ಒಟಿಟಿಯಲ್ಲಿ ಬಿಡುಗಡೆಯಾಗಲಿದೆಯಾ ಅಕ್ಷಯ್​​ ಕುಮಾರ್​ ‘ಲಕ್ಷ್ಮೀ ಬಾಂಬ್‘ ಸಿನಿಮಾ?​; 125 ಕೋಟಿ ಆಫರ್​ ನೀಡಿದ ಹಾಟ್​ಸ್ಟಾರ್​!

Laxmmi Bomb: ಲಾಕ್​ಡೌನ್​ನಿಂದಾಗಿ ಥಿಯೇಟರ್​ಗಳು ಬಾಗಿಲು ತೆರೆಯಲು ಇನ್ನಷ್ಟು ಸಮಯವಕಾಶ ಬೇಕಿದೆ. ಮತ್ತೊಂದೆಡೆ ಲಾಕ್​​​ಡೌನ್​ ಯಾವಾಗ ಮುಗಿಯಲಿದೆ? ಎಲ್ಲವೂ ಸಹಜ ಸ್ಥಿತಿಗೆ ಯಾವಾಗ ಬರಲಿದೆ? ಎಂದು ಹೇಳುವುದಕ್ಕೆ ಕಷ್ಟಸಾಧ್ಯ. ಹಾಗಾಗಿ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ಅವುಗಳಲ್ಲಿ ಕೆಲವು ಸಿನಿಮಾಗಳು ಆನ್​ಲೈನ್​ ಬಿಡುಗಡೆಯತ್ತ ಮನಸ್ಸು ಮಾಡಿದೆ. ಇದೀಗ ಅಕ್ಷಯ್​ ಕುಮಾರ್​ ನಟನೆ ಲಕ್ಷ್ಮೀ ಬಾಂಬ್​ ಕೂಡ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾತುಗಳು ಹರಿದಾಡುತ್ತಿದೆ.

news18-kannada
Updated:May 29, 2020, 6:06 PM IST
ಒಟಿಟಿಯಲ್ಲಿ ಬಿಡುಗಡೆಯಾಗಲಿದೆಯಾ ಅಕ್ಷಯ್​​ ಕುಮಾರ್​ ‘ಲಕ್ಷ್ಮೀ ಬಾಂಬ್‘ ಸಿನಿಮಾ?​; 125 ಕೋಟಿ ಆಫರ್​ ನೀಡಿದ ಹಾಟ್​ಸ್ಟಾರ್​!
ಲಕ್ಷ್ಮೀ ಬಾಂಬ್
  • Share this:
ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ನಟಿಸಿರುವ ‘ಲಕ್ಷ್ಮೀ ಬಾಂಬ್‘ ಸಿನಿಮಾ ಈಗಾಗಲೇ ಬಿಡುಗಡೆಯಾಗಿಬೇಕಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕುತ್ತಾ ಬಂದಿದ್ದಾರೆ. ಆದರೀಗ ಅಕ್ಷಯ್​ಕುಮಾರ್​ ಅವರು ‘ಲಕ್ಷ್ಮೀ ಬಾಂಬ್‘​ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮಾತುಗಳು ಕೇಳಿಬಂದಿದೆ.

ಲಾಕ್​ಡೌನ್​ನಿಂದಾಗಿ ಥಿಯೇಟರ್​ಗಳು ಬಾಗಿಲು ತೆರೆಯಲು ಇನ್ನಷ್ಟು ಸಮಯವಕಾಶ ಬೇಕಿದೆ. ಮತ್ತೊಂದೆಡೆ ಲಾಕ್​​​ಡೌನ್​ ಯಾವಾಗ ಮುಗಿಯಲಿದೆ? ಎಲ್ಲವೂ ಸಹಜ ಸ್ಥಿತಿಗೆ ಯಾವಾಗ ಬರಲಿದೆ? ಎಂದು ಹೇಳುವುದಕ್ಕೆ ಕಷ್ಟಸಾಧ್ಯ. ಹಾಗಾಗಿ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ಅವುಗಳಲ್ಲಿ ಕೆಲವು ಸಿನಿಮಾಗಳು ಆನ್​ಲೈನ್​ ಬಿಡುಗಡೆಯತ್ತ ಮನಸ್ಸು ಮಾಡಿದೆ. ಇದೀಗ ಅಕ್ಷಯ್​ ಕುಮಾರ್​ ನಟನೆ ಲಕ್ಷ್ಮೀ ಬಾಂಬ್​ ಕೂಡ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾತುಗಳು ಹರಿದಾಡುತ್ತಿದೆ. ಮತ್ತೊಂದೆಡೆ ಹಾಟ್​ಸ್ಟಾರ್​ನವರು ಈ ಚಿತ್ರವನ್ನು ಖರೀದಿಸುವುದಕ್ಕೆ ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ 125 ಕೋಟಿ ಆಫರ್​ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

ಇನ್ನು ಈ ಸುದ್ದಿ ಕೇಳಿ ಬಂದತೆ ಅಕ್ಷಯ್​ ಕುಮಾರ್​ ಅಭಿಮಾನಿಗಳು ಸಾಕಷ್ಟು ನಿರಾಶೆಯಾಗಿದ್ದಾರೆ. ಈ ಚಿತ್ರವನ್ನು ಥಿಯೇಟರ್​ನಲ್ಲಿ ನೋಡಬೇಕೆಂಬುದು ಅನೇಕ ಅಭಿಮಾನಿಗಳ ಒತ್ತಾಯ. ಆದರೀಗ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾತು ಕೇಳಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು  ಕೆಲವು ಅಭಿಮಾನಿಗಳು ಸಿನಿಮಾವನ್ನು ಥಿಯೇಟರ್​ನಲ್ಲಿ ಬಿಡುಗಡೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅಕ್ಷಯ್​ ಕುಮಾರ್​ ಸಿನಿಮಾವನ್ನು ಥಿಯೇಟರ್​ನಲ್ಲಿ ಬಿಡುಗಡೆ ಮಾಡಲಿದ್ದಾರಾ? ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ಬಾಂಬ್


‘ಲಕ್ಷ್ಮೀ ಬಾಂಬ್‘​​ ತಮಿಳಿನ ಕಾಂಚನ ಮೂವಿ ರಿಮೇಕ್​. ತಮಿಳಿನ ‘ಕಾಂಚನ‘ ಸಿನಿಮಾದಲ್ಲಿ ರಾಘವ ಲಾರೆನ್ಸ್​ ನಟಿಸಿದ್ದರು. ಹಾರರ್​​​​ ಸಿನಿಮಾವಾಗಿದ್ದರಿಂದ ಕಾಂಚನ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಇದೇ ಸಿನಿಮಾ ಹಿಂದಿಯಲ್ಲಿ ‘ಲಕ್ಷೀ ಬಾಂಬ್​‘ ಟೈಟಲ್​ನಲ್ಲಿ ತೆರೆಗೆ ಬರುತ್ತಿದೆ. ರಾಘವ ಲಾರೆನ್ಸ್​ ಲಕ್ಷ್ಮೀ ಬಾಂಬ್​ ಸಿನಿಮಾಗೆ ಆಕ್ಷನ್​ ಕಟ್​​ ಹೇಳಿದ್ದಾರೆ. ಅಕ್ಷಯ್​ ಕುಮಾರ್, ಕಿಯಾರಾ ಅಡ್ವಾನಿ ನಟಿಸಿದ್ದಾರೆ.

Nokia Smart TV: ಹೊಸ ಸ್ಮಾರ್ಟ್​ಟಿವಿ ಪರಿಚಯಿಸಲಿರುವ ನೋಕಿಯಾ!
First published: May 29, 2020, 6:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading