Akshay Kumar: ನನ್ನ ಹೆಂಡ್ತಿ ಭಾಷೆ ಅರ್ಥ ಆಗೋಲ್ಲ ಅಂದಿದ್ಯಾಕೆ ಕಿಲಾಡಿ ಅಕ್ಷಯ್​ ಕುಮಾರ್​?​

ಸದ್ಯ ಅಕ್ಷಯ್ ರಾಜಸ್ಥಾನ(Rajasthan)ದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹಾಲಿ ಡೇ ಮೂಡ್ ನಲ್ಲಿದ್ದಾರೆ. ಮಗಳು ನಿತಾರಾಳೊಂದಿಗೆ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಲ ಕಳೆಯುತ್ತಿದ್ದಾರೆ.

ಅಕ್ಷಯ್​ ಕುಮಾರ್​, ಟ್ವಿಂಕಲ್ ಖನ್ನಾ

ಅಕ್ಷಯ್​ ಕುಮಾರ್​, ಟ್ವಿಂಕಲ್ ಖನ್ನಾ

  • Share this:

ಬಾಲಿವುಡ್‌(Bollywood)ನ ಬ್ಯುಸಿಯೆಸ್ಟ್ ಸ್ಟಾರ್ ಅಂದರೆ ಅಕ್ಷಯ್ ಕುಮಾರ್(Akshay Kumar). ಯಾವಾಗಲೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಕೂಡ ಇವರು ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್(Perfect Family Man). ಸಿನಿಮಾ ಜತೆ ತಮ್ಮ ಕುಟುಂಬಕ್ಕೂ ಅಷ್ಟೇ ಮಹತ್ವ ಕೊಡುತ್ತಾರೆ. ಆಗಾಗ ಕುಟುಂಬದ ಜತೆ ಟ್ರಿಪ್(Trip), ವೇಕೆಷನ್ ಅಂತಾ ಕಾಲ ಕಳೆಯುತ್ತಿರುತ್ತಾರೆ. ಸದ್ಯ ಅಕ್ಷಯ್ ರಾಜಸ್ಥಾನ(Rajasthan)ದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹಾಲಿ ಡೇ ಮೂಡ್ ನಲ್ಲಿದ್ದಾರೆ. ಮಗಳು ನಿತಾರಾಳೊಂದಿಗೆ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಲ ಕಳೆಯುತ್ತಿದ್ದಾರೆ. ಮಗಳೊಟ್ಟಿಗೆ ಕಾಲ ಕಳೆಯುತ್ತಿರುವ ಕೆಲವು ಅತ್ಯಮೂಲ್ಯ ದೃಶ್ಯಗಳನ್ನು ವಿಡಿಯೋ ಮೂಲಕ ನಟ ಅಕ್ಷಯ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಕ್ಷಯ್ ಮತ್ತು ನಿತಾರಾ ಕೆಲವು ಹಸುಗಳಿಗೆ ಆಹಾರ ನೀಡುತ್ತಿರುವ ವಿಡಿಯೋವೊಂದನ್ನು ಚಿತ್ರೀಕರಣ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..


ಅಪ್ಪ-ಮಗಳ ಕ್ಯೂಟ್​ ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ವಿಡಿಯೋದಲ್ಲಿ ನಟ ಅಕ್ಷಯ್ ಹಸುವೊಂದಕ್ಕೆ ಆಹಾರ ನೀಡಿ ಅದನ್ನು ಮುದ್ದಿಸುತ್ತಿದ್ದಾರೆ. ಹಾಗೆಯೇ ಮಗಳಿಗೂ ಹಸುವಿಗೆ ಆಹಾರ ನೀಡಿ ಅದನ್ನು ಮುಟ್ಟಿ ಮುದ್ದಿಸಲು ನಿತಾರಾಗೆ ಪ್ರೋತ್ಸಾಹಿಸುತ್ತಾರೆ. ಆದರೆ ಇನ್ನೂ 9 ವರ್ಷ ವಯಸ್ಸಿನವಳಾದ ನಿತಾರಾ ಹಸುವನ್ನು ಮುಟ್ಟಲು ಭಯಪಟ್ಟುಕೊಂಡು ತಂದೆ ಅಕ್ಷಯ್ ಬಳಿ ಹಿಂದೆ ಸರಿದಿದ್ದಾಳೆ. ಅಪ್ಪ-ಮಗಳು ವಿಡಿಯೋದಲ್ಲಿ ತುಂಬಾ ಮುದ್ದಾಗಿ ಕಂಡಿದ್ದಾರೆ. ಅಕ್ಷಯ್ ಯಾವಾಗಲೂ ಚಾರ್ಮಿಂಗ್ ಸ್ಟಾರ್ ಅವರು ವಿಡಿಯೋದಲ್ಲಿ ಹಳದಿ ಹೂಡಿ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದು ಸಹಜವಾಗಿ ಸಕತ್ ಲುಕ್‌ನಲ್ಲಿ ಕಾಣಿಸಿಕೊಂಡರೆ, ಮಗಳು ನಿತಾರಾ ಪೀಚ್-ಬಣ್ಣದ ಸ್ವೆಟ್‌ಸೂಟ್‌ನಲ್ಲಿ ತುಂಬಾ ಕ್ಯೂಟಾಗಿ ಕಾಣಿಸಿಕೊಂಡಿದ್ದಾಳೆ. ಅಲ್ಲದೇ ವಿಡಿಯೋದಲ್ಲಿ ಅಕ್ಷಯ್ ಕುಮಾರ್‌ರವರ ಬಿಳಿ ಗಡ್ಡವನ್ನು ಅಭಿಮಾನಿಗಳು ನೋಟಿಸ್ ಮಾಡಿದ್ದಾರೆ.


ದೇವರಿಗೆ ಧನ್ಯವಾದ ತಿಳಿಸಿದ ಅಕ್ಷಯ್​ ಕುಮಾರ್​!

ಅಕ್ಷಯ್ ಅವರದ್ದೇ ‘ಸೂರ್ಯವಂಶಿ’ ಚಿತ್ರದ ಮೇರೆ ಯಾರಾ ಹಾಡನ್ನು ವಿಡಿಯೊದಲ್ಲಿ ಸಂಯೋಜಿಸಿ ಹಾಕಿಕೊಂಡಿದ್ದು ಅದಕ್ಕೆ ತಕ್ಕಂತೆ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ವಿಡಿಯೋ ಕೆಳಗೆ ಮಣ್ಣಿನ ವಾಸನೆ, ಹಸುಗಳಿಗೆ ಆಹಾರ ನೀಡುವುದು, ಮರಗಳ ತಂಪಾದ ಗಾಳಿ.. ಈ ಎಲ್ಲಾ ವಾತಾವರಣ ಮಗುವಿಗೆ ಅನುಭವಿಸಲು ಬಿಡಿ ಮತ್ತು ಅದರಿಂದ ಅವರು ಖುಷಿಯಾಗುತ್ತಾರೆ ಎಂದು ಬರೆದುಕೊಂಡಿದ್ದಾರೆ.. ಇದರ ಜತೆ ನಿತಾರಾ ನಾಳೆ ಕಾಡಿನಲ್ಲಿ ಹುಲಿಗಳನ್ನು ನೋಡಿದರೆ ಸುಂದರವಾದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿರುವುದು ಪರಿಪೂರ್ಣವಾಗಿರುತ್ತದೆ. ಹೀಗೆ ಇಂತ ಅತ್ಯದ್ಬುತ ಸ್ಥಳಗಳನ್ನು ಸೃಷ್ಠಿ ಮಾಡಿದ ದೇವರಿಗೆ ಪ್ರತಿದಿನ ಧನ್ಯವಾದಗಳು ಎಂದು ನಟ ಅಕ್ಷಯ್ ಬರೆದುಕೊಂಡಿದ್ದಾರೆ.View this post on Instagram


A post shared by Akshay Kumar (@akshaykumar)

ಇದನ್ನು ಓದಿ: ಕೊನೆಗೂ `ವಧು’ವಾದ ರಶ್ಮಿಕಾ ಮಂದಣ್ಣ.. ಮೊದಲ ಬಾರಿಗೆ ತನ್ನ `ಹನಿ’ ಬಗ್ಗೆ ಹೇಳಿದ ನಟಿ!

ಹೆಂಡ್ತಿ ಭಾಷೆ ಅರ್ಥ ಆಗಲ್ಲ ಎಂದ ಅಕ್ಷಯ್​ ಕುಮಾರ್​!

ಅಕ್ಷಯ್ ಈ ಹಿಂದೆ ಪತ್ನಿ ಟ್ವಿಂಕಲ್ ಖನ್ನಾ ಅವರ ಅಂಕಣವನ್ನು ಒಂದನ್ನು ಹಂಚಿಕೊಂಡಿದ್ದರು. ಮತ್ತು ಅದನ್ನು ನಾನು ವಿಶೇಷವಾಗಿ ಕಂಡುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದರು. ನಾನು ಟ್ವಿಂಕಲ್ ಖನ್ನಾ ಅಂಕಣದಲ್ಲಿ ಆಗಾಗ್ಗೆ ಕಾಮೆಂಟ್ ಮಾಡುವುದಿಲ್ಲ. ಏಕೆಂದರೆ ಅವರ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ನನಗೆ ಕಠಿಣವಾಗಿದೆ ಎಂದು ಹಾಸ್ಯಮಯವಾಗಿ ಪತ್ನಿಯ ಕಾಲೆಳೆದಿದ್ದಾರೆ. ಆದರೆ ಇದು @mrsfunnybones ಪ್ರಕಾರ “ಸಂತೋಷವು ಅನ್ವೇಷಣೆಯಲ್ಲ, ಅದು ಅಪಘಾತ." ತುಂಬಾ ನಿಜ, ತುಂಬಾ ಆಳವಾದದ್ದು ಅಂತ ಹೇಳಿಕೊಂಡಿದ್ದಾರೆ. ಟ್ವಿಂಕಲ್ ಖನ್ನಾ, ನಟನೆ ಜತೆ ಬರಹಗಾರತಿಯಾಗಿದ್ದಾರೆ. ಅಲ್ಲದೇ ನಿರ್ಮಾಪಕಿಯೂ ಹೌದು. ಇವರು ಈಗಾಗಲೇ ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.


ಇದನ್ನು ಓದಿ: ಇವ್ರೇ ನೋಡಿ.. ಬಿಗ್​ಬಾಸ್​ ತಮಿಳು ಸೀಸನ್​ 5 ವಿನ್ನರ್​.. ವೀಕ್ಷಕರು ಗೆಸ್ಸ್​ ಮಾಡಿದ್ದು ಕರೆಕ್ಟ್​!

2021ರಲ್ಲಿ ಅಕ್ಷಯ್ ಕುಮಾರ್ ಅವರ ಮೂರು ದೊಡ್ಡ ಸಿನಿಮಾಗಳು ರಿಲೀಸ್ ಆಗಿತ್ತು. ಭಾರತದ ಅಪರೂಪದ ನಟರಲ್ಲಿ ಅಕ್ಷಯ್ ಕುಮಾರ್ ಕೂಡ ಒಬ್ಬರು. ಅಕ್ಷಯ್ ಕುಮಾರ್ ಅವರ ‘ಬೆಲ್ ಬಾಟಮ್’ ಮತ್ತು ‘ಸೂರ್ಯವಂಶಿ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೆ, ಅವರ ಇತ್ತೀಚಿನ ಚಿತ್ರ ‘ಅತ್ರಾಂಗಿ ರೇ’ OTTಯಲ್ಲಿ ಬಿಡುಗಡೆಯಾಗಿತ್ತು. 2022ರಲ್ಲೂ ಅಕ್ಷಯ್ ಕುಮಾರ್ ಅವರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲಿವೆ.
First published: