Laxmmi Bomb: ಈ ಪೋಸ್ಟರ್​ ನೋಡಿದರೆ ಭಯದ ಜೊತೆ ನಗು ಬರುತ್ತೆ ಎಂದ ಅಕ್ಷಯ್​ ಕುಮಾರ್​..!

ಆ್ಯಕ್ಷನ್​ ಕಿಂಗ್​ ಅಕ್ಷಯ್​ ಕುಮಾರ್ ಅವರ ಲಕ್ಷ್ಮಿ ಬಾಂಬ್​ ಚಿತ್ರ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ರಿಲೀಸ್​ ಆಗಲಿದ್ದು, ಇದರ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಜೊತೆಗೆ ಈ ಸಿನಿಮಾ ಬಿಡುಗಡೆಯ ಬಗ್ಗೆ ಕಾತರರಾಗಿರುವ ಅಕ್ಷಯ್​, ಈ ಸಿನಿಮಾದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

Anitha E | news18-kannada
Updated:June 30, 2020, 8:40 AM IST
Laxmmi Bomb: ಈ ಪೋಸ್ಟರ್​ ನೋಡಿದರೆ ಭಯದ ಜೊತೆ ನಗು ಬರುತ್ತೆ ಎಂದ ಅಕ್ಷಯ್​ ಕುಮಾರ್​..!
ಲಕ್ಷ್ಮಿ ಬಾಂಬ್​ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​
  • Share this:
ನಟ ಅಕ್ಷಯ್​ ಕುಮಾರ್​ ಅವರ  'ಲಕ್ಷ್ಮಿ ಬಾಂಬ್​ 'ಸಿನಿಮಾ ಒಟಿಟಿ ಮೂಲಕ ರಿಲೀಸ್​ ಆಗಲು ಸಿದ್ಧವಾಗಿದೆ. ದೊಡ್ಡ ಸ್ಟಾರ್​ಗಳು ತಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಬೇಕೆಂದು ಕಾಯುತ್ತಿದ್ದರು. ಆದರೆ ಕೊರೋನದಿಂದಾಗಿ ಚಿತ್ರಮಂದಿರಗಳು ಯಾವಾಗ ತೆರೆಯಲಿವೆ ಎಂದು ತಿಳಿಯುತ್ತಿಲ್ಲ. ಇದೇ ಕಾರಣಕ್ಕೆ ಈಗ ಸ್ಟಾರ್​ಗಳ ಚಿತ್ರಗಳು ಒಟಿಟಿ ಮೂಲಕ ತೆರೆ ಕಾಣಲು ಸಜ್ಜಾಗುತ್ತಿವೆ.

ಆ್ಯಕ್ಷನ್​ ಕಿಂಗ್​ ಅಕ್ಷಯ್​ ಕುಮಾರ್ ಅವರ ಲಕ್ಷ್ಮಿ ಬಾಂಬ್​ ಚಿತ್ರ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ರಿಲೀಸ್​ ಆಗಲಿದ್ದು, ಇದರ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಜೊತೆಗೆ ಈ ಸಿನಿಮಾ ಬಿಡುಗಡೆಯ ಬಗ್ಗೆ ಕಾತರರಾಗಿರುವ ಅಕ್ಷಯ್​, ಈ ಸಿನಿಮಾದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

 





ಪೋಸ್ಟರ್​ ಜೊತೆಗೆ ಅಕ್ಷಯ್​ ಒಂದೆರೆಡು ಸಾಲುಗಳನ್ನು ಬರೆದುಕೊಂಡಿದ್ದಾರೆ ಅಕ್ಕಿ. ಈ ಪೋಸ್ಟರ್ ನೋಡಿದರೆ ಭಯ ಆಗುವುದರೊಂದಿಗೆ ನಗು ಸಹ ಬರುತ್ತದೆ ಎಂದಿದ್ದಾರೆ ಅಕ್ಷಯ್. ​ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಆಯೋಜಿಸಿದ್ದ ಡಿಜಿಟಲ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕ್ಷಯ್​ ಕುಮಾರ್​, ಲಕ್ಷ್ಮಿ ಬಾಂಬ್​, ಭೂಲ್ ​ಭುಲಯ್ಯ ಸಿನಿಮಾದ ನಂತರ ನಟಿಸಿರುವ ಹಾರರ್​ ಚಿತ್ರವಾಗಿದ್ದು, ಅವರ ಮನಸ್ಸಿಗೆ ತುಂಬಾ ಹತ್ತಿರವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Rashmika-Mahesh Babu: ಮಹೇಶ್​ ಬಾಬು ಮನೆ ತಲುಪಿತು ರಶ್ಮಿಕಾ ಕೊಡಗಿನಿಂದ ಕಳುಹಿಸಿದ ಈ ಉಡುಗೊರೆ..!

ಈ ಹಿಂದೆ ಪೆಂಗ್ವಿನ್​, ಗುಲಾಬೊ ಸಿತಾಬೊ ಹಾಗೂ ಕೃಷ್ಣ ಆ್ಯಂಡ್ ಹಿಸ್​ ಲೀಲ ಸಿನಿಮಾಗಳು ಈಗಾಗಲೇ ಒಟಿಟಿ ಮೂಲಕ ರಿಲೀಸ್​ ಆಗಿವೆ. ಲಾಕ್​ಡೌನ್​ನಲ್ಲಿ ಚಿತ್ರಮಂದಿರಗಳಿಲ್ಲದೆ ಬೇಸರದಲ್ಲಿದ್ದ ಸಿನಿ ಪ್ರಿಯರಿಗೆ ಈ ಚಿತ್ರಗಳ ಬಿಡುಗಡೆಯಿಂದಾಗಿ ಮನರಂಜನೆಯಾಗಿರುವುದಂತೂ ಸತ್ಯ.

Nikhil-Revathi: ಹೊಸ ಫೋಟೋ ಜೊತೆ ಒಂದೊಳ್ಳೆ ಸಂದೇಶ ಕೊಟ್ಟ ನಿಖಿಲ್​-ರೇವತಿ..!


 

 

ಇದನ್ನೂ ಓದಿ: Skanda Ashok: ಮಗುವಿನ ನಿರೀಕ್ಷೆಯಲ್ಲಿ ರಾಧಾ ರಮಣ ಧಾರಾವಾಹಿ ಖ್ಯಾತಿಯ ಸ್ಕಂದ ಅಶೋಕ್​- ಶಿಖಾ..!
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading