• Home
  • »
  • News
  • »
  • entertainment
  • »
  • Akshay Kumar:‘ಕೆನಡಾ ಕುಮಾರ್’ ಎಂದು ಟ್ರೋಲ್: ಕೊನೆಗೂ ಮೌನ ಮುರಿದ ಅಕ್ಷಯ್ ಹೇಳಿದ್ದೇನು?

Akshay Kumar:‘ಕೆನಡಾ ಕುಮಾರ್’ ಎಂದು ಟ್ರೋಲ್: ಕೊನೆಗೂ ಮೌನ ಮುರಿದ ಅಕ್ಷಯ್ ಹೇಳಿದ್ದೇನು?

ನಟ ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್

ಪದೇ ಪದೇ ಈ ಟ್ರೋಲ್ ಗಳನ್ನು ನೋಡಿ ಸುಸ್ತಾದ ಅಕ್ಷಯ್  ನೆಟ್ಟಿಗರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.

  • Trending Desk
  • Last Updated :
  • Mumbai, India
  • Share this:

    ಬಾಲಿವುಡ್ ನಟ ಅಕ್ಷಯ್ ಕುಮಾರ್ (Actor Akshay Kumar) ಅವರು ತಮ್ಮ ಕೆನಡಾದ ಪೌರತ್ವವನ್ನು (Canadian Citizenship) ಹೊಂದಿದ್ದಕ್ಕಾಗಿ ಪದೇ ಪದೇ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರಿಂದ ಟ್ರೋಲ್ ಗೆ (Netizens Troll) ಒಳಗಾಗುತ್ತಿದ್ದಾರೆ ಅಂತ ಹೇಳಬಹುದು. ಆದರೆ ಪದೇ ಪದೇ ಈ ಟ್ರೋಲ್ ಗಳನ್ನು ನೋಡಿ ನೋಡಿ ಸುಸ್ತಾದ ಅಕ್ಷಯ್  ನೆಟ್ಟಿಗರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ ನೋಡಿ. ಕೆನಡಾದ ಪೌರತ್ವವನ್ನು ಹೊಂದಿದ್ದರೂ ಸಹ ಅಕ್ಷಯ್ ಅವರು ಭಾರತದಲ್ಲಿ ತಮ್ಮ ತೆರಿಗೆಗಳನ್ನು ಪಾವತಿಸುತ್ತಾರೆ ಎಂದು ಈ ಹಿಂದೆ ಹೇಳಿದ್ದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು.


    ಕೆನಡಾ ಪೌರತ್ವದ ಬಗ್ಗೆ ಏನ್ ಹೇಳಿದ್ರು ಅಕ್ಷಯ್?


    ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅಕ್ಷಯ್ “ಕೆನಡಾದ ಪಾಸ್‌ಪೋರ್ಟ್ ಅನ್ನು ಹೊಂದಿರುವುದು ಎಂದರೆ ತಾನು ಭಾರತೀಯ ಅಲ್ಲ ಎಂದು ಅರ್ಥವಲ್ಲ ಎಂದು ಹೇಳಿದ್ದಾರೆ. ಅಕ್ಷಯ್ ತನ್ನ ಕೆನಡಾದ ಪಾಸ್‌ಪೋರ್ಟ್ ಅನ್ನು ಪಡೆದುಕೊಂಡು ಒಂಬತ್ತು ವರ್ಷಗಳಾಗಿವೆ ಮತ್ತು ನನ್ನ ಚಲನಚಿತ್ರಗಳು ಏಕೆ ಚೆನ್ನಾಗಿ ದುಡ್ಡು ಮಾಡುತ್ತಿಲ್ಲ? ಏನಾಯಿತು? ನನ್ನ ಚಲನಚಿತ್ರಗಳು ಹಿಟ್ ಸಹ ಆಗುತ್ತಿಲ್ಲ, ಹೀಗೆ ಎಲ್ಲದಕ್ಕೂ ಕಾರಣ ಹುಡುಕಲು ನಾನು ಬಯಸುವುದಿಲ್ಲ" ಎಂದು ಕುಮಾರ್ ಹೇಳಿದರು.




    ಈ ಹಿಂದೆ ಕೆನಡಾಗೆ ಹೋಗುವುದಕ್ಕೆ ಯೋಚಿಸಿದ್ರ ಅಕ್ಷಯ್?


    ಈ ಹಿಂದೆ ಅಕ್ಷಯ್ ಅವರು ತಮ್ಮ ಚಲನಚಿತ್ರಗಳು ಫ್ಲಾಪ್ ಆದ ಸಮಯದಲ್ಲಿ ಮತ್ತು ಕೆನಡಾಕ್ಕೆ ಹೋಗುವ ಬಗ್ಗೆ ಯೋಚಿಸುತ್ತಿದ್ದ ಸಮಯದಲ್ಲಿ ತಮ್ಮ ಕೆನಡಿಯನ್ ಪೌರತ್ವವನ್ನು ಪಡೆದರು ಎಂದು ಬಹಿರಂಗಪಡಿಸಿದರು.


    ಇದನ್ನೂ ಓದಿ: Abhishek Ambareesh: ಅವಿವ ಜೊತೆ ಅಭಿಷೇಕ್ ನಿಶ್ಚಿತಾರ್ಥ? ತನಗಿಂತ ವಯಸ್ಸು ಹೆಚ್ಚಾಗಿದ್ರೂ ಓಕೆ ಅಂದ್ರಾ ಯಂಗ್​ ರೆಬಲ್​ಸ್ಟಾರ್?


    ಬಹಳಷ್ಟು ಜನರು ಕೆಲಸ ಮಾಡಲು ಅಲ್ಲಿಗೆ ಹೋಗುವುದರಿಂದ ಭಾರತದಲ್ಲಿ ಯಶಸ್ಸನ್ನು ಕಂಡು ಕೊಳ್ಳದಿದ್ದರೆ ಅಲ್ಲಿಗೆ ಬರುವಂತೆ ಅವರ ಕೆನಡಾದ ಸ್ನೇಹಿತರೊಬ್ಬರು ಸಲಹೆ ನೀಡಿದಾಗ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದರು.




    ಆದ್ದರಿಂದ ಅಕ್ಷಯ್ ಅಲ್ಲಿಗೆ ಹೋಗಲು ಯೋಚಿಸಿದ್ದರು, ಆದರೆ ಪೌರತ್ವವನ್ನು ಪಡೆದ ಸ್ವಲ್ಪ ಸಮಯದ ನಂತರ ಅವರು ಮತ್ತೆ ತಾವು ನಟಿಸಿದಂತಹ ಚಲನಚಿತ್ರಗಳಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಶುರುವಾದಾಗ ಇಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದರು ಎಂದು ಹೇಳಲಾಗುತ್ತಿದೆ.


    2019 ರಲ್ಲಿಯೂ ಸಹ ಅಕ್ಷಯ್ ಕೆನಡಾ ಪಾಸ್ಪೋರ್ಟ್ ಬಗ್ಗೆ ಮಾತಾಡಿದ್ರು..


    2019 ರಲ್ಲಿ, ಅಕ್ಷಯ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ತಮ್ಮ ಕೆನಡಾದ ಪೌರತ್ವದ ಬಗ್ಗೆ ಮಾತನಾಡಿದ್ದರು. "ನನ್ನ ಪೌರತ್ವದ ಬಗ್ಗೆ ಅನಗತ್ಯ ಆಸಕ್ತಿ ಮತ್ತು ನಕಾರಾತ್ಮಕತೆಯನ್ನು ನಾನು ನಿಜವಾಗಿಯೂ ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ನಾನು ಕೆನಡಿಯನ್ ಪಾಸ್‌ಪೋರ್ಟ್ ಹೊಂದಿದ್ದೇನೆ ಎಂದು ನಾನು ಎಂದಿಗೂ ಮರೆಮಾಚಿಲ್ಲ ಅಥವಾ ನಿರಾಕರಿಸಿಲ್ಲ. ಕಳೆದ ಏಳು ವರ್ಷಗಳಲ್ಲಿ ನಾನು ಕೆನಡಾಕ್ಕೆ ಒಮ್ಮೆಯೂ ಸಹ ಭೇಟಿ ನೀಡಿಲ್ಲ ಎಂಬುದು ಸಹ ಅಷ್ಟೇ ಸತ್ಯ” ಎಂದು ಹೇಳಿದ್ದರು.


    “ನಾನು ಭಾರತದಲ್ಲಿ ಕೆಲಸ ಮಾಡುತ್ತೇನೆ ಮತ್ತು ನನ್ನ ಎಲ್ಲಾ ತೆರಿಗೆಗಳನ್ನು ಭಾರತದಲ್ಲಿ ಪಾವತಿಸುತ್ತೇನೆ. ಇಷ್ಟು ವರ್ಷಗಳ ಕಾಲ, ನಾನು ಭಾರತದ ಮೇಲಿನ ನನ್ನ ಪ್ರೀತಿಯನ್ನು ಯಾರಿಗೂ ಸಾಬೀತುಪಡಿಸುವ ಅಗತ್ಯವಿಲ್ಲದಿದ್ದರೂ, ನನ್ನ ಪೌರತ್ವದ ವಿಷಯವು ನಿರಂತರವಾಗಿ ಅನಗತ್ಯ ವಿವಾದಕ್ಕೆ ಎಳೆಯಲ್ಪಡುತ್ತಿದೆ, ಇದು ವೈಯಕ್ತಿಕ, ಕಾನೂನು, ರಾಜಕೀಯೇತರ ಮತ್ತು ಇತರರಿಗೆ ಯಾವುದೇ ಪರಿಣಾಮ ಬೀರದ ವಿಷಯವಾಗಿದೆ. ನಾನು ನಂಬುವ ಉದ್ದೇಶಗಳಿಗೆ ನನ್ನ ಸಣ್ಣ ರೀತಿಯಲ್ಲಿ ಕೊಡುಗೆ ನೀಡುವುದನ್ನು ಮುಂದುವರಿಸಲು ಮತ್ತು ಭಾರತವನ್ನು ಬಲಪಡಿಸಲು ನಾನು ಬಯಸುತ್ತೇನೆ” ಎಂದು ಹೇಳಿಕೊಂಡಿದ್ದರು.




    ಈ ವರ್ಷದಲ್ಲಿ ಬಿಡುಗಡೆಯಾದ ಅಕ್ಷಯ್ ಅಭಿನಯದ ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್, ರಕ್ಷಾ ಬಂಧನ್ ಮತ್ತು ರಾಮ್ ಸೇತು ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಅಷ್ಟೊಂದು ಹಣವನ್ನು ಗಳಿಸಲಿಲ್ಲ. ಆದರೆ ನಟ ಅಕ್ಷಯ್ ಮಾತ್ರ ಎಲ್ಲವನ್ನೂ ಮರೆತು ಮತ್ತೆ ಹೊಸದಾಗಿ ಪ್ರಾರಂಭಿಸಲು ಇದು ಒಳ್ಳೆಯ ಸಮಯ ಎಂದು ಹೇಳಿದರು.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು