Akshay Kumar: ಅಕ್ಕಿ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸೋಲೋದಕ್ಕೆ ಇವ್ರೇ ಕಾರಣನಾ? ಹಾಗಿದ್ರೆ ಯಾರವರು?

ಸಿನಿ ಪ್ರೇಕ್ಷಕರನ್ನು ರಂಜಿಸುವ ಮತ್ತು ಅದರ ಜೊತೆಗೆ ಒಂದು ಒಳ್ಳೆಯ ಸಂದೇಶವನ್ನು ನೀಡುವ ಚಿತ್ರಗಳನ್ನು ಮಾಡುವ ನಟರಲ್ಲಿ ನಟ ಅಕ್ಷಯ್ ಕುಮಾರ್ ಸಹ ಒಬ್ಬರು. ಪ್ರತಿ ವರ್ಷ ಒಂದಲ್ಲ ಒಂದು ಒಳ್ಳೆಯ ಸಿನೆಮಾದೊಂದಿಗೆ ಅವರು ಅಭಿಮಾನಿಗಳ ಮತ್ತು ಸಿನಿ ಪ್ರೇಕ್ಷಕರ ಮುಂದೆ ಬರುತ್ತಾರೆ. ಆದರೆ ನಟ ಅಕ್ಷಯ್ ಅವರೇ ಖುದ್ದು ಅವರ ಚಿತ್ರಗಳು ಅಷ್ಟಾಗಿ ಹಣ ಮಾಡುತ್ತಿಲ್ಲ ಮತ್ತು ಜನಪ್ರಿಯತೆ ಗಳಿಸುತ್ತಿಲ್ಲ ಅಂತ ಹೇಳುತ್ತಿದ್ದಾರೆ ನೋಡಿ ಇದಕೆಲ್ಲಾ ಕಾರಣ ಇವರೇ ಅಂತೆ!

ನಟ ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್

  • Share this:
ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ ನಲ್ಲಿ (Bollywood) ತುಂಬಾನೇ ಸರಳವಾಗಿ ಪ್ರೇಕ್ಷಕರಿಗೆ ಅರ್ಥವಾಗುವ ರೀತಿಯಲ್ಲಿ ಮತ್ತು ಮನವನ್ನು ರಂಜಿಸುವ (Entertain) ಹಾಗೆ ಮತ್ತು ಅದರ ಜೊತೆಗೆ ಒಂದು ಒಳ್ಳೆಯ ಸಂದೇಶವನ್ನು (Message) ನೀಡುವ ಚಿತ್ರಗಳನ್ನು ಮಾಡುವ ನಟರಲ್ಲಿ ನಟ ಅಕ್ಷಯ್ ಕುಮಾರ್ (Actor Akshay Kumar) ಸಹ ಒಬ್ಬರು.  ಪ್ರತಿ ವರ್ಷ ಒಂದಲ್ಲ ಒಂದು ಒಳ್ಳೆಯ ಸಿನೆಮಾದೊಂದಿಗೆ ಅವರ ಅಭಿಮಾನಿಗಳ (fans) ಮತ್ತು ಸಿನಿ ಪ್ರೇಕ್ಷಕರ ಮುಂದೆ ಬರುತ್ತಾರೆ. ಇವರ ಸಿನೆಮಾಗಳಲ್ಲಿ ಮನರಂಜನೆ ಇದ್ದು, ಒಳ್ಳೆಯ ಸಂದೇಶವಿದ್ದು, ಜನರಿಗೆ ತುಂಬಾನೇ ಇಷ್ಟವಾಗುತ್ತವೆ. ಆದರೆ ನಟ ಅಕ್ಷಯ್ ಅವರೇ ಖುದ್ದು ಅವರ ಚಿತ್ರಗಳು (Movies) ಅಷ್ಟಾಗಿ ಹಣ ಮಾಡುತ್ತಿಲ್ಲ ಮತ್ತು ಜನಪ್ರಿಯತೆ ಗಳಿಸುತ್ತಿಲ್ಲ ಅಂತ ಹೇಳುತ್ತಿದ್ದಾರೆ ನೋಡಿ.

ಇದಕ್ಕೆ ಏನು ಕಾರಣ? ಯಾರು ಕಾರಣ ಅಂತ ನೀವು ತುಂಬಾ ತಲೆ ಕೆಡೆಸಿಕೊಳ್ಳುವ ಅಗತ್ಯವಿಲ್ಲ ಬಿಡಿ. ಏಕೆಂದರೆ ಖುದ್ದು ಅಕ್ಷಯ್ ಅವರೇ ಇದಕ್ಕೆ ಯಾರು ಕಾರಣ ಅಂತ ಹೇಳಿದ್ದಾರೆ ನೋಡಿ. ಅಕ್ಷಯ್ ಕುಮಾರ್ ಅವರು ಈ ಪ್ರೋಮೊ ವಿಡಿಯೋ ನೋಡಿ ಅರ್ಥವಾಗುತ್ತದೆ.

ಇವರೇ ನೋಡಿ ಆ ವ್ಯಕ್ತಿ!
ಸೆಪ್ಟೆಂಬರ್ 10 ರಿಂದ ಪ್ರಸಾರವಾಗಲಿರುವ ‘ದಿ ಕಪಿಲ್ ಶರ್ಮಾ ಶೋ’ ನ ಸೀಸನ್ 3 ಶುರುವಾಗಲಿದ್ದು, ಹಾಸ್ಯನಟ ಕಪಿಲ್ ಶರ್ಮಾ ಮತ್ತೆ ಈ ಶೋ ನೊಂದಿಗೆ ಮರಳಲಿದ್ದಾರೆ. ಹೊಸ ಪ್ರೋಮೋ ವಿಡಿಯೋದಲ್ಲಿ, ಕೋಪಗೊಂಡ ಅಕ್ಷಯ್ ಕುಮಾರ್ ಅವರು ಕಪಿಲ್ ಶರ್ಮಾ ಅವರೇ ತಮ್ಮ ಅದೃಷ್ಟವನ್ನು ನೋಡಿ ದೃಷ್ಟಿ ಹಾಕಿದ್ದಾರೆ, ಅದ್ದಕ್ಕಾಗಿಯೇ ನನ್ನ ಚಲನಚಿತ್ರಗಳು ಅಷ್ಟಾಗಿ ಗಲ್ಲಾಪೆಟ್ಟಿಗೆಯಲ್ಲಿ ಹಣ ಗಳಿಸುತ್ತಿಲ್ಲ ಮತ್ತು ಹಿಟ್ ಸಹ ಆಗುತ್ತಿಲ್ಲ ಎಂದು ದೂಷಿಸಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ತಮ್ಮ ‘ಕಟ್‌ಪುತ್ಲಿ’ ಸಹ ನಟಿ ರಾಕುಲ್ ಪ್ರೀತ್ ಸಿಂಗ್ ಅವರೊಂದಿಗೆ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:  Sita Ramam: ಮನೆಯಲ್ಲೇ ಕುಳಿತು ನೋಡಿ ಸೀತಾ ರಾಮಂ ಸಿನಿಮಾ; ಅಮೆಜಾನ್ ಪ್ರೈಮ್​ನಲ್ಲಿ ಬರಲಿದೆ ಸೂಪರ್ ಹಿಟ್ ಪ್ರೇಮ ಕಾವ್ಯ!

ಕಪಿಲ್ ಶರ್ಮಾಗೆ ಅಕ್ಷಯ್ ಕುಮಾರ್ ಏನಂದ್ರು ನೋಡಿ 
ಪ್ರೋಮೋದಲ್ಲಿ, ಕಪಿಲ್ ಅಕ್ಷಯ್ ಮತ್ತು ರಾಕುಲ್ ಅವರನ್ನು ವೇದಿಕೆಗೆ ಸ್ವಾಗತಿಸಿದರು. ನಂತರ ಅವರು ಅಕ್ಷಯ್ ಅವರನ್ನು ಕುರಿತು "ಅಕ್ಷಯ್ ಪಾಜಿ ಪ್ರತಿ ವರ್ಷ ನಿಮ್ಮ ಜನ್ಮದಿನದಂದು ನೀವು ಹೇಗೆ ಒಂದು ವರ್ಷ ಚಿಕ್ಕವರಾಗಿ ಕಾಣುತ್ತೀರಿ" ಎಂದು ಕೇಳಿಯೇ ಬಿಟ್ಟರು. ಅದಕ್ಕೆ ಅಕ್ಷಯ್ ಉತ್ತರಿಸುತ್ತಾ "ಈ ವ್ಯಕ್ತಿ ನಾನು ಮಾಡುವ ಪ್ರತಿಯೊಂದು ಕೆಲಸ, ನನ್ನ ಚಲನಚಿತ್ರಗಳು, ನನ್ನ ಹಣ ಎಲ್ಲದರ ಮೇಲೆ ದೃಷ್ಟಿ ಹಾಕುತ್ತಾನೆ... ಈಗ ನನ್ನ ಯಾವುದೇ ಚಿತ್ರಗಳು ಅಷ್ಟಾಗಿ ಹಣ ಗಳಿಸುತ್ತಿಲ್ಲ ಮತ್ತು ಹಿಟ್ ಆಗುತ್ತಿಲ್ಲ” ಎಂದು ಹೇಳಿದರು. ಆಗ ಕಪಿಲ್ ಅಲ್ಲಿ ಇರುವ ಪ್ರೇಕ್ಷಕರೊಂದಿಗೆ ನಗಲು ಪ್ರಾರಂಭಿಸಿದರು.

ಅಕ್ಷಯ್ ಕುಮಾರ್ ಅವರ ಈ ವರ್ಷದ ಸಿನೆಮಾಗಳು 
‘ಕಟ್‌ಪುತ್ಲಿ’ ವೆಬ್ ಸಿರೀಸ್ ಅಕ್ಷಯ್ ಅವರು ಈ ವರ್ಷ ಮಾಡಿದ ನಾಲ್ಕನೆಯ ಚಿತ್ರ. ಇದು ಸೆಪ್ಟೆಂಬರ್ 2 ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಅಕ್ಷಯ್ ಅವರ ಹಿಂದಿನ ಚಿತ್ರ ‘ರಕ್ಷಾ ಬಂಧನ್’ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತು ಮತ್ತು ಸುಮಾರು 44 ಕೋಟಿ ರೂಪಾಯಿಗಳನ್ನು ಮಾತ್ರವೇ ಗಳಿಸಲು ಸಾಧ್ಯವಾಯಿತು.

ಇದನ್ನೂ ಓದಿ: Randeep Hooda: ಸ್ವತಂತ್ರ ವೀರ್ ಸಾವರ್ಕರ್ ಚಿತ್ರಕ್ಕಾಗಿ ರಣದೀಪ್ ಹೂಡಾ ಎಷ್ಟು ಕೆಜಿ ತೂಕ ಇಳಿಸಿಕೊಂಡಿದ್ದಾರೆ?

ಅಕ್ಷಯ್ ಅವರ ಇನ್ನೊಂದು ಐತಿಹಾಸಿಕ ಕಥೆ ಇರುವ ಸಿನೆಮಾ ‘ಸಾಮ್ರಾಟ್ ಪೃಥ್ವಿರಾಜ್’ ಕೂಡ ಅಷ್ಟೊಂದು ಉತ್ತಮ ಪ್ರದರ್ಶನ ನೀಡಲಿಲ್ಲ ಮತ್ತು ಕೇವಲ 68 ಕೋಟಿ ರೂಪಾಯಿ ಗಳಿಕೆ ಮಾಡಿತು. ಅಕ್ಷಯ್ ಅವರ ಈ ವರ್ಷದ ಮೊದಲ ಚಿತ್ರವಾದ ‘ಬಚ್ಚನ್ ಪಾಂಡೆ’ ಕೂಡ ನಿರೀಕ್ಷೆಗೆ ತಕ್ಕಂತೆ ಗಳಿಕೆ ಮಾಡಲಿಲ್ಲ. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದು 50 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
‘ದಿ ಕಪಿಲ್ ಶರ್ಮಾ ಶೋ’ ನ ಹೊಸ ಪ್ರೋಮೋ ಈ ಸೀಸನ್ ನಲ್ಲಿ ನಟಿ ಹುಮಾ ಖುರೇಷಿ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಸೇರಿದಂತೆ ಹಲವಾರು ಇತರ ಸೆಲೆಬ್ರಿಟಿಗಳ ಎಪಿಸೋಡ್ ಗಳನ್ನು ಹೊಂದಿದೆ.
Published by:Ashwini Prabhu
First published: