ಬಾಲಿವುಡ್ (Bollywood) ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) ಹಾಗೂ ಖ್ಯಾತ ಡ್ಯಾನ್ಸರ್ ನೋರಾ ಫತೇಹಿ (Nora Fatehi) ಈಗ ಟ್ರೊಲ್ ಆಗುತ್ತಿದ್ದಾರೆ. ಇಬ್ಬರೂ ಜೊತೆಯಾಗಿ ಸಖತ್ ಡ್ಯಾನ್ಸ್ (Dance) ಮಾಡಿದ್ದಾರೆ. ಅಲ್ಲು ಅರ್ಜುನ್ (Allu Arjun) ಅವರ ಊ ಅಂಟಾವಾ, ಊಊ ಅಂಟಾವಾ ಹಾಡಿಗೆ ಈ ಜೋಡಿ ಹೆಜ್ಜೆ ಹಾಕಿದ್ದಾರೆ. ಪುಷ್ಪ ದಿ ರೈಸ್ ಸಿನಿಮಾದ ಹಾಡು ಭರ್ಜರಿ ಹಿಟ್ ಆಗಿದೆ. ಈ ಜೋಡಿ ಭರ್ಜರಿ ಡ್ಯಾನ್ಸ್ ಮಾಡಿದ್ದು ವೈರಲ್ ಆಗಿದೆ. ಅಕ್ಷಯ್ ಕುಮಾರ್ ಹಾಗೂ ದಿಶಾ ಪಠಾನಿ, ಮೌನಿ ರಾಯ್, ಸೋನಂ ಬಜ್ವಾ, ನೋರಾ, ಅಪಾರಶಕ್ತಿ ಖುರಾನಾ ಸ್ಟೆಬಿನ್ ಬೆನ್ ಅಮೆರಿಕಾ (America) ಕನ್ಸರ್ಟ್ನಲ್ಲಿ ಭಾಗಿಯಾಗಿದ್ದರು. ಅಕ್ಷಯ್ ಹಾಗೂ ನೋರಾ ಜೊತೆಯಾಗಿ ಚೆನ್ನಾಗಿಯೇ ಡ್ಯಾನ್ಸ್ ಮಾಡಿದ್ದಾರೆ. ಆದರೂ ಇದು ನೆಟ್ಟಿಗರಿಗೆ ಇಷ್ಟವಾಗಿಲ್ಲ. ಬದಲಾಗಿ ಜನರು ಈ ಜೋಡಿಯನ್ನು (Couple) ಟ್ರೋಲ್ ಮಾಡಿದ್ದಾರೆ.
ಅಕ್ಷಯ್ ಮತ್ತು ನೋರಾ ತಮ್ಮ ಅದ್ಭುತ ಅಭಿನಯದಿಂದ ಡ್ಯಾನ್ಸ್ ಮಾಡಿದರೂ ನೆಟ್ಟಿಗರು ಇಂಪ್ರೆಸ್ ಆಗಿಲ್ಲ. ಹಾಡಿನಿಂದ ಅಲ್ಲು ಅರ್ಜುನ್ ಮತ್ತು ಸಮಂತಾ ಅವರ ಹುಕ್ ಸ್ಟೆಪ್ ಅನ್ನು ಕಾಪಿ ಮಾಡಿದ್ದಕ್ಕಾಗಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಸಮಂತಾ, ಅಲ್ಲು ಹತ್ರ ಸುಳಿಯೋಕೂ ಆಗಲ್ಲ
ಫ್ಲಾಪ್ ಡ್ಯಾನ್ಸ್, ಸಮಂತಾ ಮತ್ತು ಅಲ್ಲು ಅರ್ಜುನ್ ಅವರ ಒರಿಜಿನಲ್ ಡ್ಯಾನ್ಸ್ನ ಹತ್ತಿರವೂ ನೀವು ಸುಳಿಯಲಾರಿರಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಡಿಸೆಂಬರ್ 2021 ರಲ್ಲಿ ಬಿಡುಗಡೆಯಾದ ತೆಲುಗು ನಟ ಅಲ್ಲು ಅರ್ಜುನ್ ಮತ್ತು ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ: ದಿ ರೈಸ್ ಸಿನಿಮಾ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಈ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾಗುತ್ತಾ ಬಂದರೂ ಸಹ ಇನ್ನೂ ಆ ಚಿತ್ರದ ಹಾಡುಗಳು ಅನೇಕರ ಬಾಯಲ್ಲಿ ಹರಿದಾಡುತ್ತಿರುತ್ತವೆ.
ಇವುಗಳ ವೀಡಿಯೋಗಳನ್ನು ಸಿನಿ ರಸಿಕರು ಇವತ್ತಿಗೂ ನೋಡುತ್ತಾರೆ. ಆ ಹಿಟ್ ಹಾಡುಗಳಿಗೆ ಡ್ಯಾನ್ಸ್ ಮಾಡಿ ತಮ್ಮ ವೀಡಿಯೋಗಳನ್ನು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Rakhi Sawant: ಆದಿಲ್ಗೆ ಡಿವೋರ್ಸ್ ಕೊಡಲ್ವಂತೆ, ಬೇರೆ ಮದ್ವೆ ಕೂಡ ಆಗಲ್ವಂತೆ ರಾಖಿ!
ತನ್ನ ಅದ್ಭುತ ಸಂಗೀತದೊಂದಿಗೆ ವರ್ಷವಾಗುತ್ತಾ ಬಂದರೂ ಸಹ ತನ್ನ ಪ್ರಾಬಲ್ಯವನ್ನು ಹಾಗೆಯೇ ಮುಂದುವರಿಸಿದೆ. ಈ ಚಿತ್ರವು ಕಳೆದ ವರ್ಷ ಪ್ಯಾನ್-ಇಂಡಿಯಾ ಗಲ್ಲಾ ಪೆಟ್ಟಿಗೆಯಲ್ಲಿ ತುಂಬಾನೇ ಯಶಸ್ವಿಯಾಯಿತು.
ಯೂಟ್ಯೂಬ್ ಬಿಡುಗಡೆ ಮಾಡಿದ ಮ್ಯೂಸಿಕ್ ವೀಡಿಯೋ ಪಟ್ಟಿಯಲ್ಲಿವೆ ಪುಷ್ಪಾ ಚಿತ್ರದ ಹಾಡುಗಳು
2023 ಬರುವ ಮುಂಚೆಯೇ ಯೂಟ್ಯೂಬ್ ಪ್ರತಿ ದೇಶದ ಮ್ಯೂಸಿಕ್ ವೀಡಿಯೋ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮತ್ತು ಪ್ಲಾಟ್‌ಫಾರ್ಮ್ ನಲ್ಲಿ ಯಾವ ಮ್ಯೂಸಿಕ್ ವೀಡಿಯೋಗಳು ಹೆಚ್ಚು ಪ್ರಾಬಲ್ಯ ಸಾಧಿಸಿವೆ ಎಂಬುದು ಇದರಲ್ಲಿದೆ.
ಪುಷ್ಪಾ ಚಿತ್ರದಲ್ಲಿರುವ 'ಶ್ರೀವಲ್ಲಿ', 'ಸಾಮಿ ಸಾಮಿ', 'ಊ ಅಂಟಾವಾ ಮಾವಾ', ವಿಜಯ್ ಅವರ 'ಅರೇಬಿಕ್ ಕುತು – ಹಲಾಮಿಥಿ ಹಬಿಬೊ' ಹಾಡು ಈ ವರ್ಷ ಅಭಿಮಾನಿಗಳ ಅಚ್ಚುಮೆಚ್ಚಿನ ಹಾಡುಗಳಾಗಿವೆ.
ಪುಷ್ಪಾ: ದಿ ರೈಸ್ ರಷ್ಯಾದಲ್ಲಿ ಬಿಡುಗಡೆ!
ಪುಷ್ಪಾ: ದಿ ರೈಸ್ ಇತ್ತೀಚೆಗೆ ರಷ್ಯಾದಲ್ಲಿ ಬಿಡುಗಡೆಯಾಗಿದ್ದು, ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮೋಷನ್ ಗಾಗಿ ಹಾಜರಿದ್ದರು. ಈ ಚಿತ್ರವು ಡಿಸೆಂಬರ್ 1 ರಂದು ಮಾಸ್ಕೋದಲ್ಲಿ ಮತ್ತು ಡಿಸೆಂಬರ್ 3 ರಂದು ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಬಿಡುಗಡೆಯಾಯಿತು. ರಷ್ಯಾದ 24 ನಗರಗಳಲ್ಲಿ ನಡೆಯಲಿರುವ 5ನೇ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನ ಉದ್ಘಾಟನಾ ಸಮಾರಂಭದಲ್ಲಿ ಈ ಚಿತ್ರವು ಪ್ರಥಮ ಪ್ರದರ್ಶನ ಕಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ