Akshay Kumar Remuneration: ಈ ಸಿನಿಮಾಗಾಗಿ 120 ಕೋಟಿ ಸಂಭಾವನೆ ಕೇಳಿದ್ದಾರಂತೆ ಅಕ್ಷಯ್​ ಕುಮಾರ್​..!

Akshay Kumar Remuneration: 2020ರಲ್ಲಿ ಅಕ್ಷಯ್​ ಫುಲ್​ ಪ್ಯಾಕ್ಡ್​ ಆಗಿದ್ದಾರೆ. ದೊಡ್ಡ ಬ್ಯಾನರ್​ಗಳ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಇದರ ನಡುವೆ ಅಕ್ಷಯ್​ ಕುಮಾರ್​ ಕುರಿತಂತೆ ಶಾಕಿಂಗ್​ ಸುದ್ದಿ ಹರಿದಾಡುತ್ತಿದೆ. ಅದು ಅಕ್ಷಯ್​ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ಅದರಲ್ಲೂ ಅವರು ಕೇಳಿರುವ ಸಂಭಾವನೆಯಲ್ಲಿ ಒಂದು ಸಿನಿಮಾವನ್ನೇ ನಿರ್ಮಿಸಬಹುದಾಗಿದೆ.

ನಟ ಅಕ್ಷಯ್​ ಕುಮಾರ್​

ನಟ ಅಕ್ಷಯ್​ ಕುಮಾರ್​

  • Share this:
ಬಿ-ಟೌನ್​ನಲ್ಲಿ ತುಂಬಾ ಬ್ಯುಸಿಯಾಗಿರುವ ನಟ ಎಂದರೆ ಅದು ಅಕ್ಷಯ್​ ಕುಮಾರ್​. ಕಳೆದ ವರ್ಷದ ಅಕ್ಷಯ್​ ಕುಮಾರ್​ ಅಭಿನಯದ 4 ಸಿನಿಮಾಗಳು ಬಿಡುಗಡೆಯಾಗಿವೆ. 'ಮಿಷನ್​ ಮಂಗಲ್​', 'ಕೇಸರಿ', 'ಹೌಸ್​ಫುಲ್​ 4' ಹಾಗೂ 'ಗುಡ್​ನ್ಯೂಸ್​' ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳು. ಈ ಎಲ್ಲ ಸಿನಿಮಾಗಳು ಬಾಕ್ಸಾಫಿಸ್​ನಲ್ಲಿ ಹಿಟ್​ ಆಗಿವೆ.

ಇನ್ನು 2020ರಲ್ಲಿ ಅಕ್ಷಯ್​ ಫುಲ್​ ಪ್ಯಾಕ್ಡ್​ ಆಗಿದ್ದಾರೆ. ದೊಡ್ಡ ಬ್ಯಾನರ್​ಗಳ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಇದರ ನಡುವೆ ಅಕ್ಷಯ್​ ಕುಮಾರ್​ ಕುರಿತಂತೆ ಶಾಕಿಂಗ್​ ಸುದ್ದಿ ಹರಿದಾಡುತ್ತಿದೆ. ಅದು ಅಕ್ಷಯ್​ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ಅದರಲ್ಲೂ ಅವರು ಕೇಳಿರುವ ಸಂಭಾವನೆಯಲ್ಲಿ ಒಂದು ಸಿನಿಮಾವನ್ನೇ ನಿರ್ಮಿಸಬಹುದಾಗಿದೆ.

Bollywood film good newwz entered 200 crore club in 24th day
'ಗುಡ್​ ನ್ಯೂಸ್'​ ಸಿನಿಮಾದ ಪೋಸ್ಟರ್​


ಆನಂದ್​ ಎಲ್​ ರೈ ಅವರ ಸಿನಿಮಾದಲ್ಲಿ ಅಕ್ಷಯ್​ ನಟಿಸಲಿದ್ದಾರೆ ಅನ್ನೋ ಸುದ್ದಿ ಇದೆ. ಆದರೆ ಈ ಸಿನಿಮಾಗಾಗಿ ಅಕ್ಷಯ್​ 120 ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾ ಸುದ್ದಿ ಪ್ರಕಟಿಸುವ ವೆಬ್​ ಸೈಟ್​ ಒಂದು ಈ ಕುರಿತು ಸುದ್ದಿ ಮಾಡಿದೆ. ಆದರೆ ಈ ಕುರಿತಾಗಿ ಅಕ್ಷಯ್​ ಹಾಗೂ ಸಿನಿಮಾ ನಿರ್ಮಾಪಕರಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಸಲಿಂಗಿಯಾದ ಆಯುಷ್ಮಾನ್: ವೈರಲ್​ ಆಗುತ್ತಿದೆ ಈ ನಟನ ಲಿಪ್​ಲಾಕ್​ ವಿಡಿಯೋ..!

ಅಲ್ಲದೆ ಅಕ್ಷಯ್​ ಸದಾ ತಾವು ಮಾಡುವ ಸಿನಿಮಾಗಳಿಗೆ ಹೆಚ್ಚು ಸಂಭಾವನೆ ಪಡೆಯುತ್ತಾರಂತೆ. ಅದರಲ್ಲೂ ಅವರ ಹೆಸರಿನಿಂದಲೇ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಹಾಗೂ ಡಿಜಿಟಲ್​ ಹಕ್ಕು ಸಹ ಅಕ್ಷಯ್​ ಹೆಸರಿನ ಕಾರಣಕ್ಕೆ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ಈ ಕಾರಣಕ್ಕೆ ಅಕ್ಷಯ್​ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ ಎಂದು ವೆಬ್​ಸೈಟ್​ ವರದಿ ಮಾಡಿದೆ.

ಆನಂದ್ ಎಲ್​ ರೈ ಅವರ ಸಿನಿಮಾ ಬಗ್ಗೆ ಹೇಳುವುದಾದರೆ ಮೇ-ಜೂನ್​ನಲ್ಲಿ ಚಿತ್ರ ಸೆಟ್ಟೇರಲಿದೆಯಂತೆ. ಇನ್ನು ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಇದ್ದಾರಾ ಅಥವಾ ಇಲ್ಲವಾ ಎನ್ನುವುದಕ್ಕೆ ಕೆಲವೇ ವಾರಗಳಲ್ಲಿ ಉತ್ತರ ಸಿಗಲಿದೆ. ಈ ಚಿತ್ರದಲ್ಲಿ ಕಾಲಿವುಡ್​ ನಟ ಧನುಷ್​ ಹಾಗೂ ಸಾರಾ ಅಲಿ ಖಾನ್​ ಸಹ ಅಭಿನಯಿಸಲಿದ್ದಾರೆ.

Shruti Haasan: ರಾಜಕೀಯ ಪ್ರವೇಶ ಕುರಿತು ಆಸಕ್ತಿಕರ ಹೇಳಿಕೆ ಕೊಟ್ಟ ಶ್ರುತಿ ಹಾಸನ್​..!



 
First published: