸೆಟ್ಟೇರಲಿದ್ದು, 2021ರ ಪ್ರೇಮಿಗಳ ದಿನಕ್ಕೆ ತೆರೆ ಕಾಣಲಿದೆ. ಈ ಚಿತ್ರಕ್ಕೆ ಎ.ಆರ್. ರೆಹಮಾನ್​ ಸಂಗೀತ ನೀಡಿದ್ದಾರೆ.

Plastic Surgery: ಪ್ಲಾಸ್ಟಿಕ್​ ಸರ್ಜರಿಯಿಂದಾಗಿ ಅವಕಾಶಗಳಿಂದ ವಂಚಿತರಾದರಾ ಅಮೀರ್​ ಖಾನ್​ರ ಈ ನಾಯಕಿ..!


First published: