Akshay Kumar: ಅಕ್ಷಯ್ ಕುಮಾರ್ ಜೀವನದಲ್ಲಿ ನಡೆದಿತ್ತು ಊಹೆಗೂ ಮೀರಿದ ಘಟನೆ!

ನಟ ರಾಜೇಶ್ ಖನ್ನಾ ಅವರ ಬಳಿ ಆಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೆಲಸ ಕೇಳಿಕೊಂಡು ಮನೆಗೆ ಹೋಗಿ ಬಂದು ಮಾಡ್ತಿದ್ರಂತೆ. ಇದನ್ನು ಖುದ್ದು ಅಕ್ಷಯ್ ಅವರೇ ಹಳೆಯ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ರಾಜೇಶ್ ಖನ್ನಾ ಅವರ ಮಗಳು ಟ್ವಿಂಕಲ್ ಖನ್ನಾ ಅವರನ್ನು ಮದುವೆಯಾಗುವುದನ್ನು ನಾನು ಎಂದಿಗೂ ಊಹಿಸಿರಲಿಲ್ಲ ಅಂತ ಸಹ ಅಕ್ಷಯ್ ಕುಮಾರ್ ಹಳೆಯ ಸಂದರ್ಶನವೊಂದರಲ್ಲಿ ಹೇಳಿದ್ದರಂತೆ.

ಅಕ್ಷಯ್ ಮತ್ತು ಟ್ವಿಂಕಲ್

ಅಕ್ಷಯ್ ಮತ್ತು ಟ್ವಿಂಕಲ್

  • Share this:
ಎಲ್ಲಾ ಚಿತ್ರೋದ್ಯಮದಲ್ಲಿ ಹೊಸದಾಗಿ ಬಂದ ನಟರು(Actors)  ತಮ್ಮ ಅವಕಾಶಗಳಿಗಾಗಿ ಹಿರಿಯ ನಟರ ಬಳಿ ಹೋಗುವುದುಂಟು. ಇದೇ ರೀತಿ ದಿವಂಗತ ನಟ ರಾಜೇಶ್ ಖನ್ನಾ (Rajesh Khanna) ಅವರ ಬಳಿ ಆಗ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಕೆಲಸ ಕೇಳಿಕೊಂಡು ಮನೆಗೆ ಹೋಗಿ ಬಂದು ಮಾಡ್ತಿದ್ರಂತೆ. ಇದನ್ನು ಖುದ್ದು ಅಕ್ಷಯ್ ಅವರೇ ಹಳೆಯ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ರಾಜೇಶ್ ಖನ್ನಾ ಅವರ ಮಗಳು ಟ್ವಿಂಕಲ್ ಖನ್ನಾ (Twinkle Khanna) ಅವರನ್ನು ಮದುವೆಯಾಗುವುದನ್ನು ನಾನು ಎಂದಿಗೂ ಊಹಿಸಿರಲಿಲ್ಲ ಅಂತ ಸಹ ಅಕ್ಷಯ್ ಕುಮಾರ್ ಹಳೆಯ ಸಂದರ್ಶನವೊಂದರಲ್ಲಿ (Interview) ಹೇಳಿದ್ದರಂತೆ.

ನಟ ಅಕ್ಷಯ್ 2001 ರಲ್ಲಿ ಟ್ವಿಂಕಲ್ ಅವರನ್ನು ವಿವಾಹವಾದರು. ಈ ದಂಪತಿಗೆ ಈಗ ಇಬ್ಬರು ಮಕ್ಕಳಿದ್ದು, ಆರವ್ ಎಂಬ ಮಗ 2002 ರಲ್ಲಿ ಹುಟ್ಟಿದರೆ, 2012 ರಲ್ಲಿ ನಿತಾರಾ ಎಂಬ ಮಗಳು ಹುಟ್ಟಿದಳು.

ಅಕ್ಷಯ್ ಮತ್ತು ಟ್ವಿಂಕಲ್ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ 
ಟ್ವಿಂಕಲ್ ಅವರು ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಅವರ ಮಗಳು ಮತ್ತು ತನ್ನ ಇಡೀ ಜೀವನವನ್ನು ಹೆಚ್ಚಾಗಿ ಮುಂಬೈನಲ್ಲಿ ಕಳೆದರು. ಅಕ್ಷಯ್ ದೆಹಲಿಯ ಚಾಂದನಿ ಚೌಕ್ ನಲ್ಲಿ ಹುಟ್ಟಿ ಬೆಳೆದರು ಮತ್ತು ಮಾರ್ಷಲ್ ಆರ್ಟ್ಸ್ ಕಲಿಯುತ್ತಾ ಹೊಟೇಲ್ ವೊಂದರಲ್ಲಿ ಚೆಫ್ ಆಗಿ ಕೆಲಸ ಮಾಡುತ್ತಾ ಅನೇಕ ಕೆಲಸಗಳನ್ನು ಮಾಡಿದ ನಂತರ ಬಂದು ಮುಂಬೈ ನಗರವನ್ನು ತಲುಪಿದರು. ಫಿಲ್ಮ್‌ಫೇರ್ ನಿಯತಕಾಲಿಕದ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು. ಅವರ ಭೇಟಿಯ ನಂತರ, ಅಕ್ಷಯ್ ಮತ್ತು ಟ್ವಿಂಕಲ್ ನಡುವೆ ಆ ಪ್ರೀತಿ ಚಿಗುರೊಡೆಯಿತು ಎಂದೂ ಹೇಳಲಾಗುತ್ತಿದೆ.

ತನ್ನ ವೃತ್ತಿ ಜೀವನದ ಬಗ್ಗೆ ಏನಂದ್ರು ನಟ ಅಕ್ಷಯ್
ಮಾಧ್ಯಮವೊಂದಕ್ಕೆ ನೀಡಿದ ಹಳೆಯ ಸಂದರ್ಶನದಲ್ಲಿ ಅಕ್ಷಯ್ "ನನ್ನ ವೃತ್ತಿಜೀವನದಲ್ಲಿ ನಾನು ಏನನ್ನು ಸಾಧಿಸಿದ್ದೇನೆಯೋ ಅದು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿದೆ ಎಂದು ನಾನು ಭಾವಿಸುತ್ತೇನೆ. ಮತ್ತು ನಾನು ಬೇರೆ ಯಾವುದಾದರೂ ವೃತ್ತಿಯನ್ನು ಆರಿಸಿಕೊಂಡಿದ್ದರೆ, ನಾನು ಇಷ್ಟೊಂದು ಜನಪ್ರಿಯನಾಗಿರುತ್ತಿರಲಿಲ್ಲ. ನಾನು ಸಿನೆಮಾ ರಂಗಕ್ಕೆ ಬರುತ್ತೇನೆ ಅಂತ ಎಂದಿಗೂ ಯೋಚಿಸಿರಲಿಲ್ಲ. ನಾನು ಈ ಉದ್ಯಮಕ್ಕೆ ಬಂದು, ಈಗಾಗಲೇ 300 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದೇನೆ ಮತ್ತು ನಾನು ಇನ್ನೂ ಈ ಉದ್ಯಮದಲ್ಲಿದ್ದೇನೆ ಎಂಬುದು ನನಗೆ ದೊಡ್ಡ ವಿಷಯವಾಗಿದೆ” ಎಂದು ಹೇಳಿದರು.

ಇದನ್ನೂ ಓದಿ:   Priyanka Chopra: ಲಾಸ್ ಏಂಜಲೀಸ್​ನಲ್ಲಿರೋ ಪ್ರಿಯಾಂಕಾ ಚೋಪ್ರಾ ಐಷಾರಾಮಿ ಮನೆ ಹೇಗಿದೆ?

"ನನ್ನ ಜೀವನದಲ್ಲಿ ನಾನು ಎಂದಿಗೂ ಯೋಚಿಸದ ಅನೇಕ ಸಂಗತಿಗಳು ನಡೆದಿವೆ. ನಾನು ರಾಜೇಶ್ ಖನ್ನಾ ಅವರ ಮಗಳನ್ನು ಮದುವೆಯಾಗುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನಾನು ನನ್ನ ಫೋಟೋದೊಂದಿಗೆ ಅವರ ಕಚೇರಿಗೆ ಹೋಗಿ ಕೆಲಸ ಕೇಳುತ್ತಿದ್ದೆ. ಅವರು ನನಗೆ ನಂತರ ಬರುವಂತೆ ಹೇಳುತ್ತಿದ್ದರು” ಎಂದೂ ನಟ ಅಕ್ಷಯ್ ಹೇಳಿದ್ದರು.

ಅಕ್ಷಯ್ ಅವರ ಮುಂದಿನ ಸಿನೆಮಾಗಳು 
ಇನ್ನೂ ಕೆಲಸದ ವಿಷಯಕ್ಕೆ ಬಂದರೆ ನಟ ಅಕ್ಷಯ್ ಕುಮಾರ್ ಅವರ ಇತ್ತೀಚಿನ ಚಿತ್ರವೆಂದರೆ ಅದು ಆಗಸ್ಟ್ 11 ರಂದು ಬಿಡುಗಡೆಯಾದ ‘ರಕ್ಷಾ ಬಂಧನ್’. ಈ ಚಿತ್ರದಲ್ಲಿ ನಟಿ ಭೂಮಿ ಪೆಡ್ನೇಕರ್ ಕೂಡ ನಟಿಸಿದ್ದಾರೆ. ಅಕ್ಷಯ್ ಅವರ ಮುಂದಿನ ಚಿತ್ರ ‘ಸೆಲ್ಫಿ’ ಆಗಿದ್ದು, ಇದು ಫೆಬ್ರವರಿ 24, 2023 ರಂದು ಬಿಡುಗಡೆಯಾಗಲಿದೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: Bollywood: ಏನಿಲ್ಲ ಏನಿಲ್ಲ ಟೈಗರ್​ ಶ್ರಾಫ್​- ದಿಶಾ ಪಾಟ್ನಿ ನಡುವೆ ಏನಿಲ್ಲ! ಶಾಕಿಂಗ್​ ಹೇಳಿಕೆ ಕೊಟ್ಟ ಕೃಷ್ಣ ಶ್ರಾಫ್​ 

ಅಕ್ಷಯ್ ಅವರ ಇನ್ನೊಂದು ಮುಂಬರುವ ಕಾಮಿಡಿ ಚಿತ್ರದಲ್ಲಿ ನಟ ಇಮ್ರಾನ್ ಹಶ್ಮಿ, ನಟಿ ಡಯಾನಾ ಪೆಂಟಿ ಮತ್ತು ನುಶ್ರತ್ ಭರೂಚಾ ಸಹ ನಟಿಸಲಿದ್ದಾರೆ. ಅಲ್ಲದೆ, ಸೂರ್ಯ ಅವರ ತಮಿಳು ಚಿತ್ರ ‘ಸೂರರೈ ಪೊಟ್ರು’ ಚಿತ್ರದ ಹಿಂದಿ ರಿಮೇಕ್ ನಲ್ಲಿ ಅಕ್ಷಯ್ ಅವರು ರಾಧಿಕಾ ಮದನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅಕ್ಷಯ್ ಮತ್ತು ರಾಧಿಕಾ ಜೊತೆಗೆ ಪರೇಶ್ ರಾವಲ್ ಸಹ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.
Published by:Ashwini Prabhu
First published: