Akshay Kumar: ಕಿಲಾಡಿ ಅಕ್ಷಯ್ ಮುಂದೆಯಾದರೂ ನೀಡಲಿದ್ದಾರಾ ಹಿಟ್ ಸಿನಿಮಾ?

ಅಕ್ಷಯ್ ಕುಮಾರ್ ಇದುವರೆಗೂ 124 ಸಿನಿಮಾಗಳನ್ನು ಮಾಡಿದ್ದಾರೆ. ಅದರಲ್ಲಿ ಫ್ಲಾಪ್​ಗಳೂ ಇವೆ ಜೊತೆಗೆ ಸಕ್ಸಸ್​ಗಳೂ ಇವೆ. ಹಾಗಾದ್ರೆ, ಮುಂಬರುವ ಸಿನಿಮಾಗಳು ಯಾವುವು? ಬಾಲಿವುಡ್​ನಲ್ಲಿ ಹೇಗೆ ಸದ್ದು ಮಾಡಲಿವೆ. ಇಲ್ಲಿದೆ ನೋಡಿ

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

  • Share this:
ಬಾಲಿವುಡ್ ನ ಸ್ಟಾರ್ (Bollywood Star) ನಟರಲ್ಲಿ ಅಕ್ಷಯ್ ಕುಮಾರ್ (Akshay Kumar) ಕೂಡ ಒಬ್ಬರು. ಸಾಲು ಸಾಲಾಗಿ ಹಿಟ್ ಸಿನಿಮಾಗಳನ್ನು ನೀಡಿ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದ್ದ ಡೇರ್ ಡೆವಿಲ್​ನ ಹುಟ್ಟಿದ ಹಬ್ಬ ಇಂದು. ಸೌಗಂಧ್ ಸಿನಿಮಾದಿಂದ ಆರಂಭವಾದ ಇವರ ಜರ್ನಿ ಇಂದಿಗೆ 31 ವರ್ಷಗಳ ಕಳೆದಿದೆ. ಮತ್ತು 124 ಸಿನಿಮಾಗಳನ್ನು ಮಾಡಿದ್ದಾರೆ. ಇಂದಿಗೆ ತಮ್ಮ 55 ನೇ ವರ್ಷದ ಹುಟ್ಟುಹಬ್ಬವನ್ನು(Akshay Kumar Birthday ) ಆಚರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್​ನಲ್ಲಿ ಅತ್ಯಂತ ವಾಣಿಜ್ಯಿಕವಾಗಿ ಯಶಸ್ವಿಯಾಗಿರುವ ನಟರಲ್ಲಿ ಒಬ್ಬರಾಗಿರುವ ಅಕ್ಷಯ್ ಕುಮಾರ್ ಅವರು ಬ್ಲಾಕ್ ಬಸ್ಟರ್ (Block Buster)   ಸಿನಿಮಾಗಳನ್ನು ನೀಡುತ್ತಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಅಕ್ಷಯ್ ಕುಮಾರ್ ರವರು ಚಿತ್ರರಂಗದಲ್ಲಿ ಹಿಂದುಳಿಯುತ್ತಿದ್ದಾರೆ. ರಕ್ಷಾ ಬಂಧನ್, ಕಟ್ ಪುಟ್ಲಿ ಹೀಗೆ ಇನ್ನಿತರ ಸಿನಿಮಾಗಳನ್ನು ಮಾಡಿದ್ದರೂ ಕೂಡ ಹಿಟ್ ಆಗಿಲ್ಲ. 20 ಕ್ಕೂ ಅಧಿಕ ಸಿನಿಮಾಗಳು ಫ್ಲಾಪ್​ ಆಗಿವೆ. ಏಕೆಂದರೆ, ಇವರು ಆಯ್ಕೆ ಮಾಡಿಕೊಳ್ಳುತ್ತಿರುವ ಸಿನಿಮಾಗಳು ಮತ್ತು ಎಡಬಿಡದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಕಾರಣನೂ ಇರಬಹುದು ಎಂಬುದು ಒಂದಷ್ಟು ಸಿನಿಪ್ರಿಯರ ಅಭಿಪ್ರಾಯವಾಗಿದೆ.

ಅಕ್ಷಯ್ ಕುಮಾರ್ ಸಿನಿಮಾಗಳ  ಬಾಕ್ಸ್ ಆಫೀಸ್ ಕಲೆಕ್ಷನ್​ಗಳ ಸಂಕ್ಷಿಪ್ತ ವಿಶ್ಲೇಷಣೆ

ಒಟ್ಟು ಬಿಡುಗಡೆಯಾದ ಸಿನಿಮಾಗಳು 124

ಸೂಪರ್ ಹಿಟ್ / ಬ್ಲಾಕ್ ಬ್ಲಸ್ಟರ್ ಗಳು 15

ಹಿಟ್ ಮತ್ತು ಸೆಮಿ ಹಿಟ್ ಸಿನಿಮಾಗಳು 22

ಸರಾಸರಿ 29

ಫ್ಲಾಪ್ ಸಿನಿಮಾಗಳು 58

2022 ವರೆಗಿನ ಒಟ್ಟು ಬಾಕ್ಸ್ ಆಫೀಸ್ ನ 4759.38 ಕೋಟಿ ರೂ
ಕಲೆಕ್ಷನ್ಸ್

ಇತ್ತೀಚೆಗೆ ಮಾಡಿದ ಫ್ಲಾಪ್ ಸಿನಿಮಾ
ಇತ್ತೀಚೆಗೆ ಮಾಡಿದ ಸಿನಿಮಾಗಳಾಧ ರಕ್ಷಾ ಬಂಧನ, ಸಾಮ್ರಾಟ್ ಪೃಥ್ವಿರಾಜ್ ಮತ್ತು ಬಚ್ಚನ್ ಪಾಂಡೆ ಸಿನಿಮಾಗಳು ಅಟ್ಟರ್ ಫ್ಲಾಪ್ ಆಗಿವೆ ಎನ್ನಬಹುದು. ಸಿನಿಮಾ ಪ್ರಿಯರು ನಿರೀಕ್ಷೆಯನ್ನಿಟ್ಟು ಈ ಸಿನಿಮಾಗಳನ್ನು ನೋಡಿದ್ದಾರೆಯೇ ಹೊರತು ತದನಂತರ ಬಂದಂತಹ ಅಭಿಮಾನಿಗಳ ವಿಮರ್ಶೆಗಳಲ್ಲಿ ನಿರಾಶೆ ಹೊರಹಾಕಿದ್ದನ್ನು ಕಾಣಬಹುದಾಗಿದೆ.

ವಿವಾದಕ್ಕೆ ಗುರಿಯಾದ ಅಕ್ಷಯ್ ಕುಮಾರ್
ಹೌದು, ಈ ಹಿಂದೆ ವಿಮಲ್ ಪಾನ್ ಮಸಾಲ ಬ್ರಾಂಡ್​ಗೆ ಆಡ್ ಕೊಟ್ಟಿದ್ದರಿಂದ ಹಲವು ವಿವಾದಕ್ಕೆ ಎಡೆಯಾಗಿದ್ದರು. ಅಭಿಮಾನಿಗಳು ಇದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಯಿಸಿದ್ದರೂ ಕೂಡ. ಇದಕ್ಕೆ ಅಕ್ಷಯ್ ಕುಮಾರ್ ರವರು ಕ್ಷಮೆಯನ್ನು ಕೂಡ ಕೇಳಿದ್ದರು.

ಟಾಪ್ ನಟನಾದ ಅಕ್ಷಯ್ ಕುಮಾರ್​ವರು ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದಂತೂ ನಿಜ. ಇದರ ಜೊತೆ ಜೊತೆಗೆ ಫ್ಲಾಪ್ ಸಿನಿಮಾಗಳ ಪಟ್ಟಿ ಏರುತ್ತಲೇ ಇವೆ.

ಅಕ್ಷಯ್ ಕುಮಾರ್ ರವರ ಮುಂಬರುವ ಸಿನಿಮಾಗಳು
ಎಷ್ಟೇ ಫ್ಲಾಪ್ ಸಿನಿಮಾಗಳು ನೀಡಿದ್ದರೂ ಕೂಡ ಮತ್ತಷ್ಟು ಮಗದಷ್ಟು ತೆರಯ ಮೇಲೆ ಬರಲು ರೆಡಿಯಾಗಿದ್ದಾರೆ ಅಕ್ಷಯ್ ಕುಮಾರ್.  ಹುಟ್ಟು ಹಬ್ಬಕ್ಕೆ ಈ ಹೊಸ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

OMG 2
ಪರೇಶ್ ರಾವಲ್ ಮತ್ತು ಅಕ್ಷಯ್ ಕುಮಾರ್ ಅವರ OMG 2012 ರಲ್ಲಿ ಬಿಡುಗಡೆಯಾದಾಗ, ಬಾಲಿವುಡ್ ಅಂಗಳದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಅದೇ ರೀತಿಯಾಗಿ ಇದೀಗ ಅಭಿಮಾನಿಗಳಿಗೆ ಹುಚ್ಚೆಬ್ಬಿಸಲು ಪಾರ್ಟ್ 2 ಇದೀಗ ನಮ್ಮ ಮುಂದೆ ಬರಲು ಸಜ್ಜಾಗಿದೆ. ಅಮಿತ್ ರೈ ನಿರ್ದೇಶನದ ಈ ಸಿನಿಮಾದಲ್ಲಿ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಮತ್ತು ಅರುಣ್ ಗೋವಿಲ್ ನಟಿಸಿದ್ದಾರೆ. ಇದೇ ಅಕ್ಟೋಬರ್​ನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿರುವ ಸಾಧ್ಯತೆಗಳು ಹೆಚ್ಚಿತ್ತು. ಆದರೆ ಕಟ್ ಪುಟ್ಲಿ ಸಿನಿಮಾ ಟ್ರೇಲರ್ ಬಿಡುಗಡೆಯಲ್ಲಿ ಕಾರಣಾಂತರಗಳಿಂದ ಅಕ್ಷಯ್ ಕುಮಾರ್ ಇದನ್ನು ನಿರಾಕರಿಸಿದರು. ಹಾಗಾಗಿ ಯಾವಾಗ ಈ ಸಿನಿಮಾ ಬಿಡುಗಡೆ ಎಂಬುದು ಕಾದುನೋಡಬೇಕಾಗಿದೆ.

ಇದನ್ನೂ ಓದಿ: Brahmastra Review: ಬ್ರಹ್ಮಾಸ್ತ್ರ ಬ್ಲಾಕ್​​ಬಸ್ಟರ್ ಸಿನಿಮಾ ಎಂದ ಪ್ರೇಕ್ಷಕರು! ರಣಬೀರ್, ಆಲಿಯಾ ಜೋಡಿ ಮಾಡಿದ್ಯಂತೆ ಮೋಡಿ!

ಗೂರ್ಖಾ
ಅಕ್ಷಯ್ ಕುಮಾರ್ ಎಂದಿಗೂ ಬಯೋಪಿಕ್ ಸಿನಿಮಾಗಳನ್ನು ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಕೇಸರಿಯಂತಹ ಸಿನಿಮಾಗಳು ಅಭಿಮಾನಿಗಳಿಗೆ ರೋಮಾಂಚನಗೊಳಿಸಿತ್ತು. ಅದೇ ರೀತಿಯಾಗಿ ಗೂರ್ಖಾ ಸಿನಿಮಾ ಕೂಡ ಒಂದು.

ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್​ನ ಪೌರಾಣಿಕ ಅಧಿಕಾರಿ ಮೇಜರ್ ಜನರಲ್ ಇಯಾನ್ ಕಾರ್ಡೋಜೊ ಪಾತ್ರದಲ್ಲಿ ಅಕ್ಷಯ್ ಕಾಣಿಸಿಕೊಳ್ಳಲಿದ್ದಾರೆ.

ಬಡೇ ಮಿಯಾನ್ ಚೋಟಿ ಮಿಯಾನ್
ಈ ಸಿನಿಮಾವು ಭಾರತದ ಇಬ್ಬರು ದೊಡ್ಡ ಆಕ್ಷನ್ ಸ್ಟಾರ್​​ಗಳನ್ನು ಒಟ್ಟಿಗೆ ತರುತ್ತಿದೆ. ಅದುವೇ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಕಾಂಬಿನೇಷನ್ ನಲ್ಲಿ ಬರುತ್ತಿದೆ. 'ಬಡೇ ಮಿಯಾನ್ ಚೋಟಿ ಮಿಯಾನ್ ' ಸಿನಿಮಾ. 2023 ರ ಹೊತ್ತಿಗೆ ತೆರೆಗೆ ಬರಲಿದೆ ಎಂದು ಸಿನಿಮಾದ ನಿರ್ದೇಶಕರಾದ ಅಲಿ ಅಬ್ಬಾಸ್ ಜಾಫರ್ ಅವರು ತಿಳಿಸಿದ್ದಾರೆ. ಆಸ್ಟ್ರಿಯನ್ ಆಲ್ಪ್ಸ್, ಅರೇಬಿಯಾ ಮತ್ತು ಲಂಡನ್​ಗಳಲ್ಲಿ ಚಿತ್ರೀಕರಣ ಆಗಲಿದೆ ಎಂದು ಸಿನಿಮಾ ತಂಡ ತಿಳಿಸಿದ್ದಾರೆ.

ಸೆಲ್ಫಿ
ಇದು ಮಲಯಾಳಂ ಚಿತ್ರದ ಡ್ರೈವಿಂಗ್ ಲೇಸನ್ಸ್ ಸಿನಿಮಾದ ರಿಮೇಕ್ ಆಗಿದೆ. ರಾಜ್ ಮೆಹ್ತಾ ನಿರ್ದೇಶಿಸಿದ ಈ ಚಿತ್ರವು ಇಬ್ಬರು ನಟರ ಮೊದಲ ಆನ್ ಸ್ಕ್ರೀನ್ ಸಹಯೋಗವನ್ನು ಗುರುತಿಸುತ್ತದೆ. ಕೆಲವು ದಿನಗಳ ಹಿಂದೆ ಸೈಫ್ ಅಲಿ ಖಾನ್ ಅವರ ಜನ್ಮದಿನದಂದು, ಅಕ್ಷಯ್ ಕುಮಾರ್ ರವರು ಸೆಲ್ಫಿಗಾಗಿ ಐಕಾನಿಕ್ ಸಾಂಗ್ " ಮೈನ್ ಕಿಲಾಡಿ ತು ಅನಾರಿ" ರಿಮೇಕ್ ಅನ್ನು ಘೋಷಿಸಲಾಗಿದೆ. ಚಿತ್ರವು ಫೆಬ್ರವರಿ 24,2023 ರಂದು ಥಿಯೇಟರ್​ಗಳಿಗೆ ಬರಲು ಸಿದ್ಧವಾಗಿದೆ.

ರಾಮ ಸೇತು
ಅಭಿಷೇಕ್ ಶರ್ಮಾ ನಿರ್ದೇಶನದ ಈ ಚಿತ್ರವು ಅಕ್ಷಯ್ ಕುಮಾರ್ ಪುರಾತತ್ವಶಾಸ್ತ್ರಜ್ಞ ಪಾತ್ರವನ್ನು ನಿರ್ವಹಿಸುತ್ತದೆ. ಇದೊಂದು ಚಾಲೆಂಜಿಂಗ್ ಆದಂತಹ ಪಾತ್ರವಾಗಿದ್ದು ಅಕ್ಷಯ್ ಕುಮಾರ್​ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕಾದುನೋಡಬೇಕಾಗಿದೆ.
ಅಷ್ಟೇ ಅಲ್ಲದೇ, ಮುದಸ್ಸರ್ ಅಜೀಜ್ ಅವರ ಮುಂದಿನ ಕಾಮಿಕ್ ಎಂಟರ್ ಟೈನರ್ ಖೇಲ್ ಖೇಲ್ ಮೇ, ಕ್ಯಾಪ್ಸುಲ್ ಗಿಲ್ ಮತ್ತು ಸೂರರೈ ಪೊಟ್ರು ಚಿತ್ರದ ಹಿಂದಿಯಲ್ಲಿ ರಿಮೇಕ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Yashoda Teaser: ಯಶೋದಾ ಚಿತ್ರದ ಟೀಸರ್​ ಔಟ್​; ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡ ಸಮಂತಾ

ಒಟ್ಟಿನಲ್ಲಿ ಸಿನಿಮಾ ದುನಿಯಾದಲ್ಲಿ ಫುಲ್ ಪ್ಯಾಕೇಜ್ ಆಗಿದ್ದಾರೆ ಅಕ್ಷಯ್ ಕುಮಾರ್. ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಅಕ್ಷಯ್ ಕುಮಾರ್ , ಇನ್ನಾದರೂ ಹಿಟ್ ಸಿನಿಮಾಗಳನ್ನು ನೀಡುತ್ತಾರಾ ಎಂದು ಕಾದುನೋಡಬೇಕಾಗಿದೆ.
First published: