ನಿರ್ದೇಶಕ ರೋಹಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಚಿತ್ರ 'ಸೂರ್ಯವಂಶಿ'. ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಕೈಫ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ರಿಲೀಸ್ ದಿನಾಂಕವನ್ನು ನಿಗದಿ ಮಾಡಿದ್ದ ದಿನಾಂಕಕ್ಕಿಂತ ಮೊದಲೇ ಬಿಡುಗಡೆ ಮಾಡಲಾಗುತ್ತಿದೆ.
ಅಕ್ಷಯ್ ಕುಮಾರ್ ಸೂಪರ್ ಕಾಪ್ ಆಗಿ ಮಿಂಚಲಿರುವ 'ಸೂರ್ಯವಂಶಿ' ಚಿತ್ರವನ್ನು ರೋಹಿತ್ ಶೆಟ್ಟಿ ಮಾ.27ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದರು. ಆದರೆ ಈಗ ಅದರ ರಿಲೀಸ್ ದಿನಾಂಕವನ್ನು ಮಾ.24ಕ್ಕೆ ಬದಲಾಯಿಸಿದ್ದಾರೆ. ಅಲ್ಲದೆ ಈ ಸಿನಿಮಾ ಚಿತ್ರಮಂದಿರದಲ್ಲಿ 24 ಗಂಟೆ ನಿಲ್ಲದೆ ಪ್ರದರ್ಶನಗೊಳ್ಳಲಿದೆ.
![Akshay Kumar Ranveer Singh Ajay Devgn announce 24x7 screening of Sooryavanshi in mumbai theatres]()
'ಸೂರ್ಯವಂಶಿ' ಸಿನಿಮಾದ ಪೋಸ್ಟರ್
ಇದೇ ಕಾರಣಕ್ಕೆ ನಿರ್ದೇಶಕ
ರೋಹಿತ್ ಶೆಟ್ಟಿ ಈ ಸಿನಿಮಾದ ದಿನಾಂಕವನ್ನು ಪ್ರೀಪೋನ್ ಮಾಡಿದ್ದಾರೆ. ಅದಕ್ಕೆ ಶುಕ್ರವಾರದ ಬದಲಿಗೆ ಮಂಗಳವಾರ ಈ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ ಈ ಚಿತ್ರದ ಹೊಸ ಬಿಡುಗಡೆ ದಿನಾಂಕ ಪ್ರಕಟಿಸಲು ಒಂದು ಸಖತ್ ಟೀಸರ್ ಸಹ ಮಾಡಲಾಗಿದೆ. ಅದನ್ನು ರೋಹಿತ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರಣವೀರ್ ಸಿಂಗ್ರ ಮಲ್ಹಾರಿ ಹಾಡಿಗೆ ಅಮೆರಿಕ ಅಧ್ಯಕ್ಷ ಹೆಜ್ಜೆ ಹಾಕಿದ ವಿಡಿಯೋ ಹಂಚಿಕೊಂಡ ಟ್ರಂಪ್ ಸಹಾಯಕ !
ಅದೇ ವಿಡಿಯೋವನ್ನು ಅಕ್ಷಯ್ ಕುಮಾರ್ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಅಪರಾಧಕ್ಕೆ ಸಮಯವಿಲ್ಲ... ಬರುತ್ತಿದ್ದಾನೆ ಪೊಲೀಸ್... ಮಾರ್ಚ್ 24ಕ್ಕೆ ವಿಶ್ವದಾದ್ಯಂತ ರಿಲೀಸ್ ಎಂದು ಬರೆದುಕೊಂಡಿದ್ದಾರೆ.
Ain't no time for crime 'coz Aa Rahi Hai Police!🚨🚔👊🏻#Sooryavanshi releasing worldwide on 24th March.#SooryavanshiOn24thMarch@ajaydevgn @RanveerOfficial #KatrinaKaif #RohitShetty @karanjohar @RelianceEnt @RSPicturez @DharmaMovies #CapeofGoodFilms @PicturesPVR @TSeries pic.twitter.com/OJx1ytnOLM
ಮಾಲ್ಗಳಲ್ಲಿರುವ ಶಾಪ್ಸ್, ತಿನಿಸುಗಳ ಅಂಗಡಿ ತೆರೆಯಲು ಹಾಗೂ ಸಿನಿಮಾ ಪ್ರದರ್ಶನಕ್ಕೆ 24 ಗಂಟೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈಗ ಅದಕ್ಕೆ ಅನುಮತಿ ಸಿಕ್ಕಿದ್ದು, ಈ ಕಾಣರದಿಂದಾಗಿ 'ಸೂರ್ಯವಂಶಿ' ಚಿತ್ರ 24 ಗಂಟೆ ಯಾವುದೇ ತಡೆ ಇಲ್ಲದೆ ಪ್ರದರ್ಶನಗೊಳ್ಳಲಿದೆ.
Nikhil Revathi Pre Wedding Photo Shoot: ನಿಖಿಲ್-ರೇವತಿ ಪ್ರೀ ವೆಡ್ಡಿಂಗ್ ಫೋಟೋಶೂಟ್ನ ಚಿತ್ರಕ್ಕೆ ನಿಖಿಲ್ ರೊಮ್ಯಾಂಟಿಕ್ ಕ್ಯಾಪ್ಷನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ