Samrat Prithvirajಗೆ ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯ ಸೋಲು! ಜನರಿಲ್ಲದೇ ಅಕ್ಷಯ್ ಕುಮಾರ್ ಸಿನಿಮಾ ಶೋ ಬಂದ್

Akshay Kumar: ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಬಿಡುಗಡೆಯಾದ ಒಂದು ವಾರದಲ್ಲಿಯೇ ಬಹಳಷ್ಟು ಥಿಯೇಟರ್​ಗಳಿಂದ ತೆಗೆಯಲಾಗಿದೆ. ಕೆಲವೊಂದು ಕಡೆ ಪ್ರೇಕ್ಷಕರು ಸಿನಿ ಮಂದಿರದತ್ತ ಸುಳಿಯದ ಕಾರಣ ಶೋಗಳನ್ನು ಬಂದ್ ಮಾಡಲಾಗಿದ್ದು, ಚಿತ್ರ ಸೋಲನ್ನು ಅನುಭವಿಸಿದೆ.

ಅಕ್ಷಯ್ ಕುಮಾರ್ - ಮಾನುಷಿ ಚಿಲ್ಲರ್

ಅಕ್ಷಯ್ ಕುಮಾರ್ - ಮಾನುಷಿ ಚಿಲ್ಲರ್

  • Share this:
ಅಕ್ಷಯ್ ಕುಮಾರ್ (Akshay Kumar) ಅವರ ಬಹು ನಿರೀಕ್ಷಿತ ಚಿತ್ರ ಸಾಮ್ರಾಟ್ ಪೃಥ್ವಿರಾಜ್ (Samrat Prithviraj)  ಬಿಡುಗಡೆಯಾಗಿದ್ದು, ಇತ್ತೀಚಿಗೆ ಬಿಡುಗಡೆಯಾದ ಹಿಂದಿ (Hindi) ಚಿತ್ರಗಳಿಗೆ ಹೋಲಿಸಿದರೆ ಆರಂಭದಲ್ಲಿ ಜನರ ಪ್ರತಿಕ್ರಿಯೆ ಉತ್ತಮವಾಗಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ ಸಿನಿಮಾ ಸೋಲನುಭವಿಸಿದ್ದು, ಎರಡನೇ ದಿನದಿಂದ ಸಿನಿಮಾ ನೋಡಲು ಜನರೇ ಇಲ್ಲ ಎನ್ನಲಾಗುತ್ತಿದೆ.

ಜನರಿಲ್ಲದೇ ಬಿಕೋ ಎನ್ನುತ್ತಿವೆ ಥಿಯೇಟರ್​ಗಳು 

ಈ ಚಿತ್ರ ಮೊಹಮ್ಮದ್ ಘೋರಿ ವಿರುದ್ಧ ಹೋರಾಟ ಮಾಡಿದ್ದ ರಜಪೂತ ದೊರೆ ಪೃಥ್ವಿರಾಜ್ ಚೌಹಾಣ್ ಜೀವನಚರಿತ್ರೆಯನ್ನು ಆಧರಿಸಿ ಮಾಡಲಾಗಿದ್ದು, ಈ ಚಿತ್ರಕ್ಕೆ ಬಾಲಿವುಡ್​ ಹಾಗೂ ರಾಜಕೀಯ ಮಂದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಉತ್ತರದ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಗೃಹ ಸಚಿತ ಅಮಿತ್ ಶಾ ಕೂಡ ಸಿನಿಮಾ ನೋಡಿ, ಸಿನಿಮಾವನ್ನು ಹೊಗಳಿದ್ದರು. ಆದರೆ ಬಾಕ್ಸ್ ಆಫೀಸ್​ ಕಲೆಕ್ಷನ್ ವಿಚಾರದಲ್ಲಿ ಮಾತ್ರ ಸೋತಿದ್ದು, ಅಕ್ಷಯ್ ಕುಮಾರ್ ಅಭಿಮಾನಿಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಜೂನ್ 3 ರಂದು ಬಿಡುಗಡೆಯಾಗಿತ್ತು. ಮೊದಲ ದಿನ ಚಿತ್ರದ ಕಲೆಕ್ಷನ್ ಕೂಡ ಉತ್ತಮವಾಗಿತ್ತು. ಐತಿಹಾಸಿಕ ಕತೆಯನ್ನು ಹೊಂದಿರುವ ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇತ್ತು. ಈ ಚಿತ್ರವನ್ನು ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಗ್ರಾಫಿಕ್ಸ್ ಮತ್ತು ಬಟ್ಟೆಗಾಗಿಯೇ ಹೆಚ್ಚಿನ ವೆಚ್ಚ ಆಗಿದೆ ಎಂಬ ಮಾಹಿತಿ ಇದೆ. ಆದರೆ, ಇದುವರೆಗೆ ದೇಶದಲ್ಲಿ ಸುಮಾರು 55 ಕೋಟಿ ರೂಪಾಯಿ ಮಾತ್ರ ಚಿತ್ರ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಬರೋಬ್ಬರಿ 700 ಸಂಚಿಕೆಗಳನ್ನು ಪೂರೈಸಿದ ಜೊತೆ ಜೊತೆಯಲಿ, ಮುಂದೇನ್ ಟ್ವಿಸ್ಟ್​ ಕಾದಿದೆ ಪ್ರೇಕ್ಷಕರಿಗೆ?

ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಬಿಡುಗಡೆಯಾದ ಒಂದು ವಾರದಲ್ಲಿಯೇ ಬಹಳಷ್ಟು ಥಿಯೇಟರ್​ಗಳಿಂದ ತೆಗೆಯಲಾಗಿದೆ. ಕೆಲವೊಂದು ಕಡೆ ಪ್ರೇಕ್ಷಕರು ಸಿನಿ ಮಂದಿರದತ್ತ ಸುಳಿಯದ ಕಾರಣ ಶೋಗಳನ್ನು ಬಂದ್ ಮಾಡಲಾಗಿದ್ದು, ಚಿತ್ರ ಸೋಲನ್ನು ಅನುಭವಿಸಿದೆ.

ನಿರ್ದೇಶಕರ ಪ್ರಕಾರ ಈ ಚಿತ್ರಕ್ಕೆ ಬಹಳಷ್ಟು ಸಮಯವನ್ನು ವ್ಯಯಿಸಲಾಗಿದೆ. ಸರಿಯಾದ ರೀತಿ ಸಂಶೋಧನೆ ಮಾಡಿ ಈ ಚಿತ್ರದ ಕತೆಯನ್ನು ತಯಾರಿಸಲಾಗಿದ್ದು, ಈ ಚಿತ್ರದಲ್ಲಿ ಸಂಜಯ್ ದತ್, ಸೋನು ಸೂದ್​ ಸೇರಿದಂತೆ ಹಲವಾರು ನಟರು ಅಭಿನಯಿಸಿದ್ದಾರೆ.  ಇನ್ನು ಉತ್ತರ ಪ್ರದೇಶದಲ್ಲಿ ಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ. ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ಬಿಜೆಪಿ ಆಡಳಿತದ ರಾಜ್ಯದಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಿದ್ದರೂ ಸಹ ವೀಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿಲ್ಲ.

ಮತ್ತೆ ಸೋಲ್ತಾ ಬಾಲಿವುಡ್​?

ಈ ವರ್ಷ ಬಾಲಿವುಡ್​ನಲ್ಲಿ ಎಲ್ಲವೂ ಮೊದಲಿನಂತಿಲ್ಲ. ಹಲವಾರು ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಕಲೆಕ್ಷನ್ ಮಾಡುವುದರಲ್ಲಿ ಮಾತ್ರವಲ್ಲದೇ ಜನರಿಗೆ ಮೋಡಿ ಮಾಡುವುದರಲ್ಲಿ ಸೋತಿದೆ. ಗಂಗೂಬಾಯ್ ಕಾಥಿಯಾವಾಡಿ ಚಿತ್ರ ಒಂದು ಉತ್ತಮ ಪ್ರತಿಕ್ರಿಯೆ ಪಡೆದಿತ್ತು, ಆದರೆ ಅದರ ನಂತರ ಬಿಡುಗಡೆಯಾದ ಯಾವುದೇ ಚಿತ್ರವೂ ಹಿಟ್​ ಆಗಿಲ್ಲ. ಘಟಾನುಘಟಿ ನಾಯಕರ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಫೇಲ್​ ಆಗಿದೆ. ಆದರೆ ಕೆಜಿಎಫ್​ 2 ಹಿಂದಿ ಅವತರಣಿಕೆ ಮಾತ್ರ 53 ಕೋಟಿ ಬಾಚಿಕೊಂಡಿತ್ತು, ಆರ್​ಆರ್​ಆರ್​ ಚಿತ್ರ 20 ಕೋಟಿ ಗಳಿಕೆ ಮಾಡಿತ್ತು. ಆದರೆ ಹಿಂದಿಯ ಯಾವುದೇ ಚಿತ್ರಗಳು ಸಕ್ಸಸ್​ ಕಂಡಿಲ್ಲ.

ಇದನ್ನೂ ಓದಿ: ಕೆಜಿಎಫ್ ತಾತನಿಗೆ ಮತ್ತೊಂದು ಅವಕಾಶ, ಸಲಾರ್ ಸಿನಿಮಾದಲ್ಲಿ ನಟಿಸ್ತಾರಂತೆ ಈ ನಟ

ಆದರೆ ಕಳೆದ 2 ವಾರದ ಹಿಂದೆ ತೆರೆ ಕಂಡ ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿ ಅಭಿನಯದ ಭೂಲ್ ಬುಲಯ್ಯ 2 ಉತ್ತಮ ಗಳಿಕೆ ಮಾಡಿದ್ದು, 100 ಕೋಟಿ ಕ್ಲಬ್​ ಸೇರಿದೆ. ಇನ್ನು ಸದ್ಯ ವೀಕೆಂಡ್​ ಇರುವುದರಿಂದ ಅಕ್ಷಯ್ ಕುಮಾರ್ ಅವರ ಸಿನಿಮಾ ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತಿದೆ.
Published by:Sandhya M
First published: